ಅಯೋಧ್ಯೆಗೆ ಹೋಗುವ ಪ್ರವಾಸಿಗರು ತಡೆರಹಿತ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ 1622 ರೂ. ಗೆ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ವಿವರ ಹೀಗಿದೆ..
ದೆಹಲಿ (ಜನವರಿ 22, 2024): ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆಯಾಗಿದ್ದು, ನೂತನ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯೂ ಅಗಿದೆ. ಹಾಗೂ, ಪ್ರವಾಸಿಗರಿಗೂ ಸಹ ನಾಳೆಯಿಂದ ಮುಕ್ತವಾಗಲಿದೆ. ಈ ಹಿನ್ನೆಲೆ ಸ್ಪೈಸ್‌ಜೆಟ್ ಈ ಐತಿಹಾಸಿಕ ದಿನವನ್ನು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯನ್ನು ವಿಶೇಷ ಅಭಿಯಾನದೊಂದಿಗೆ ಆಚರಿಸುತ್ತಿದೆ.
ಅಯೋಧ್ಯೆಗೆ ಹೋಗುವ ಪ್ರವಾಸಿಗರು ತಡೆರಹಿತ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ 1622 ರೂ. ಗೆ ಪ್ರಯಾಣ ಮಾಡಬಹುದಾಗಿದೆ. 1622 ರೂ. ನಿಂದ ವಿಮಾನ ಟಿಕೆಟ್ ದರಗಳು ಪ್ರಾರಂಭವಾಗುತ್ತವೆ ಎಂದು ತಿಳಿದುಬಂದಿದೆ. ಹಾಗೂ, ಸೆಪ್ಟೆಂಬರ್ 30, 2024 ರವರೆಗೆ ಈ ಆಫರ್ ಮುಂದುವರಿಯಲಿದೆ. ಅಲ್ಲದೆ, ಸ್ಪೈಸ್‌ಜೆಟ್ ವೆಬ್‌ಸೈಟ್ ಪ್ರಕಾರ, ಉಚಿತ ದಿನಾಂಕ ಬದಲಾವಣೆಯ ಕೊಡುಗೆಯೊಂದಿಗೆ ನಿಮ್ಮ ಪ್ರವಾಸದ ದಿನಾಂಕವನ್ನು ನೀವು ಅನುಕೂಲಕರವಾಗಿ ಬದಲಾಯಿಸಬಹುದು ಎಂದೂ ತಿಳಿದುಬಂದಿದೆ. (ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ).
ಇದನ್ನು ಓದಿ: ನಾಳೆಯಿಂದ ಅಯೋಧ್ಯೆಗೆ ಪ್ರವಾಸಿಗರ ಲಗ್ಗೆ: ಪ್ರತಿನಿತ್ಯ ಲಕ್ಷಾಂತರ ಜನರಿಗೆ ಆತಿಥ್ಯ ನೀಡೋದೇ ಸವಾಲು!
ಫೆಬ್ರವರಿ 1, 2024 ರಿಂದ ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಅಯೋಧ್ಯೆಗೆ ಹೆಚ್ಚುವರಿ ವಾಯುಯಾನ ಮಾರ್ಗಗಳನ್ನು ತೆರೆಯುವುದಾಗಿಯೂ ಸ್ಪೈಸ್‌ಜೆಟ್ ಘೋಷಿಸಿದೆ. ಸದ್ಯ, ಅಂದರೆ ನಾಳೆಯಿಂದ (ಜನವರಿ 22ರಿಂದ) ಚೆನ್ನೈ, ಅಹಮದಾಬಾದ್, ದೆಹಲಿ, ಮುಂಬೈ, ಬೆಂಗಳೂರು, ಜೈಪುರ, ಪಾಟ್ನಾ ಮತ್ತು ದರ್ಭಾಂಗದಿಂದ ಅಯೋಧ್ಯೆಗೆ ವಿಮಾನಗಳು ಹಾರಲಿದೆ. ಈ ವಿಶೇಷ ಕೊಡುಗೆಯು ಅಯೋಧ್ಯೆಗೆ ಮತ್ತು ಅಲ್ಲಿಂದ ಹೊರಡುವ ಹೊಸ ವಿಮಾನಗಳ ಆಯ್ದ ವಿಮಾನಗಳನ್ನು ಸಹ ಒಳಗೊಂಡಿದೆ ಎಂದೂ ತಿಳಿದುಬಂದಿದೆ.
ವಿವರಗಳು
ಇದನ್ನು ಓದಿ: ನಾಳೆಯಿಂದ ಅಯೋಧ್ಯೆ ಸಾರ್ವಜನಿಕ ಮುಕ್ತ: ವರ್ಷಕ್ಕೆ 5 ಕೋಟಿ ಭಕ್ತರ ನಿರೀಕ್ಷೆ; ಪ್ರವಾಸೋದ್ಯಮಕ್ಕೆ ಸುವರ್ಣ ಯುಗ!
ವಿಮಾನ ದರದ ನಿಯಮಗಳು ಮತ್ತು ಷರತ್ತುಗಳು: