ಪ್ರವಾಸವೆಂದ ತಕ್ಷಣ ನಾವು ಹೊಟೇಲ್ ಹುಡುಕಾಟ ನಡೆಸ್ತೇವೆ. ಆದ್ರೆ ಹೊಟೇಲ್ ಗಿಂತ ಟೆಂಟ್ ನಲ್ಲಿ ಹೆಚ್ಚು ಮೋಜು ಮಾಡ್ಬಹುದು. ಶಿಬಿರಗಳಲ್ಲಿ ಟೆಂಟ್ ಗೆ ಹೆಚ್ಚು ಪ್ರಾಮುಖ್ಯತೆ ನೀಡ್ತಾರೆ. ನೀವು ಒಮ್ಮೆಯೂ ಅದ್ರಲ್ಲಿ ಉಳಿದಿಲ್ಲ ಎಂದಾದ್ರೆ ಒಂದು ಸಲ ಟ್ರೈ ಮಾಡಿ.
ಪ್ರವಾಸಕ್ಕೆ ಹೋದ್ಮೇಲೆ ಆ ಟ್ರಿಪ್ ನ ಸಂಪೂರ್ಣ ಆನಂದವನ್ನು ಸವಿಯಬೇಕು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು. ಅಲ್ಲಿನ ವಿಶೇಷ ತಿಂಡಿಗಳನ್ನು ಸೇವಿಸಬೇಕು. ಹಾಗೆ ಅಲ್ಲಿ ಪ್ರಸಿದ್ಧವಾದ ತಾಣಗಳಿಗೆ ಭೇಟಿ ನೀಡಿ, ಮೋಜು ಮಾಡ್ಬೇಕು. ಮೋಜಿನ ವಿಷ್ಯ ಬಂದಾಗ ಟೆಂಟ್ ಕೂಡ ಗಮನ ಸೆಳೆಯುತ್ತದೆ. ನೀವು ಕೆಲವು ಕಡೆ ಪ್ರವಾಸಕ್ಕೆ ಹೋದಾಗ ದೊಡ್ಡ ಹೊಟೇಲ್ ನಲ್ಲಿ ರೂಮ್ ಮಾಡೋದಕ್ಕಿಂತ ಟೆಂಡ್ ನಲ್ಲಿ ದಿನ ಕಳೆದ್ರೆ ಅದ್ರ ಮಜಾ ಡಬಲ್ ಆಗುತ್ತದೆ.
ಜೈಸಲ್ಮೇರ್ (Jaisalmer) ನ ಮರಳು ಪ್ರದೇಶದಿಂದ ಊಟಿ (Ooty) ಯ ಎತ್ತರದ ಪ್ರದೇಶವಿರಲಿ, ಇಲ್ಲ ಸಮುದ್ರದ ತಟವಿರಲಿ ಕ್ಯಾಂಪಿಂಗ್ ಬಹಳ ಆನಂದವನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಟೆಂಟ್‌ಗಳಲ್ಲಿ ಕುಳಿತು ಆನಂದಿಸುವವರ ಸಂಖ್ಯೆ ಹೆಚ್ಚಾಗಿದೆ. ನಿಸರ್ಗದ ಸುಂದರ ನೋಟದ ಮಧ್ಯೆ ಕುಳಿತುಕೊಳ್ಳೋದ್ರಿಂದ ಹೆಚ್ಚಿನ ಆನಂದ ಸಿಗೋದು ಸುಳ್ಳಲ್ಲ. ಈ ಟೆಂಟ್ (Tent) ಗಳನ್ನು ನೀವೇ ಆರಾಮವಾಗಿ ತೆಗೆದುಕೊಂಡು ಹೋಗಿ, ನಿಮಗೆ ಬೇಕಾದಲ್ಲಿ ಸೆಟ್ ಕೂಡ ಮಾಡಬಹುದು. ಇದ್ರಿಂದ ಹೊಟೇಲ್ ಖರ್ಚು ಕೂಡ ಉಳಿಯುತ್ತದೆ. ಟೆಂಟ್ ಪ್ರೇಮಿಗಳು ನೀವಾಗಿದ್ದರೆ ಮೊದಲು ಯಾವೆಲ್ಲ ವೆರೈಟಿ ಟೆಂಟ್ ಇದೆ ಎಂಬುದನ್ನು ತಿಳಿದುಕೊಳ್ಳಿ.
Cherry Blossom: ಜಪಾನ್‌ನಲ್ಲಿ ಅರಳಿ ನಿಂತಿವೆ ಚೆರ್ರಿ ಹೂವುಗಳು : ನೋಡುಗರ ಕಣ್ಣಿಗೆ ಹಬ್ಬ
ಟೆಂಟ್ ನಲ್ಲಿದೆ ಇಷ್ಟೊಂದು ವಿಧ :
ಬೇಸಿಕ್ ಟೆಂಟ್ : ಬೇಸಿಕ್ ಟೆಂಟ್ ಗಳು ಗುಮ್ಮಟದಂತೆ ಕಾಣಿಸಿಕೊಳ್ಳುತ್ತವೆ. ಇವುಗಳ ವೆಚ್ಚ ಕೂಡ ಕಡಿಮೆ. ಇವು ವಾಟರ್ ಪ್ರೂಫ್ (Water proof) ಆಗಿರುತ್ತವೆ. ಮುಂಭಾಗದಲ್ಲಿ ಒಂದು ಡೋರ್ ಇದ್ರೆ ಹಿಂದೆ ಗಾಳಿ ಬರಲು ಒಂದು ಕಿಟಕಿ ವ್ಯವಸ್ಥೆ ಇದಕ್ಕಿರುತ್ತದೆ. ದೊಡ್ಡ ಸಂಖ್ಯೆಯ ಶಿಬಿರದಲ್ಲಿ ಈ ಟೆಂಟ್ ನಲ್ಲಿ ನಾಲ್ಕು ಜನರು ಮಲಗಬಹುದು. ಆನ್ಲೈನ್ ನಲ್ಲಿ ಇದು ಲಭ್ಯವಿದ್ದು, ಇದ್ರ ಬೆಲೆ 2370 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ನಿಮಗೆ ಅಗತ್ಯವಿರುವ ಗಾತ್ರದ ಟೆಂಟ್ ನೀವು ಖರೀದಿ ಮಾಡಬಹುದು.
