
ಹೈಟೆಕ್ ಮಾಲ್, ಮಲ್ಟಿಫ್ಲೆಕ್ಟ್, ಪಬ್, ಬಾರ್ ರೆಸ್ಟೋರೆಂಟ್ ಮೆಟ್ರೋ, ಅಗಲವಾದ ರಸ್ತೆಗಳು ಹೀಗೆ ಏನಿದೆ ಏನಿಲ್ಲ ಎಂಬಂತೆ ಎಲ್ಲವನ್ನೂ ತನ್ನ ಒಡಲೊಳಗೆ ತುಂಬಿಸಿಕೊಂಡಿರುವ ನಗರಗಳು (City) ಎಂಥವರನ್ನೂ ಬೆರಗು ಮೂಡಿಸುತ್ತವೆ. ಇರುವೆಯಂತೆ ಸಾಲಿನಂತೆ ಕಾಣೋ ಸಾಗರ, ಬೆಂಕಿಪೊಟ್ಟಣದಂತೆ ಹರಿದಾಡೋ ವಾಹನಗಳು (Vehicles) ಎಲ್ಲವೂ ಬೆರಗು ಮೂಡಿಸುವಂತದ್ದೇ. ಮಹಾನಗರ ಅದೆಷ್ಟೋ ಜನರನ್ನು ತನ್ನ ಮಡಿಲೊಳಗಿಟ್ಟು ಪೊರೆಯುತ್ತದೆ, ಕಾಯುತ್ತದೆ. ನಗರಕ್ಕೆ ಹಳ್ಳಿ ಹಳ್ಳಿಯಿಂದ ಜನರು ಬಂದು ಸೇರುತ್ತಿದ್ದಂತೆ ಅಭಿವೃದ್ಧಿಯ ಹೆಸರಲ್ಲಿ ಹಲವಾರು ಕೆಲಸಗಳು ನಡೆಯುತ್ತಲೇ ಇರುತ್ತವೆ. ಹೀಗೆಯೇ ಹಿಂದೊಂದು ದಿನ ಹಳ್ಳಿ (Village)ಯಾಗಿದ್ದ ಸ್ಥಳ ಸಂಪೂರ್ಣ ಕಾಂಕ್ರೀಟ್ ಕಾಡಾಗಿ ಬದಲಾಗುತ್ತದೆ.
ಮೆಟ್ರೋ ಪಾಲಿಟನ್ ಸಿಟಿಯೆಂದು ಕರೆಸಿಕೊಳ್ಳುವ ಯಾವ ಸಿಟಿಯೂ ಆರಂಭದಿಂದಲೂ ನಗರವಾಗಿರಲ್ಲಿಲ್ಲ. ಹಳ್ಳಿಯಾಗಿದ್ದ ಪ್ರದೇಶಗಳು ಅಭಿವೃದ್ಧಿ ಹೆಸರಲ್ಲಿ ನಶಿಸಿ, ಅಳಿದು ಹೋಗಿ ನಗರಗಳಾಗಿ ಮಾರ್ಪಟ್ಟಿವೆ. ಅದರಲ್ಲಿ ಬೆಂಗಳೂರು ಸಹ ಸೇರಿದೆ. ಬೆಂಗಳೂರಿನ ರಸ್ತೆಯೊಂದು ವರ್ಷಗಳ ಹಿಂದೆ ಹೀಗಿತ್ತಂತೆ. ಆದರೆ ಈಗ ಹಾಗಿಲ್ಲ. ನಿಮಗೇನಾದ್ರೂ ಆ ರಸ್ತೆ (Road)ಯನ್ನು ಗುರುತಿಸೋಕಾಗುತ್ತಾ ನೋಡಿ.
ನೀವು ಪ್ರಕೃತಿ ಪ್ರೇಮಿಗಳಾ? ಬೆಂಗಳೂರಿನ ಈ ತಾಣಗಳಿಗೆ ಮಿಸ್ ಮಾಡ್ದೇ ಭೇಟಿ ನೀಡಿ
ಬೆಂಗಳೂರು ಸಹ ಹೀಗೆಯೇ ಇತ್ತು. ಸಂಪೂರ್ಣ ಹಳ್ಳಿಯಾಗಿತ್ತು. ಗಿಡ-ಮರಗಳಿಂದ ಹಚ್ಚ ಹಸಿರಾಗಿತ್ತು. ತಂಪಾದ ಗಾಳಿ ಬೀಸುತ್ತಿತ್ತು. ಗಿಡ ಮರಗಳು ಜನರಿಗೆ ನೆರಳು ಕೊಡುತ್ತಿತ್ತು. ಆದರೆ ನಗರದಲ್ಲಿ ಜನರ ಸಂಖ್ಯೆ ಹೆಚ್ಚಾದೊಡನೆ ಸಾರಿಗೆ ಸೌಕರ್ಯವನ್ನು ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿತ್ತು. ರಸ್ತೆಗಳನ್ನು ಅಗಲಗೊಳಿಸಲಾಯಿತು. ರಸ್ತೆಯಲ್ಲೂ ವಾಹನಗಳ ಸಂಖ್ಯೆ ಹೆಚ್ಚಾದಂತೆ ಟ್ರಾಫಿಕ್ ನಿಯಂತ್ರಿಸಲು ಮೆಟ್ರೋ ಬಂತು. ಮೆಟ್ರೋ ಮಾರ್ಗವೆಂದಾಗ ಹೆಚ್ಚು ಸ್ಥಳಾವಕಾಶ ಬೇಕಾಯಿತು. ಗಿಡ-ಮರಗಳನ್ನು ಕಡಿಯಲಾಯಿತು. ಹಾಗೆಯೇ ಹಂತ ಹಂತವಾಗಿ ಹಳ್ಳಿ ನಗರವಾಗಿ ಬೆಳೆಯುತ್ತಲೇ ಹೋಯಿತು.
