ಇಲ್ಲಿ ಎಲ್ಲರ ಮನೆ ಮುಂದೆ ನಿಂತಿರುತ್ತೆ ಪ್ರೈವೇಟ್ ಜೆಟ್ !

ಮನೆ ಮುಂದೆ ಕಾರು, ಬೈಕ್ ನಿಲ್ಲೋದನ್ನು ನಾವು ನೋಡಿರ್ತೇವೆ. ಆದ್ರೆ ಇಲ್ಲಿ ಎಲ್ಲರ ಮನೆ ಮುಂದೆ ಖಾಸಗಿ ಜೆಟ್ ನಿಂತಿರುತ್ತೆ. ಅಲ್ಲಿರೋರೆಲ್ಲ ಅಷ್ಟು ಶ್ರೀಮಂತ್ರಾ? ಅದಕ್ಕೆ ಕಾರಣ ಏನು ಎಂಬುದಕ್ಕೆ ಉತ್ತರ ಇಲ್ಲಿದೆ. 
 

Which city has jet parked in front of everyone house

ಡ್ರೀಮ್ ಕಾರು, ಬೈಕ್ ಖರೀದಿ ಮಾಡುವ ಆಸೆ ಪ್ರತಿಯೊಬ್ಬರಿಗೂ ಇದೆ. ಭಾರತದ ಅನೇಕರ ಮನೆ ಮುಂದೆ ಒಂದು ಬೈಕ್ ಇಲ್ಲವೆ ಕಾರು ಇರೋದು ಸಾಮಾನ್ಯ ಎನ್ನುವಂತಾಗಿದೆ. ಬಹುತೇಕ ಎಲ್ಲರೂ ಅಗತ್ಯಕ್ಕೆ ಹಾಗೂ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ವಾಹನ ಖರೀದಿ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಬೈಕ್, ಕಾರಿನ ಬದಲು ಮನೆ ಮುಂದೆ ಖಾಸಗಿ ಜೆಟ್ (Private jet) ನಿಂತಿರುತ್ತೆ. ನಿಮಗೆ ಅಚ್ಚರಿ ಆಗ್ಬಹುದು, ಆದ್ರೆ ಅದು ಸತ್ಯ. ಎಲ್ಲರ ಮನೆ ಮುಂದೆ ನೀವು ಒಂದೇ ಒಂದು ಕಾರು ಅಥವಾ ಬೈಕ್ ನಿಮಗೆ ಕಾಣೋದಿಲ್ಲ. ಎಲ್ಲರ ಮನೆ ಮುಂದೆ ಜೆಟ್ ನಿಂತಿರುತ್ತದೆ. ಜನರು ಊಟ ಅಥವಾ ಒಂದ್ಕಡೆಯಿಂದ ಇನ್ನೊಂದು ಕಡೆ ಓಡಾಡಲು ಜೆಟ್ ಬಳಸ್ತಾರೆ. ಆ ಊರು ಯಾವುದು? ಅಲ್ಲಿನ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ. 

ಮನೆ ಮುಂದೆ ಕಾರಿನ ಬದಲು ಜೆಟ್ ನಿಲ್ಲುವ ಊರಿನ ಹೆಸರು ಕ್ಯಾಮರೂನ್ ಏರ್ ಪಾರ್ಕ್ (Cameroon Air Park). ಇದು ಕ್ಯಾಲಿಫೋರ್ನಿಯಾ (California)ದ ಎಲ್ ಡೊರಾಡೊ ಕೌಂಟಿಯಲ್ಲಿದೆ. ಕ್ಯಾಮೆರಾನ್ ಏರ್ ಪಾರ್ಕ್ ಅನ್ನು 1963 ರಲ್ಲಿ ನಿರ್ಮಿಸಲಾಗಿದೆ. ಇದು ಒಟ್ಟು 124 ಮನೆಗಳನ್ನು ಹೊಂದಿದೆ. ಪ್ರತಿಯೊಂದು ಮನೆಯ ಹೊರಗೆ ಒಂದು ಖಾಸಗಿ ಜೆಟ್ ನೀವು ನೋಡ್ಬಹುದು. ಎರಡನೇಯ ಮಹಾಯುದ್ಧದ ಸಮಯದಲ್ಲಿ ಅಮೆರಿಕದಲ್ಲಿ ಪೈಲಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ನಾಲ್ಕು ಲಕ್ಷಕ್ಕೂ ಹೆಚ್ಚು ಪೈಲಟ್ ಗಳಿದ್ದರು. ಅವರಿಗಾಗಿ ಯುದ್ಧದ ಸಮಯದಲ್ಲಿ ಅನೇಕ ವಾಯುನೆಲೆಗಳನ್ನು ನಿರ್ಮಿಸಲಾಯಿತು. ಆದರೆ ಯುದ್ಧ ಮುಗಿದ ನಂತರ ಅವುಗಳನ್ನು ಬಂದ್ ಮಾಡಿರಲಿಲ್ಲ. ಕೆಲ ವರ್ಷದ ನಂತ್ರ ಅವುಗಳನ್ನು ವಸತಿ ವಾಯು ಉದ್ಯಾನವನಗಳಾಗಿ ಪರಿವರ್ತಿಸಲಾಯ್ತು. ಅಮೆರಿಕಾದಲ್ಲಿ ಇಂಥ 614 ಏರ್ ಪಾರ್ಕ್ ಇದೆ. 

