ಮರುಬಳಕೆಯ ಮಹಾನಗರ ಗೋಥನ್‌ಬಗ್‌ರ್‍

By Kannadaprabha News  |  First Published May 1, 2022, 9:18 AM IST

ಈ ನಗರ ಜಗತ್ತಿನ ಎಲ್ಲಾ ನಗರಗಳಿಗೂ ಮಾದರಿ. ಇಲ್ಲಿ ಎಲ್ಲವೂ ಮರುಬಳಕೆಯಾಗುತ್ತದೆ. ಪ್ಲಾಸ್ಟಿಕ್‌ ಇಲ್ಲಿಲ್ಲ, ತರಕಾರಿಗಳನ್ನು ಹೋಟೆಲುಗಳು ಚಾವಣಿಯಲ್ಲೇ ಬೆಳೆದುಕೊಳ್ಳುತ್ತಾರೆ. ವಿದ್ಯುತ್‌ ಗಾಳಿಯಂತ್ರಗಳಿಂದ ಬರುತ್ತದೆ. ಸೈಕಲ್‌ ಮತ್ತು ಎಲೆಕ್ಟ್ರಿಕ್‌ ಬೈಕು ಓಡಾಟಕ್ಕಿದೆ. ಕಸವನ್ನು ಮರುಬಳಕೆ ಮಾಡಲಾಗುತ್ತದೆ. ನಗರವೊಂದು ಹೇಗೆ ತನ್ನನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ಗೋಥನ್‌ಬಗ್‌ರ್‍ ತೋರಿಸಿಕೊಟ್ಟಿದೆ.


- ಡಾ. ಪದ್ಮಿನಿ ನಾಗರಾಜು, ಬೆಂಗಳೂರು

ನಾನಿಂದು ಜಗತ್ತಿನ ಸುಸ್ಥಿರ(ಸಸ್ಟೇನೆಬಲ್‌) ನಗರ ಗೋಥೆನ್‌ಬಗ್‌ರ್‍(ಗೊಟಾಲ್ಯಾಂಡ್‌/ ವೆಸ್ಟ್ರಾ ಯೋಥಾಲ್ಯಾಂಡ್‌)ಗೆ ಕಾಲಿಟ್ಟಾಗ ಮಧ್ಯಾಹ್ನ 2 ಗಂಟೆ. ಭಾರತಕ್ಕೂ ಇಲ್ಲಿಗೂ ಸುಮಾರು 3.30 ಗಂಟೆಯಷ್ಟುವ್ಯತ್ಯಾಸದೊಂದಿಗೆ ಈ ಊರು ಹಿಂದೆ ಇದೆ. ಆದರೆ ಪ್ರಂಪಚದಲ್ಲಿಯೇ 2016ರಿಂದ ಈ ನಗರ ಕಸವನ್ನು ಮರುಬಳಕೆ ಮಾಡುವಲ್ಲಿ ಮುಂದಿದೆ. 2021ರಲ್ಲಿ ನಡೆದ 73 ನಗರಗಳ ಈ ಸ್ಪರ್ಧೆಯಲ್ಲಿ ಪ್ರಪಂಚದ ನೋಡಲೇಬೇಕಾದ ಸಮರ್ಥನೀಯ ಮರುಬಳಕೆಯ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ 97% ಸಾರಿಗೆಯು ನವೀಕರಿಸಬಹುದಾದ ಇಂಧನಗಳ ಮೂಲದಿಂದ ನಡೆಯುತ್ತದೆ.

