ಫ್ಲೈಟ್‌ ಟಿಕೆಟ್ ಬುಕ್ ಮಾಡೋ ಮುನ್ನ ತಿಳ್ಕೊಳ್ಳಿ, ವಿಮಾನದಲ್ಲಿ ಯಾವ ಸೀಟು ಹೆಚ್ಚು ಸೇಫ್‌ ?

By Vinutha Perla  |  First Published Feb 21, 2023, 12:19 PM IST

ಆಕಾಶದಲ್ಲಿ ಹಾರಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ವಿಮಾನದ ವಿಂಡೋ ಸೀಟ್‌ನಲ್ಲಿ ಕುಳಿತು ಸೆಲ್ಫೀ ಕ್ಲಿಕ್ ಮಾಡೋದು, ಹೊರಗಿನ ಸೀನರಿ ಕ್ಯಾಪ್ಚರ್ ಮಾಡೋದು ಹಲವರ ಫೇವರಿಟ್. ಆದ್ರೆ ವಿಮಾನ ಪ್ರಯಾಣ ಮಾಡುವವರಿಗೆ ಯಾವ ಸೀಟ್ ಹೆಚ್ಚು ಸೇಫ್‌ ? ಅಧ್ಯಯನವೊಂದು ಈ ಬಗ್ಗೆ ಮಾಹಿತಿ ನೀಡಿದೆ.


ಮುಂಬೈ: ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ, ಉದ್ಯೋಗ, ಬಿಸಿನೆಸ್ ಟೂರ್ ಹೀಗೆ ನಾನಾ ವಿಚಾರಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದು ಅನಿವಾರ್ಯವಾಗಿರುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತ್ವರಿತವಾಗಿ ಹೋಗಬೇಕಾದರೆ, ವಿಮಾನಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಕೆಲವೇ ಗಂಟೆಗಳಲ್ಲಿ ಸಾವಿರಾರು ಕಿಲೋಮೀಟರ್‌ಗಳನ್ನು ವಿಮಾನದಲ್ಲಿ ಪ್ರಯಾಣಿಸಬಹುದು. ಆದರೆ ಕೆಲವರು ವಿಮಾನದಲ್ಲಿ ಪ್ರಯಾಣ ಮಾಡಲು ಹೆದರುತ್ತಾರೆ. ಪ್ರಯಾಣ (Travel) ಮಾಡಲೇಬೇಕಾದ ಅನಿವಾರ್ಯ ಎದುರಾದಾಗ  ತಮ್ಮ ಇಚ್ಛೆಯ ಸೀಟುಗಳ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಯಶಸ್ವಿಯಾಗುತ್ತಾರೆ ಮತ್ತು ಕೆಲವರು ಯಶಸ್ವಿಯಾಗುವುದಿಲ್ಲ. ಇಂಥ ಸೀಟು ಸೇಫ್ ಎಂದುಕೊಂಡು ಜನ ತಮ್ಮದೇ ರೀತಿಯಲ್ಲಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದರೆ ಎಕ್ಸ್‌ಪರ್ಟ್ ಪ್ರಕಾರ ನಿಜವಾಗಿಯೂ ಸೇಫ್ ಸೀಟ್ ಯಾವುದು ?

