'ಅಣ್ಣ ಅಂತ ಕರಿಬೇಡಿ': ಮಹಿಳೆಗೆ ರ‍್ಯಾಪಿಡೋ ಚಾಲಕ ಮೆಸೇಜ್‌, ಕಂಪನಿ ಹೇಳಿದ್ದೇನು?

By Suvarna NewsFirst Published Mar 17, 2023, 2:02 PM IST
Highlights

ದೇಶ ಎಷ್ಟೇ ಮುಂದುವರೆದ್ರೂ ಮಹಿಳೆಯ ಸುರಕ್ಷತೆ ಮಾತ್ರ ಈಗ್ಲೂ ಸವಾಲಾಗಿಯೇ ಇದೆ. ಸುರಕ್ಷಿತವೆಂದು ನಾವು ಬಳಕೆ ಮಾಡುವ ಕೆಲ ಅಪ್ಲಿಕೇಷನ್ ಗಳಿಂದಲೇ ಸಮಸ್ಯೆ ಶುರುವಾಗಿದೆ. ಇದಕ್ಕೆ ಇ ಅಪ್ಲಿಕೇಷನ್ ಆಧಾರಿತ ಸಾರಿಗೆ ಕಂಪನಿಗಳು ಹೊರತಾಗಿಲ್ಲ. ಈಗ ರಾಪಿಡೊ ಚಾಲಕನೊಬ್ಬನ ಅಸಹ್ಯ ಸಂದೇಶ ವೈರಲ್ ಆಗಿದೆ. 
 

ಇತ್ತೀಚಿನ ದಿನಗಳಲ್ಲಿ ರಾಪಿಡೊ, ಓಲಾ, ಉಬರ್ ನಂತಹ ಇ ಅಪ್ಲಿಕೇಷನ್ ಆಧಾರಿತ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಸುರಕ್ಷತೆ ಹೆಚ್ಚು ಎನ್ನುವ ಕಾರಣಕ್ಕೆ ತಡರಾತ್ರಿಯಾದ್ರೂ ಬಹುತೇಕ ಮಹಿಳೆಯರು ಈ ಆಪ್ ಬಳಕೆ ಮಾಡಿಕೊಳ್ತಾರೆ.  ನಾವು ಎಲ್ಲಿದ್ದೇವೆ ಎಂಬುದನ್ನು ಈ ಅಪ್ಲಿಕೇಷನ್ ಗಳಲ್ಲಿ ಟ್ರ್ಯಾಕ್ ಮಾಡಬಹುದು. ನಾವು ಎಲ್ಲಿಂದ ಎಲ್ಲಿಗೆ ಹೋಗ್ಬೇಕು ಎಂಬುದನ್ನು ಈ ಅಪ್ಲಿಕೇಷನ್ ನಲ್ಲಿ ನಮೂದಿಸಿ ಆಟೋ, ಬೈಕ್ ಅಥವಾ ಕಾರ್ ಬುಕ್ ಮಾಡಿದ್ರೆ, ನಮ್ಮನ್ನು ಕರೆದುಕೊಂಡು ಹೋಗುವ ಚಾಲಕ ಯಾರು ಎಂಬ ಮಾಹಿತಿ ಕೂಡ ನಮಗೆ ಲಭ್ಯವಾಗುತ್ತದೆ. ನಾವಿದನ್ನು ನಮ್ಮ ಆಪ್ತರಿಗೆ ಸೆಂಡ್ ಮಾಡುವ ಅವಕಾಶವಿದೆ. ಅವರೂ ನಮ್ಮನ್ನು ಟ್ರ್ಯಾಕ್ ಮಾಡಿ, ನಾವು ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದ್ದೇವೆಯೇ ಎಂಬುದನ್ನು ಪತ್ತೆ ಮಾಡಬಹುದು.