Tap to resize

Latest Videos

ಇಲ್ಲಿ ಸಾರ್ವಜನಿಕ ಓಡಾಟಕ್ಕೆ ಎಲೆಕ್ಟ್ರಿಕ್‌ ಬಸ್ಸು, ಟ್ರಾಮ್‌, ರೈಲು ಇವೆಲ್ಲವಕ್ಕೂ ನವೀಕರಿಸಬಹುದಾದ ಇಂಧನ ಬಳಸಲಾಗುತ್ತದೆ. ಎಲೆಕ್ಟ್ರಿಕ್‌ ಬೈಕ್‌ ಹಾಗೂ ಸೈಕಲ್‌ಗಳು ಬಾಡಿಗೆಗೂ ಸಿಗುತ್ತವೆ. ಇಲ್ಲಿನ 95% ಹೋಟೆಲ್‌ಗಳು ಪರಿಸರ ಪ್ರಮಾಣೀಕೃತವಾಗಿವೆ. ಇಲ್ಲಿರುವ ಹೋಟೆಲ್‌ಗಳು ಪ್ಲಾಸ್ಟಿಕ್‌ ಕಪ್‌ಗಳು, ಬೌಲ್‌, ತಟ್ಟೆಗಳನ್ನು ಬಳಸುವುದಿಲ್ಲ. ಕೆಲವು ಹೋಟೆಲ್‌ಗಳು ತಮ್ಮ ಹೋಟೆಲ್‌ಗೆ ಬೇಕಾಗುವ ತರಕಾರಿಗಳನ್ನು ಸಾವಯವ ರೀತಿಯಲ್ಲಿ ಛಾವಣಿಯಲ್ಲಿಯೇ ಬೆಳೆದುಕೊಳ್ಳುತ್ತಾರೆ. ಈ ನಗರ ತನ್ನ ವಿದ್ಯುತ್‌ ಅನ್ನು ಗಾಳಿಯಂತ್ರಗಳಿಂದ ಪಡೆಯುತ್ತದೆ. ನಗರವು ಹೊಗೆ ರಹಿತ ತಾಣವಾಗಿದೆ. ಇಲ್ಲಿರುವ ವಿಮಾನ ನಿಲ್ದಾಣ ಅತ್ಯಂತ ಕಡಿಮೆ ಕಾರ್ಬನ್‌ ಹೊರಸೂಸುವ ವಿಮಾನ ನಿಲ್ದಾಣ ಎಂಬುದಾಗಿ ಮಾನ್ಯತೆ ಪಡೆದಿದೆ.

73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಟಿಕೆಟ್ ಇಲ್ಲದೆ ಜನರ ಪ್ರಯಾಣ!

ನಗರ ತನ್ನ ವಾರ್ಷಿಕ ವರದಿಯಲ್ಲಿ ಮುಂದಿನ 2030ನೇ ವರ್ಷದೊಳಗೆ ಈಗ ಬಳಸುತ್ತಿರುವ ಅಲ್ಪ ಕಲ್ಲಿದ್ದಲ್ಲನ್ನೂ ತಾವು ಬಳಸುವುದಿಲ್ಲ ಎಂದು ಘೋಷಿಸಿದ ದೇಶ ಇದಾಗಿದೆ. ಅತಿ ಹೆಚ್ಚು ಮಾಂಸಾಹಾರ ಬಳಸುವ ಈ ದೇಶದಲ್ಲಿ ಇತ್ತೀಚೆಗೆ ವೇಗನ್‌ ಮತ್ತು ಸಸ್ಯಾಹಾರದ ಬಗ್ಗೆ ಅತಿ ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ. ಗೋಥನ್‌ಬಗ್‌ರ್‍ ಸಾಕಷ್ಟುಸಾವಯವ, ವೇಗನ್‌ ಮತ್ತು ಸಸ್ಯಾಹಾರಕ್ಕೆ ಪ್ರಸಿದ್ಧಿಯಾಗಿದೆ. ವಾರಕ್ಕೊಮ್ಮೆಯಾದರೂ ವೇಗನ್‌ ಆಹಾರ ಸೇವಿಸುವಂತೆ ಈ ನಗರದ ಜನತೆಯನ್ನು ಸರ್ಕಾರ ಪೋ›ತ್ಸಾಹಿಸುತ್ತಿದೆ. ತಾವು ವೇಗನ್‌ ಎಂದು ಹೇಳಿಕೊಳ್ಳುವುದು ಇಲ್ಲಿನವರಿಗೆ ಹೆಮ್ಮೆಯ ವಿಚಾರವಾಗಿದೆ.

