
ಆಳ ಸಮುದ್ರದಲ್ಲಿ ಈಜಾಡುತ್ತಿದ್ದ ಟ್ರಾವೆಲ್ ವ್ಲಾಗರ್ ಒಬ್ಬರಿಗೆ ಶಾರ್ಕೊಂದು ಕಚ್ಚಿರುವಂತಹ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಲೀಪ್ ಟ್ರಾವೆಲರ್ಸ್ ಎಂದೇ ಕರೆಯಲ್ಪಡುವ ಟ್ರಾವೆಲ್ ವ್ಲಾಗರ್ ದಂಪತಿಗಳಾದ ಚೆಲ್ಸಿಯಾ ಮತ್ತು ಆಂಟೋನಿಯೊ ಅವರು ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದೆ. ಆಳ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಒಬ್ಬರಿಗೆ ಅಪಾಯಕಾರಿಯಲ್ಲದ ಸ್ನೇಹಮಯಿಯಾಗಿರುವ ಶಾರ್ಕ್ ಕಚ್ಚಿದ್ದು, ಇದರಿಂದ ಅವರ ಕೈಗಳಿಗೆ ಗಾಯಗಳಾಗಿ ರಕ್ತ ಒಸರಿದೆ. ಈ ಘಟನೆ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾವು ಅಟಾಲ್‌ನ ಉತ್ತರದ ಜನವಸತಿ ದ್ವೀಪವಾದ ಫುಲಿಧೂದಲ್ಲಿ ಈ ಘಟನೆ ನಡೆದಿದೆ. ಶಾರ್ಕ್‌ಗಳ ಗುಂಪಿನೊಂದಿಗೆ ಈ ಟ್ರಾವೆಲ್ ವ್ಲಾಗರ್ ಚೆಲ್ಸಿಯಾ ಅವರು ಈಜಾಡುತ್ತಿದ್ದಾಗ ಘಟನೆ ನಡೆದಿದ್ದು, ಅವರ ಡ್ರೋನ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಘಟನೆ ಬಳಿಕ ಗಾಯಗೊಂಡ ಟ್ರಾವೆಲ್ ವ್ಲಾಗರ್ ಚೆಲ್ಸಿಯಾಗೆ ಚಿಕಿತ್ಸೆ ನೀಡಲಾಗಿದೆ. ಅತ್ಯಂತ ಸ್ನೇಹಪರ ಜಾತಿಯ ಶಾರ್ಕ್‌ಗಳಿಂದ ಚೆಲ್ಸಿ ಕಚ್ಚಲ್ಪಟ್ಟಳು ಎಂದು ಲೀಪ್ ಟ್ರಾವೆಲರ್ಸ್ ಇನ್ಸ್ಟಾ ಪೇಜ್‌ನಲ್ಲಿ ಈ ಜೋಡಿ ಬರೆದುಕೊಂಡಿದೆ.
ಕೆಲವು ವಿಷಯಗಳನ್ನು ಸ್ಪಷ್ಟಪಡಿಸುತ್ತಿದ್ದೇವೆ, ಅವಳು ಶಾರ್ಕ್‌ನ ಬಾಯಿಯಲ್ಲಿ ತನ್ನ ಕೈಯನ್ನು ಅದು ವೀಡಿಯೋದಲ್ಲಿ ಕಾಣುವಷ್ಟು ಹಾಕಲಿಲ್ಲ. ಈ ಶಾರ್ಕ್‌ಗಳು ತಿನ್ನುವಾಗ, ಅವು ಆಹಾರವನ್ನು ನಂಬಲಾಗದಷ್ಟು ಹೆಚ್ಚು ದೊಡ್ಡ ಮಟ್ಟದಲ್ಲಿ ಒಳಗೆಳೆದುಕೊಳ್ಳಲು ಶಕ್ತಿಯನ್ನು ಬಳಸುತ್ತವೆ. ದುರದೃಷ್ಟವಶಾತ್ ಅದು ಚೆಲ್ಸ್‌ನ ಕೈಯನ್ನು ಟ್ಯೂನ ಮೀನು ಎಂದು ತಪ್ಪಾಗಿ ಭಾವಿಸಿ ಆಕೆಯ ಕೈಯನ್ನು ಕಚ್ಚಿತು. ಆದರೆ, ನೀವು ನೋಡುವಂತೆ, ಅದು ಟ್ಯೂನ ಮೀನು ಅಲ್ಲ ಎಂದು ಅರಿತುಕೊಂಡಾಗ ಬೇಗನೆ ಕೈಯನ್ನು ಬಿಟ್ಟು ಬಿಟ್ಟಿತು ಎಂದು ಅವರು ಬರೆದುಕೊಂಡಿದ್ದಾರೆ.
