ವಿಪರೀತ ಬಿಸಿಲ ಧಗೆಯಿಂದ ಗಿರಿ ಪ್ರದೇಶದಿಂದ ದೂರ ಉಳಿದ ಪ್ರವಾಸಿಗರು
ಬೇಸಿಗೆ ರಜೆ ಹಾಗೂ ಕಂಟಿನ್ಯೂ ನಾಲ್ಕೈದು ದಿನ ರಜೆ ಇದ್ದರೂ ಕೂಡ ಪ್ರವಾಸಿಗರಿಲ್ಲದೆ ತಾಣಗಳು ಬಿಕೋ
ಮಲೆನಾಡಿನಲ್ಲಿ ಬಿಸಿಲ ಧಗೆ ಪ್ರವಾಸಿ ತಾಣಗಳಿಂದ ದೂರ ಉಳಿದ ಪ್ರವಾಸಿಗರು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಮೇ.02) : ಪ್ರವಾಸಿಗರ ಪಾಲಿನ ಸ್ವರ್ಗ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ. ಇಲ್ಲಿನ ಹತ್ತಾರು ಪ್ರವಾಸಿತಾಣಗಳು ಪ್ರವಾಸಿಗರ ಹಾಟ್ ಸ್ಪಾಟ್ .ಬದಲಾದ ವಾತಾವರಣದಿಂದ ಪ್ರವಾಸಿಗರ ನೆಚ್ಚಿನ ತಾಣಗಳು ಪ್ರವಾಸಿಗರು ಇಲ್ಲದೇ ಬಿಕೋ ಎನ್ನುತ್ತಿದೆ. ಸಾಲು ಸಾಲು ರಜೆ ಒಂದಡೆ, ಮತ್ತೊಂದಡೆ ಬೇಸಿಗೆ ರಜೆ ಇದ್ದರೂ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷಿಣಿಸಿದೆ.
ಮಲೆನಾಡಿನಲ್ಲಿ ಬಿಸಿಲ ಧಗೆ ಪ್ರವಾಸಿ ತಾಣಗಳಿಂದ ದೂರ ಉಳಿದ ಪ್ರವಾಸಿಗರು
ಶನಿವಾರ-ಭಾನುವಾರ ವೀಕ್ಎಂಡ್, ಸೋಮವಾರ ರಂಜಾನ್ ರಜೆ, ಮಂಗಳವಾರ ಬಸವಜಯಂತಿ ರಜೆ. ಜೊತೆಗೆ ಬೇಸಿಗೆ ರಜೆ. ಈ ವೇಳೆಗಾಗಲಿ ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಜೇನು ನೋಣಗಳಂತೆ ಮುತ್ತಿಕೊಂಡಿರುತ್ತಿದ್ದರು. ಆದರೆ, ಈ ಬಾರಿ ವೀಕ್ ಎಂಡ್ ಹಾಗೂ ಬೇಸಿಗೆ ರಜೆ ಇದ್ದರೂ ಕಾಫಿನಾಡ ಪ್ರವಾಸಿ ತಾಣಗಳಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಬೇಸಿಗೆ ರಜೆ ಹಾಗೂ ವೀಕ್ ಎಂಡ್ನಲ್ಲೂ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಕಂಟಿನ್ಯೂ ನಾಲ್ಕು ದಿನ ರಜೆ ಇದ್ದರೂ ಕೂಡ ಮುಳ್ಳಯ್ಯನಗಿರಿಯಲ್ಲಿ ಅಬ್ಬಾಬ್ಬ ಅಂತ ತಲೆಗಳನ್ನ ಲೆಕ್ಕ ಹಾಕಿದರೂ ಕೂಡ ಹೆಚ್ಚಿಂದರೆ 150-200 ಜನರಷ್ಟೆ ಪ್ರವಾಸಿಗರು ಇದ್ದಾರೆ. ಜಿಲ್ಲೆಯ ಕೆಲ ಭಾಗ ಪ್ರಸ್ತುತ ಶೇಕಡ 34ಕ್ಕೂ ಅಧಿಕ ಬಿಸಿಲಿನ ತಾಪಮಾನವಿದೆ. ಜಿಲೆಯಲ್ಲಿ ಈ ವೇಳೆ ಸಾಮಾನ್ಯವಾಗಿ ಸರಾಸರಿ 28 ರಿಂದ 31ರವರೆಗೆ ಬಿಸಿಲಿನ ತಾಪಮಾನವಿರುತ್ತಿತ್ತು. ಆದರೆ, ಈ ವರ್ಷ ಭಾರೀ ಬಿಸಲು ಸದಾ ತಂಪಾಗಿ ಇರುತ್ತಿದ್ದ ಜನರನ್ನ ಕಂಗೆಡಿಸಿದೆ.
