ಜಲಪಾತ ವೀಕ್ಷಣೆಗೆ ತಮಿಳುನಾಡು, ಕರ್ನಾಟಕ ನಿಷೇಧ ತೆರವು, ಹೊಗೇನಕಲ್‌ಗೆ ಪ್ರವಾಸಿಗರ ದಂಡು!

By Kannadaprabha News  |  First Published Aug 12, 2024, 2:38 PM IST

ಹನೂರು ತಾಲೂಕಿನ ಗಡಿ ಗ್ರಾಮದಲ್ಲಿರುವ ಪ್ರೇಕ್ಷಣೀಯ ಸ್ಥಳ ಹೊಗೇನಕಲ್ ಜಲಪಾತದ ಸೊಬಗನ್ನು ಸವಿಯಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರ ದಂಡು ಆಗಮಿಸಿದೆ.


ಚಾಮರಾಜನಗರ (ಆ.12): ಹನೂರು ತಾಲೂಕಿನ ಗಡಿ ಗ್ರಾಮದಲ್ಲಿರುವ ಪ್ರೇಕ್ಷಣೀಯ ಸ್ಥಳ ಹೊಗೇನಕಲ್ ಜಲಪಾತದ ಸೊಬಗನ್ನು ಸವಿಯಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರ ದಂಡು ಆಗಮಿಸಿದೆ.

ಕರ್ನಾಟಕ ತಮಿಳುನಾಡು ಗಡಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ, ಹೊಗೇನಕಲ್ ಜಲಪಾತ ವೀಕ್ಷಣೆಗೆ ಕರ್ನಾಟಕ ಹಾಗೂ ತಮಿಳುನಾಡಿನ ಭಾಗದಲ್ಲೂ ಸಹ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ವೀಕೆಂಡ್ ಭಾನುವಾರ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸಿ ಹೊಗೆನಕಲ್ ಜಲಪಾತವನ್ನು ನೋಡಿ ಬೋಟಿಂಗ್‌ನಲ್ಲಿ ತೆರಳಿ ಸಂತೋಷ ಪಟ್ಟರು.

ಕೆಆರ್‌ಎಸ್‌ ತುಂಬಿ ನೂರಾರು ಟಿಎಂಸಿ ನೀರು ಹರಿದು ಹೋದರೂ ಮಂಡ್ಯದ ಕೆರೆಗ ...

Latest Videos

undefined

ಜಲಪಾತದ ಕಲ್ಲು ಬಂಡೆಗಳಿಗೆ ಅಪ್ಪಳಿಸುವ ಕಾವೇರಿ ನದಿಯ ನೀರು ಹೊಗೆಯಂತೆ ಹರಿಯುತ್ತಿರುವ ಜಲಪಾತದ ವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಂಡರು.

ಕರ್ನಾಟಕದ ನಯಾಗರ ಜಲಪಾತ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತಕ್ಕೆ ರಾಜ್ಯದ ನಾನಾ ಭಾಗಗಳಿಂದ ವಿವಿಧ ವಾಹನಗಳಲ್ಲಿ ಬಂದಂತಹ ಪ್ರವಾಸಿಗರು ಹರಿಯುತ್ತಿರುವ ಕಾವೇರಿ ನದಿ ಕಲ್ಲು ಬಂಡೆಗಳ ನಡುವೆ ಜಲಧಾರೆಯಾಗಿ ಧುಮುಕಿ ಹರಿಯುತ್ತಿರುವ ಜಲಪಾತದ ಸೊಬಗನ್ನು ನೋಡಿದರು.

ಬೆಂಗಳೂರಿಗೆ ಎಲ್ಲೋ ಅಲರ್ಟ್, ಒಂದು ವಾರ ಭಾರೀ ಮಳೆಯ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಬೋಟಿಂಗ್ ಅವಕಾಶ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರು ಹೊರಹರಿವು ಹೆಚ್ಚಾಗಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಭಾಗದ ಜಲಪಾತದ ವೀಕ್ಷಣೆಗೆ ನಿಷೇಧ ವಾಪಸ್ ಪಡೆಯಲಾಗಿತ್ತು. ಈಗ ನಿಷೇಧ ತೆರವುಗೊಳಿಸಿರುವುದರಿಂದ ವೀಕೆಂಡ್ ಭಾನುವಾರ ತಮಿಳುನಾಡು ಹಾಗೂ ಕರ್ನಾಟಕ ಭಾಗದಲ್ಲಿ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ದಂಡ ಹರಿದು ಬರುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿಪಾತ್ರದಲ್ಲಿ ಬರುವ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಿಗೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿತ್ತು. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಾದ ವೆಸ್ಲಿ ಸೇತುವೆ, ಶಿವನಸಮುದ್ರ, ಭರಚುಕ್ಕಿ ಹಾಗೂ ಹೊಗೇನಕಲ್ ಜಲಪಾತ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಅವಘಡಗಳು ಸಂಭವಿಸುವ ನಿಟ್ಟಿನಲ್ಲಿ ಅ.2ರವರೆಗೆ ಸಾರ್ವಜನಿಕರು ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಳ್ಳದಂತೆ ತಡೆ ನೀಡಲಾಗಿತ್ತು.

click me!