ಏ.7ರಿಂದ ರಾಮಾಯಣ ಯಾತ್ರ ರೈಲು ಆರಂಭ, ಟಿಕೆಟ್ ಬೆಲೆ, ಭೇಟಿ ಸ್ಥಳ ಸೇರಿ ಮಹತ್ವದ ಮಾಹಿತಿ!

By Suvarna News  |  First Published Mar 15, 2023, 7:54 PM IST

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಮಾಯಣಾ ಯಾತ್ರಾ ರೈಲು ಸಂಚಾರ ಏಪ್ರಿಲ್ 7 ರಿಂದ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ಭಾರತ ಗೌರವ್ ಡಿಲಕ್ಸ್ ರೈಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಈ ರೈಲು ಅಕ್ಷರಶಃ ರಾಮಾಯಣದ ದರ್ಶನ ಮಾಡಿಸಲಿದೆ. ಒಟ್ಟು 18 ದಿನಗಳ ಯಾತ್ರೆ, ಭೇಟಿ ನೀಡುವ ಸ್ಥಳ, ಬೆಲೆ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ಮಾ.15): ಧಾರ್ಮಿಕ ಪ್ರವಾಸಿ ತಾಣಗಳ ಗತವೈಭವ ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ರೈಲ್ವೇ ಈಗಾಗಲೇ ಭಾರತ್ ಗೌರವ್ ಡಿಲಕ್ಸ್ ರೈಲು ಘೋಷಿಸಿದೆ. ಸಂಪೂರ್ಣ ರಾಮಾಯಣ ದರ್ಶನ ಮಾಡಿಸುವ ರಾಮಾಯಾಣ ಯಾತ್ರ ರೈಲು ಏಪ್ರಿಲ್ 7 ರಿಂದ ಆರಂಭಗೊಳ್ಳಲಿದೆ. ಶ್ರೀರಾಮನ ಆಯೋಧ್ಯೆ ಸೇರಿದಂತೆ ಇಡೀ ರಾಮಾಯಣದಲ್ಲಿ ಬರುವ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡುವ ಈ ರೈಲು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. 2AC, 1AC ಹಾಗೂ 1AC ಕೂಪ್ ಕ್ಲಾಸ್‌ಗಳಲ್ಲಿ ಈ ರೈಲಿನಲ್ಲಿ ಪ್ರಯಾಣ ಮಾಡಬಹುದು. 

ರಾಮಾಯಣ ಯಾತ್ರ ರೈಲು ಒಟ್ಟು 18 ದಿನ ಹಾಗೂ 17 ದಿನದ ಪ್ಯಾಕೇಜ್ ಆಗಿದೆ. ಪ್ರವಾಸಿಗರು ಈ ರೈಲಿನ ಮೂಲಕ ಶ್ರೀರಾಮನ ಸಂಪೂರ್ಣ ಪುರಾಣವನ್ನು ತಿಳಿದುಕೊಳ್ಳಲು ಹಾಗೂ ರಾಮಾಯಣದಲ್ಲಿ ಬರುವ ಪ್ರಮುಖ ಐತಿಹಾಸಿಕ ಸ್ಥಳ ಹಾಗೂ ದೇವಸ್ಥಾನಗಳಿಗೆ ಬೇಟಿ ನೀಡಲು ಸಾಧ್ಯವಿದೆ.

Tap to resize

Latest Videos

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌..! ರೈಲ್ವೆ ಟಿಕೆಟ್‌ ರಿಯಾಯ್ತಿ ಶೀಘ್ರದಲ್ಲೇ ಪುನಾರಂಭ..?