Latest Videos

ಭಾರತದ ಟಾಪ್ 10 ಫೇಮಸ್ ನ್ಯಾಷನಲ್ ಪಾರ್ಕ್‌ಗಳಿವು!

ಕ್ಯಾಮರೂನ್ ಏರ್ ಪಾರ್ಕ್ ನಲ್ಲಿ ನಿವೃತ್ತ ಪೈಲಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಆದ್ರೆ ಪೈಲಟ್ ವೃತ್ತಿಯಲ್ಲದೆ ಬೇರೆ ವೃತ್ತಿ ಮಾಡುತ್ತಿರುವವರು ಕೂಡ ಈ ಹಳ್ಳಿಯಲ್ಲಿದ್ದಾರೆ. ಅವರು ಕೂಡ ಖಾಸಗಿ ಜೆಟ್ ಇಷ್ಟಪಡ್ತಾರೆ. ಮನೆ ಮುಂದೆ ಖಾಸಗಿ ಜೆಟ್ ಇರೋದು ಪ್ರತಿಷ್ಠೆ ಎಂದು ಅವರು ಭಾವಿಸ್ತಾರೆ.  ಕಾರು, ಬೈಕ್ ಬದಲು ಅವರು ಈ ಜೆಟ್ ನಲ್ಲಿಯೇ ಓಡಾಟ ನಡೆಸುತ್ತಾರೆ. ಪ್ರತಿಯೊಂದು ಮನೆಯ ಮುಂದೆ ವಿಮಾನಗಳು ನಿಂತಿರುತ್ತವೆ. ಜನರು ತಮ್ಮ ಕೆಲಸಕ್ಕೆ ತಮ್ಮದೇ ಆದ ವಿಮಾನಗಳಲ್ಲಿ ಹೋಗುತ್ತಾರೆ.

ಈ ಜನಾಂಗದಲ್ಲಿ ಮಹಿಳೆ ಎಷ್ಟು ಮದ್ವೇನೂ ಅಗಬಹುದು… ಮದುವೆ ಬಳಿಕ ವರ ಅತ್ತೆ ಮನೆಗೆ

ಇದು ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಇಲ್ಲಿನ ರಸ್ತೆಗಳನ್ನು ವಿಮಾನಗಳ ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಜನರು ತಮ್ಮ ಕಚೇರಿಗಳಿಗೆ ಹೋಗಲೂ ವಿಮಾನ ಬಳಸ್ತಾರೆ. ಇಲ್ಲಿನ ರಸ್ತೆಗಳಲ್ಲಿ ವಿಮಾನಗಳು ಕಾರುಗಳಂತೆ ಚಲಿಸುತ್ತವೆ.  ಜನರು ತಮ್ಮ ವಿಮಾನಗಳನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ಆರಾಮವಾಗಿ ಕೊಂಡೊಯ್ಯುತ್ತಾರೆ. ವಿಮಾನ ಮತ್ತು ಕಾರು ಸುಲಭವಾಗಿ ಅಕ್ಕಪಕ್ಕದಲ್ಲಿ ಹಾದುಹೋಗಲು ಅನುಕೂಲವಾಗುವಂತೆ ರಸ್ತೆಯ ಅಗಲವಿದೆ. ಕ್ಯಾಮರೂನ್ ಏರ್‌ಪಾರ್ಕ್‌ಗೆ ಹೋಗುವ ರಸ್ತೆಗಳಲ್ಲಿ ಫಲಕಗಳು ಮತ್ತು ಲೆಟರ್‌ಬಾಕ್ಸ್‌ಗಳನ್ನು ಎತ್ತರಕ್ಕೆ ಸ್ಥಾಪಿಸಲಾಗಿದೆ. ಇಲ್ಲಿನ ಜನರು ಗ್ಯಾರೇಜ್‌ಗಳ ಬದಲಿಗೆ ಹ್ಯಾಂಗರ್‌ಗಳನ್ನು ಬಳಸುತ್ತಾರೆ. ವಿಮಾನ ನಿಲ್ಲುವ ಜಾಗವನ್ನು ಹ್ಯಾಂಗರ್ ಎಂದು ಕರೆಯುತ್ತಾರೆ. ಅಲ್ಲಿ ಅವರು ವಿಮಾನಗಳನ್ನು ಆರಾಮವಾಗಿ ನಿಲ್ಲಿಸಬಹುದು. ಕ್ಯಾಮರೂನ್ ಏರ್ ಪಾರ್ಕ್ ಅನ್ನು ಫ್ಲೈ-ಇನ್ ಸಮುದಾಯ ಎಂದೂ ಕರೆಯುತ್ತಾರೆ. ಇಲ್ಲಿ ಹೊರಗಿನವರ ಪ್ರವೇಶ ಮತ್ತು ನಿರ್ಗಮನಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ. ಇಲ್ಲಿಗೆ ಅತಿಥಿಗಳು ಬರಲು ಬಯಸಿದ್ರೆ ಅನುಮತಿ ಪಡೆಯಬೇಕಾಗುತ್ತದೆ. 

vuukle one pixel image
click me!