ಟ್ವಿಟರ್‌ನಲ್ಲಿ ಟ್ರೆಂಡ್ ಆಗ್ತಿದೆ ಬೆಂಗಳೂರಿನ ರಸ್ತೆಯ ಹಳೆಯ ಫೋಟೋ
ಸದ್ಯ ಹೀಗೆಯೇ ಅಭಿವೃದ್ಧಿಯಿಂದ ನಶಿಸಿ ಹೋದ ಬೆಂಗಳೂರಿನ ರಸ್ತೆಯೊಂದರ ಹಳೆಯ ಫೋಟೋ ಟ್ವಿಟರ್‌ನಲ್ಲಿ ವೈರಲ್ ಆಗ್ತಿದೆ. ದಟ್ಟವಾದ ಮರಗಳಿಂದ ತುಂಬಿಕೊಂಡಿರುವ ಈ ರಸ್ತೆ ನೋಡಲು ಕಣ್ಣಿಗೆ ಹಾಯೆನಿಸುತ್ತದೆ. ಹಸಿರು ಹಸಿರಾದ ದೃಶ್ಯ ಕಣ್ಣಿಗೆ ಮುದ ನೀಡುತ್ತದೆ. 'ಇದು ಬೆಂಗಳೂರಿನ ಹಳೆಯ ಫೋಟೋ ಆಗಿದೆ. ಒಂದಾನೊಂದು ಕಾಲದಲ್ಲಿ (Once upon a time) ಬೆಂಗಳೂರಿನ ರಸ್ತೆಯೊಂದು ಹೀಗಿತ್ತು. ಯಾವುದೆಂದು ಹೇಳಬಲ್ಲಿರಾ' ಎಂದು ಅರುಣ್ ಅಡಿಗಾ ಎಂಬವರು ಟ್ವಿಟರ್‌ನಲ್ಲಿ ಪೋಟೋ ಪೋಸ್ಟ್ ಮಾಡಿ ಪ್ರಶ್ನಿಸಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಚುಮು ಚುಮು ಚಳಿಗೆ ಬಿಸಿ ಬಿಸಿ ಟೀ, ಬೆಂಗಳೂರಲ್ಲಿ ಬೆಸ್ಟ್ ಚಹಾ ಎಲ್ಲಿ ಸಿಗುತ್ತೆ ?
ಜಯನಗರ ಸೌತ್ ಎಂಡ್ ಸರ್ಕಲ್‌ನ ಫೋಟೋ
ಟ್ವಿಟರ್‌ನಲ್ಲಿ ವೈರಲ್ ಆಗ್ತಿರೋ ಫೋಟೋಗೆ ಹಲವರು ಕಮೆಂಟಿಸಿದ್ದಾರೆ. ಹೆಚ್ಚಿನವರು ಇದು ಜಯನಗರದ ಸೌತ್ ಎಂಡ್ ಸರ್ಕಲ್ ಎಂದಿದ್ದಾರೆ. ಇನ್ನು ಕೆಲವರು ಓಲ್ಡ್ ಏರ್‌ಪೋರ್ಟ್ ರೋಡ್, ನಂದಾ ಟಾಕೀಸ್ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ ಟು ಕಸ್ತೂರ್ ಬಾ ರೋಡ್ ಎಂದೆಲ್ಲಾ ಹೇಳಿದ್ದಾರೆ. ಆದರೆ ಇದು ಜಯನಗರದ ಸೌತ್ ಎಂಡ್ ಸರ್ಕಲ್‌ನ ಫೋಟೋ ಆಗಿದ್ದು, ಮೆಟ್ರೋ ಕಾಮಗಾರಿ ಸಮಯದಲ್ಲಿ ಮರಗಳನ್ನು ಕಡಿಯಲಾಗಿದೆ ಎಂದು ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.