Travel Tips: ವಿಮಾನ ಪ್ರಯಾಣ ಸುಖಕರವಾಗಿರ್ಬೇಕೆಂದ್ರೆ ಆಹಾರ ಹೀಗಿರಲಿ

By Suvarna NewsFirst Published Mar 30, 2023, 4:03 PM IST
Highlights

ಪ್ರಯಾಣದಲ್ಲಿ ತೊಂದರೆಯಾಗ್ಬಾರದು ಎನ್ನುವ ಕಾರಣಕ್ಕೆ ನಾವು ಹೊಟ್ಟೆ ತುಂಬಾ ತಿಂದಿರ್ತೇವೆ. ಆದ್ರೆ ನಾವು ತಿಂದ ಆಹಾರ ಹೊಟ್ಟೆಯಲ್ಲಿ ಡಾನ್ಸ್ ಮಾಡೋಕೆ ಶುರು ಮಾಡಿರುತ್ತದೆ. ವಿಮಾನ ಜರ್ನಿ ಆನಂದಿಸಬೇಕೆಂಬ ಪ್ಲಾನ್ ಹಾಳಾಗುತ್ತೆ. ಹೀಗೆ ಆಗ್ಬಾರದು ಅಂದ್ರೆ ಹಿಂಗ್ ಮಾಡ್ಬೇಡಿ

ಪ್ರಯಾಣ ಬೆಳೆಸುವ ಮುನ್ನ ನಾವು ಯಾವ ಆಹಾರ ಸೇವನೆ ಮಾಡ್ತೇವೆ ಎಂಬುದು ಮುಖ್ಯವಾಗುತ್ತದೆ. ನೀವು ಕಾರ್ ನಲ್ಲಿ ಪ್ರಯಾಣ ಬೆಳೆಸಿ, ಬಸ್ ನಲ್ಲಿ ಇರಲಿ ಇಲ್ಲ ವಿಮಾನದಲ್ಲಿಯೇ ಇರಲಿ. ನೀವು ಸೇವಿಸುವ ಆಹಾರದ ಬಗ್ಗೆ ಗಮನ ನೀಡ್ಬೇಕಾಗುತ್ತದೆ. ಬಸ್ ಅಥವಾ ಕಾರಿನಲ್ಲಿ ಹೋಗುವಾಗ ವಾಂತಿಯಾಗುವ ಸಾಧ್ಯತೆಯಿರುತ್ತದೆ ಎಂಬ ಕಾರಣಕ್ಕೆ ಕೆಲವರು ಆಹಾರದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ತಾರೆ. ಅದೇ ವಿಮಾನ ಪ್ರಯಾಣದ ವೇಳೆ ಈ ವಿಷ್ಯವನ್ನು ನಿರ್ಲಕ್ಷ್ಯ ಮಾಡ್ತಾರೆ.

ಕೆಲವರಿಗೆ ವಿಮಾನ (Flight) ಪ್ರಯಾಣ ವಿಶೇಷವಾಗಿರುತ್ತದೆ. ಅವರು ಮೊದಲ ಬಾರಿ ಇದ್ರಲ್ಲಿ ಪ್ರಯಾಣ ಬೆಳೆಸ್ತಿರುತ್ತಾರೆ. ಮತ್ತೆ ಕೆಲವರಿಗೆ ವಿಮಾನ ಪ್ರಯಾಣ ಮಾಮೂಲಿಯಾಗಿದ್ದರೂ, ವಿಮಾನ ಏರುತ್ತಿದ್ದಂತೆ ಸಮಸ್ಯೆ ಕಾಡುತ್ತದೆ. ವಿಮಾನ ಮೇಲೇರ್ತಿದ್ದಂತೆ ಕೆಲವರಿಗೆ ವಾಕರಿಕೆ ಬಂದಂತೆ, ತಲೆ ಸುತ್ತಿದಂತ ಅನುಭವವಾಗುತ್ತದೆ. ವಾಂತಿ (Vomiting) ಯಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ವಿಮಾನ ಏರುವ ಮೊದಲು ಆಹಾರದ ಬಗ್ಗೆ ಗಮನ ಹರಿಸಬೇಕು. ಆತುರದಲ್ಲಿ ಖಾಲಿ ಹೊಟ್ಟೆಯಲ್ಲಿ ಹೋದ್ರೂ ತೊಂದರೆ ತಪ್ಪಿದ್ದಲ್ಲ. ಹಾಗೆಯೇ ಅತಿಯಾಗಿ ಆಹಾರ (Food) ಸೇವಿಸಿ ವಿಮಾನ ಏರಿದ್ರೂ ಪ್ರಯಾಣ ಸುಖಕರವಾಗಿರೋದಿಲ್ಲ. ನಾವಿಂದು ವಿಮಾನ ಹತ್ತುವ ಮೊದಲು ಯಾವ ಆಹಾರ ಸೇವನೆ ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೇವೆ.

