ಭಾರತದ ಈ ಸ್ಥಳಗಳು ಮೇ ತಿಂಗಳಿನಲ್ಲಿ ಭೇಟಿ ನೀಡಲು ಬೆಸ್ಟ್‌, ಜಸ್ಟ್‌ 5000 ರೂ. ಇದ್ದರೆ ಸಾಕು !

By Suvarna News  |  First Published May 3, 2022, 10:38 AM IST

ನೀವು ಮೇ (May) ತಿಂಗಳಲ್ಲಿ ಭೇಟಿ ನೀಡಲು ಕಡಿಮೆ ಬಜೆಟ್‌ (Budget)ನಲ್ಲಿ ಉತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ಭಾರತದಲ್ಲಿ ಭೇಟಿ ನೀಡಲು ಇಂತಹ ಹಲವು ಸ್ಥಳ (Place)ಗಳಿವೆ. ನೀವು ನಿಮ್ಮ ಬಜೆಟ್‌ನಲ್ಲಿ ದೀರ್ಘ ವಾರಾಂತ್ಯವನ್ನು (Weekend) ಕಳೆಯಬಹುದಾದಂತಹ ಕೆಲವು ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.


ಟ್ರಾವೆಲಿಂಗ್‌ (Travelling) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೊಸ ಪ್ರದೇಶಗಳಿಗೆ (Place) ಭೇಟಿ ನೀಡುವುದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಎಲ್ಲರಿಗೂ ಆಸಕ್ತಿಕರ ವಿಚಾರವಾಗಿದೆ. ಆದ್ರೆ ಪ್ರಯಾಣ ತುಂಬಾ ದುಬಾರಿಯಾಗುವ ಕಾರಣ ಯಾರೂ ಟ್ರಾವೆಲಿಂಗ್ ಪ್ಲಾನ್ ಮಾಡುವುದಿಲ್ಲ. ಆದ್ರೆ ಕಡಿಮೆ ಬಜೆಟ್‌ (Budget)ನಲ್ಲಿ ಮೇ ತಿಂಗಳಿನಲ್ಲಿ ನೀವು ಪ್ರಯಾಣಿಸಬಹುದಾದ ಕೆಲವೊಂದು ಬೆಸ್ಟ್ ಪ್ಲೇಸ್‌ಗಳ ಲಿಸ್ಟ್ ಇಲ್ಲಿದೆ.

ಬಿನ್ಸಾರ್: ಉತ್ತರಾಖಂಡದ ಕುಮಾವೂನ್ ಬೆಟ್ಟಗಳ ಮೇಲಿರುವ ಸಣ್ಣ ಹಳ್ಳಿಯಾದ ಬಿನ್ಸಾರ್‌ಗೆ ನೀವು ವನ್ಯಜೀವಿ ಸಫಾರಿಗಾಗಿ ಪ್ರವಾಸವನ್ನು ಯೋಜಿಸಬಹುದು. ಇದರೊಂದಿಗೆ, ಬೆಟ್ಟಗಳಿಂದ ಆವೃತವಾಗಿರುವ ಈ ಗ್ರಾಮದಲ್ಲಿ ವಿಶ್ರಾಂತಿಯ ಕೆಲವು ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ.

Tap to resize

Latest Videos

ತಲುಪುವುದು ಹೇಗೆ - ಬಿನ್ಸಾರ್ ತಲುಪಲು ಉತ್ತಮ ಮತ್ತು ಅಗ್ಗದ ಮಾರ್ಗವೆಂದರೆ ಬಸ್. ಇಲ್ಲಿಗೆ ನೀವು ನೈನಿತಾಲ್ ಅಥವಾ ಅಲ್ಮೋರಾದಿಂದ ಬಸ್ ಬದಲಿಸಬೇಕು. ಬಸ್ಸಿನ ಒಂದು ಮಾರ್ಗದ ಒಟ್ಟು ದರ ಸುಮಾರು 1000-1500 ರೂ. ಇಲ್ಲಿ ವಾಸಿಸಲು ಮತ್ತು ತಿನ್ನಲು ಪ್ರತಿ ವ್ಯಕ್ತಿಗೆ 1000-2000 ರೂಪಾಯಿಗಳ ನಡುವೆ ಖರ್ಚಾಗುತ್ತದೆ.

Richest Countries: ವಿಶ್ವದ ದುಬಾರಿ ದೇಶಗಳು ಯಾವುವು ಗೊತ್ತಾ?

