ಪ್ರವಾಸಿಗರು ಎಸೆದ ಕಸವನ್ನು ಅವರ ಕೈಯಿಂದಲೇ ತೆಗೆಸಿದ ಜನ : ವೀಡಿಯೋ ವೈರಲ್

ಗೋವಾದಲ್ಲಿ ಕಸ ಎಸೆದ ಪ್ರವಾಸಿಗರಿಗೆ ಸ್ಥಳೀಯರು ತಕ್ಕ ಪಾಠ ಕಲಿಸಿದ್ದಾರೆ. ಮದ್ಯದ ಬಾಟಲಿಗಳನ್ನು ರಸ್ತೆಯಲ್ಲಿ ಎಸೆದಿದ್ದಕ್ಕೆ ಸ್ಥಳೀಯರು ಅವರಿಂದಲೇ ಸ್ವಚ್ಛಗೊಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video Shows Tourists Forced to Pick Up Trash in Goa

ಕೆಲವರಿಗೆ ಪ್ರವಾಸಿ ತಾಣಗಳೆಂದರೆ ತೀರಾ ಅಸಡ್ಡೆ ಸುಶಿಕ್ಷಿತರೆನಿಸಿದರೂ ಕೂಡ ಪ್ರವಾಸಿ ತಾಣಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆದು ಅನಾಗರಿಕರಂತೆ ವರ್ತಿಸುವುದನ್ನು ನಾವು ಈ ಹಿಂದೆಯೂ ನೋಡಿದ್ದೇವೆ. ಈ ಅನಾಗರಿಕ, ಜವಾಬ್ದಾರಿ ಮರೆತ ಪ್ರವಾಸಿಗರ ಹಾವಳಿಯಿಂದಾಗಿ ಒಳ್ಳೆಯ ಪ್ರಕೃತಿ ರಮಣೀಯ ಸ್ಥಳಗಳಲ್ಲೂ ಇಂದು ಪ್ಲಾಸ್ಟಿಕ್ ಕಸಗಳು ರಾಶಿ ಬಿದ್ದಿರುವುದನ್ನು ಹಲವು ಪ್ರವಾಸಿ ತಾಣಗಳಲ್ಲಿ ನೋಡಬಹುದು. ಈ ಭೂಮಿಯ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ ಎಂದು ಮರೆತಿರುವ ಜನಗಳು ಎಲ್ಲೆಂದರಲ್ಲಿ ಕಸ ಎಸೆಯುವುದಲ್ಲದೇ ಕಾಡುಪ್ರಾಣಿಗಳ ಜೀವಕ್ಕೂ ಅಪಾಯ ತರುತ್ತಿದ್ದಾರೆ. ಪ್ರವಾಸಿಗರ ಈ ದುರ್ವರ್ತನೆಯ ಬಗ್ಗೆ ಈಗಾಗಲೇ ಹಲವು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆಗಳು ಈ ಹಿಂದೆ ನಡೆದಿವೆ. ಹಾಗೆಯೇ ಇಲ್ಲೊಂದು ಕಡೆ ಕಸ ಎಸೆದ ಪ್ರವಾಸಿಗರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಸ್ಥಳೀಯರು ಅವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. 

ಅಂದಹಾಗೆ ಈ ಘಟನೆ ನಡೆದಿರುವುದು ಗೋವಾದಲ್ಲಿ. ಕರಾವಳಿ ಪ್ರದೇಶವಾದ ಗೋವಾ ವಿದೇಶಿ ಪ್ರವಾಸಿಗರನ್ನು ಕೂಡ ಬಹುಸಂಖ್ಯೆಯಲ್ಲಿ ಆಕರ್ಷಿಸುತ್ತಾ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ. ಜೊತೆಗೆ ಕಡಿಮೆ ದರಕ್ಕೆ ಸಿಗುವ ಮದ್ಯಕ್ಕೂ ಗೋವಾ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಇದು ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಇಲ್ಲೊಂದು ಕಡೆ ಹೀಗೆ ಕಡಿಮೆಗೆ ಸಿಕ್ಕ ಮದ್ಯ ಕುಡಿದ ಪ್ರವಾಸಿಗರು ಬಳಿಕ ಕೋತಿಯಂತೆ ವರ್ತಿಸಲು ಶುರು ಮಾಡಿದ್ದು, ಲಿಕ್ಕರ್ ಬಾಟಲಿಯನ್ನು ಅಲ್ಲೇ ರಸ್ತೆಯಲ್ಲಿ ಎಸೆದಿದ್ದಾರೆ ಇದರಿಂದ ಸ್ಥಳೀಯರು ತೀವ್ರ ಸಿಟ್ಟುಗೊಂಡಿದ್ದು, ಅವರಿಂದಲೇ ಆ ಕಸವನ್ನು ಅಲ್ಲಿಂದ ಎತ್ತುವಂತೆ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸ್ಕ್ವೇರ್ ವೇವ್ ಎಂದು ಕರೆಯಲ್ಪಡುವ ಈ ವಿದ್ಯಮಾನಕ್ಕೆ ಕಾರಣ ಏನು?

