ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಕೆಲವು ರಾತ್ರಿ ಮಾತ್ರ ಚಾಲ್ತಿಯಲ್ಲಿರುತ್ತವೆ. ಆ ರೂಲ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ರೈಲು (train) ಭಾರತೀಯರ ಸಾರಿಗೆ ಜೀವಾಳ. ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ವ್ಯವಸ್ಥೆಯನ್ನು ಭಾರತ (India) ಹೊಂದಿದೆ. ಈ ರೈಲುಗಳು ದೇಶದ ಗಡಿ ಪ್ರದೇಶಗಳನ್ನು ದೊಡ್ಡ ನಗರಗಳಿಗೆ ಸಂಪರ್ಕಿಸುತ್ತವೆ. ಇದಕ್ಕಾಗಿಯೇ ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ಭಾರತೀಯ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಇಷ್ಟೇ ಅಲ್ಲ, ಭಾರತೀಯ ರೈಲ್ವೆ ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸಿದೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣಕ್ಕೆ ರೈಲು ಅನುಕೂಲಕರ. ಆರಾಮದಾಯ ಹಾಗೂ ಸುರಕ್ಷಿತ ಪ್ರಯಾಣಕ್ಕೆ ರೈಲು ಯೋಗ್ಯ ಎಂದೇ ಪರಿಗಣಿಸಲಾಗಿದೆ. ಹಗಲು – ರಾತ್ರಿ ಎನ್ನದೆ ರೈಲಿನಲ್ಲಿ ಜನರು ಪ್ರಯಾಣ ಬೆಳೆಸುತ್ತಾರೆ. ರೈಲು ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಭಾರತೀಯ ರೈಲ್ವೆ ಹಲವು ನಿಯಮಗಳನ್ನು ಮಾಡಿದೆ. ವಿಶೇಷವಾಗಿ ರಾತ್ರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ರೈಲಿನ ರಾತ್ರಿ ನಿಯಮ (Night rule of Indian train) :
1. ರಾತ್ರಿ ನೀವು ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ, ನಿಮ್ಮ ಮನಸ್ಸಿಗೆ ಬಂದಂತೆ ಫೋನ್ ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಧ್ವನಿವರ್ದಕ ಬಳಸಲು ಅನುಮತಿ ಇಲ್ಲ. ಅಷ್ಟೇ ಅಲ್ಲ, ನೀವು ಸೌಂಡ್ ಹೆಚ್ಚಿಸಿ ಹಾಡುಗಳನ್ನು ಕೇಳುವಂತಿಲ್ಲ. ಒಂದ್ವೇಳೆ ಈ ನಿಯಮ ಮುರಿದಿದ್ದು, ನಿಮ್ಮ ಸಹ ಪ್ರಯಾಣಿಕರು ಈ ಬಗ್ಗೆ ದೂರು ನೀಡಿದ್ರೆ ನೀವು ದಂಡ ಕಟ್ಟಬೇಕಾಗುತ್ತದೆ.
ಇಲ್ಲಿ ಎಲ್ಲರ ಮನೆ ಮುಂದೆ ನಿಂತಿರುತ್ತೆ ಪ್ರೈವೇಟ್ ಜೆಟ್ !
2. ರಾತ್ರಿ ಅನವಶ್ಯಕ ಬೆಳಕನ್ನು ನೀವು ಉಪಯೋಗಿಸಬಾರದು. ರಾತ್ರಿಯ ಲೈಟ್ ಬಿಟ್ಟು ಹೆಚ್ಚುವರಿ ಯಾವುದೇ ಲೈಟ್ ಉರಿಸಲು ರೈಲಿನಲ್ಲಿ ಅನುಮತಿ ಇರುವುದಿಲ್ಲ. ಇದ್ರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ.
3. ನೀವು ಹತ್ತು ಗಂಟೆಯ ಮೊದಲು ರೈಲು ಹತ್ತಿದ್ದರೆ, ಟಿಟಿಇ ಹತ್ತು ಗಂಟೆ ನಂತ್ರ ಬಂದು ನಿಮ್ಮ ಟಿಕೆಟ್ ಚೆಕ್ ಮಾಡಲು ಸಾಧ್ಯವಿಲ್ಲ. ಹತ್ತು ಗಂಟೆಗಿಂತ ಮೊದಲು ರೈಲು ಏರಿರುವ ಪ್ರಯಾಣಿಕರ ಟಿಕೆಟ್ ಚೆಕ್ಕಿಂಗ್ ಹತ್ತು ಗಂಟೆಯೊಳಗೆ ನಡೆಯಬೇಕು. ಹತ್ತುಗಂಟೆ ನಂತ್ರ ರೈಲು ಏರಿದ ಪ್ರಯಾಣಿಕ ಟಿಕೆಟ್ ಮಾತ್ರ ಟಿಟಿಇ ಪರಿಶೀಲಿಸಬಹುದು.
