ಇದ್ಯಾವ ನ್ಯಾಯ ಗುರು ಇವ್ರು ಹೆಲ್ಮೆಟ್ ಇಲ್ದೆ ಸುತ್ತಿದ್ರೆ ಜಾಲಿ ರೈಡ್.... ನಾವು ಹೋದ್ರೆ ಫುಲ್ ಫೈನ್

By Anusha Kb  |  First Published Apr 10, 2023, 11:54 AM IST

ಶಿಸ್ತು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕಾದ ಪೊಲೀಸರೇ ಹೆಲ್ಮೆಟ್ ಇಲ್ಲದೇ ಬಿಂದಾಸ್ ಆಗಿ ತಿರುಗಾಡಿದ್ದು ಜನ ಅವರನ್ನು ನಿಮಗೊಂದು ರೂಲ್ಸ್‌ ನಮಗೊಂದು ರೂಲ್ಸಾ ಅಂತ ಪ್ರಶ್ನೆ ಮಾಡ್ತಿದ್ದಾರೆ. 


ಮುಂಬೈ: ನೀವು  ದ್ವಿಚಕ್ರ ವಾಹನ ಸವಾರರಾಗಿದ್ದರೆ, ಟ್ರಾಫಿಕ್ ಪೊಲೀಸರು ಹಾಗೂ ಟ್ರಾಫಿಕ್ ಕ್ಯಾಮರಾಗಳು ನಿಮ್ಮನ್ನು ಬೆಂಬಿಡದೇ ಹಿಂಬಾಲಿಸುತ್ತೇವೆ. ಸ್ವಲ್ಪ ಹೆವ್ವು ಕಡಿಮೆ ಆದರೂ ಮನೆಗೆ ದಂಡ ಪಾವತಿಸುವಂತೆ ನೋಟೀಸ್ ಬರುತ್ತದೆ.  ಹೆಲ್ಮೆಟ್ ಹಾಕಿಲ್ಲದಿದ್ದರೆ ಜೇಬು ತೂತಾಗುತ್ತೆ.  ಹೀಗಾಗಿ ಬಹುತೇಕರು ದಂಡಕ್ಕೆ ಹೆದರಿ ಟ್ರಾಫಿಕ್ ನಿಯಮವನ್ನು ಪಾಲಿಸುತ್ತಾರೆ. ಆದರೆ ಹೀಗೆ ಜನರಿಗೆ ಶಿಸ್ತು ಪಾಲಿಸಿ ಎಂದು ಹೇಳುವವರೇ ಹೆಲ್ಮೆಟ್ ಹಾಕದೇ ಬಿಂದಾಸ್ ಆಗಿ ಸ್ಕೂಟಿಯಲ್ಲಿ ಓಡಾಡಿದರೆ ಹೇಗಿರುತ್ತೆ ಹೇಳಿ? ಇವರಿಗೆರಡು ಬಾರಿಸಿದರೆ ಹೇಗೆ? ಇವರಿಗೊಂದು ರೂಲ್ಸ್ ನಮಗೊಂದು ರೂಲ್ಸಾ ಅಂತ ಜನ ಪ್ರಶ್ನೆ ಮಾಡುತ್ತಾರೆ ಅಲ್ಲವೇ? ಅದೇ ರೀತಿ ಈಗ ಮುಂಬೈನಲ್ಲಿ ಶಿಸ್ತು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕಾದ ಪೊಲೀಸರೇ ಹೆಲ್ಮೆಟ್ ಇಲ್ಲದೇ ಬಿಂದಾಸ್ ಆಗಿ ತಿರುಗಾಡಿದ್ದು ಜನ ಅವರನ್ನು ನಿಮಗೊಂದು ರೂಲ್ಸ್‌ ನಮಗೊಂದು ರೂಲ್ಸಾ ಅಂತ ಪ್ರಶ್ನೆ ಮಾಡ್ತಿದ್ದಾರೆ. 

ಮಹಿಳಾ ಪೊಲೀಸರಿಬ್ಬರೂ ಹೆಲ್ಮೆಟ್ ಇಲ್ಲದೇ ಸ್ಕೂಟಿಯಲ್ಲಿ ಓಡಾಡುತ್ತಿರುವ ಫೋಟೋವನ್ನು Rahul Barman ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. MH01ED0659 ಎಂದು ಸ್ಕೂಟಿ ಸಂಖ್ಯೆಯನ್ನು ಬರೆದ ಅವರು, ನಾವು ಹೀಗೆ ಪ್ರಯಾಣಿಸಿದರೆ ಹೇಗಿರುತ್ತದೆ? ಇದು ಸಂಚಾರ ನಿಯಮ ಉಲ್ಲಂಘನೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.  ಅಲ್ಲದೇ ಮುಂಬೈ ಪೊಲೀಸರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಅವರಿಗೆ ಈ ಟ್ವಿಟ್‌ನ್ನು ಟ್ಯಾಗ್ ಮಾಡಿದ್ದಾರೆ. 