Latest Videos

ಇತ್ತೀಚೆಗೆ ಗೋವಾದ ಬೀದಿಗಳಲ್ಲಿ ಓಡಾಡಿದ ಯುವಕರ ಗುಂಪೊಂದು ಮದ್ಯದ ಬಾಟಲಿಗಳನ್ನು ರಸ್ತೆಬದಿಯಲ್ಲಿ ಎಸೆದಿದ್ದಾರೆ. ಕಾರು ರೈಡ್ ವೇಳೆಯೇ ಎಣ್ಣೆ ಹೊಡೆದ ಈ ಹುಡುಗರು ಬಳಿಕ ಬಾಟಲನ್ನು ರಸ್ತೆ ಮೇಲೆ ಎಸೆದು ಒಡೆದಿದ್ದಾರೆ. ಇದು ಸ್ಥಳೀಯರನ್ನು ಕೆರಳಿಸಿದೆ. ಕೂಡಲೇ ಕಾರಿನಿಂದ ಇಳಿದು ಆ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾರನ್ನು ತಡೆದ ಮಹಿಳೆ, ಯಾರು ಬಾಟಲ್ ಎಸೆದಿದ್ದೀರೋ ಅದನ್ನು ಅಲ್ಲಿಂದ ಎತ್ತಿ ಹೋಗುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆಯ ಜೊತೆ ಇನ್ನೂ ಅನೇಕ ಸ್ಥಳೀಯರು ಸೇರಿದ್ದು, ಪ್ರವಾಸಿಗರನ್ನು ಕೆಳಗಿಳಿಸಿದ ಬಾಟಲ್‌ನ್ನು ಪ್ರತಿ ಸಣ್ಣ ಚೂರುಗಳನ್ನು ಕೂಡ ಅವರಿಂದ ಹೆಕ್ಕಿಸಿದ್ದಾರೆ. ಈ ವೀಡಿಯೋದ ಆರಂಭದಲ್ಲಿ ಇಬ್ಬರು ಯುವಕರು ಸ್ಥಳೀಯರ ಜೊತೆ ವಾಗ್ವಾದ ಮಾಡುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ದೃಶ್ಯವನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೋಗಿ, ಹೋಗಿ, ಜೋ ಬಾಟಲ್ ಫೋಡಾ, ವೋ ನಿಕಲೋ ಎಂದು ಮಹಿಳೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.

ಕೆಲಸಕ್ಕೆ ಹೊರಟ ತಾಯಿಯನ್ನು ಕಂಡು ಅಮ್ಮಾ, ಅಮ್ಮಾ ಎಂದು ಕೂಗಿ ಕಣ್ಣೀರಿಟ್ಟ ಮಗು: ವಿಡಿಯೋ

ಅನೇಕರು ಇದೇ ರೀತಿ ಪ್ರವಾಸಿ ತಾಣಗಳ ಬಳಿ ಇರುವ ಸ್ಥಳೀಯರು ಎಚ್ಚೆತ್ತುಕೊಂಡು ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವ ಜನರನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಂದಹಾಗೆ ಈ ವಿಡಿಯೋ ಕಳೆದ ತಿಂಗಳು ವೈರಲ್ ಆಗಿತ್ತು, ಆದರೆ ಇಂಟರ್‌ನೆಟ್‌ನಲ್ಲಿ ಈಗ ಮತ್ತೆ ವೈರಲ್ ಆಗ್ತಿದೆ. ಇತ್ತೀಚೆಗೆ, ಸಿದ್ಧಾರ್ಥ್ ಶುಕ್ಲಾ ಎಂಬ ಎಕ್ಸ್ ಬಳಕೆದಾರರೊಬ್ಬರು ಇದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ, ಕೇವಲ ಮೋಜಿಗಾಗಿ ಪ್ರಶಾಂತ ತಾಣಗಳನ್ನು ಹಾಳು ಮಾಡುವ ಪ್ರವಾಸಿಗರಿಗೂ ಇದೇ ರೀತಿಯ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಗೋವಾದ ಸ್ಥಳೀಯರು ಇಲ್ಲಿ ಮಾಡಿದ ಕೆಲಸದಿಂದ ತುಂಬಾ ಹೆಮ್ಮೆಯಾಗುತ್ತದೆ. ಅವರಿಗೆ ಯೋಗ್ಯವಾದ ಪ್ರತಿಕ್ರಿಯೆ ಸಿಕ್ಕಿದೆ ಮಾತ್ರವಲ್ಲದೆ, ರಸ್ತೆಯ ಬದಿಯಲ್ಲಿ ಅವರು ಒಡೆದ ಬಾಟಲಿಗಳ ತುಂಡುಗಳನ್ನು ಅವರೇ ಎತ್ತುವಂತೆ ಮಾಡಲಾಯಿತು. ಕೆಲವು ಏಟುಗಳು ಸಹ ಚೆನ್ನಾಗಿರುತ್ತದೆ. ಇದೇ ರೀತಿ ಹಿಮಾಚಲ ಪ್ರದೇಶದಲ್ಲೂ ಮಾಡಬೇಕು ಎಂದು ಅವರು ವೀಡಿಯೋ ಶೇರ್ ಮಾಡುತ್ತಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.  ಪ್ರವಾಸಿ ತಾಣದಲ್ಲಿ ಮಹಿಳೆಯ ಈ ದಿಟ್ಟತನದ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ...
 

Very proud by what the Goa locals did here - not only did they get a deserving yelling but were made to pick up the pieces of the bottles they were smashing on side of the road.

A few slaps would have been nice too! Should be done in HP too pic.twitter.com/ojsmD0efab

— Sidharth Shukla (@sidhshuk)

 

 

vuukle one pixel image
click me!