ಬೆಚ್ಚಗಿನ ವಾತಾವಣ, ಸಂಗಾತಿ ಹುಡುಕಾಟ.. ರೋಡ್ ಟ್ರಿಪ್ ಹೊರಟ ಜಿರಾಫೆ

By Suvarna News  |  First Published Jan 24, 2024, 2:47 PM IST

ಎಲ್ಲ ವಾತಾವರಣದಲ್ಲಿ ಎಲ್ಲ ಪ್ರಾಣಿ ಜೀವಂತವಿರಲು ಸಾಧ್ಯವಿಲ್ಲ. ಅವುಗಳಿಗೆ ಅನುಕೂಲವಾದ ವಾತಾವರಣ ಸಿಕ್ಕಾಗ, ಒಳ್ಳೆ ಸಂಗಾತಿ ದೊರೆತಾಗ ಅವು ಖುಷಿಯಾಗಿರುತ್ತವೆ. ಇದನ್ನು ಅರಿತ ಮೃಗಾಲಯದ ಸಿಬ್ಬಂದಿ ಈಗ ಜಿರಾಫೆಗಾಗಿ ವಿಶೇಷ ಟ್ರಿಪ್ ಆಯೋಜಿಸಿದ್ದಾರೆ. 
 


ಒಂಟಿಯಾಗಿ ಜೀವನ ನಡೆಸೋದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕಷ್ಟ. ಅವರ ಕಷ್ಟಸುಖಗಳನ್ನು ಹಂಚಿಕೊಳ್ಳಲು ಒಂದು ಸಂಗಾತಿಯ ಅಥವಾ ಸ್ನೇಹಿತರ ಅವಶ್ಯಕತೆ ಇರುತ್ತದೆ. ಈಗ ಜಿರಾಫೆಯೊಂದು ಸಂತೋಷದ ಹುಡುಕಾಟದಲ್ಲಿದೆ. ಜಿರಾಫೆಗೆ ಜೀವನದಲ್ಲಿ ಖುಷಿ ನೀಡಲು ತೆಗೆದುಕೊಂಡು ಕ್ರಮವೊಂದು ಈಗ ಚರ್ಚೆಯಲ್ಲಿದೆ. ಜಿರಾಫೆ ಸದ್ಯ 40 ಗಂಟೆಗಳ ರೋಡ್ ಟ್ರಿಫ್ ನಲ್ಲಿದೆ. ಜಿರಾಫೆಗೆ ಹೊಸ ಮನೆಯ ಅಗತ್ಯವಿದ್ದು, ಅದು ಇಷ್ಟು ಗಂಟೆಗಳ ಕಾಲ ಪ್ರಯಾಣ ನಡೆಸಲು ಇದೇ ಕಾರಣವಾಗಿದೆ. ವಾತಾವರಣ ಬೆಚ್ಚಗಿರುವ ಹಾಗೂ ಹೆಣ್ಣು ಜಿರಾಫೆ ಸಿಗುವ ಜಾಗದಲ್ಲಿ ಈ ಜಿರಾಫೆ ವಾಸಿಸಲಿದೆ.

