ಜಗತ್ತಿನಲ್ಲಿ ಆಸಕ್ತಿದಾಯ, ಅಚ್ಚರಿ ಹುಟ್ಟಿಸುವ, ಭಯಾನಕ, ಅಪರಾಧ ನಡೆಯುವ ಅನೇಕ ಸ್ಥಳಗಳಿವೆ. ಕೆಲವು ಸ್ಥಳಗಳಲ್ಲಿ ಜನರು ಓಡಾಡೋದೇ ಕಷ್ಟ. ಅದ್ರಲ್ಲಿ ಬ್ರಿಟನ್ ಈ ಸಿಟಿ ಕೂಡ ಸೇರಿದೆ.
ಜನರಿರುವ ಪ್ರದೇಶದಲ್ಲಿ ಗಲಾಟೆ ಮಾಮೂಲಿ. ಎಲ್ಲ ಕಡೆ ಕೊಲೆ, ಸುಲಿಗೆ, ಕಳ್ಳತನದಂತಹ ಘಟನೆಗಳು ನಡೆಯುತ್ತಿರುತ್ತವೆ. ಅಲ್ಲಿನ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ, ಶಾಂತಿ ಕಾಪಾಡಲು ನಿರಂತರ ಪ್ರಯತ್ನ ನಡೆಸುತ್ತಿರುತ್ತಾರೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ನಾವು ಹೆಚ್ಚು ಸುರಕ್ಷಿತರಾಗಿದ್ದೇವೆ. ಮಧ್ಯರಾತ್ರಿ ಕೂಡ ಇಲ್ಲಿನ ಮಹಿಳೆಯರು ಯಾವುದೇ ಭಯವಿಲ್ಲದೆ, ಪೊಲೀಸರಿರುವ ಭರವಸೆಯಲ್ಲಿ ಓಡಾಡುತ್ತಾರೆ. ಆದ್ರೆ ವಿಶ್ವದ ಎಲ್ಲ ದೇಶ, ಎಲ್ಲ ನಗರ ಹಾಗಿಲ್ಲ. ಕೆಲ ಪ್ರದೇಶಗಳು ಹೆಚ್ಚು ಅಪಾಯಕಾರಿ. ಅಲ್ಲಿ ರಾತ್ರಿಯಾಗ್ತಿದ್ದಂತೆ ಮನೆಯಿಂದ ಹೊರಗೆ ಬರೋದು ಕಷ್ಟ. ಬೆಳಿಗ್ಗೆ ಕೂಡ ಅಲ್ಲಿನ ಜನರು ಭಯದಲ್ಲಿಯೇ ಜೀವನ ನಡೆಸ್ತಾರೆ. ಅದ್ರಲ್ಲಿ ಬ್ರಿಟನ್‌ನ ಒಂದು ನಗರ ಸೇರಿದೆ. ಅಪರಾಧದ ಮಟ್ಟ ಅಲ್ಲಿ ಅತಿ ಹೆಚ್ಚಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಪರಾಧ ನಡೆಯುವ ಜಾಗ ಅದಾಗಿದೆ.
ಅಪರಾಧ (Crime) ದಲ್ಲಿ ಮುಂದಿದೆ ಈ ನಗರ : ಬ್ರಿಟನ್ (Britain) ನ ಈ ನಗರದ ಹೆಸರು ಪೀಟರ್‌ಬರೋ ವೈಲ್ಡ್ ವೆಸ್ಟ್. ಇಲ್ಲಿ ಡ್ರಗ್ಸ್ (Drugs)ಹಾವಳಿ ಮಿತಿ ಮೀರಿದೆ. ಡ್ರಗ್ಸ್ ಹಾಗೂ ಕ್ರೈಂ ಕಾರಣಕ್ಕೆ ಅಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಇದನ್ನು ಯುಕೆಯಲ್ಲಿ ಅತ್ಯಂತ ಖಿನ್ನತೆಯ ನಗರ ಎಂದೂ ಕರೆಯುತ್ತಾರೆ. ಇಲ್ಲಿ ಡ್ರಗ್ಸ್ ಅತಿ ಹೆಚ್ಚಿದೆ. ಇದನ್ನು ನಿಯಂತ್ರಿಸಲು ಹಿಂದಿನ ವರ್ಷ ಪೊಲೀಸರು ಆಪರೇಷನ್ ಸುನಾಮಿ ಪ್ರಾರಂಭಿಸಿದ್ದರು. ಡ್ರಗ್ಸ್ ನಿಯಂತ್ರಣ ಹಾಗೂ ಅಪರಾಧ ತಡೆ ಇದರ ಉದ್ದೇಶವಾಗಿತ್ತು. ಈ ಸಮಯದಲ್ಲಿ ಪೊಲೀಸರು 48 ಮಂದಿಯನ್ನು ಬಂಧಿಸಿದ್ದರು. ಈಗಾಗಲೇ 12 ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ. ಪೊಲೀಸರು 250,000 ಪೌಂಡ್ ಅಂದ್ರೆ 2.64 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕುಟುಂಬದ ಜೊತೆ ಕಾಮಾಕ್ಯದೇವಿ ದರ್ಶನ ಪಡೆದ ನಟ ಜಗ್ಗೇಶ್, ಏನೀ ದೇವಾಲಯದ ವಿಶೇಷ?