Tap to resize

Latest Videos

ಬೆಂಗಳೂರು ವಾಹನ ಸವಾರರೇ ಎಚ್ಚರ: ಇನ್ಮುಂದೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದರೆ ದಂಡ ಫಿಕ್ಸ್

ದ್ವಿಚಕ್ರ ವಾಹನ ಸವಾರರು  (two wheller) ಹೆಲ್ಮೆಟ್ ಧರಿಸುವುದು ಭಾರತದಲ್ಲಿ ಕಡ್ಡಾಯವಾಗಿದೆ. ಇದು ಅನಾಹುತದಿಂದ ವಾಹನ ಸವಾರರನ್ನು ರಕ್ಷಿಸುತ್ತದೆ.  ಅಲ್ಲದೇ ಈ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ.  ಹುದ್ದೆ, ಸ್ಥಾನಮಾನ, ವೃತ್ತಿ, ಲಿಂಗಬೇಧವಿಲ್ಲದೇ ಇದನ್ನು ಎಲ್ಲರೂ ಪಾಲಿಸಲೇಬೇಕು. ಇದರಲ್ಲಿ ಯಾವುದೇ ಬೇಧವಿಲ್ಲ. ಆದರೆ ಇಲ್ಲಿ ಇಬ್ಬರು ಲೇಡಿ ಪೊಲೀಸರು ಹೆಲ್ಮೆಟ್ ಇಲ್ಲದೇ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಇನ್ನು ಈ ಟ್ವಿಟ್‌ಗೆ ಮುಂಬೈ ಪೊಲೀಸರು (Mumbai police) ಕೂಡ ಪ್ರತಿಕ್ರಿಯಿಸಿದ್ದು,  ಈ ಫೋಟೋ ಸೆರೆ ಹಿಡಿಯಲ್ಪಟ್ಟ ಖಚಿತ ಸ್ಥಳ ಯಾವುದು ಎಂದು ಪ್ರಶ್ನಿಸಿದ್ದಾರೆ. ದಯವಿಟ್ಟು ಈ ಫೋಟೋ ತೆಗೆದ ಸ್ಥಳ ಯಾವುದು ಎಂಬುದನ್ನು ತಿಳಿಸಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಫೋಟೋ ಶೇರ್ ಮಾಡಿದ  ರಾಹುಲ್ ಪ್ರತಿಕ್ರಿಯಿಸಿದ್ದು, ದಾದಾರ್‌ (dadar) ಈಸ್ಟರ್ನ್‌ ಎಕ್ಸ್‌ಪ್ರೆಸ್ ಹೈವೇ ಎಂದು ಉತ್ತರಿಸಿದ್ದಾರೆ. 

ಒಂದು ಗಂಟೆಯ ನಂತರ, ಮುಂಬೈ ಪೊಲೀಸರು ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಮತ್ತೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಅಗತ್ಯ ಕ್ರಮಕ್ಕಾಗಿ ನಾವು ಮಾಟುಂಗಾ ಟ್ರಾಫಿಕ್ ವಿಭಾಗಕ್ಕೆ ನಿಮ್ಮ ವಿನಂತಿಯನ್ನು ಹಸ್ತಾಂತರಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತರ ಲೇಡಿ ಪೊಲೀಸರಿಬ್ಬರು ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿರುವ ಈ ಫೋಟೋಗೆ ನೆಟ್ಟಿಗರುನ ಹಲವರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಾವು ಹೀಗೆ ಇವರಂತೆ ಹೋದರೆ ಕೆಲವೇ ಗಂಟೆಗಳಲ್ಲಿ ದಂಡದ ನೋಟೀಸ್ ಬರುತ್ತದೆ. ಇವರಿಗೇನು ನಿಯಮಗಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

50, 100 ದಂಡ ಕಟ್ಟಿ ಮತ್ತೆ ತಪ್ಪು ಮಾಡೋರಿಗಾಗಿ ಹೊಸ ಟ್ರಾಫಿಕ್ ರೂಲ್ಸ್‌: ಮಾಧುಸ್ವಾಮಿ

ಇಂದು ತಂತ್ರಜ್ಞಾನ ಬಹಳ ಮುಂದುವರೆದಿದ್ದು, ಮಹಾನಗರಗಳಲ್ಲಿ ನೀವು ಸಂಚಾರ ನಿಯಮ ಉಲ್ಲಂಘಿಸಲು ಸಾಧ್ಯವೇ ಇಲ್ಲ, ಏಕೆಂದರೆ ಅಲ್ಲಲ್ಲಿ ಅಳವಿಡಿಸಿರುವ ಟ್ರಾಫಿಕ್ ಕ್ಯಾಮರಾಗಳು  ನೀವು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಂತೆಯೇ ನಿಮ್ಮ ಮುದ್ದಾದ ಫೋಟೋ ತೆಗೆದು ನಿಮ್ಮ ಮೊಬೈಲ್ ಫೋನ್‌ಗೆ ದಂಡದೊಂದಿಗೆ ಕಳುಹಿಸುತ್ತದೆ. ಮಹಾನಗರಗಳಲ್ಲಿ ವಾಸಿಸುವವರಾಗಿದ್ದರೆ ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.  ಕೆಲವೊಮ್ಮೆ ಸಕಾರಣವಿಲ್ಲದೆಯೋ ದಂಡ ಪಾವತಿಸುವ ಸ್ಥಿತಿ ಅನೇಕರಿಗೆ ಬಂದಿರುತ್ತದೆ. ಇದೇ ಕಾರಣಕ್ಕೆ ಜನ ಸಾಮಾನ್ಯರು ಸಣ್ಣ ಸಣ್ಣ ಕಾರಣಕ್ಕೆ ಟ್ರಾಫಿಕ್ ನಿಯಮ ಉಲ್ಲಂಘನೆಯ (traffic rule violation) ನೆಪವೊಡ್ಡಿ ಪೊಲೀಸರು ದಂಡ ವಸೂಲಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ. 

MH01ED0659
What if we travel like this ?? Isn't this a traffic rule violation ? pic.twitter.com/DcNaCHo7E7

— Rahul Barman (@RahulB__007)

 

click me!