ಈ ಜಿರಾಫೆ (Giraffe)ಯ ಹೆಸರು ಬೆನಿಟೊ. ಬೆನಿಟೊ ಕಳೆದ ವರ್ಷ ಮೆಕ್ಸಿಕನ್ (Mexican) ರಾಜ್ಯ ಸಿನಾಲೋವಾದ ಮೃಗಾಲಯವನ್ನು ತೊರೆದಿತ್ತು. ನಂತರ ಬೆನೆಟೊ  ಅಮೆರಿಕಾದ ಗಡಿಯ ಸಮೀಪವಿರುವ ಉದ್ಯಾನವನದಲ್ಲಿ ಕಂಡುಬಂದಿತ್ತು. ಅಲ್ಲಿ ತಾಪಮಾನವು 9C (48F) ಗಿಂತ ಕಡಿಮೆಯಿತ್ತು. ಇದು ಜಿರಾಫೆಗೆ ಕಷ್ಟತಂದಿತ್ತು. ಈಗ ನಾಲ್ಕು ವರ್ಷದ ಜಿರಾಫೆಯನ್ನು  ಬಿಸಿಲಿನ ಪ್ರದೇಶಕ್ಕೆ ಕರೆದೊಯ್ಯಲಾಗ್ತಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಕಂಟೇನರ್ ನಲ್ಲಿ ಸುಮಾರು 90 ಮೈಲಿಗಳು  ಅಂದ್ರೆ 145 ಕಿಮೀ ದೂರದಲ್ಲಿರುವ ಸಫಾರಿ ಪಾರ್ಕ್‌ಗೆ ಜಿರಾಫೆಯನ್ನು ಕರೆದೊಯ್ಯುಲಾಗುತ್ತಿದೆ. ಬೆನಿಟೊ ಟ್ರಕ್‌ನ ಹಿಂಭಾಗಕ್ಕೆ ಕಟ್ಟಲಾದ ಕ್ರೇಟ್‌ನಲ್ಲಿ ಪ್ರಯಾಣಿಸುತ್ತಾನೆ. ಬೆನಿಟೊ 16 ಮೀಟರ್ ಎತ್ತರವಿದ್ದು, ಟ್ರಕ್ ಸೇತುವೆಯ ಕೆಳಗೆ ಹಾದುಹೋದಾಗಲೆಲ್ಲಾ, ಅದಕ್ಕೆ ತೊಂದರೆ ಆಗದಂತೆ ಛಾವಣಿಯನ್ನು ಕೆಳಕ್ಕೆ ಇಳಿಸಲಾಗುತ್ತದೆ.

97 ವರ್ಷದಲ್ಲೂ ಗಾಗಲ್ಸ್ ಹಾಕಿ ಗಗನಕ್ಕೆ ಹಾರಿದ ಈ ಫ್ಲೈಯಿಂಗ್ ಅಜ್ಜಿ ಯಾರು?

Tap to resize

Latest Videos

ಜಿರಾಫೆ ಬೆನಿಟೊ, ಮೃಗಾಲಯದ ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಹಾಗಾಗಿ ಪ್ರಯಾಣ ಆರಂಭಿಸಿದ ಕೂಡಲೇ ಜನರ ಉತ್ಸಾಹ ಮುಗಿಲು ಮುಟ್ಟಿದೆ. ಎಲ್ಲರೂ ಬಂದು ಜಿರಾಫೆಯನ್ನು ನೋಡ್ತಿದ್ದಾರೆ.  ಜಿರಾಫೆ ನಮ್ಮೆಲ್ಲರ ಅಚ್ಚುಮೆಚ್ಚಾಗಿತ್ತು. ಅದು ಹೋಗ್ತಿರೋದು ದುಃಖ ತಂದಿದೆ. ಆದ್ರೆ ಇಲ್ಲಿನ ವಾತಾವರಣ ಜಿರಾಫೆ ವಾಸಕ್ಕೆ ಸೂಕ್ತವಾಗಿಲ್ಲ. ಹಾಗಾಗಿ ನಾವು ಅದನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಬೇಕು. ಜಿರಾಫೆ ಸುರಕ್ಷಿತ ಸ್ಥಳಕ್ಕೆ ಹೋಗ್ತಿದೆ ಎನ್ನುವ ಖುಷಿ ಕೂಡ ನಮಗೆ ಇದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

ಬೆನಿಟೊನ ಕೆಲ ಫೋಟೋಗಳು ವೈರಲ್ ಆಗಿವೆ. ಬೇಸಿಗೆ ಅಥವಾ ಚಳಿಗಾಲವೇ ಆಗಿರಲಿ, ಬೆನಿಟೊ ಆ ಪರಿಸರದಲ್ಲಿ ವಾಸಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದ ಎಂಬುದನ್ನು ಆತನ ಪರಿಸ್ಥಿತಿಯಿಂದಲೇ ಹೇಳಬಹುದಾಗಿದೆ. 