ಯಾವುದೇ ರೀತಿಯ ಪ್ರಯಾಣದಲ್ಲಿ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಇದನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ. ಆದ್ರೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬಹುದು. ಇತ್ತೀಚಿನ ಕೆಲವು ವಿಮಾನ ಅಪಘಾತಗಳಿಂದ ಕೆಲವು ಪ್ರಯಾಣಿಕರು ವಿಮಾನದಲ್ಲಿ (Aeroplane) ಪ್ರಯಾಣಿಸಲು ಭಯಪಡುತ್ತಾರೆ. ಹಾಗಾಗಿ ಪ್ರಯಾಣಿಕರು ಆಸನಗಳನ್ನು ಕಾಯ್ದಿರಿಸುವಾಗ ಅವರ ಗ್ರಹಿಕೆಗೆ ಅನುಗುಣವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಅನೇಕ ಪ್ರಯಾಣಿಕರು ವಿಮಾನಗಳಲ್ಲಿ ಕಿಟಕಿ ಸೀಟುಗಳನ್ನು (Window seat) ಬಯಸುತ್ತಾರೆ. ಕೆಲವು ಜನರು ಬಾತ್‌ರೂಮ್‌ ಬಳಿಯ ಆಸನವನ್ನು ಸೂಕ್ತವೆಂದು ಕಂಡುಕೊಳ್ಳುತ್ತಾರೆ. ಕೆಲವರು ಕ್ಯಾಬಿನ್ ಸಿಬ್ಬಂದಿಯ ಬಳಿ ಕುಳಿತುಕೊಳ್ಳಲು ಬಯಸುತ್ತಾರೆ. ಆದರೆ, ವಿಮಾನದಲ್ಲಿ ಸುರಕ್ಷಿತ ಆಸನ ಯಾವುದು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

Tap to resize

Latest Videos

ಕಾಸ್ಟ್ಲೀ ದುನಿಯಾ..ಏರ್‌ಪೋರ್ಟ್‌ನಲ್ಲಿ ಮನೆ ಆಹಾರ ಸೇವಿಸಿ ಮಾದರಿಯಾದ ಅಮ್ಮ-ಮಗ!

ಯುಎಸ್‌ ನ್ಯಾಷನಲ್‌ ಸೇಫ್ಟಿ ಕೌನ್ಸಿಲ್ ಹೇಳೋದೇನು ? 
ಇತ್ತೀಚಿನ ಅಧ್ಯಯನವೊಂದು ಈ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಿದೆಇತ್ತೀಚಿನ ಅಧ್ಯಯನವೊಂದರ ಪ್ರಕಾರ, ವಿಮಾನದ ಮಧ್ಯದ ಆಸನವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. USA ಫೆಡರಲ್ ಏವಿಯೇಷನ್ ಅಥಾರಿಟಿಯ 35 ವರ್ಷಗಳ ಅಧ್ಯಯನವು (Study) ವಿಂಡೋ ಸೀಟ್‌ಗಳು ಹೆಚ್ಚು ಸುರಕ್ಷಿತವಲ್ಲ ಎಂದು ತೀರ್ಮಾನಿಸಿದೆ. ಅಧ್ಯಯನದ ಪ್ರಕಾರ, ಮಧ್ಯದ ಎರಡು ಸಾಲುಗಳ ಆಸನಗಳನ್ನು ಹೊರತುಪಡಿಸಿ ವಿಮಾನದಲ್ಲಿನ ಇತರ ಆಸನವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. 

1985 ಮತ್ತು 2020ರ ನಡುವಿನ ವಿಮಾನ ಅಪಘಾತಗಳು ಮತ್ತು ಸಾವುಗಳನ್ನು (Death) ಅಧ್ಯಯನ ಮಾಡಲಾಗಿದೆ. ಕುಳಿತುಕೊಳ್ಳಲು ಅತ್ಯಂತ ಕೆಟ್ಟದಾದ ಸ್ಥಳವು ವಿಮಾನದ ಮಧ್ಯಭಾಗದಲ್ಲಿದೆ ಎಂದು ಸಂಸ್ಥೆ ಹೇಳುತ್ತದೆ. ಕ್ಯಾಬಿನ್‌ನ ಮಧ್ಯಭಾಗದಲ್ಲಿರುವ ಆಸನಗಳಲ್ಲಿ ಸಾವಿನ ಪ್ರಮಾಣವು 39 ಪ್ರತಿಶತದಷ್ಟಿತ್ತು. ಮುಂಭಾಗದಿಂದ ಮೂರನೇ ಸೀಟಿನಲ್ಲಿ ಮರಣ ಪ್ರಮಾಣವು 38 ಪ್ರತಿಶತ ಮತ್ತು ಹಿಂದಿನ ಮೂರನೇ ಸೀಟಿನಲ್ಲಿ ಮರಣ ಪ್ರಮಾಣವು 32 ಪ್ರತಿಶತ ಇದೆ ಎಂದು ಹೇಳಲಾಗಿದೆ. ಇತ್ತೀಚಿನ ಕೆಲವು ವಿಮಾನ ಅಪಘಾತಗಳ ಹಿನ್ನೆಲೆಯಲ್ಲಿ, ವಿಮಾನಯಾನ ಪ್ರಯಾಣಿಕರು ಯಾವ ಸೀಟುಗಳನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ ಎಂಬುದನ್ನು ಕಂಡುಹಿಡಿಯಲು ಅಧ್ಯಯನವನ್ನು ನಡೆಸಲಾಯಿತು.

