ವಾಹನ ಚಲಾಯಿಸುವಾಗ ಮೈ ಎಲ್ಲ ಕಣ್ಣಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯವಾಗುವ ಸಾಧ್ಯತೆಯಿರುತ್ತದೆ. ಅದ್ರಲ್ಲೂ ಭಾರತದ ಕೆಲ ರಸ್ತೆಗಳಲ್ಲಿ ನೀವು ವಾಹನ ಚಲಾಯಿಸ್ತಿರಿ ಅಂದ್ರೆ ಟೆನ್ಷನ್ ಗೆ ಬೆವರು ಬರೋದು ಗ್ಯಾರಂಟಿ
ರಸ್ತೆ ಅಪಘಾತದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ಗಂಟೆಗೆ ಭಾರತದಲ್ಲಿ ಕನಿಷ್ಟ 54 ರಸ್ತೆ ಅಪಘಾತಗಳು ಸಂಭವಿಸುತ್ತವೆ. ನಾಲ್ಕು ನಿಮಿಷಕ್ಕೆ ಒಬ್ಬರಂತೆ ರಸ್ತೆ ಅಪಘಾತದಲ್ಲಿ ಜನರು ಸಾಯ್ತಾರೆ. 2018ರಲ್ಲಿ ಭಾರತದಲ್ಲಿ 1.51 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವಿಶ್ವದ ಒಟ್ಟು ರಸ್ತೆ ಅಪಘಾತದ ಸಾವಿನಲ್ಲಿ ಭಾರತದ ಕೊಡುಗೆ ಶೇಕಡಾ 11ರಷ್ಟಿದೆ. ವಿಚಿತ್ರ ಅಂದ್ರೆ ವಿಶ್ವದ ಒಟ್ಟು ವಾಹನಗಳಲ್ಲಿ ಭಾರತದ ಕೊಡುಗೆ ಶೇಕಡಾ ಒಂದರಷ್ಟು ಮಾತ್ರ. 2020ರಲ್ಲಿ ಭಾರತದಲ್ಲಿ 13 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರೆ 50 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಭಾರತ (India) ದಲ್ಲಿ ರಸ್ತೆ (Road) ಅಪಘಾತ ತಡೆಯಲು ಸರ್ಕಾರ (Govt) ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ರೆ ವಾಹನ ಸವಾರರು ಕೂಡ ಹೆಚ್ಚು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳು ಹೆಚ್ಚಿವೆ. ಅಲ್ಲಿಯೇ ವಾಹನ (Vehicle) ಸಂಚಾರಕ್ಕೆ ಅನುಕೂಲ ಮಾಡಿಕೊಡಲು ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಗುಡ್ಡಗಳ ಮಧ್ಯೆ ದೊಡ್ಡ ದೊಡ್ಡ ತಿರುವುಗಳು ಸಾಮಾನ್ಯವಾಗಿ ಇರುತ್ತವೆ. ಅಂಥ ಪ್ರದೇಶದಲ್ಲಿ ಎಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸಿದ್ರೂ ಅಪಘಾತ (Accident) ವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಭಾರತದಲ್ಲಿ ಕೆಲ ಅಪಾಯಕಾರಿ ರಸ್ತೆಗಳಿವೆ. ಪ್ರವಾಸದ ಪ್ಲಾನ್ ನಲ್ಲಿ ನೀವಿದ್ದರೆ ಆ ರಸ್ತೆಗಳ ಬಗ್ಗೆ ತಿಳಿದಿರಿ.
ಅಪಾಯಕಾರಿ ರಸ್ತೆಗಳು :
ಲೇಹಾ (Leha) –ಮನಾಲಿ ಹೈವೆ : ವಾಹನ ಸವಾರರಿಗೆ ಲೇಹಾ – ಮನಾಲಿ ಹೈವೆಯಲ್ಲಿ ಸಂಚಾರ ಮಾಡೋದು ಸುಲಭವಲ್ಲ. ಅತ್ಯಂತ ಖತರ್ನಾಕ್ ರಸ್ತೆಗಳಲ್ಲಿ ಇದು ಸೇರಿದೆ. ಸುಮಾರು 476 ಕಿಲೋಮೀಟರ್ ರಸ್ತೆ ಇದಾಗಿದ್ದು, ರಸ್ತೆಯಲ್ಲಿ ಹಿಮ (snow), ನೀರಿನ ಸಣ್ಣ ಹಳ್ಳಗಳು, ಕುಸಿದ ರಸ್ತೆ ನಿಮಗೆ ಕಾಣಸಿಗುತ್ತವೆ. ಈ ರಸ್ತೆಯಲ್ಲಿ ಪ್ರಯಾಣ ಬೆಳೆಸುವುದು ಮನಸ್ಸಿಗೆ ಮುದ ನೀಡುತ್ತದೆ. ಆದ್ರೆ ಅಷ್ಟೇ ಅಪಾಯಕಾರಿ ಪ್ರಯಾಣ ಇದಾಗಿರುತ್ತದೆ.