ಇಲ್ಲಿನ ಜನರು ಜ್ಯೂಸ್‌, ಬೀರ್‌ ಮುಂತಾದ ಪಾನೀಯ ಕುಡಿಯಲು ಟಿನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅವುಗಳನ್ನು ಮಾರಾಟ ಮಾಡುವಾಗಲೇ ಗ್ರಾಹಕರು ಕೆಲವು ಸ್ವೀಡಿಶ್‌ ಕ್ರೌನ್‌ (ಇಲ್ಲಿನ ಹಣ)ಗಳನ್ನು ಹೆಚ್ಚಾಗಿ ಸಂದಾಯ ಮಾಡಬೇಕು. ಖಾಲಿಯಾದ ಟಿನ್‌ಗಳನ್ನು ವಾಪಸ್ಸು ನೀಡಿದರೆ ಆ ಹೆಚ್ಚಾಗಿ ನೀಡಿದ ಹಣವನ್ನು ವಾಪಸ್ಸು ನೀಡಲಾಗುತ್ತದೆ. ನಗರದ ಎಲ್ಲಾ ಮಾಲ್‌ಗಳಲ್ಲಿಯೂ ಅಂತಹ ಮಿಷಿನುಗಳನ್ನು ಅಳವಡಿಸಲಾಗಿದೆ.

ಪ್ರತಿಯೊಂದು ಬಡಾವಣೆ/ಅಪಾರ್ಚ್‌ಮೆಂಟ್‌ಗಳ ಬಳಿ ಕಸ ವಿಲೇವಾರಿ ಮಾಡುವ ಚಿಕ್ಕ ಚಿಕ್ಕ ಪ್ಲಾಂಟ್‌ಗಳಿವೆ. ಪ್ರತಿಯೊಂದು ಮನೆಯೂ ಬೇರೆ ಬೇರೆ ರೀತಿಯಲ್ಲಿ ಕಸವನ್ನು ವಿಲೇವಾರಿಯನ್ನು ಮಾಡಲೇಬೇಕು. ಅಡಿಗೆಮನೆ ತ್ಯಾಜ್ಯ, ಸುಡಲ್ಪಡುವ ಕಸ, ಪೇಪರ್‌ಗಳು, ಪ್ಲಾಸ್ಟಿಕ್‌, ದಿನಪತ್ರಿಕೆ, ಲೋಹ, ಬಣ್ಣಸಹಿತ ಗಾಜು, ರಹಿತ ಗಾಜು, ಬ್ಯಾಟರಿಗಳು ಇವುಗಳನ್ನು ಮನೆಯಲ್ಲಿಯೇ ಬೇರ್ಪಡಿಸಬೇಕು. ನಂತರ ಸ್ಥಳೀಯ ತ್ಯಾಜ್ಯ ಮರುಬಳಕೆ ಮಾಡುವ ದೊಡ್ಡ ದೊಡ್ಡ ಕಂಟೇನರ್‌ಗಳಿಗೆ ವರ್ಗಾಯಿಸಬೇಕು. ಇಲ್ಲವಾದಲ್ಲಿ ದಂಡ ಕಟ್ಟಲು ತಯಾರಿರಬೇಕು. ನಾಗರಿಕ ಪ್ರಜ್ಞೆ ಇರುವ ಇಲ್ಲಿನ ಜನರು ಇಂತಹ ತಪ್ಪುಗಳನ್ನು ಮಾಡುವುದಿಲ್ಲ.