ವಾರಣಾಸಿ: ಪ್ರಪಂಚದ ಅತ್ಯಂತ ಜನಪ್ರಿಯ ನಗರವಾದ ವಾರಣಾಸಿ ಪ್ರಪಂಚದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ನೀವು ವಾರಣಾಸಿಯ ಘಾಟ್‌ನಲ್ಲಿ ಆರತಿಯನ್ನು ನೋಡಬಹುದು ಮತ್ತು ಕಾಶಿ ವಿಶ್ವನಾಥ ಸೇರಿದಂತೆ ಅದರ ಸುತ್ತಲಿನ ಹಲವಾರು ದೇವಾಲಯಗಳಿಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ - ವಾರಣಾಸಿಯನ್ನು ತಲುಪಲು ಅತ್ಯಂತ ಅಗ್ಗದ ಮಾರ್ಗವೆಂದರೆ ರೈಲಿನ ಮೂಲಕವಾಗಿದೆ. ಏಕಮುಖ ಪ್ರಯಾಣದ ಟಿಕೆಟ್ ದರವು ರೂ.420 ರಿಂದ ಪ್ರಾರಂಭವಾಗುತ್ತದೆ. ಇಲ್ಲಿ ಉಳಿದುಕೊಳ್ಳಲು ಹಲವು ಹಾಸ್ಟೆಲ್‌ಗಳಿವೆ, ಅಲ್ಲಿ ಒಂದು ರಾತ್ರಿಯ ತಂಗುವ ದರ 150 ರೂ. ಇಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಒಟ್ಟು ವೆಚ್ಚ, ಆಹಾರವು ಒಬ್ಬರಿಗೆ 200ರಿಂದ 1000 ರೂಪಾಯಿಗಳು ಬರಬಹುದು.

ಕಸೋಲ್: ಕಸೋಲ್ ಟ್ರೆಕ್ಕಿಂಗ್ ಟ್ರೇಲ್‌ಗಳಿಗೆ ಜನಪ್ರಿಯವಾಗಿದೆ. ಕಸೋಲ್‌ನಲ್ಲಿ ಪ್ರಾಕೃತಿಕ ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಬಹುದು. ಮಾರ್ಚ್‌ನಿಂದ ಜೂನ್‌ ವರೆಗೆ, ಪ್ರಪಂಚದಾದ್ಯಂತದ ಜನರು ಆಹ್ಲಾದಕರ ಹವಾಮಾನವನ್ನು ಆನಂದಿಸಲು ಈ ಗಿರಿಧಾಮಕ್ಕೆ ಬರುತ್ತಾರೆ.

ಸಮ್ಮರ್ ಟ್ರಾವೆಲ್ ಗೆ ರೆಡಿಯಾಗಿದ್ರೆ ಈ 6 ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿರಲಿ

ತಲುಪುವುದು ಹೇಗೆ - ದೆಹಲಿಯಿಂದ, ನೀವು ಬಸ್ ಮೂಲಕ ಕುಲು ತಲುಪಬಹುದು ಮತ್ತು ಇಲ್ಲಿಂದ ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ಕಸೋಲ್‌ಗೆ ತಲುಪಬಹುದು. ಬಸ್‌ಗೆ ಒಂದು ಮಾರ್ಗದ ದರ ಸುಮಾರು 800 ರೂ. ಆಗಿದೆ.

ಉದಯಪುರ: ಸರೋವರಗಳು ಮತ್ತು ಅರಮನೆಗಳ ನಗರವಾದ ಉದಯಪುರವು ಭೇಟಿ ನೀಡಲು ಯೋಗ್ಯವಾಗಿದೆ. ಈ ನಗರವು ದೃಷ್ಟಿ ಮತ್ತು ಪ್ರಯಾಣದ ದೃಷ್ಟಿಯಿಂದ ಸ್ವಲ್ಪ ದುಬಾರಿಯಾಗಿದೆ ಎಂದು ತೋರುತ್ತದೆ, ಆದರೆ ನಿಮ್ಮ ಬಜೆಟ್‌ನಲ್ಲಿ ಉಳಿಯುವ ಮೂಲಕ ನೀವು ಇಲ್ಲಿಗೆ ಪ್ರವಾಸವನ್ನು ಯೋಜಿಸಲು ಬಯಸಿದರೆ, ಅದು ಸಹ ಸಾಧ್ಯ.