ಓಷನ್ ಹೀರೋ ಪ್ರಕಾರ, ಈ ನರ್ಸ್ ಶಾರ್ಕ್ ಬಲವಾದ ಕಡಿತವನ್ನು ಹೊಂದಿದ್ದು, ತನ್ನ ಹೀರುವಿಕೆಯ ಮೂಲಕ ಪ್ರತಿ ಚದರ ಇಂಚಿಗೆ ಸುಮಾರು 43 ಪೌಂಡ್ ಒತ್ತಡವನ್ನು (PSI) ಉತ್ಪಾದಿಸುತ್ತದೆ. ಮೀನುಗಳು ಪರಭಕ್ಷಕ ಜೀವಿಗಳೆಂದು ಬಿಂಬಿಸಲ್ಪಟ್ಟಷ್ಟು ಪರಭಕ್ಷಕವಲ್ಲದಿದ್ದರೂ, ಅವುಗಳೊಂದಿಗೆ ಸಂವಹನ ನಡೆಸುವಾಗ ಪ್ರಾದೇಶಿಕ ಜಾಗೃತಿಯನ್ನು ಹೊಂದಿರಬೇಕೆಂದು ಪ್ರವಾಸಿಗರಿಗೆ ಶಾರ್ಕ್ ಸುರಕ್ಷತಾ ತಜ್ಞರು ಸಲಹೆ ನೀಡುತ್ತಲೇ ಇರುತ್ತಾರೆ.
ಶಾರ್ಕ್‌ಗಳೊಂದಿಗೆ ಈಜುವ ಮೊದಲ ನಿಯಮವೆಂದರೆ ನಿಮ್ಮ ಬೆರಳುಗಳನ್ನು ನೀವು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಎಂದು ಪ್ರಮಾಣೀಕೃತ ಡೈವರ್ ಆಗಿರುವ ಹುಸೇನ್ ಫಕ್ರುದ್ದೀನ್ ಹೇಳುತ್ತಾರೆ. ಕೈ ಮತ್ತು ಬೆರಳುಗಳನ್ನು ಶಾರ್ಕ್ ಮೀನುಗಳು ಆಹಾರ ಎಂದು ಭಾವಿಸುವ ಸ್ಥಾನದಲ್ಲಿದ್ದವು ಎಂಬುದು ಸ್ಪಷ್ಟವಾಗಿ ಈ ವೀಡಿಯೋದಿಂದ ಕಂಡುಬರುತ್ತದೆ. ಆದಾಗ್ಯೂ ಈ ನರ್ಸ್ ಶಾರ್ಕ್‌ಗಳು ಸಹಜವಾಗಿ ನಿರುಪದ್ರವವಾಗಿಗಳಾಗಿವೆ
ನರ್ಸ್ ಶಾರ್ಕ್‌ಗಳು ಉಷ್ಣವಲಯದ ಮತ್ತು ಉಪೋಷ್ಣವಲಯದ ಕರಾವಳಿಗಳ ಸುತ್ತಲಿನ ಬೆಚ್ಚಗಿನ ಮತ್ತು ಆಳವಿಲ್ಲದ ನೀರಿನಲ್ಲಿ ಕಂಡುಬರುತ್ತವೆ. ಬಂಡೆಗಳು, ಮ್ಯಾಂಗ್ರೋವ್‌ಗಳು, ಕಲ್ಲಿನ ಪ್ರದೇಶಗಳು ಮತ್ತು ಮರಳಿನ ತಳಗಳು ಅವುಗಳ ಆದ್ಯತೆಯ ಆವಾಸ ಸ್ಥಾನಗಳಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.