ಇದೊಂದು ಸ್ಮಾರಕ ಬೀದಿಯಾಗಿದೆ. ಇಲ್ಲಿ ರಾತ್ರಿ ಬೆಳಗಿನವರೆಗೂ ಡ್ರಗ್ಸ್ ಗಲಾಟೆ ನಡೆಯುತ್ತಿರುತ್ತದೆ. ಇಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಭಯವಿಲ್ಲದೆ ಜನರು ಡ್ರಗ್ಸ್ ಖರೀದಿ ಮಾಡ್ತಾರೆ. ಒಂದು ಮನೆ ಬಾಗಿಲನ್ನು ಪರ್ಮನೆಂಟ್ ಆಗಿ ಮುಚ್ಚಿದ್ದಾರೆ. ಇದಕ್ಕೆ ಕಾರಣ ಆ ಮನೆಯಲ್ಲಿ ಮಧ್ಯರಾತ್ರಿ ಒಂದು ಗಂಟೆಯಿಂದ ಬೆಳಗಿನವರೆಗೂ ಜನರು ಕಿರುಚುತ್ತಿದ್ದರಂತೆ. ವಾರದಲ್ಲಿ ಮೂರ್ನಾಲ್ಕು ದಿನ ಅಲ್ಲಿ ಪಾರ್ಟಿ ನಡೆಯುತ್ತಿತ್ತು ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಡ್ರಗ್ಸ್ ವಿಷ್ಯದಲ್ಲಿ ಇಲ್ಲಿನ ಜನರಿಗೆ ಯಾವುದೇ ಭಯವಿಲ್ಲ. 2022 ರಲ್ಲಿ 24,678 ಅಪರಾಧಗಳು ನಡೆದಿವೆ ಎಂದು ಪೀಟರ್‌ಬರೋ ಟೆಲಿಗ್ರಾಫ್ ವರದಿ ಮಾಡಿದೆ. ಈ ಸಂಖ್ಯೆ ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಇಂಗ್ಲೆಂಡ್ ಮತ್ತು ವೇಲ್ಸ್ ಗೆ ಹೋಲಿಸಿದ್ರೆ ಎರಡುಪಟ್ಟು ಹೆಚ್ಚಿದೆ.
ನಗರದಲ್ಲಿ ಯಾವುದೇ ಪೊಲೀಸರು ಕಾಣಿಸೋದಿಲ್ಲ. ಹಾಗಾಗಿಯೇ ಇಲ್ಲಿನ ಜನರು ಆರಾಮವಾಗಿ ಡ್ರಗ್ಸ್ ಖರೀದಿ ಮಾಡಿ, ಸೇವನೆ ಮಾಡ್ತಾರೆ. ಅಪರಾಧಗಳು ಕೂಡ ಇಲ್ಲಿ ಇದೇ ಕಾರಣಕ್ಕೆ ಹೆಚ್ಚಾಗುತ್ತಿವೆ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡಿದ್ದಾರೆ. ಇಲ್ಲಿ ಏನೇ ಆದ್ರೂ ಜನರು ಕೂಡ ಸಹಾಯಕ್ಕೆ ಬರೋದಿಲ್ಲ.
ಬೆಚ್ಚಗಿನ ವಾತಾವಣ, ಸಂಗಾತಿ ಹುಡುಕಾಟ.. ರೋಡ್ ಟ್ರಿಪ್ ಹೊರಟ ಜಿರಾಫೆ
ಎರಡು ಮಕ್ಕಳ ತಾಯಿ ಇಲ್ಲಿನ ಸ್ಥಳೀಯೆ ಕೂಡ ಇದನ್ನೇ ಹೇಳಿದ್ದಾಳೆ. ಇಲ್ಲಿ ಪ್ರತಿ ದಿನ ಗಲಾಟೆಗಳು ನಡೆಯುತ್ತಿರುತ್ತವೆ. ಇಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ ಇಲ್ಲ. ರಾತ್ರಿ ಎಂಟು ಗಂಟೆ ನಂತ್ರ ನಾನು ಮನೆಯಿಂದ ಹೊರಗೆ ಹೋಗೋದಿಲ್ಲ. ಇಲ್ಲಿನ ಜನರು ಏನು ಬೇಕಾದ್ರೂ ಮಾಡಬಲ್ಲರು. ಕೆಲವರು ಹಣ ಲೂಟಿ ಮಾಡಿದ್ರೆ ಮತ್ತೆ ಕೆಲವರು ಕೊಲೆ ಮಾಡಲು ಹೆದರೋದಿಲ್ಲ ಎಂದು ಇಲ್ಲಿನ ಮಹಿಳೆ ಹೇಳಿದ್ದಾಳೆ.