Travel Tips: ಸಾಮಾಜಿಕ ಜಾಲತಾಣದಲ್ಲಿ ಬೋರ್ಡಿಂಗ್ ಪಾಸ್ ಪೋಸ್ಟ್ ಮಾಡುವ ಮುನ್ನ ಎಚ್ಚರ

ಇಲ್ಲಿನ ಬೃಹತ್‌ ಮರುಬಳಕೆಯ ತ್ಯಾಜ್ಯ ಪ್ಲಾಂಟ್‌ಗಳಿಗೆ ಹೋಗಿ ಮನೆಯಲ್ಲಿ ಬಳಕೆಯಾಗದ ಬೃಹತ್‌ ಗೃಹೋಪಯೋಗಿ ಪೀಠೋಪಕರಣಗಳನ್ನು, ಕಟ್ಟಡ ತ್ಯಾಜ್ಯ, ರಾಸಾಯನಿಕ ಹಾಗೂ ಎಲೆಕ್ಟ್ರಾನಿಕ ವಸ್ತುಗಳ ತ್ಯಾಜ್ಯಗಳನ್ನು ಹಣ ನೀಡಿ ಮರುಬಳಕೆಗೆ ನೀಡಲೇಬೇಕು. ಗೋಥೆನ್‌ಬಗ್‌ರ್‍ನಲ್ಲಿರುವ ಅಲೆಲಿಕನ್‌ ಮರುಬಳಕೆಯ ಪಾರ್ಕ್ 2003ರಲ್ಲಿ ಪ್ರಾರಂಭವಾಯಿತು. ಇದನ್ನು 2020ರಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ತೆರೆಯಲಾಯಿತು. ಇದು ಇಲ್ಲಿನ ನಾಗರೀಕರಿಗೆ ಮರುಬಳಕೆಯ ಮತ್ತು ಸೆಕೆಂಡ್‌ ಹ್ಯಾಂಡ್‌ ಸ್ಟೋರ್‌ಗಳ ಅನನ್ಯ ಪರಿಕಲ್ಪನೆಯನ್ನು ಒಂದೇ ಸೂರಿನಡಿ ತೆರೆಯಲಾಗಿದೆ. ಪ್ರಸ್ತುತ ಗೋಥನ್‌ಬಗ್‌ರ್‍ ಪುರಸಭೆಯಿಂದ ‘ಗೋಟೆಬೋಗ್‌್ರ್ಸ ಕಿಕ್ರ್ಲಿಗಾ ಸ್ಟ್ಯಾಡ್‌ಮಿಷನ್‌’ (ದತ್ತಿ ಸಂಸ್ಥೆ) ಸಹಕಾರದೊಂದಿಗೆ ಇದು ಕಾರ್ಯನಿರ್ವಹಿಸುತ್ತಿದೆ. ಇದರ ಮುಖ್ಯ ಗುರಿಯೆಂದರೆ ಪರಿಸರ ನಿರ್ಮಾಣಕ್ಕೆ ನಾಗರಿಕರನ್ನು ಹೊಂದಿಕೊಳ್ಳಲು ಮತ್ತು ಈ ನಗರವನ್ನು ಪರಿಸರ ಸ್ನೇಹಿಯಾದ ನಗರವಾಗಿ ಬಲಪಡಿಸಲು ಸಾರ್ವಜನಿಕವಾಗಿ ಪ್ರರೇಪಿಸುವುದು ಮುಖ್ಯ ಉದ್ದೇಶವಾಗಿದೆ. ಇಲ್ಲಿನ ಅನೇಕ ಅಂಗಡಿಗಳು ಮರುಬಳಕೆ ಮಾಡಲ್ಪಟ್ಟಬಟ್ಟೆಗಳು, ಆಟದ ಸಾಮಾನುಗಳು, ಪೀಠೋಪಕರಣಗಳನ್ನು ಮಾರಾಟ ಮಾಡುತ್ತವೆ.