ಆದ್ರೆ ಸುರಕ್ಷಿತ ಎಂದುಕೊಂಡ ಈ ಸಾರಿಗೆ (Transportation) ಯಲ್ಲೂ ಅನೇಕ ಸಮಸ್ಯೆ ಎದುರಾಗ್ತಿದೆ. ಚಾಲಕರ ದುರ್ವರ್ತನೆ ಬಗ್ಗೆ ಅನೇಕ ನ್ಯೂಸ್ ಗಳನ್ನು ನಾವು ಕೇಳ್ತಿರುತ್ತೇವೆ. ಈ ಅಪ್ಲಿಕೇಷನ್ ಬಳಸುವ ಕೆಲ ಚಾಲಕರು, ಲೊಕೇಷನ್ (Location) ಸರಿಯಾಗಿ ಕಾಣಿಸ್ತಿಲ್ಲ, ನಿಮ್ಮ ಲೋಕೇಷನ್ ವಾಟ್ಸ್ ಅಪ್ ಮಾಡಿ ಎನ್ನುತ್ತಾರೆ. ಮತ್ತೆ ಕೆಲವರು, ಅಪ್ಲಿಕೇಷನ್ (Application) ಬಳಕೆ ಕ್ಯಾನ್ಸಲ್ ಮಾಡಿ, ನಾವೇ ನೀವು ಹೋಗಬೇಕಾದ ಸ್ಥಳಕ್ಕೆ ಕರೆದೊಯ್ಯುತ್ತೇವೆ. ಅದಕ್ಕೆ ಪೇ ಮಾಡಿ ಎನ್ನುತ್ತಾರೆ. ಪ್ರಯಾಣಿಕರು ಅದ್ರಲ್ಲೂ ಮಹಿಳಾ ಪ್ರಯಾಣಿಕರು ಈ ಎರಡೂ ಕೆಲಸ ಮಾಡುವುದು ಸುರಕ್ಷಿತವಲ್ಲ. ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಮಹಿಳೆಯೊಬ್ಬಳು ತನಗಾದ ಸಮಸ್ಯೆಯನ್ನು ಬರೆದುಕೊಂಡಿದ್ದಾಳೆ. ಆಕೆ ಟ್ವಿಟ್ ಈಗ ವೈರಲ್ ಆಗಿದೆ.

ಧೂಮಪಾನ, ತಂಬಾಕು ನಿಯಂತ್ರಣ: ಬೆಂಗಳೂರಿಗೆ ಜಾಗತಿಕ ಗೌರವ

ವೈರಲ್ ಟ್ವಿಟರ್ ನಲ್ಲಿ ಚಾಲಕ ಹೇಳಿದ್ದೇನು?:  ರಾಪಿಡೊ ಚಾಲಕ ಮಾಡಿದ ವಾಟ್ಸ್ ಅಪ್ ಚಾಟ್‌ನ ಈ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್  ನಲ್ಲಿ ಹಂಚಿಕೊಳ್ಳಲಾಗಿದೆ. ಹುಸ್ನ್ ಪರಿ @ಬೆಹುರಾಬಾಬೆ ಎಂಬ ಟ್ವಿಟರ್ ಬಳಕೆದಾರರು ಮಾರ್ಚ್ 13 ರಂದು ಈ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ. ನಾನು @rapidobikeappನ ಚಾಲಕನೊಂದಿಗೆ ನನ್ನ ಸ್ಥಳವನ್ನು ಹಂಚಿಕೊಂಡಿದ್ದೆ. ಆದ್ರೆ ಅದರ ಬದಲು ನನಗೆ ಸಿಕ್ಕಿದ್ದೇನು ಗೊತಾ? ಎಂದು ಶೀರ್ಷಿಕೆ ಹಾಕಲಾಗಿದೆ. ಇನ್ನು ಸ್ಕ್ರೀನ್ ಶಾಟ್ ಪೋಸ್ಟ್ ಹಲೋದಿಂದ ಶುರುವಾಗುತ್ತದೆ. ಹಲೋ ... ನಿದ್ರೆ ಮಾಡಿದ್ರಾ ???. ನಾನು ನಿಮ್ಮ ಡಿಪಿ ನೋಡಿದ ನಂತರ ಹಾಗೆ ನಿಮ್ಮ ಧ್ವನಿ ಕೇಳಿದ ನಂತ್ರ ಬಂದೆ. ಇಲ್ಲದಿದ್ದರೆ ನಾನು ತುಂಬಾ ದೂರದಲ್ಲಿದ್ದ ಕಾರಣ ನಾನು ಬರುತ್ತಿರಲಿಲ್ಲ. ಹೌದು, ಮತ್ತೆ  ನಾನು ಸಹೋದರನಲ್ಲ  ಎಂದು ಚಾಲಕ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡಿದ್ದಾನೆ. 

CHERRY BLOSSOM: ಜಪಾನ್‌ನಲ್ಲಿ ಅರಳಿ ನಿಂತಿವೆ ಚೆರ್ರಿ ಹೂವುಗಳು : ನೋಡುಗರ ಕಣ್ಣಿಗೆ ಹಬ್ಬ

ವೈರಲ್ ಆದ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಮೆಂಟ್: ಇದುವರೆಗೆ ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಪ್ರತಿಕ್ರಿಯೆಗಳು ಬಂದಿವೆ. ಅಮೆಜಾನ್, ಪ್ಲಿಫ್ಕಾರ್ಟ್, ಓಲಾ, ರೆಪಿಡೋದಂತಹ ಅಪ್ಲಿಕೇಷನ್ ಗಳು ನಮ್ಮ ಸ್ಥಳದ ಬಗ್ಗೆ ಅಪರಿಚಿತರಿಗೆ ಮಾಹಿತಿಯನ್ನು ನೀಡುತ್ತದೆ. ಅನೇಕರಿಗೆ ಇದ್ರಿಂದ ಸಮಸ್ಯೆಯಾಗಿದೆ ಎಂದು ಬಳಕೆದಾರನೊಬ್ಬ ಬರೆದಿದ್ದಾನೆ. ಈ ದಿನಗಳಲ್ಲಿ ರಾಪಿಡೋ ಸುರಕ್ಷಿತವಾಗಿಲ್ಲವೆಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾನೆ. 

ಇದು ಅಸಹ್ಯಕರವಾಗಿದೆ. ಆದರೆ ಪ್ರತಿ ಮಹಿಳೆಯೊಂದಿಗೆ ಪ್ರತಿದಿನ ಇದು ನಡೆಯುತ್ತದೆ. ಇದು ಭಾರತದಲ್ಲಿ ಹುಡುಗರನ್ನು ಬೆಳೆಸುವ ವಿಧಾನವನ್ನು ತಿಳಿಸುತ್ತದೆ. ಪುರುಷರು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಯಾವುದೇ ಕಂಪನಿಯು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಒಂದು ದೇಶವಾಗಿ ನಾವು ಸಮಸ್ಯೆಯ ಮೂಲ ಕಾರಣವನ್ನು ಹುಡುಕಿ, ಪರಿಹರಿಸುವ ಬಗ್ಗೆ ಆಲೋಚನೆ ಮಾಡ್ತಿಲ್ಲ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾನೆ. 

ಇದಕ್ಕೆ ರೆಪಿಡೊ ನೀಡಿದ ಪ್ರತಿಕ್ರಿಯೆ ಏನು?: ಟ್ವಿಟರ್ ಪೋಸ್ಟ್ ಗೆ ರೆಪಿಡೊ ಕೂಡ ಪ್ರತಿಕ್ರಿಯೆ ನೀಡಿದೆ. ನಮಸ್ಕಾರ, ಕ್ಯಾಪ್ಟನ್‌ನಲ್ಲಿ ವೃತ್ತಿಪರತೆಯ ಕೊರತೆ ಬಗ್ಗೆ ತಿಳಿದು ತುಂಬಾ ನಿರಾಶೆಯಾಗಿದೆ. ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಈ ಸಂದರ್ಭದಲ್ಲಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ರಾಪಿಡೊ ಹೇಳಿದೆ. 

 

shared my location with a captain at and this is what i get???? FUCK YOUR APP FUCK YOUR MEN FUCK MEN pic.twitter.com/EHLqd7lpt5

— husnpari (@behurababe)

 

click me!