Travel Tips : ಹಿಲ್ ಸ್ಟೇಶನ್ ಗೆ ಹೋದ್ರೆ ವಾಂತಿ ಆಗೋ ಭಯವಿದ್ದರೆ, ಇಲ್ಲಿದೆ ಪರಿಹಾರ

By Suvarna News  |  First Published Mar 21, 2023, 3:33 PM IST

ಪ್ರವಾಸ ಸದಾ ಆರಾಮದಾಯಕವಾಗಿರಬೇಕು. ದಾರಿ ಮಧ್ಯೆ ಆರೋಗ್ಯ ಕೆಟ್ಟರೆ ಮುಂದಿನ ಪ್ರಯಾಣ ಕಷ್ಟ. ವಾಂತಿಯಾದ್ರಂತೂ ಚೇತರಿಸಿಕೊಳ್ಳಲು ತುಂಬಾ ಸಮಯಬೇಕು. ಪರ್ವತ ಪ್ರದೇಶಕ್ಕೆ ಹೋದ್ರೆ ಕೆಲವರಿಗೆ ವಾಂತಿ ಬರುತ್ತದೆ. ಅಂಥವರು ಈ ಟಿಪ್ಸ್ ಫಾಲೋ ಮಾಡ್ಬಹುದು.  


ಪ್ರವಾಸ ಎಂಬ ಶಬ್ದ ಕೇಳಿದರೆ ಸಾಕು ಮನಸ್ಸಿಗೆ ಖುಷಿ. ಮನೆ, ಆಫೀಸ್ ಜಂಜಾಟಗಳನ್ನು ಬಿಟ್ಟು ಸ್ವಚ್ಛಂದ ಹಕ್ಕಿಗಳಂತೆ ವಿಹರಿಸುವ ಸಮಯವನ್ನು ಯಾರೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಬೇರೆ ವಾತಾವರಣ, ಹೊಸ ಪರಿಸರ, ಹೊಸ ಸ್ಥಳ ಮುಂತಾದವು ಮನಸ್ಸಿನ ಎಷ್ಟೋ ನೋವುಗಳನ್ನು ಕಡಿಮೆ ಮಾಡುತ್ತೆ. ಆದರೆ ಕೆಲವರಿಗೆ ಪ್ರವಾಸ ಎಂದರೆ ಭಯ. ಅಯ್ಯೋ ಅಷ್ಟು ದೂರ ಹೋಗೋದಾ..? ಅಂತ ಹೆದರಿಕೆಯ ಭಾವನೆ ಹೊರಹಾಕ್ತಾರೆ. ಇದಕ್ಕೆ ಕಾರಣ ಪ್ರವಾಸಕ್ಕೆ ಹೋಗುವ ಸಮಯದಲ್ಲಿ ಅವರಿಗಾಗುವ ತೊಂದರೆ..

ಕೆಲವರಿಗೆ ಮನೆ ಬಿಟ್ಟು ವಾಹನಗಳಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರೂ ಸಾಕು ವಾಂತಿ ಶುರುವಾಗುತ್ತದೆ. ಪ್ರಯಾಣ (Travel) ಕ್ಕೆ ಅವರ ಶರೀರ ಸಹಕರಿಸುವುದಿಲ್ಲ. ಅದರಲ್ಲೂ ಅನೇಕ ತಿರುವುಗಳನ್ನು ಅಥವಾ ಪರ್ವತ (Mountain) ಗಳ ನಡುವಿನ ದಾರಿಯಲ್ಲಂತೂ ವಾಂತಿ ಸಹಜವಾಗಿಯೇ ಉಂಟಾಗುತ್ತದೆ. ಆದರೆ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಆಹಾರ (Food) ಕೂಡ ಒಮಿಟ್ ಗೆ ಕಾರಣವಾಗುತ್ತದೆ. ಹಾಗಾಗಿ ಹಿಲ್ ಸ್ಟೇಶನ್ ಗಳ ಪ್ರವಾಸಕ್ಕೆ ಹೋಗುವ ಮುನ್ನ ನಾವು ಕೆಲವು ಆಹಾರವನ್ನು ತ್ಯಜಿಸಿದರೆ ಪ್ರವಾಸದ ಆನಂದವನ್ನು ಸವಿಯಬಹುದು.

Tap to resize

Latest Videos

undefined

WHISTLING VILLAGE: ಈ ಗ್ರಾಮದಲ್ಲಿರೋ ಜನರಿಗೆ ಹೆಸರೇ ಇರೋಲ್ಲ, ಹೇಗಪ್ಪಾ ಕರೆಯೋದು?

ಹಿಲ್ ಸ್ಟೇಶನ್ ಗಳಿಗೆ ಪ್ರಯಾಣ ಮಾಡುವಾಗ ಇವುಗಳನ್ನು ತಿನ್ನಬೇಡಿ

ಕರಿದ ಪದಾರ್ಥಗಳು : ಕರಿದ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್ (Carbohydrates ) ಮತ್ತು ಫ್ಯಾಟ್ ಪ್ರಮಾಣ ಹೆಚ್ಚಿಗೆ ಇರುವುದರಿಂದ ಅದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಕೆಡಬಹುದು. ಅಜೀರ್ಣದಂತಹ ತೊಂದರೆಯೂ ಉಂಟಾಗಬಹುದು. ಹಾಗಾಗಿ ಪರ್ವತ ಪ್ರದೇಶಗಳಿಗೆ ಪ್ರಯಾಣಿಸುವಾಗ ಆಲೂ ಟಿಕ್ಕಿ, ಚಿಪ್ಸ್, ಪಕೋಡಾ, ಫ್ರೈ ಮಾಡಿದ ಅಥವಾ ಕರಿದ ಚಿಕನ್ ನಂತಹ ತಿಂಡಿಗಳನ್ನು ದೂರವಿಡಬೇಕು.

