ಭಾರತದಲ್ಲಿ ಕೋಟ್ಯಾಂತರ ದೇವಸ್ಥಾನಗಳಿವೆ. ಅದ್ರಲ್ಲಿ ಕೆಲ ದೇವಸ್ಥಾನಗಳು ತಮ್ಮ ವಾಸ್ತುಶಿಲ್ಪದಿಂದ, ವಿಶಿಷ್ಟ ಪದ್ಧತಿಯಿಂದ ಎಲ್ಲರ ಗಮನ ಸೆಳೆಯುತ್ತವೆ. ನಮ್ಮ ಭಾರತದ ಸಂಸ್ಕೃತಿ ತಿಳಿಯಬೇಕೆಂದ್ರೆ ನೀವು ಟೆಂಪಲ್ ಸಿಟಿ ನೋಡ್ಲೇಬೇಕು.
ಭಾರತ ಪ್ರವಾಸಿಗರ ಸ್ವರ್ಗ ಎನ್ನಬಹುದು. ಯಾಕೆಂದ್ರೆ ಭಾರತದಲ್ಲಿ ಕಣ್ತುಂಬಿಕೊಳ್ಳಬಹುದಾದ ಅನೇಕ ಸ್ಥಳಗಳಿವೆ. ತನ್ನದೇ ವಿಶೇಷತೆಗಳಿಗೆ ಹೆಸರುವಾಸಿಯಾದ ಅನೇಕ ನಗರಗಳಿವೆ. ಭಾರತದ ಕೆಲ ನಗರಗಳನ್ನು ಅಲ್ಲಿನ ಪ್ರಸಿದ್ಧಿಗೆ ತಕ್ಕಂತೆ ಹೆಸರಿಸಲಾಗುತ್ತದೆ. ಒಂದು ನಗರವನ್ನು ಭಾರತದ ಟೆಂಪಲ್ ಸಿಟಿ ಎಂದು ಕರೆಯಲಾಗುತ್ತದೆ. ಇಲ್ಲಿ ಒಂದಲ್ಲ ಎರಡಲ್ಲ 500ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಟೆಂಪಲ್ ಸಿಟಿ ಎಂದೇ ಪ್ರಸಿದ್ಧಿ ಪಡೆದಿರುವ ಪ್ರದೇಶ ಒಡಿಶಾದ ರಾಜಧಾನಿ ಭುವನೇಶ್ವರ.
ಭುವನೇಶ್ವರ (Bhubaneswar) ದ ಈ ಪ್ರಸಿದ್ಧ ಪ್ರದೇಶವನ್ನು ಹಿಂದೂ (Hindu) ಗಳ ನಂಬಿಕೆಯ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ. ಇದು ಮುಖ್ಯ ಯಾತ್ರಾ ಸ್ಥಳವಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು (Devotees) ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿರುವ ದೇವಾಲಯಗಳು ಪ್ರಾಚೀನ ಭಾರತೀಯ ವಾಸ್ತುಶೈಲಿಗೆ ಉದಾಹರಣೆಗಳಾಗಿವೆ. 6 ಮತ್ತು 11 ನೇ ಶತಮಾನದಲ್ಲಿ ನಿರ್ಮಿಸಲಾದ ಅನೇಕ ದೇವಾಲಯ (Temple) ಗಳನ್ನು ನಾವು ಭುವನೇಶ್ವರದಲ್ಲಿ ನೋಡಬಹುದು.
ಈ ಇಡೀ ನಗರದಲ್ಲಿ ಮಾಂಸಾಹಾರಕ್ಕಿದೆ ನಿಷೇಧ, ಜಗತ್ತಿನ ಏಕೈಕ ಸಸ್ಯಾಹಾರ ನಗರ ಎಲ್ಲಿದೆ ಬಲ್ಲಿರಾ?
ಏಕಾಮ್ರ ಕ್ಷೇತ್ರ : ಭುವನೇಶ್ವರದಲ್ಲಿರುವ ಏಕಾಮ್ರ ಕ್ಷೇತ್ರ ದೇವಾಲಯವು ಸಾವಿರಾರು ವರ್ಷಗಳ ಪರಂಪರೆ ಮತ್ತು ಸಂಸ್ಕೃತಿಯ ವಿಶಿಷ್ಟ ಉದಾಹರಣೆಯಾಗಿದೆ. ಇದು ತನ್ನ ವಿಶಿಷ್ಟ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಯುನೆಸ್ಕೋ ಪಟ್ಟಿಯಲ್ಲೂ ಇದರ ಹೆಸರನ್ನು ಸೇರಿಸಲಾಗಿದೆ. ಇದು ಮರಳುಗಲ್ಲಿನ ದೇವಾಲಯವಾಗಿದೆ. ಭಾರತದ ಇತಿಹಾಸವನ್ನು ತಿಳಿಯಲು ಇದು ಒಳ್ಳೆಯ ಸ್ಥಳವಾಗಿದೆ.
