ಟ್ರೆಕಿಂಗ್ ಮಾಡೋರ ಗಮನಕ್ಕೆ : ದೇಶದ ಅತೀ ಎತ್ತರದ ಬೆಟ್ಟ ಹತ್ತೋ ಪ್ಲಾನ್ ಹೀಗ್ ಮಾಡಿ

By Bhavani Bhat  |  First Published Aug 8, 2024, 1:42 PM IST

ಬೆಟ್ಟ ಅಂದರೆ ಏರ್ತೀವಿ ಅನ್ನೋರಿಗೆ ದೇಶದ ದೈತ್ಯ ಪರ್ವತಗಳ ಡೀಟೇಲ್ ಇಲ್ಲಿದೆ. ಇವು ಸದಾ ಚಾರಣಿಗರಿಗೆ ಸವಾಲು ಹಾಕುತ್ತಲೇ, ಕೈಬೀಸಿ ಕರೆಯುತ್ತಲೇ ಇರುತ್ತವೆ. ನಿಮ್ಮಲ್ಲಿ ದಮ್ಮಿದ್ದರೆ ಇವುಗಳನ್ನು ಏರುವ ಪ್ಲಾನ್ ಮಾಡಬಹುದು.


ಈಗ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರಿಗೂ ಟ್ರೆಕಿಂಗ್ ಕ್ರೇಜ್. ಬೆಟ್ಟ ತಮ್ಮನ್ನ ಕೈಬೀಸಿ ಕರೀತಿದೆ ಅನ್ನೋ ಫೀಲಲ್ಲೇ ಈ ಟ್ರೆಕ್ಕರ್ಸ್‌ ಮುಳುಗ್ತಾ ತೇಲ್ತಾ ಇರ್ತಾರೆ. ಅಂಥಾ ಟ್ರೆಕಿಂಗ್ ಪ್ರಿಯರಿಗೆ ಇಷ್ಟವಾಗೋ ದೇಶದ ದೈತ್ಯ ಬೆಟ್ಟಗಳ ಡೀಟೇಲ್ ಇಲ್ಲಿದೆ. ಇಲ್ಲಿ ಬೆಟ್ಟಗಳ ವಿವರ ಕೊಟ್ಟ ಮಾತ್ರಕ್ಕೆ ಇವೆಲ್ಲ ಏರುವ ಬೆಟ್ಟಗಳೇ ಅನ್ನೋ ಹಾಗಿಲ್ಲ. ಕೆಲವೊಂದು ದೈತ್ಯ ಬೆಟ್ಟಗಳು ತಮ್ಮ ನಿಗೂಢತೆಯಿಂದಲೂ ಗಮನ ಸೆಳೆದಿದ್ದು, ಈವರೆಗೆ ಅವುಗಳನ್ನು ಏರುವ ಸಾಹಸ ಮಾಡಿದವರ್ಯಾರೂ ಯಶಸ್ವಿ ಆಗಿಲ್ಲ. ಕೆಲವೊಬ್ಬರು ಯಶಸ್ವಿ ಆದರೂ ಆ ಬೆಟ್ಟಗಳು ಬಹಳ ದುರ್ಗಮವಾಗಿರೋ ಕಾರಣ ತೀರಾ ಬೆರಳೆಣಿಕೆಯ ಮಂದಿಗಷ್ಟೇ ಪರ್ವತಾರೋಹಣ ಸಾಧ್ಯವಾಗಿದೆ. 

ಈ ವಿಷಯಕ್ಕೆ ಬರೋಣ. ದೇಶದ ದೈತ್ಯ ಪರ್ವತಗಳನ್ನು ನೋಡಿಕೊಂಡು ಬರೋಣ. 

Tap to resize

Latest Videos

ಕಾಂಚನಜುಂಗಾ: ಈ ಕಾಂಚನ ಜುಂಗಾ ನಮದೇ ಅನ್ನೋ ಹಾಡು ಕೇಳಿದವರಿಗೆ ಈ ಬೆಟ್ಟದ ಹೆಸರು ಮರ್ತು ಹೋಗಲ್ಲ. ಇದು ನಮ್ಮ ದೇಶದ ಅತೀ ಎತ್ತರದ ಬೆಟ್ಟ. ಇಲ್ಲಿಗೆ ವಿಶ್ವದ ಅತೀ ಎತ್ತರದ ಪರ್ವತ ಎವರೆಸ್ಟ್ ಕೇವಲ ೭೮ ಮೈಲಿ ಅಷ್ಟೇ ದೂರ. ಇದು 28,169 ಅಡಿ ಎತ್ತರ ಹೊಂದಿದೆ. ವಿಶ್ವದ ಮೂರನೇ ಅತಿ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಚನಜುಂಗಾ, ಪೂರ್ವ ಹಿಮಾಲಯದಲ್ಲಿ ಸಿಕ್ಕಿಂ ರಾಜ್ಯ, ಈಶಾನ್ಯ ಭಾರತ ಮತ್ತು ಪೂರ್ವ ನೇಪಾಳದ ನಡುವಿನ ಗಡಿಯಲ್ಲಿದೆ. ಈ ಪರ್ವತವು ಗ್ರೇಟ್ ಹಿಮಾಲಯ ಶ್ರೇಣಿಯ ಭಾಗವಾಗಿದೆ.
 