ತಲುಪುವುದು ಹೇಗೆ - ದೆಹಲಿಯಿಂದ ಉದಯಪುರಕ್ಕೆ ರೈಲು ಪ್ರಯಾಣವು ಪ್ರತಿ ವ್ಯಕ್ತಿಗೆ ಸುಮಾರು ರೂ.400 ರಿಂದ ಪ್ರಾರಂಭವಾಗುತ್ತದೆ. ಇಲ್ಲಿ ಉಳಿದುಕೊಳ್ಳಲು ಹೋಟೆಲ್‌ಗಳನ್ನು ಪರಿಶೀಲಿಸುವ ಬದಲು, ನೀವು ಹಾಸ್ಟೆಲ್‌ಗಳನ್ನು ಹುಡುಕಬಹುದು. ಇಲ್ಲಿ ಒಂದು ದಿನದ ಜೀವನ, ಪ್ರಯಾಣ ಮತ್ತು ಊಟದ ಒಟ್ಟು ವೆಚ್ಚ ಒಬ್ಬ ವ್ಯಕ್ತಿಗೆ 800 ರಿಂದ 3000 ರೂ.

ಋಷಿಕೇಶ: ರಾಫ್ಟಿಂಗ್‌ಗೆ ಜನಪ್ರಿಯವಾಗಿರುವ ರಿಷಿಕೇಶ ಸಾಹಸ ಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ನೀವು ಬಜೆಟ್‌ನಲ್ಲಿ ಈ ಸುಂದರ ನಗರವನ್ನು ಭೇಟಿ ಮಾಡಲು ಬಯಸಿದರೆ, ಅಗ್ಗದ ಪ್ರಯಾಣಕ್ಕಾಗಿ ಬಸ್ ಟಿಕೆಟ್ ಅನ್ನು ಬುಕ್ ಮಾಡಿ.

ತಲುಪುವುದು ಹೇಗೆ - ಇಲ್ಲಿಗೆ ತಲುಪಲು, ನೀವು ಹರಿದ್ವಾರಕ್ಕೆ ಹೋಗಬೇಕು. ಇಲ್ಲಿಂದ ನೀವು ಬಸ್ ಪಡೆಯಬಹುದು ಅಥವಾ ರಿಷಿಕೇಶಕ್ಕೆ ಆಟೋ ಸೌಲಭ್ಯವನ್ನು ಹಂಚಿಕೊಳ್ಳಬಹುದು. ಬಸ್ ಟಿಕೆಟ್ 200 ರೂ.ನಿಂದ 1400 ರೂ.ವರೆಗೆ ಇರುತ್ತದೆ. ಇಲ್ಲಿ ಹೋಟೆಲ್‌ಗಳಲ್ಲಿ ಹಣ ಖರ್ಚು ಮಾಡುವುದಕ್ಕಿಂತ ರಾತ್ರಿಯ ತಂಗಲು ಕೊಠಡಿಯನ್ನು ಬಾಡಿಗೆಗೆ ಪಡೆಯುವುದು ಉತ್ತಮ, ಅಲ್ಲಿ ಬಾಡಿಗೆ ಕೇವಲ 150 ರೂ. ಮಾತ್ರ ಇರುತ್ತದೆ

ಲ್ಯಾನ್ಸ್‌ಡೌನ್: ಭಾರತದ ಅತ್ಯಂತ ಸಂರಕ್ಷಿತ ಗಿರಿಧಾಮಗಳಲ್ಲಿ ಲ್ಯಾನ್ಸ್‌ಡೌನ್ ಒಂದಾಗಿದೆ.

ತಲುಪುವುದು ಹೇಗೆ - ದೆಹಲಿಯಿಂದ 250 ಕಿ.ಮೀ ದೂರದಲ್ಲಿರುವ ಲ್ಯಾನ್ಸ್‌ಡೌನ್ ಅನ್ನು ತಲುಪಲು ಬಸ್‌ನ ಮೂಲಕ ಅತ್ಯಂತ ಅಗ್ಗದ ಆಯ್ಕೆಯಾಗಿದೆ. ಇಲ್ಲಿಂದ ಕೋಟ್‌ದ್ವಾರಕ್ಕೆ ಬಸ್‌ನಲ್ಲಿ ಪ್ರಯಾಣಿಸಿ. ಇದು ಲ್ಯಾನ್ಸ್‌ಡೌನ್‌ನಿಂದ 50 ಕಿಮೀ ದೂರದಲ್ಲಿದೆ. ಇಲ್ಲಿಂದ ಮತ್ತೆ ನೀವು ಸ್ಥಳೀಯ ಬಸ್ ಮೂಲಕ ಲ್ಯಾನ್ಸ್‌ಡೌನ್ ತಲುಪಬಹುದು. ಇಲ್ಲಿ ಉಳಿದುಕೊಳ್ಳಲು, ಪ್ರಯಾಣಿಸಲು ಮತ್ತು ತಿನ್ನಲು ಒಟ್ಟು ವೆಚ್ಚ ಕನಿಷ್ಠ 1500-2500 ರೂ ಆಗುತ್ತದೆ.

click me!