ಲಿಂಗರಾಜ ದೇವಾಲಯ : ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬಂದ ನಂತರ, ದೇವಾಲಯದ ಆವರಣದಲ್ಲಿರುವ ಮುಕ್ತೇಶ್ವರ ದೇವಾಲಯ, ರಾಜರಾಣಿ ದೇವಾಲಯ ಮತ್ತು ಅನಂತ ವಾಸುದೇವ ದೇವಾಲಯಕ್ಕೆ ಭೇಟಿ ನೀಡಬಹುದು.
Travel Tips: ಸುಡುವ ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಈ ತಾಣಗಳಿಗೆ ಭೇಟಿ ನೀಡೋ ಧೈರ್ಯ ತೋರಬೇಡಿ!
ಜೈನ ಮುನಿ ಖಂಡಗಿರಿಯ ಉದಯಗಿರಿ ಗುಹೆ : ಜೈನ ಮುನಿ ಖಂಡಗಿರಿ, ಇದು ಭುವನೇಶ್ವರದಿಂದ ಸುಮಾರು 6 ಕಿ.ಮೀಟರ್ ದೂರದಲ್ಲಿದೆ. ಇದು ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ಗುಹೆಗಳನ್ನು ರಾಜ ಖಾರವೇಲ ನಿರ್ಮಿಸಿದ. ಉದಯಗಿರಿ ಮತ್ತು ಖಂಡಗಿರಿ ಬೇರೆ ಬೇರೆ ಸ್ಥಳಗಳಲ್ಲಿವೆ. ಉದಯಗಿರಿಯಲ್ಲಿ ಒಟ್ಟು 18 ಗುಹೆಗಳಿವೆ. ಖಂಡಗಿರಿಯ 15 ಗುಹೆಗಳಿವೆ. ಈ ಗುಹೆಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಗಣೇಶ ಗುಹೆ,ಅನಂತ ಗುಹೆ, ಹುಲಿ ಗುಹೆ, ಹಾವಿನ ಗುಹೆ ಹೀಗೆ ವಿವಿಧ ಗುಹೆ ನೋಡಬಹುದು. ಈ ಗುಹೆಯ ವಿಷಯವೆಂದರೆ ನೀವು ಏಣಿಯ ಮೂಲಕ ಒಂದು ಗುಹೆಯಿಂದ ಇನ್ನೊಂದು ಗುಹೆಗೆ ಹೋಗಬಹುದು.
ನಂದನ್ ಕಾನನ್ : ಭುವನೇಶ್ವರದಲ್ಲಿರುವ ನಂದನ್ ಕಾನನ್ ಮೃಗಾಲಯವು ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಮೃಗಾಲಯದ ಹೆಸರೇ ಸೂಚಿಸುವಂತೆ ನೀವು ಅದರಲ್ಲಿ ಅಪರೂಪದ ಜಾತಿಯ ಪ್ರಾಣಿಗಳನ್ನು ನೋಡಬಹುದು. ಈ ಮೃಗಾಲಯದಲ್ಲಿ 126 ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳು ಕಂಡುಬರುತ್ತವೆ.
ಭಗವಂತ ಬುದ್ಧನ ಧೌಲಗಿರಿ ಬೆಟ್ಟ : ಭುವನೇಶ್ವರದಿಂದ ಈ ಸ್ಥಳ 10 ಕಿ.ಮೀಟರ್ ದೂರದಲ್ಲಿದೆ. ಇಲ್ಲೇ ಕಳಿಂಗ ಮತ್ತು ಮೌರ್ಯ ಸಾಮ್ರಾಜ್ಯದ ನಡುವೆ ದೊಡ್ಡ ಯುದ್ಧ ನಡೆದದ್ದು. ಕಳಿಂಗದೊಂದಿಗಿನ ಯುದ್ಧದ ನಂತರ, ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಈ ಸ್ಥಳದಲ್ಲಿ ಶಾಂತಿಯ ಸಂಕೇತವಾಗಿ ಶಾಂತಿ ಪಗೋಡವನ್ನು ನಿರ್ಮಿಸಲಾಗಿದೆ. ಸಮೀಪದಲ್ಲಿ ಬೌದ್ಧ ಧರ್ಮದ ಸ್ಥಾಪಕ ಭಗವಾನ್ ಬುದ್ಧನ ಹೆಜ್ಜೆಗುರುತುಗಳನ್ನು ಹೊಂದಿರುವ ಕಲ್ಲುಗಳಿವೆ.
ಚಂದ್ರಭಾಗ ಬೀಚ್ : ಭುವನೇಶ್ವರದಲ್ಲಿ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಬಯಸಿದರೆ ನೀವು ಈ ಸ್ಥಳಕ್ಕೆ ಭೇಟಿ ನೀಡಬಹುದು. ಬೋಟಿಂಗ್, ಈಜು ಮತ್ತು ಮೋಟಾರು ಸವಾರಿಯನ್ನು ಆನಂದಿಸಬಹುದು. ಪ್ರತಿಯೊಂದಕ್ಕೂ ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.