RIVER RAFTING ಖುಷಿ ನೀಡುತ್ತೆ ನಿಜ, ಆದ್ರೆ ಸೇಫ್ ಆಗಿರ್ಬೇಕು ಅಂದ್ರೆ ಈ ತಪ್ಪು ಮಾಡ್ಬೇಡಿ

ಸೇಬು ಹಣ್ಣು : ಆರೋಗ್ಯಕರ ಹಣ್ಣಿನಲ್ಲಿ ಸೇಬು ಮೊದಲ ಸ್ಥಾನದಲ್ಲಿದೆ ನಿಜ. ಆದ್ರೆ ವಿಮಾನ ಹತ್ತುವಾಗ ಇದನ್ನು ತಿನ್ನಬಾರದು. ಇದ್ರಲ್ಲಿ ಫೈಬರ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಇದ್ರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಇದ್ರಲ್ಲಿರುವ ಸಕ್ಕರೆ ಪ್ರಮಾಣ ನಿಮ್ಮ ಸುಖಕರ ಪ್ರಯಾಣಕ್ಕೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ನೀವು ವಿಮಾನ ಹತ್ತುವ ಸಂದರ್ಭದಲ್ಲಿ ಸೇಬು ಹಣ್ಣು ಬಿಟ್ಟು ಕಿತ್ತಳೆ ಅಥವಾ ಪಪ್ಪಾಯ ಹಣ್ಣನ್ನು ಸೇವನೆ ಮಾಡಿ.

ಬ್ರೊಕೊಲಿ : ಬ್ರೊಕೊಲಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ಅನೇಕ ರೋಗಗಳು ನಮ್ಮಿಂದ ದೂರ ಸರಿಯುತ್ತವೆ. ಹಾಗಂತ ವಿಮಾನ ಏರುವ ಸಂದರ್ಭದಲ್ಲಿ ನೀವು ಬ್ರೊಕೊಲಿ ತಿನ್ನಬೇಡಿ. ಅದ್ರಲ್ಲೂ ಬ್ರೊಕೊಲಿಯನ್ನು ನೀವು ಸಲಾಡ್ ರೂಪದಲ್ಲಿ ತಿನ್ನುವ ತಪ್ಪು ಮಾಡ್ಲೇಬೇಡಿ. ಯಾಕೆಂದ್ರೆ ಅದು ಸರಿಯಾಗಿ  ಜೀರ್ಣವಾಗುವುದಿಲ್ಲ. ಹೊಟ್ಟೆಯಲ್ಲಿ ಸಮಸ್ಯೆಯುಂಟು ಮಾಡುತ್ತದೆ. ವಿಮಾನ ಪ್ರಯಾಣದ ವೇಳೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ.

ಭಾರತದ ಈ ರೈಲು ಹತ್ತೋಕೆ ಟಿಕೆಟ್ ಬೇಕಾಗಿಲ್ಲ, ಎಷ್ಟು ದೂರ ಬೇಕಾದ್ರೂ ಫ್ರೀಯಾಗಿ ಹೋಗ್ಬೋದು!

ಫ್ರೈಡ್ ಫುಡ್ : ಪ್ರಯಾಣದ ಸಮಯದಲ್ಲಿ ಮಾತ್ರವಲ್ಲ ಯಾವ ಸಮಯದಲ್ಲಿ ಫ್ರೈಡ್ ಫುಡ್ ತಿಂದ್ರೂ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದ್ರಲ್ಲೂ ನೀವು ಪ್ರಯಾಣದ ವೇಳೆ ಹೊರಗೆ ಕರಿದಿಟ್ಟ ಆಹಾರ ತಿಂದ್ರೆ ಕಥೆ ಮುಗೀತು. ಕೆಲವರಿಗೆ ಕರಿದ ಆಹಾರ ಬಹಳ ಇಷ್ಟ. ವಿಮಾನ ನಿಲ್ದಾಣದಲ್ಲಿ ಫ್ರೈಡ್ ಫುಡ್ ಕಾಣ್ತಿದ್ದಂತೆ ತಿನ್ನಲು ಮುಂದಾಗ್ತಾರೆ. ಈ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿರುತ್ತದೆ. ಅದು ಎದೆಯುರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಎಷ್ಟೇ ಇಷ್ಟವಾದ್ರೂ ವಿಮಾನ ಹತ್ತುವ ಮೊದಲು ಕರಿದ ಆಹಾರ ತಿನ್ನುವ ಸಹವಾಸಕ್ಕೆ ಹೋಗ್ಬೇಡಿ.

ಮಸಾಲೆ ಆಹಾರ : ವಿಮಾನದಲ್ಲಿ ಪ್ರಯಾಣಿಸುವಾಗ, ಮಸಾಲೆಯುಕ್ತ ಆಹಾರದಿಂದ ದೂರವಿರಬೇಕು. ಪರಾಠಾ, ಬಿರಿಯಾನಿಯಂತಹ ಆಹಾರಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಕಂಡುಬರುತ್ತವೆ. ಇದು ನಿಮ್ಮ ಹೊಟ್ಟೆಯನ್ನು ಆರೋಗ್ಯವನ್ನು ಕೆಡಿಸುತ್ತದೆ. 

ವಿಮಾನ ಪ್ರಯಾಣದ ವೇಳೆ ಈ ಆಹಾರದಿಂದಲೂ ದೂರವಿರಿ : ನೀವು ವಿಮಾನ ಪ್ರಯಾಣ ಮಾಡುವ ಮೊದಲು ಅಥವಾ ವಿಮಾನದಲ್ಲಿ ಫಾಸ್ಟ್ ಫುಡ್ ಸೇವನೆ ಮಾಡ್ಬೇಡಿ.  ನೂಡಲ್ಸ್, ಪಾಸ್ತಾ ಹಾಗೆ ರಾತ್ರಿ ಪ್ರಯಾಣದ ವೇಳೆ ಅನ್ನ – ದಾಲ್  ಸೇವನೆ ಮಾಡದೆ ಹೋದ್ರೆ ಒಳ್ಳೆಯದು. 

click me!