ಬಿಸಿಲ ಝಳಕ್ಕೆ ತತ್ತರಿಸಿದ ಚಿಕ್ಕಮಗಳೂರು: ತಂಪು ಪಾನೀಯಗಳ ಮೊರೆ ಹೋದ ಜನ..!
ಬಿಸಿಲಿನ ತಾಪಕ್ಕೆ ಜನರು ಹೈರಾಣು
ಜಿಲ್ಲೆಯ ಭಾರೀ ಬಿಸಿಲಿನಿಂದ ಜನ ಹೈರಾಣಾಗಿದ್ದಾರೆ. ಮುಳ್ಳಯ್ಯನಗಿರಿಯ ಗುಡ್ಡದ ತುದಿಯಲ್ಲೂ ಕೂಡ ಬಿಸಿಲ ಧಗೆ ನೆತ್ತಿಯನ್ನ ಸುಡುತ್ತಿದೆ. ಗಿರಿ ಭಾಗದಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದರೂ ಬಿಸಿಲ ಬೇಗೆ ಪ್ರವಾಸಿಗರನ್ನ ಹೈರಾಣಾಗಿಸಿದೆ. ಬರೀ ಬೆಟ್ಟ-ಗುಡ್ಡಗಳಿಂದಲೇ ಕೂಡಿದ ಮುಳ್ಳಯ್ಯನಗಿರಿ ಭಾಗದಲ್ಲಿ ಬಿಸಿಲಿನಿಂದ ಸುಧಾರಿಸಿಕೊಳ್ಳಲು ನಿಲ್ಲೋದಕ್ಕೂ ನೆರಳಿನ ಸೌಲಭ್ಯವಿಲ್ಲ ಹಾಗಾಗಿ, ಇತಿಹಾಸದಲ್ಲಿ ಮೊದಲ ಬಾರಿಗೆ ಬೇಸಿಗೆ ರಜೆ ಹಾಗೂ ಕಂಟಿನ್ಯೂ ನಾಲ್ಕೈದು ದಿನ ರಜೆ ಇದ್ದರೂ ಕೂಡ ಪ್ರವಾಸಿಗರ ಹಾಟ್ಸ್ಟಾಪ್ ಕಾಫಿನಾಡಲ್ಲಿ ಪ್ರವಾಸಿಗರಲ್ಲಿದೆ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ.
ಉರಿಬಿಸಿಲಿಗೆ ಜನ ಮನೆಯಿಂದ ಹೊರಬರೋದಕ್ಕೂ ಮೀನಾಮೇಷ
ಗಿರಿ ಭಾಗದಲ್ಲಿ ಸಂಜೆ ವೇಳೆ ಆಗಾಗ್ಗೆ ಮಳೆ ಸುರಿಯುತ್ತಿದ್ದರೂ ಹಗಲಿನ ಬಿಸಿಲಿನ ಝಳಕ್ಕೆ ಪ್ರವಾಸಿಗರು ಹೈರಾಣಾಗಿದ್ದಾರೆ. ಈ ವೇಳೆಗೆ ಗುಡ್ಡದ ತುಂಬೆಲ್ಲಾ ಜೇಣು ನೋಣಗಳಂತೆ ತುಂಬಿಕೊಂಡಿರುತ್ತಿದ್ದ ಪ್ರವಾಸಿಗರು ಈ ಬಾರಿಯ ಬಿಸಿಲಿನಿಂದ ಕಾಫಿನಾಡಿನತ್ತ ಮುಖ ಮಾಡಿಲ್ಲ. ಇನ್ನು ಜಿಲ್ಲೆಯ ಮಲೆನಾಡು ಭಾಗದ ಪರಿಸ್ಥಿತಿ ಜಿಲ್ಲಾ ಕೇಂದ್ರಕ್ಕಿಂತ ಭಿನ್ನವಾಗಿಲ್ಲ. ಆಗಾಗ್ಗೆ ಮಳೆ ಸುರಿದರೂ ಕೂಡ ಜಿಲ್ಲೆಯ ಅಪ್ಪಟ ಮಲೆನಾಡು ಭಾಗ ಎನಿಸಿಕೊಂಡ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಕಳಸ ತಾಲೂಕಿನಲ್ಲಿ ಉರಿಬಿಸಿಲಿಗೆ ಜನ ಮನೆಯಿಂದ ಹೊರಬರೋದಕ್ಕೂ ಮೀನಾಮೇಷ ಎಣಿಸುವಂತಾಗಿದೆ. ಜಿಲ್ಲೆಯಲ್ಲಿ ಈ ವೇಳೆ ಇಷ್ಟು ಕಡಿಮೆ ಸಂಖ್ಯೆಯ ಪ್ರವಾಸಿಗರಿರುವುದು ಇದೇ ಮೊದಲು ಎನ್ನುವವುದು ಇಲ್ಲಿನ ಸ್ಥಳೀಯರಾದ ಗುರವೇಶ್ ಅವರ ಮಾತಾಗಿದೆ.