ಮಾಂಸ : ಮಾಂಸಗಳಲ್ಲಿ ಕಾಂಪ್ಲೆಕ್ಸ್ ಪ್ರೊಟೀನ್ ಗಳು ಮತ್ತು ಕೊಬ್ಬು ಇರುತ್ತವೆ. ಇವು  ಜೀರ್ಣವಾಗಲು ಕನಿಷ್ಠ ಎರಡು ದಿನವಾದರೂ ಬೇಕು. ಹಾಗಾಗಿ ಹಿಲ್ ಸ್ಟೇಶನ್ ಗಳಿಗೆ ಹೋಗುವಾಗ ಬಟರ್ ಚಿಕನ್, ಮಟನ್, ಚಿಕನ್ ಮಸಾಲಾ ಟಿಕ್ಕಾ ಮುಂತಾದವನ್ನು ಸೇವಿಸಬೇಡಿ. ಇವುಗಳ ಬದಲು ಹಗುರವಾದ, ಸುಲಭವಾಗಿ ಜೀರ್ಣವಾಗುವ ತಾಜಾ ಆಹಾರಗಳನ್ನೇ ಸೇವಿಸಿ. 

Pini Village: ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಆ ಐದು ದಿನ ಬಟ್ಟೇಯನ್ನೇ ಧರಿಸೋಲ್ವಂತೆ!

ಅನಾರೋಗ್ಯಕರ ಆಹಾರ : ಕೆಲ ಆಹಾರ ತಿನ್ನಲು ರುಚಿಯಾಗಿ ಕಾಣಿಸಿದರೂ ಕೂಡ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಇವುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಪ್ರಯಾಣಿಕರಿಗೆ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ ಮುಂತಾದ ಸಮಸ್ಯೆಗಳು ತಲೆದೋರುತ್ತವೆ. ಹಾಗಾಗಿ ಯಾವುದೇ ಅನಾರೋಗ್ಯಕರ ಆಹಾರವನ್ನು ತಪ್ಪಿಸಿ ನಿಮ್ಮ ಆರೋಗ್ಯದ ಕಡೆಗೆ ಲಕ್ಷ್ಯವಹಿಸಿ.

ಹಾಲಿನ ಉತ್ಪನ್ನಗಳು : ಹಿಲ್ ಸ್ಟೇಶನ್ ಗೆ ಪ್ರಯಾಣಿಸುವಾಗ ಪನೀರ್, ಹಾಲು, ಕ್ರೀಮ್, ಐಸ್ ಕ್ರೀಮ್ ಮುಂತಾದ ಹಾಲಿನ ಉತ್ಪನ್ನಗಳನ್ನು ತ್ಯಜಿಸಿ. ಏಕೆಂದರೆ ಈ ಆಹಾರಗಳು ನಿಮ್ಮ ಪ್ರಯಾಣದ ತೊಂದರೆಯನ್ನು ಇನ್ನಷ್ಟು ಹೆಚ್ಚಿಸಬಹುದು.

ಕಾರ್ಬೊನೇಟೆಡ್ ಡ್ರಿಂಕ್ಸ್ (Carbonated Drinks) : ಕಾರ್ಬೊನೇಟೆಡ್ ಅಥವಾ ಸೋಡಾ ಮಿಶ್ರಿತ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದು ನಿಮ್ಮ ಹೊಟ್ಟೆ ನೋವಿಗೆ ಕಾರಣವಾಗಬಹುದು.  ಹಾಗಾಗಿ ಲಾಂಗ್ ಡ್ರೈವ್ ಸಮಯದಲ್ಲಿ ಇಂಥ ಡ್ರಿಂಕ್ಸ್ ಗಳನ್ನು ತಪ್ಪಿಸುವುದೇ ಒಳ್ಳೆಯದು. ಇವುಗಳ ಬದಲು ನೀವು ನೀರಿನ ಸೇವನೆ ಮಾಡಿದ್ರೆ ನಿಮ್ಮ ದೇಹ ಹೈಡ್ರೇಟ್ ಆಗಿರುತ್ತದೆ.. 

ಮದ್ಯಪಾನ (Liquor) : ಟ್ರಿಪ್ ಸಮಯದಲ್ಲಿ ಮದ್ಯಪಾನ ಮಾಡುವುದು ಹಲವರ ರೂಢಿಯಾಗಿದೆ. ದೂರದ ಊರುಗಳಿಗೆ ಪ್ರಯಾಣಿಸುವಾಗ ಮದ್ಯಪಾನ ಮಾಡಿದರೆ ಎಚ್ಚರ ತಪ್ಪುವುದು, ತಲೆ ತಿರುಗುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ವೋಡ್ಕಾ, ವಿಸ್ಕಿ, ಬಿಯರ್ ಮುಂತಾದ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಲೇಬೇಕು.

ಆರೋಗ್ಯಕ್ಕೆ ಹಾನಿಮಾಡುವ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಬದಲು ಶರೀರಕ್ಕೆ ಹಾಗೂ ಪ್ರಯಾಣಕ್ಕೆ ಅನುಕೂಲವಾಗುವಂತಹ ಆಹಾರವನ್ನು ಸೇವಿಸಬೇಕು. ಇದರಿಂದ ಶರೀರವೂ ಸುಸ್ಥಿತಿಯಲ್ಲಿರುತ್ತದೆ. ಆಗ ಪರ್ವತ ಪ್ರದೇಶಗಳ ಸೌಂದರ್ಯವನ್ನು ನಿರ್ಭಯವಾಗಿ ಆನಂದಿಸಬಹುದಾಗಿದೆ.
 

click me!