ನಂದಾದೇವಿ ಶಿಖರ: ನಂದಾದೇವಿ ಭಾರತದ ಎರಡನೆಯ ಅತಿ ಎತ್ತರದ ಪರ್ವತಶಿಖರ. ವಿಶ್ವದ 23ನೇ ಅತಿ ಎತ್ತರದ ಶಿಖರವಾಗಿದೆ. ನಂದಾದೇವಿ ಎರಡು ಶಿಖರಗಳುಳ್ಳ ಪರ್ವತವಾಗಿದ್ದು, ಇದು ಉತ್ತರಾಖಂಡ ರಾಜ್ಯದ ಗಢ್ವಾಲ್ ಹಿಮಾಲಯದಲ್ಲಿ ರಿಷಿಗಂಗಾ ಮತ್ತು ಗೋರಿಗಂಗಾ ಕಣಿವೆಗಳ ಮಧ್ಯೆ ಇದೆ.

ಕಾಮೆಟ್ ಶಿಖರ: ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಗರ್ವಾಲ್ ಪ್ರದೇಶದ ಜಸ್ಕರ್ ಪರ್ವತ ಶ್ರೇಣಿಯಲ್ಲಿ ಅತಿ ಎತ್ತರದ ಶಿಖರವಾಗಿದೆ. ಮೂರು ಇತರ ಎತ್ತರದ ಶಿಖರಗಳಿಂದ ಸುತ್ತುವರೆದಿರುವ ಕಾಮೆಟ್ ಟಿಬೆಟ್ ಗಡಿಯ ಸಮೀಪದಲ್ಲಿದೆ. ಪ್ರವೇಶ ಮತ್ತು ಟ್ರೆಕ್ಕಿಂಗ್‍ನಂತಹ ಚಟುವಟಿಕೆಗೆ ಸವಾಲಾಗಿದೆ,

ಸಾಲ್ಟೊರೊ ಕಾಂಗ್ರಿ ಶಿಖರ:  ಇದು ಭಾರತದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಕಾರಕೋರಂನ ಉಪ-ಶ್ರೀಣಿಯಾಗಿರುವ ಸಾಲ್ಟೊರೊ ಜಮ್ಮು-ಕಾಶ್ಮೀರದಲ್ಲಿದೆ. ಸಿಯಾಚಿನ್ ಗ್ಲೇಸಿಯರ್ ನಂತಹ ವಿಶ್ವದ ಅತಿ ಉದ್ದದ ಹಿಮನದಿಗಳನ್ನು ಒಳಗೊಂಡಿದೆ. ವಿಶ್ವದಲ್ಲಿ ಇದು 31ನೇ ಅತಿ ಎತ್ತರದ ಸ್ವತಂತ್ರ ಪರ್ವತ ಶಿಖರ ಎಂಬ ಹೆಗ್ಗಳಿಕೆ ಪಡೆದಿದೆ.

ಸಾಸರ್ ಕಾಂಗ್ರಿ ಶಿಖರ: ಇದು ಭಾರತದ ಐದನೇ ಅತಿ ಎತ್ತರದ ಶಿಖರವಾಗಿದ್ದು, ವಿಶ್ವದ 35ನೇ ಅತಿ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಮ್ಮು-ಕಾಶ್ಮೀರದಲ್ಲಿರುವ ಈ ಶಿಖರ, ಮುಖ್ಯ ಕಾರಕೋರಂನ ಶ್ರೇಣಿಯ ಆಗ್ನೇಯಕ್ಕೆ ನೆಲೆಗೊಂಡಿದೆ.

ಬೇರೆ ಜನಾಂಗದ ಗಂಡಸ್ರ ಕಣ್ಣು ಬೀಳದಿರಲು ಈ ಬುಡಕಟ್ಟು ಮಹಿಳೆ ಕುತ್ತಿಗೆಗೆ ಬಿತ್ತು ರಿಂಗ್

ಮಮೊಸ್ಟಾಂಗ್ ಕಾಂಗ್ರಿ ಶಿಖರ: ಇದು ಭಾರತದ ಆರನೇ ಅತಿ ಎತ್ತರದ ಶಿಖರವಾಗಿರುವ ಮಮೊಸ್ಟಾಂಗ್ ಕಾಂಗ್ರಿ ಶಿಖರವು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿದೆ. ವಿಶ್ವದ 48ನೇ ಅತಿ ಎತ್ತರದ ಶಿಖರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಗ್ರೇಟ್ ಕಾರಕೋರಂ ಶ್ರೇಣಿಯ ರಿಮೋ ಮುಸ್ತಾಗ್ ಉಪ ಶ್ರೇಣಿಯಲ್ಲಿ ಇದು ಅತಿ ಎತ್ತರದ ಶಿಖರವಾಗಿದೆ.

ರಿಮೋ ಪೀಕ್: ಜಮ್ಮು-ಕಾಶ್ಮೀರದಲ್ಲಿರುವ ಈ ಶಿಖರ ಗ್ರೇಟ್ ಕಾರಕೋರಂ ಶ್ರೇಣಿಯ ಒಂದು ಭಾಗವಾಗಿದೆ. ರಿಮೋ ಪರ್ವತ ಸರಣಿಯು ನಾಲ್ಕು ಶಿಖರಗಳನ್ನು ಒಳಗೊಂಡಿದೆ. ಸಿಯಾಚಿನ್ ಹಿಮನದಿಯ ಭಾಗವಾಗಿರುವ ರಿಮೋ, 7385 ಮೀಟರ್ (24,229 ಅಡಿ) ಎತ್ತರದಲ್ಲಿದೆ.

ಇದು ಸುಸೈಡ್ ಫಾರೆಸ್ಟ್, ಒಮ್ಮೆ ಒಳ ಹೋದರೆ ಮರಳಿ ಬಂದ ಇತಿಹಾಸವೇ ಇಲ್ಲ
 

click me!