ಹಳೆಯ ಕಟ್ಟಡಗಳಿಂದ 80% ಮರುಬಳಕೆಯ ವಸ್ತುಗಳಾದ ಹಳೆಯ ಕಟ್ಟಡಗಳ ಕಾಲಂ, ಇಟ್ಟಿಗೆಗಳು, ಕಿಟಕಿಗಳು, ಕಬ್ಬಿಣ ಉಪಕರಣಗಳು ಹಾಗೂ ಕೊಳಾಯಿಗಳನ್ನು ವಿಂಗಡಿಸಲಾಗುತ್ತದೆ. ಇವುಗಳಲ್ಲಿ ಮತ್ತೆ ಮರುಬಳಕೆ ಮಾಡುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸೆಕೆಂಡ್‌ಹ್ಯಾಂಡ್‌ ಸರಕುಗಳು ಮತ್ತು ವಸ್ತಗಳಾಗಿ ವಿಂಗಡಿಸಿ ಮಾರಾಟ ಮಾಡುತ್ತಾರೆ. ಉಳಿದವನ್ನು ತ್ಯಾಜ್ಯವಾಗಿ ಮರುಬಳಕೆಗೆ ನೀಡಲಾಗುತ್ತದೆ.

ಇಲ್ಲಿನ ಮರುಬಳಕೆಯ ಪಾರ್ಕ್ ಮೂರು ವಿಶೇಷವಾದ ಅಂಗಡಿಗಳನ್ನು ತೆರೆದಿದೆ. ಮೊದಲನೆಯದು ಕಟ್ಟಡ ಸಾಮಗ್ರಿಗಳ ಮರುಬಳಕೆ, ಎರಡನೆಯದು ಗೃಹಬಳಕೆಯ ಪೀಠೋಪಕರಣ, ಪಾತ್ರೆ, ಬಟ್ಟೆಗಳು ಹಾಗೂ ಇನ್ನಿತರ ವಸ್ತುಗಳನ್ನು ಸೆಕೆಂಡ್‌ಹ್ಯಾಂಡ್‌ ಅಂಗಡಿಯಲ್ಲಿ ದೇಣಿಗೆ ನೀಡಬಹುದು. ಮೂರನೆಯದು ಉತ್ತಮ ಸ್ಥಿತಿಯಲ್ಲದ ವಸ್ತುಗಳನ್ನು ಮರುಬಳಕೆ ಕೇಂದ್ರಕ್ಕೆ ತ್ಯಾಜ್ಯವಾಗಿ ನೀಡಲಾಗುತ್ತದೆ. ಇಲ್ಲಿ ತ್ಯಾಜ್ಯವನ್ನು ವಿಂಗಡಿಸಲಾಗುತ್ತದೆ. 20,000 ಚದರ ಮೀಟರ್‌ ಕಟ್ಟಡದಲ್ಲಿ ವ್ಯಾಪಿಸಿರುವ ಈ ಪ್ಲಾಂಟ್‌ ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಉದ್ಯೋಗಗಳನ್ನು ಸೃಷ್ಟಿಸಿ ತರಬೇತಿ ನೀಡುತ್ತಿದೆ. ಪ್ರತಿದಿನ ಈ ಮರುಬಳಕೆಯ ಪಾರ್ಕಿಗೆ 300-400 ಜನ ಸಂದರ್ಶಕರು ಭೇಟಿ ನೀಡುತ್ತಾರೆ. ಇದರ ವಾರ್ಷಿಕ ವಹಿವಾಟು 1.2 ಮಿಲಿಯನ್‌ ಯುರೋಗಳು. ಇದು ನಗರದ 70% ಉತ್ಪನ್ನಗಳನ್ನು ಮರುಬಳಕೆ ಮಾಡುತ್ತದೆ ಮತ್ತು ವಾರ್ಷಿಕ 2,200 ಟನ್‌ ತ್ಯಾಜ್ಯವನ್ನು ಇಲ್ಲಿನ ಐದು ಮರುಬಳಕೆ ಕೇಂದ್ರಗಳು ತಡೆಯುತ್ತದೆ.

