Viral Video: ಕವಿತೆಯಂತೆ ವಿಮಾನದ ಘೋಷಣೆ ಮಾಡಿ ಪ್ರಯಾಣಿಕರ ಮನಗೆದ್ದ ಪೈಲೆಟ್ !

By Vinutha Perla  |  First Published Dec 19, 2022, 3:41 PM IST

ರಸ್ತೆ ಪ್ರಯಾಣ, ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಆರಾಮವಾಗಿ ಪ್ರಯಾಣ ಮಾಡಬಹುದು. ಆದ್ರೆ ವಿಮಾನ ಪ್ರಯಾಣದಲ್ಲಿ ಇದು ಸಾಧ್ಯವಾಗುವುದಿಲ್ಲ. ಶಿಸ್ತುಬದ್ಧವಾಗಿ ಕುಳಿತು ಅನೌನ್ಸ್‌ಮೆಂಟ್ ಮಾಡುತ್ತಾರೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ದೆಹಲಿಯಿಂದ ಶ್ರೀನಗರ ತೆರಳೋ ವಿಮಾನದಲ್ಲಿ ಕಾವ್ಯದ ರೂಪದಲ್ಲಿ ಫ್ಲೈಟ್‌ನಲ್ಲಿ ಅನೌನ್ಸ್ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಕಡಿಮೆ ಸಮಯದಲ್ಲಿ ಹೆಚ್ಚು ದೂರವನ್ನು ತಲುಪಬಹುದು ಅನ್ನೋ ಕಾರಣಕ್ಕೆ ಹೆಚ್ಚಿನವರು ವಿಮಾನ (Flight) ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ಹೆಚ್ಚಿನವರು ರಸ್ತೆ, ರೈಲು ಪ್ರಯಾಣವನ್ನೇ ಇಷ್ಟಪಡುತ್ತಾರೆ.. ಈ ಪಯಣದಲ್ಲಿ (Travel) ಪ್ರಕೃತಿಯ ಸೌಂದಯವನ್ನು ಸವಿಯುತ್ತಾ, ತಂಪಾಗಿ ಹಾಯಾಗಿರಬಹುದು ಅನ್ನೋದು ಹೆಚ್ಚಿನವರ ಉದ್ದೇಶವಾಗಿದೆ. ಆದರೆ ವಿಮಾನ ಯಾನ ಹೆಚ್ಚಿನವರ ಪಾಲಿಗೆ ಮೆಕ್ಯಾನಿಕಲ್ ಅನಿಸಿಬಿಡುತ್ತದೆ. ವಿಮಾನ ಪ್ರಯಾಣ ಯಾವಾಗಲೂ ಹೆಚ್ಚು ಸ್ಟ್ರಿಕ್ಟ್ ಆಗಿರುವ ಕಾರಣ ಹೆಚ್ಚಿನವರ ಪಾಲಿಗೆ ಬೋರಿಂಗ್ ಆಗಿರುತ್ತದೆ. ಸ್ಟ್ರಿಕ್ಟ್‌ ಎಂಟ್ರಿ, ಅಧಿಕಾರಿಗಳ ಮಾತುಕತೆ, ಪೈಲೆಟ್‌ಗಳ ಅನೌನ್ಸ್‌ಮೆಂಟ್ ಬೋರಿಂಗ್ ಹೊಡೆಸಿಬಿಡುತ್ತದೆ. 

ವಿಮಾನ ಪ್ರಯಾಣ ಅಂದ್ರೆ ಸಾಮಾನ್ಯವಾಗಿ ಈ ಕಾರಣಕ್ಕಾಗಿ ಹೆಚ್ಚಿನವರಿಗೆ ನೀರಸ (Boring) ಅನಿಸಿಬಿಡುತ್ತದೆ. ಆದರೆ ಸ್ಪೈಸ್ ಜೆಟ್‌ ಇದೆಲ್ಲಕ್ಕಿಂತ ವಿಭಿನ್ನವಾಗಿ ಕಾವ್ಯಾತ್ಕಕವಾಗಿ ಫ್ಲೈಟ್‌ನ ಘೋಷಣೆ (Announcement) ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ದೆಹಲಿಯಿಂದ ಶ್ರೀನಗರದ ವಿಮಾನದಲ್ಲಿ ಪ್ರಯಾಣಿಕರಿಗೆ ಸ್ಪೈಸ್‌ಜೆಟ್ ಪೈಲಟ್ ಉಲ್ಲಾಸದ (Happiness) ಕಾವ್ಯಾತ್ಮಕ ಘೋಷಣೆಯನ್ನು ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