ರೈಲು ಭೇಟಿ ನೀಡುವ ಸ್ಥಳ
ಆಯೋಧ್ಯ: ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗರ್ಹಿ, ಸರಯೂ ಘಾಟ್
ನಂದೀಗ್ರಾಮ:ಭಾರತ್ ಹನುಮಾನ್ ಮಂದಿರ,ಭಾರತ್ ಕುಂದ್
ಜನಕಪುರ: ರಾಮ ಜಾನಕಿ ಮಂದಿರ
ಸೀತಾಮರಾಹಿ: ಜಾನಕಿ ಮಂದಿರ ಹಾಗೂ ಪುನರ್ವ ಧಾಮ 
ಬುಕ್ಸರ್ : ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ
ವಾರಣಾಸಿ : ತುಳಸಿ ಮಾನಸ ದೇವಸ್ಥಾನ, ಸಂಕಟ್ ಮೋಚನ್ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಗಂಗಾ ಆರತಿ
ಸೀತಾ ಸಮಾಹಿತಿ ಸ್ಥಳ್, ಸೀತಾಮರಾಹಿ: ಸೀತಾ ಮಾತಾ ದೇವಸ್ಥಾನ
ಪ್ರಯಾಗರಾಜ್ : ಭಾರದ್ವಾಜ ಆಶ್ರಮ, ಗಂಗಾ ಯಮುನಾ ಸಂಗಮ, ಹನುಮಾನ ದೇವಸ್ಥಾನ
ಶ್ರಿಂಗ್ವೆರ್ಪುರ್: ಶ್ರಿಂಗಿ ರಿಷಿ ಸಮಾಧಿ, ಶಾಂತಾ ದೇವಿ ದೇವಸ್ಥಾನ, ರಾಮಚೌರ
ಚಿತ್ರಕೂಟ: ಗುಪ್ತ ಗೋದಾವರಿ, ರಾಮ ಘಾಟ್, ಸತಿ ಅನಸೂಯ ದೇವಸ್ಥಾನ
ನಾಸಿಕ್ : ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಾಗುಹ, ಕಲರಾಮ ಮಂದಿರ
ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ, ವಿಠಲ ಮಂದಿರ
ರಾಮೇಶ್ವರಂ : ರಾಮನಾಥ ಸ್ವಾಮಿ ಮಂದಿರ, ಧನುಷ್ಕೋಡಿ
ಬದ್ರಾಚಲಂ: ಶ್ರೀ ಸೀತಾ ರಾಮಚಂದ್ರಸ್ವಾಮಿ ಮಂದಿರ, ಆಂಜನೇಯ ಸ್ವಾಮಿ ಮಂದಿರ
ನಾಗ್ಪುರ: ರಾಮತೇಕ್ ಕೋಟೆ ಹಾಗೂ ಮಂದಿರ

Indian Railways New Rules: ರಾತ್ರಿ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ!

ಟಿಕೆಟ್ ಬೆಲೆ:
18 ದಿನ ಹಾಗೂ 17 ರಾತ್ರಿಯ ಪ್ರಯಾಣ, ಊಟ, ತಿಂಡಿ, ಹೊಟೆಲ್ ವಾಸ್ತವ್ಯ, ದೇವಸ್ಥಾನ ದರ್ಶನ, ಪ್ರಯಾ ವಿಮೆ ಸೇರಿದಂತೆ ಎಲ್ಲಾ ವೆಚ್ಚವನ್ನು ಟಿಕೆಟ್‌ನಲ್ಲಿ ಸೇರಿಸಲಾಗಿದೆ. 2AC ಕ್ಲಾಸ್ ಟಿಕೆಟ್‌ಗೆ 1,14,065 ರೂಪಾಯಿ. ಇನ್ನು  1 AC ಕ್ಲಾಸ್‌ಗೆ 1,46,545 ರೂಪಾಯಿ. ಇನ್ನೂ 1AC ಕೂಪ್ ಕ್ಲಾಸ್‌ಗೆ  1,68,950 ರೂಪಾಯಿ ನಿಗದಿಪಡಿಸಲಾಗಿದೆ.  ಅತ್ಯುತ್ತಮ ಎಸಿ ಹೊಟೆಲ್‌ನಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಜೊತೆ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವಾಗಿರಲಿದೆ. ಇನ್ನು ರೈಲಿನಿಂದ ದೇವಸ್ಥಾನಕ್ಕೆ ತೆರಳು, ಪ್ರಮುಖ ಪ್ರೇಕ್ಷಣಿಯ ಸ್ಥಳಕ್ಕೆ ತೆರಳಲು ವಾಹನದ ವೆಚ್ಚವೂ ಈ ಟಿಕೆಟ್‌ನಲ್ಲಿ ಸೇರಿಸಲಾಗಿದೆ. 

click me!