Travel Tips : ಪಾಸ್ಪೋರ್ಟ್ ಚಿಂತೆ ಬಿಡಿ.. ಈ ಸುಂದರ ದ್ವೀಪಕ್ಕೊಮ್ಮೆ ಭೇಟಿ ನೀಡಿ

ಇಲ್ಲಿನ ಮನೆಗಳಲ್ಲಿ ಬಳಸುವ ಹೀಟರ್‌ ನಗರದ ಎಲ್ಲಾ ಸುಡುವ ತ್ಯಾಜ್ಯದ ಪ್ಲಾಂಟನಿಂದ ಹೊರಸೂಸುವ ಬಿಸಿ ನೀರಿನ ಹಬೆಯಿಂದ ಬರುತ್ತದೆ. ಮನೆಯನ್ನು ಬೆಚ್ಚಗೆ ಇಡಲು ಇದೇ ಹಬೆಯು ಬಳಕೆಯಾಗುತ್ತದೆ.

ಸ್ವೀಡನ್ನಿನ ಎರಡನೆಯ ದೊಡ್ಡ ನಗರವಾಗಿರುವ ಗೋಥನ್‌ಬಗ್‌ರ್‍, ವೋಲ್ವೊ ಕಂಪನಿಯಂತಹ ಬೃಹತ್‌ ಕಂಪನಿಗಳನ್ನು ಹೊಂದಿರುವ ಕೈಗಾರಿಕಾ ನಗರವಾಗಿದ್ದರೂ ಅತ್ಯಂತ ಸ್ವಚ್ಛ ನಗರವಾಗಿದೆ. ಅಂತರರಾಷ್ಟ್ರೀಯ ಬಂದರು ಇದ್ದರೂ ಪರಿಸರಕ್ಕೆ ಸಂಬಂಧಿಸಿದಂತೆ ನಗರದ ಈ ಬಂದರು ಪರಿಸರ ಸ್ನೇಹಿ ಪ್ರಶಸ್ತಿ ಪಡೆದಿದೆ.

2021ರಲ್ಲಿ ತನ್ನ 400ನೇ ವರ್ಷಾಚರಣೆಯನ್ನು ಆಚರಿಸಿಕೊಂಡ ಈ ನಗರ ತನ್ನ ನಗರದ ಯುವಕರು ಹಾಗೂ ನಾಗರಿಕರಿಗಾಗಿ ನಗರ ತ್ಯಾಜ್ಯವನ್ನು ನಿರ್ವಹಿಸುವ, ಮರುಬಳಕೆ ಮಾಡುವ ಬಗ್ಗೆ ಕಾರ್ಯಾಗಾರಗಳನ್ನು ಮತ್ತು ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ಇನ್ನಷ್ಟುಜಾಗರೂಕರಾಗುವಂತೆ ಪ್ರೋತ್ಸಾಹಿಸಿದೆ.

ಬೆಂಗಳೂರು ನಗರದ ನಾಗರೀಕರಾದ ನಾವು, ಘನತ್ಯಾಜ್ಯ ನಿರ್ವಹಣೆಯ ಅಧಿಕಾರಿಗಳು, ಸರ್ಕಾರ ಈ ನಗರದಿಂದ ಒಂದಷ್ಟುಪಾಠವನ್ನು ಕಲಿಯಬೇಕಾಗಿದೆ. ನಗರದ ಕಸವನ್ನು ಲಾರಿಗಳ ಮೂಲಕ ಮತ್ತೊಂದು ಹಳ್ಳಿಯ ಬಾಗಿಲಿಗೆ ಹಾಕಿ ಕೈತೊಳೆದುಕೊಳ್ಳುತ್ತಿರುವ ಸರ್ಕಾರದ ಹೊಣೆಗೇಡಿತನಕ್ಕೆ ಈ ನಗರ ಮಾಡುತ್ತಿರುವ ತ್ಯಾಜ್ಯದ ನಿರ್ವಹಣೆ ಮಾದರಿಯಾಗಬೇಕಿದೆ. ಮುಂದಿನ ಜನಾಂಗಕ್ಕೆ ಶುದ್ಧ ಗಾಳಿ, ನೀರು, ಆಹಾರ ನೀಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರದಾಗಲೇಬೇಕಿದೆ.

click me!