ಬೇಸಿಗೆ ಬಂದೆಂತ್ರೆ ಮಕ್ಕಳಿಗೆ ರಜೆ ಶುರುವಾಗುತ್ತೆ. ಮಕ್ಕಳ ಜೊತೆ ಹೊಸ ಊರು ಸುತ್ತಬೇಕೆಂಬ ಪಾಲಕರು ಪ್ಲಾನ್ ಮಾಡಿ ಪ್ರವಾಸಕ್ಕೆ ಹೋಗ್ಬೇಕು. ಸೂರ್ಯನ ಶಾಖ ಹೆಚ್ಚಿರುವ ಜಾಗಕ್ಕೆ ಹೋದ್ರೆ ಪ್ರವಾಸದ ಮಜ ಹಾಳಾದಂತೆ.
ಏಪ್ರಿಲ್ ತಿಂಗಳ ಹತ್ತು ದಿನ ಮುಗಿದಿದೆ. ಈಗಾಗಲೇ ಅನೇಕ ಶಾಲೆಗಳಲ್ಲಿ ರಜಾ ಶುರುವಾಗಿದೆ. ಮಕ್ಕಳಿಗೆ ರಜೆ ಇರುವ ಕಾರಣ ಪಾಲಕರು ಕೆಲಸಕ್ಕೆ ರಜೆ ಪಡೆದು ಸುತ್ತಾಟ ಶುರು ಮಾಡಿದ್ದಾರೆ. ವೀಕೆಂಡ್ ಗಳಲ್ಲಿ ಪ್ರವಾಸಿ ತಾಣಗಳು ತುಂಬಿ ತುಳುಕ್ತಿವೆ. ನೀವೂ ನಿಮ್ಮ ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದರೆ ಕೆಲ ವಿಷ್ಯವನ್ನು ತಿಳಿದುಕೊಳ್ಳಿ.
ಇದು ಬೇಸಿಗೆ (Summer) ಕಾಲ. ಸೂರ್ಯ (Sun) ನ ಶಾಖ ವಿಪರೀತವಾಗ್ತಿದೆ. ಹಾಗಾಗಿ ಎಲ್ಲೆಂದರಲ್ಲಿ ನೀವು ಪ್ರವಾಸ (Trip)ಕ್ಕೆ ಹೋಗಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಕೆಲ ಪ್ರದೇಶಕ್ಕೆ ಪ್ರವಾಸಕ್ಕೆ ಸೂಕ್ತವಾಗಿರೋದಿಲ್ಲ. ಈ ಬಿಸಿಲಿನಲ್ಲಿ ನೀವು ಆ ಪ್ರದೇಶಗಳಿಗೆ ಹೋದ್ರೆ ನಿಮ್ಮ ಪ್ರವಾಸದ ಮಜವೆಲ್ಲ ಹಾಳಾಗುತ್ತದೆ. ಸೆಖೆಗೆ ನೀವು ಪ್ರವಾಸವನ್ನು ಎಂಜಾಯ್ ಮಾಡೋಕೆ ಸಾಧ್ಯವಾಗೋದಿಲ್ಲ. ಬೇಸಿಗೆಯಲ್ಲಿ ನೀವು ಯಾವ ಪ್ರದೇಶಕ್ಕೆ ಅಪ್ಪಿತಪ್ಪಿಯೂ ಹೋಗ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ಶ್ರಾವಣ ಪೂರ್ಣಿಮೆವರೆಗೆ ನಡೆಯುತ್ತೆ ಅಮರನಾಥ ಯಾತ್ರೆ, ಈ ಸ್ಥಳದ ಅಚ್ಚರಿಯ ರಹಸ್ಯಗಳಿವು..
ಬೇಸಿಗೆಯಲ್ಲಿ ಇಲ್ಲಿಗೆ ಹೋಗ್ಬೇಡಿ :
ಆಗ್ರಾ : ಆಗ್ರಾ ಪ್ರವಾಸಕ್ಕೆ ಉತ್ತಮ ಮತ್ತು ಅಗ್ಗದ ಸ್ಥಳವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ದೆಹಲಿಗೆ ತುಂಬಾ ಹತ್ತಿರವಾಗಿರುವುದರಿಂದ ಬಹುತೇಕರು ಆಗ್ರಾ ಪ್ಲಾನ್ ಮಾಡ್ತಾರೆ. ಆದರೆ ಬೇಸಿಗೆ ಕಾಲ ಆಗ್ರಾಕ್ಕೆ ಭೇಟಿ ನೀಡಲು ಉತ್ತಮ ಸಮಯವಲ್ಲ. ಇಲ್ಲಿಗೆ ನೀವು ಚಳಿಗಾಲದಲ್ಲಿ ಭೇಟಿ ನೀಡ್ಬಹುದು. ಮಾರ್ಚ್ ವರೆಗೆ ನೀವು ಆಗ್ರಾಕ್ಕೆ ಭೇಟಿ ನೀಡ್ಬಹುದು. ಆದ್ರೆ ಏಪ್ರಿಲ್, ಮೇನಲ್ಲಿ ಇಲ್ಲಿಗೆ ಹೋಗದೆ ಇರುವುದೇ ಒಳ್ಳೆಯದು. ಹಗಲಿನಲ್ಲಿ ಆಗ್ರಾ ಸುತ್ತಾಡೋದು ಕಷ್ಟ. ರಾತ್ರಿ ಇಲ್ಲಿವ ವಾತಾವರಣ ಕೂಲ್ ಇರುತ್ತದೆ.