ಸಿಕ್ಕಿಂ (Sikkim) ನ ಜಿಗ್ ಜಾಗ್ ರಸ್ತೆ : ಮೂರು ಹಂತದ ಜಿಗ್ ಜಾಗ್ ರಸ್ತೆ ಸಿಕ್ಕಿಂನಲ್ಲಿದೆ. ಈ ರಸ್ತೆಯು ತುಂಬಾ ವಕ್ರವಾಗಿದೆ. ಈ ರಸ್ತೆಯಲ್ಲಿ ಪ್ರಯಾಣ ಬೆಳೆಸುವಾಗ ಕೂಡ ನೀವು ಅನೇಕ ಸುಂದರ ಮತ್ತು ಹೃದಯಸ್ಪರ್ಶಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಆದ್ರೆ ರಸ್ತೆ ಅಪಾಯಕಾರಿಯಾಗಿರುತ್ತದೆ.
SOLO TRAVEL DESTINATIONS: ಭಾರತದ ಈ ಸ್ಥಳಗಳು ಹುಡುಗೀರಿಗೆ ಸೋಲೋ ಟ್ರಿಪ್ ಮಾಡೋಕೆ ಬೆಸ್ಟ್
ಚಾಂಗ್ ಲಾ ಪಾಸ್ : ವರ್ಷವಿಡೀ ಹಿಮದಿಂದ ಆವೃತವಾಗಿರುವ ಚಾಂಗ್ ಲಾ ಪಾಸ್, ಲಡಾಖ್ ಅನ್ನು ಟಿಬೆಟ್‌ಗೆ ಸಂಪರ್ಕಿಸುವ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪ್ರಯಾಣ ಬೆಳೆಸುವ ವೇಳೆ ಬೆಚ್ಚಗಿನ ಬಟ್ಟೆ ಮತ್ತು ವೈದ್ಯಕೀಯ ಕಿಟ್ ನಿಮ್ಮ ಬಳಿ ಇರ್ಲೇಬೇಕಾಗುತ್ತದೆ. ಈ ರಸ್ತೆಯು ತುಂಬಾ ಎತ್ತರದಲ್ಲಿದೆ. ಚಾಲಕ ಸ್ವಲ್ಪ ಮೈಮರೆತ್ರೂ ಅಪಾಯ ನಿಶ್ಚಿತ.
ಮಾಥೆರಾನ್ - ನರೆಲ್ ರಸ್ತೆ : ಮಾಥೆರಾನ್‌ನಿಂದ ನರೆಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮಾಥೆರಾನ್-ನರೆಲ್ ರಸ್ತೆ ಎಂದು ಕರೆಯಲಾಗುತ್ತದೆ. ಇಲ್ಲಿನ ಸೌಂದರ್ಯ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಆದರೆ ಈ ರಸ್ತೆಯು ತುಂಬಾ ಕಿರಿದಾಗಿದೆ. ಇದರಿಂದಾಗಿ ಇಲ್ಲಿ ವಾಹನದ ವೇಗವನ್ನು ಹೆಚ್ಚಿಸಲು ಸಾಧ್ಯವಿಲ್ಲ.
Tribal Tradition : ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡೊದಂತೆ ಈ ಮಹಿಳೆಯರು!
ನಾಥು ಲಾ ಪಾಸ್ : ನಾಥು ಲಾ ಪಾಸ್ ಭಾರತದ ಸಿಕ್ಕಿಂ ಮತ್ತು ದಕ್ಷಿಣ ಟಿಬೆಟ್ ಅನ್ನು ಸಂಪರ್ಕಿಸುತ್ತದೆ. ಇದು ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಎಂದು ಪರಿಗಣಿಸಲಾಗಿದೆ. ಇಲ್ಲಿ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ.
ಬರೀ ಇಷ್ಟೇ ಅಲ್ಲ ಭಾರತದಲ್ಲಿ ಸಾಕಷ್ಟು ಅಪಾಯಕಾರಿ ರಸ್ತೆಗಳಿವೆ. ಬಹುತೇಕ ರಸ್ತೆಗಳು ವಕ್ರವಕ್ರವಾಗಿರುವ ಕಾರಣ ಅಪಘಾತಗಳು ಹೆಚ್ಚು.