ವಿಶ್ವ ಪ್ರಸಿದ್ಧ ಮಧುಗಿರಿ ಏಕಶಿಲಾ ಬೆಟ್ಟ ಪ್ರವಾಸಿಗರ ಮೆಚ್ಚುಗೆಯ ಚಾರಣ ತಾಣ, ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿರುವ ಕೇಬಲ್ ಕಾರ್ ಅಳವಡಿಸಲು ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿದೆ.
ತುಮಕೂರು (ಆ.9): ವಿಶ್ವ ಪ್ರಸಿದ್ಧ ಮಧುಗಿರಿ ಏಕಶಿಲಾ ಬೆಟ್ಟ ಪ್ರವಾಸಿಗರ ಮೆಚ್ಚುಗೆಯ ಚಾರಣ ತಾಣ, ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿರುವ ಕೇಬಲ್ ಕಾರ್ ಅಳವಡಿಸಲು ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿದ್ದು 2025ರ ಜುಲೈ ವೇಳೆಗೆ ಪ್ರವಾಸಿಗರಿಗೆ ಮಧುಗಿರಿ ಬೆಟ್ಟಕ್ಕೆ ಕೇಬಲ್ ಕಾರ್ ಸೌಲಭ್ಯ ಅಳವಡಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು.
ಬುಧವಾರ ಮಧುಗಿರಿ ತಾಲೂಕಿ ಬಿಜವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಆಶ್ರಯದಲ್ಲಿ ನಡೆದ ನೂತನ ಗೋದಾಮು ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೇಬಲ್ ಕಾರ್ ಅಳವಡಿಸುವ ಯೋಜನೆಯನ್ನು ಆದಷ್ಟು ಬೇಗ ಮುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿ ಕೊಡುವಂತೆ ಸಿಎಂ ಸೂಚಿಸಿದ್ದು, ಅದನ್ನು ಕಾರ್ಯಗತಗೊಳಿಸಲು ಸಂಬಧಪಟ್ಟ ಇಲಾಖೆಗಳು ಮುಂದಾಗಿರುವ ಪರಿಣಾಮ ಅತಿ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಿ 2025ರ ಜುಲೈ ವೇಳೆಗೆ ಕಾಮಗಾರಿ ಪೂರ್ಣ ಗೊಳಿಸುವ ತಯಾರಿ ನಡೆದಿದೆ ಎಂದರು.
ರಾಜ್ಯದ ರೈತರಿಗೆ , ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ ಸಚಿವರು, ಕ್ಷೇತ್ರದಲ್ಲಿ ಪಹಣಿ ಹೊಂದಿರುವ ಎಲ್ಲ ರೈತರಿಗೂ ಜಾತಿ ಪಕ್ಷ ಬೇಧ ಮಾಡದೆ ಸಾಲ ನೀಡಿದ್ದು ರಾಜ್ಯ ಸಹಕಾರಿ ಸಂಘಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಕ್ರಮ ಕೈಗೊಂಡಿರುವುದು ಕ್ರಾಂತಿ ಕಾರಕ ನಿರ್ಣಯ. ಇದರಿಂದ ಅವಕಾಶ ವಂಚಿತರಿಗೆ ಅನುಕೂಲವಾಗಲಿದೆ. ಎತ್ತಿನ ಹೊಳೆ ಯೋಜನೆಯಡಿ 1 ವರ್ಷದಲ್ಲಿ ಎಲ್ಲ ಕರೆಗಳಿಗೆ ನೀರು ಹರಿಸಲಾಗುವುದು.
ಪ್ರಮೋದ್ ಮುತಾಲಿಕ್ ಹೂಡಿದ್ದ ಮಾನಹಾನಿ ದಾವೆ, ಬಿಜೆಪಿ ಸುನೀಲ್ ವಿರುದ್ಧದ ವಾರಂಟ್‌ಗೆ ಹೈಕೋರ್ಟ್ ತಡೆ
ಇದೇ ಸಂದರ್ಭದಲ್ಲಿ ರಾಸುಗಳ 82 ರೈತರಿಗೆ 42.45 ಲಕ್ಷ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಬಾರ್ಡ್ ಅಧಿಕಾರಿ ಕೀರ್ತಿಪ್ರಭ, ಕೆಎಂಎಫ್, ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ಪುರಸಭೆ ಸದಸ್ಯ ಲಾಲಪೇಟೆ ಮಂಜುನಾಥ್ , ಆಡಳಿತಾಧಿಕಾರಿ ಜಿ.ಉಮೇಶ್, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷ ಬಿ.ಸಿ.ಮಂಜುನಾಥ್, ವಿಎಸ್‌ಎಸ್‌ಎನ್ ಅಧ್ಯಕ್ಷೆ ಸಿದ್ದಗಂಗಮ್ಮ ಅಜ್ಜಣ್ಣ, ಗ್ರಾಪಂ ಅಧ್ಯಕ್ಷೆ ಮಂಜುಳಾ, ತುಮುಲ್ ಮುಖ್ಯಸ್ಥ ರಂಜಿತ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಮಕೃಷ್ಣ , ಪ್ರದೀಪ್ ಹಾಗೂ ಸಂಘದ ನಿರ್ದೇಶಕರು.ರೈತರು ಇದ್ದರು.