ಬ್ಯಾಗ್ ಪ್ಯಾಕಿಂಗ್ ಟೆಂಟ್ : ತಾವಿದ್ದಲ್ಲೆ ಉಳಿಯಲು ವ್ಯವಸ್ಥೆ ಮಾಡಿಕೊಳ್ಳುವ ಜನರಿಗೆ ಇದು ಬೆಸ್ಟ್. ಇದನ್ನು ನೀವು ಆರಾಮವಾಗಿ ಬ್ಯಾಗ್ ಪ್ಯಾಕ್ ರೂಪದಲ್ಲಿ ತೆಗೆದುಕೊಂಡು ಹೋಗಬಹುದು. ಇದು ಸ್ವಲ್ಪ ಭಾರವಾಗಿರುತ್ತದೆ. ಆದ್ರೆ ನಿಮಗೆ ಹಿತವೆನ್ನಿಸಿದ ಜಾಗದಲ್ಲಿ ನೀವು ಉಳಿದುಕೊಳ್ಳಲು ನೆರವಾಗುತ್ತದೆ. ಇದ್ರ ಬೆಲೆ 3 ಸಾವಿರ ರೂಪಾಯಿಯಿಂದ ಶುರುವಾಗುತ್ತದೆ.
ಸ್ವಿಟ್ಜರ್ಲೆಂಡ್‌ನ ಈ ಗ್ರಾಮದಲ್ಲಿ ನೆಲೆಸಿದ್ರೆ ನಿಮಗೆ ಸಿಗುತ್ತೆ ಕೋಟಿ ಕೋಟಿ ಹಣ..
ಕ್ಯಾಬಿನ್ ಟೆಂಟ್ : ಈ ಟೆಂಟ್ ಅಲ್ಯೂಮಿನಿಯಂ ಕಂಬಗಳ ಮೇಲೆ ನಿಂತಿರುತ್ತದೆ. ಅಗತ್ಯಕ್ಕೆ ಅನುಗುಣವಾಗಿ ನೀವು ಎರಡರಿಂದ ನಾಲ್ಕು ಕ್ಯಾಬಿನ್‌ಗಳ ಟೆಂಟ್‌ಗಳನ್ನು ಖರೀದಿಸಬಹುದು. ಇದ್ರಲ್ಲಿ ಒಂದು ಕುಟುಂಬ ಆರಾಮವಾಗಿ ತಂಗಬಹುದು. ಈ ಟೆಂಟ್ ವೆಚ್ಚ ನೀವು ಎಷ್ಟು ಕ್ಯಾಬಿನ್ ಗಳನ್ನು ಖರೀದಿ ಮಾಡ್ತಿರಿ ಎಂಬುದನ್ನು ಅವಲಂಭಿಸಿದೆ.
ವೀಲ್ ಟೆಂಟ್ : ಸಾಹಸವನ್ನು ಇಷ್ಟಪಡುವ ಜನರಿಗೆ ಈ ಟೆಂಟ್ ಬೆಸ್ಟ್. ಅಗತ್ಯವೆನಿಸಿದಾಗ ಟೆಂಟ್ ತೆಗೆದು ವಿಶ್ರಾಂತಿ ಪಡೆಯಬಹುದು. ಇದ್ರ ಬೆಲೆ ಕೂಡ ವಾಹನ ಹಾಗೂ ಟೆಂಟ್ ಗುಣಮಟ್ಟವನ್ನು ಅವಲಂಬಿಸಿರುತ್ತದೆ.
ಟೆಂಟ್ ರೆಸಾರ್ಟ್ : ಇತ್ತೀಚಿನ ದಿನಗಳಲ್ಲಿ ಟೆಂಟ್ ರೆಸಾರ್ಟ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಹೊಟೇಲ್ ಇಲ್ಲದ ಜಾಗದಲ್ಲಿ ಇದನ್ನು ಮಾಡಲಾಗ್ತಿದೆ. ಇಲ್ಲಿ ಡಬಲ್ ಬೆಡ್, ಶೌಚಾಲಯ ಸೇರಿದಂತೆ ಹೊಟೇಲ್ ರೂಮಿನಲ್ಲಿ ಇರುವ ಎಲ್ಲ ಸೌಲಭ್ಯ ಇದ್ರಲ್ಲಿ ಇರುತ್ತದೆ. ನೀವು ಯಾವೆಲ್ಲ ಸೌಲಭ್ಯಗಳನ್ನು ಬಯಸುತ್ತೀರಿ ಎಂಬ ಆಧಾರದ ಮೇಲೆ ಟೆಂಟ್ ರೆಸಾರ್ಟ್ ಬೆಲೆ ನಿರ್ಧಾರವಾಗುತ್ತದೆ. ಐದು ಸಾವಿರದಿಂದ ಇದ್ರ ಬೆಲೆ ಶುರುವಾಗುತ್ತದೆ. ಒಂದು ದಿನಕ್ಕೆ 75 ಸಾವಿರ ರೂಪಾಯಿ ಬಾಡಿಗೆಯಿರುವ ಟೆಂಟ್ ರೆಸಾರ್ಟ್ ಗಳೂ ಲಭ್ಯವಿದೆ.