ಗೋವಾ : ಪ್ರವಾಸ ಎಂದಾಗ ಮೊದಲು ನೆನಪಾಗೋದು ಗೋವಾ. ಬಿಸಿಲ ಧಗೆಯಲ್ಲಿ ಸಮುದ್ರದಲ್ಲಿ ಮಿಂದೇಳುವ ಮನಸ್ಸಾಗುತ್ತೆ ನಿಜ. ಆದ್ರೆ ಏಪ್ರಿಲ್ ನಲ್ಲಿ ಭೇಟಿ ನೀಡಲು ಗೋವಾ ಸೂಕ್ತ ಸ್ಥಳವಲ್ಲ. ಬೇಸಿಗೆಯಲ್ಲಿ ಆರ್ದ್ರತೆ ಹೆಚ್ಚಿರುವ ಕಾರಣ ನೀವು ಅಲ್ಲಿಗೆ ಹೋಗ್ಬೇಡಿ.
ವಿಶ್ವದ 10 ಅತ್ಯಂತ ಸುಂದರ ಪಾಸ್ಪೋರ್ಟ್ಸ್ ಯಾವುವು ನೋಡಿ
ಮಥುರಾ ವೃಂದಾವನ : ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯಾವುದೇ ನಿಶ್ಚಿತ ಸಮಯವಿಲ್ಲ. ನೀವು ಯಾವಾಗ ಬೇಕಾದರೂ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಬಹುದು. ಆದ್ರೆ ಕೆಲ ದೇವಸ್ಥಾನಕ್ಕೆ ಬೇಸಿಗೆಯಲ್ಲಿ ಹೋಗ್ದೆ ಇದ್ರೆ ಒಳ್ಳೆಯದು. ನೀವು ಮಥುರಾ ವೃಂದಾವನಕ್ಕೆ ಕೂಡ ಬೇಸಿಗೆಯಲ್ಲಿ ಹೋಗ್ಬೇಡಿ. ಅಲ್ಲಿನ ಬಿಸಿ ವಾತಾವರಣವನ್ನು ನಿಮಗೆ ತಡೆಯೋಕೆ ಸಾಧ್ಯವಾಗೋದಿಲ್ಲ.
ಜೈಸಲ್ಮೇರ್ : ರಾಜಸ್ಥಾನದ ಸೌಂದರ್ಯ ಸವಿಯಲು ದೂರದ ಊರುಗಳಿಂದ ಪ್ರವಾಸಿಗರು ಬರುತ್ತಾರೆ. ರಾಜಸ್ತಾನ ಎಷ್ಟೇ ಕಣ್ಮನ ಸೆಳೆಯುತ್ತಿರಲಿ, ಬೇಸಿಗೆ ಕಾಲದಲ್ಲಿ ರಾಜಸ್ಥಾನದ ಕೆಲವು ನಗರಕ್ಕೆ ಹೋಗ್ಬೇಡಿ. ಇವುಗಳಲ್ಲಿ ಜೈಸಲ್ಮೇರ್ ಕೂಡ ಒಂದು. ಮಾರ್ಚ್ ವರೆಗೆ ನೀವು ಜೈಸಲ್ಮೇರ್ ಗೆ ಭೇಟಿ ನೀಡಬಹುದು. ನಂತ್ರ ಅಲ್ಲಿನ ಬಿಸಿ ಗಾಳಿ ನಿಮ್ಮನ್ನು ಹೈರಾಣ ಮಾಡುತ್ತೆ.
ಚೆನ್ನೈ : ಚೆನ್ನೈ ತನ್ನ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಆದರೆ ಬೇಸಿಗೆಯಲ್ಲಿ ಚೆನ್ನೈಗೆ ಪ್ರಯಾಣಿಸುವುದು ಕೆಟ್ಟ ನಿರ್ಧಾರ ಅಂದ್ರೆ ತಪ್ಪಾಗೋದಲ್ಲ. ಸುಡುವ ಬಿಸಿಲಿನ ಮಧ್ಯೆ ಚೆನ್ನೈಗೆ ಭೇಟಿ ನೀಡಿದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಹೈದ್ರಾಬಾದ್ : ಪ್ರವಾಸ ಎಂದಾಗ ಅನೇಕರು ಹೈದ್ರಾಬಾದ್ ಆಯ್ಕೆ ಮಾಡಿಕೊಳ್ತಾರೆ. ರಾಮೋಜಿರಾವ್ ಫಿಲ್ಮಂ ಸಿಟಿ ಸೇರಿದಂತೆ ಅನೇಕ ಸುಂದರ ಸ್ಥಳಗಳು ಹೈದ್ರಾಬಾದ್ ನಲ್ಲಿವೆ. ಆದ್ರೆ ಬೇಸಿಗೆಯಲ್ಲಿ ಹೈದ್ರಾಬಾದ್ ಪ್ರವಾಸ ಹಿಂಸೆ ನೀಡುತ್ತದೆ.
ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡಿ : ಬೇಸಿಗೆಯಲ್ಲಿ ನೀವು ತಂಪಾದ ಜಾಗಕ್ಕೆ ಭೇಟಿ ನೀಡಿದ್ರೆ ಪ್ರವಾಸವನ್ನು ಎಂಜಾಯ್ ಮಾಡ್ಬಹುದು. ನೀವು ಮನಾಲಿ,ಔಲಿ, ಲಡಾಖ್, ಕಾಶ್ಮೀರ, ಡಾರ್ಜಲಿಂಗ್, ಸ್ವಿಟಿ ವ್ಯಾಲಿಗೆ ನೀವು ಭೇಟಿ ನೀಡಬಹುದು.