4. ಮಧ್ಯಮ ಬರ್ತ್ ನಲ್ಲಿ ನೀವು ಪ್ರಯಾಣ ಬೆಳೆಸುತ್ತಿದ್ದರೆ ಹತ್ತು ಗಂಟೆಯ ನಂತ್ರ ಮಲಗಲು ನೀವು ಸಿದ್ಧತೆ ನಡೆಸಬಹುದು. ಅದಕ್ಕೆ ಕೆಳ ಬರ್ತ್ಅಥವಾ ಮೇಲಿನ ಬರ್ತ್ನ ಪ್ರಯಾಣಿಕ ಯಾವುದೇ ವಿರೋಧ ಮಾಡಲು ಸಾಧ್ಯವಿಲ್ಲ. ಕೆಳಗಿನ ಬರ್ತ್ ಪ್ರಯಾಣಿಕ ಆಕ್ಷೇಪ ವ್ಯಕ್ತಪಡಿಸಿದ್ರೆ ನೀವು ದೂರು ನೀಡಬಹುದು.
ಭಾರತದ ಮೊದಲ ಹೈಡ್ರೋಜನ್ ರೈಲು ಇಂದಿನಿಂದ ಸಂಚಾರ ಆರಂಭ! ಇದರ
5. ಆನ್ಲೈನ್ ಆಹಾರ ಬುಕ್ಕಿಂಗ್ ಗೂ ರೈಲಿನಲ್ಲಿ ನಿಯಮ ಇದೆ. ನೀವು ಆನ್ಲೈನ್ ನಲ್ಲಿ 10 ಗಂಟೆ ನಂತ್ರ ಆಹಾರ ಬುಕ್ಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ಇ – ಕ್ಯಾಟಗರಿ ಸೇವೆಗೆ ರೈಲ್ವೆ ಇಲಾಖೆ ಅವಕಾಶ ನೀಡಿದೆ. ಅಂದ್ರೆ ನೀವು ಹತ್ತು ಗಂಟೆ ಮೊದಲೇ ಇ ಕ್ಯಾಟಗರಿ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದರೆ, ಆ ಆಹಾರವನ್ನು ನೀವು ಹತ್ತು ಗಂಟೆ ಮೇಲೂ ಪಡೆಯಬಹುದು.
ರೈಲಿನ ಲಗೇಜ್ ನಿಯಮ ಏನು? : ರೈಲಿನಲ್ಲೂ ಪ್ರಯಾಣಿಕರು ಇಷ್ಟ ಬಂದಷ್ಟು ಲಗೇಜ್ ಒಯ್ಯುವಂತಿಲ್ಲ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಗರಿಷ್ಠ 70 ಕೆಜಿ ಸಾಮಾನುಗಳನ್ನು ಕೊಂಡೊಯ್ಯಬಹುದು. ಸ್ಲೀಪರ್ ಕ್ಲಾಸ್‌ನಲ್ಲಿ 40 ಕೆಜಿ ಮತ್ತು ಎರಡನೇ ಕ್ಲಾಸ್‌ನಲ್ಲಿ 35 ಕೆಜಿ ಲಗೇಜ್ ಉಚಿತ. ಪ್ರಯಾಣಿಕರು ಎಸಿ ದರ್ಜೆಯಲ್ಲಿ 150 ಕೆಜಿ, ಸ್ಲೀಪರ್ ದರ್ಜೆಯಲ್ಲಿ 80 ಕೆಜಿ ಮತ್ತು ಎರಡನೇ ದರ್ಜೆಯಲ್ಲಿ 70 ಕೆಜಿ ವರೆಗೆ ವಸ್ತುಗಳನ್ನು ಸಾಗಿಸಲು ಅವಕಾಶವಿದೆ. ಇದಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗ್ತಿದ್ದರೆ ವಸ್ತುಗಳಿಗೆ ಶುಲ್ಕ ವಿಧಿಸಬೇಕಾಗುತ್ತದೆ.