ಮದುವೆಗೆ ಬಂಧುಬಳಗ ಕರೆದೊಯ್ಯಲು ವಿಮಾನದ ಅಷ್ಟೂ ಸೀಟುಗಳನ್ನ ಬುಕ್ ಮಾಡಿದ ವರ

ಯಾವ ರೀತಿಯ ಪ್ರಯಾಣದಲ್ಲಿ ಹೆಚ್ಚು ಅಪಘಾತ ಸಂಭವಿಸಿದೆ ?
2019ರಲ್ಲಿ, ಜಾಗತಿಕವಾಗಿ ಕೇವಲ 70 ಮಿಲಿಯನ್‌ಗಿಂತಲೂ ಕಡಿಮೆ ವಿಮಾನಗಳು ಇದ್ದವು, ಕೇವಲ 287 ಸಾವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ. US ನ್ಯಾಷನಲ್ ಸೇಫ್ಟಿ ಕೌನ್ಸಿಲ್‌ನ ಜನಗಣತಿಯ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ವಿಮಾನದಲ್ಲಿ ಸಾಯುವ ಸಾಧ್ಯತೆಗಳು 205,552 ರಲ್ಲಿ 1 ಆಗಿದ್ದು, ಕಾರಿನಲ್ಲಿ 102 ರಲ್ಲಿ 1ರಷ್ಟಿದೆ. 

ಆದರೆ ವಾಸ್ತವದಲ್ಲಿ ಜನರು ಬೇಗ ಇಳಿಯಲು ಮುಂದಿನ ಸೀಟುಗಳನ್ನು ಆರಿಸಿಕೊಳ್ಳುತ್ತಿದ್ದಾರೆ. 1979 ರಲ್ಲಿ ನ್ಯೂಜಿಲೆಂಡ್‌ನಲ್ಲಿ ವಿಮಾನ ಅಪಘಾತ ಸಂಭವಿಸಿತು. ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 257 ಜನರು ಸಾವನ್ನಪ್ಪಿದರು. 2009 ರಲ್ಲಿ, ಫ್ರಾನ್ಸ್‌ನಲ್ಲಿ ಅಪಘಾತದಲ್ಲಿ 228 ಪ್ರಯಾಣಿಕರು ಸಾವನ್ನಪ್ಪಿದರು. ತುರ್ತು ಸಂದರ್ಭಗಳಲ್ಲಿ ಪೈಲಟ್‌ಗಳಿಗೆ ಕಠಿಣ ತರಬೇತಿ ನೀಡಲಾಗುತ್ತದೆ. ಅವರು ಪರ್ವತಗಳು, ಬಯಲು ಮತ್ತು ನೀರಿನಲ್ಲಿ ಅಪಘಾತವಾದಾಗ ಏನು ಮಾಡಬೇಕೆಂದು ವಿಶೇಷ ತರಬೇತಿಯನ್ನು ಸಹ ಹೊಂದಿದ್ದಾರೆ. 

ಅದೇನೇ ಇದ್ದರೂ, 35 ವರ್ಷಗಳ ವಿಮಾನ ಅಪಘಾತದ ದತ್ತಾಂಶವನ್ನು ನೋಡಿದ ಅಧ್ಯಯನವು ತನಿಖೆಯು ವಿಮಾನದ ಮಧ್ಯದ ಹಿಂಭಾಗದ ಆಸನಗಳು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ ಎಂದು ಕಂಡುಹಿಡಿದಿದೆ

click me!