ಬೆನಿಟೊ, ಒಂದು ಗಂಡು ಹಾಗೂ ಒಂದು ಹೆಣ್ಣು ಜಿರಾಫೆ ಇರುವ ಮೃಗಾಲಯದಲ್ಲಿ ಜನಿಸಿತ್ತು. ಆದ್ರೆ ಅಲ್ಲಿ ಬೆನಿಟೊ ವಾಸ ಸಾಧ್ಯವಾಗುತ್ತಿರಲಿಲ್ಲ. ಬೆನಿಟೊ ಮೇಲೆ ಇನ್ನೊಂದು ಗಂಡು ಜಿರಾಫೆ ದಾಳಿ ಮಾಡುವ ಅಪಾಯವಿತ್ತು. ಹಾಗಾಗಿ ಅದನ್ನು ಬೇರೆಡೆ ಶಿಫ್ಟ್ ಮಾಡುವ ಆಲೋಚನೆ ಮಾಡಲಾಗಿತ್ತು. 

ರಾಮ ಮಂದಿರ ಆಯ್ತು, ಈಗ ನೂತನ ರಾಮ ಸೇತುಗೆ ಪ್ಲ್ಯಾನ್: ಭಾರತ - ಶ್ರೀಲಂಕಾ ನಡುವೆ ಶೀಘ್ರ 23 ಕಿ.ಮೀ. ಉದ್ದದ ಸಮುದ್ರ ಸೇತುವೆ!

ಬೆನಿಟೊ ಈಗ ಹೋಗ್ತಿರುವ ಸಫಾರಿ ಪಾರ್ಕ್‌ ವಿಶಾಲವಾಗಿದೆ. ಅಲ್ಲಿ ಯಾವುದೇ ಗಂಡು ಜಿರಾಫೆಯ ಭಯವಿಲ್ಲ. ಸದ್ಯ ಆ ಪಾರ್ಕ್ ನಲ್ಲಿ ಮೂರು ಹೆಣ್ಣು ಜಿರಾಫೆಗಳಿವೆ. ದೊಡ್ಡ ಜಾಗದಲ್ಲಿ ಆರಾಮವಾಗಿ, ಬೆಚ್ಚಗೆ ವಾಸಿಸುವ ಅವಕಾಶ ಬೆನಿಟೊಗೆ ಸಿಗ್ತಿದೆ.

ಬೆನಿಟೊ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ ಹಾಗಾಗಿ ಅವನಿಗೆ  ಬಹುಮಾನವಾಗಿ ಸಾಕಷ್ಟು ಟ್ರೀಟ್‌ಗಳನ್ನು ನೀಡಲಾಗಿದೆ ಎಂದು ಸದ್ಯ ಬೆನಿಟೊ ಜೊತೆ ಟ್ರಿಪ್ ನಲ್ಲಿರುವ ಫ್ರಾಂಕ್ ಕಾರ್ಲೋಸ್ ಕ್ಯಾಮಾಚೊ ಹೇಳಿದ್ದಾರೆ. ಒಣಹುಲ್ಲು, ಸೊಪ್ಪು, ನೀರು ಮತ್ತು ತರಕಾರಿಗಳನ್ನು ಕಂಟೇನರ್ ನಲ್ಲಿ ಇಡಲಾಗಿದೆ. ಅವನ ಜೊತೆ ಒಬ್ಬ ಪೊಲೀಸ್, ಅರಣ್ಯ ಅಧಿಕಾರಿ ಹಾಗೂ ರಾಷ್ಟ್ರೀಯ ಕಾವಲು ಪಡೆ ಇದೆ. ಅದರ ಮೇಲ್ವಿಚಾರಣೆಗೆ ಗ್ಯಾಜೆಟ್ ಅಳವಡಿಕೆ ಮಾಡಲಾಗಿದೆ. ಶೀಘ್ರದಲ್ಲಿಯೇ ಇನ್ನೊಂದು ಪುಟ್ಟ ಜಿರಾಫೆ ನೀಡಲು ಬೆನಿಟೊ ಸಿದ್ಧವಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

click me!