Tap to resize

Latest Videos

ಗರ್ಭಿಣಿ ಎಂಬ ಅರಿವಿಲ್ಲದೇ ವಿಮಾನದಲ್ಲಿ ಪ್ರಯಾಣ: ಫ್ಲೈಟ್ ಟಾಯ್ಲೆಟ್‌ನಲ್ಲಿ ಮಗುವಿನ ಜನನ

'ಉತ್ತಮ ಪೈಲಟ್ ನಿಮ್ಮ ವಿಮಾನ ಪ್ರಯಾಣದಲ್ಲಿ ಭಾರಿ ವ್ಯತ್ಯಾಸವನ್ನು (Difference) ಮಾಡಬಹುದು ಮತ್ತು ನಮ್ಮ ಬಳಿ ಅದಕ್ಕೆ ಪುರಾವೆ ಇದೆ' ಎಂದು ಪ್ರಯಾಣಿಕರು (Passengers) ಹೇಳಿಕೊಂಡಿದ್ದಾರೆ. ವೈರಲ್ ಪೋಸ್ಟ್ ಸ್ಪೈಸ್‌ಜೆಟ್‌ನ ಗಮನವನ್ನು ಸೆಳೆಯಿತು ಮತ್ತು ವಿಮಾನಯಾನ ಸಂಸ್ಥೆಗಳು ಇದಕ್ಕೆ ಪ್ರತಿಕ್ರಿಯಿಸಿವೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಈಪ್ಸಿತಾ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದಾಗ ಪೈಲಟ್ ಪ್ರಯಾಣಿಕರಿಗೆ ತಮಾಷೆಯ ಪ್ರಕಟಣೆಯನ್ನು ಘೋಷಿಸಿದ್ದಾರೆ. ಕ್ಯಾಪ್ಟನ್ ಎಲ್ಲಾ ಪ್ರಮುಖ ಮಾಹಿತಿ ಮತ್ತು ಸೂಚನೆಗಳನ್ನು ಪ್ರಾಸಬದ್ಧವಾಗಿ, ಕಾವ್ಯಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಪೈಲಟ್‌ನ ಕವನಕ್ಕೆ ಪ್ರಯಾಣಿಕರು ಹಿನ್ನಲೆಯಲ್ಲಿ ನಗುವುದನ್ನು ಕೇಳಬಹುದು. ಒಟ್ಟಿನಲ್ಲಿ ಈ ಪ್ರಯಾಣದಲ್ಲಿ ಯಾವಾಗಲೂ ಗಂಭೀರವಾಗಿ ಕೇಳುವ ಅನೌನ್ಸ್‌ಮೆಂಟ್‌ನ್ನು ಪ್ರಯಾಣಿಕರು ತುಂಬಾ ಎಂಜಾಯ್ ಮಾಡಿದರು ಎಂಬುದಂತೂ ನಿಜ. 

ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:

In a flight from Delhi to Srinagar & omg, the captain killed it!

They started off in English, but I only began recording later.

Idk if this is a new marketing track or it was the captain himself, but this was so entertaining & endearing! pic.twitter.com/s7vPE2MOeP

— Eepsita (@Eepsita)

Viral Video: ಮದುವೆಗೆ ಕುಟುಂಬವನ್ನು ಕರೆದೊಯ್ಯಲು ಸಂಪೂರ್ಣ ವಿಮಾನವನ್ನೇ ಬುಕ್‌ ಮಾಡಿದ ವಧು - ವರ..!

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 58 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಟ್ವಿಟರ್ ಬಳಕೆದಾರರು ಡಿಫರೆಂಟ್‌ ಅನೌನ್ಸ್‌ನ ವೀಡಿಯೋ ನೋಡಿ ಸಂತೋಷಪಟ್ಟರು ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 'ಇದು ತುಂಬಾ ಒಳ್ಳೆಯದು. ದಯವಿಟ್ಟು ಅಂತರಾಷ್ಟ್ರೀಯ ವಿಮಾನಗಳಲ್ಲಿ ಈ ಪೈಲಟ್ ಅನ್ನು ನಾನು ಬಯಸುತ್ತೇನೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಅಲ್ಟಿಮೇಟ್, ಈ ಪೈಲಟ್ ಒಂದೆರಡು ತಿಂಗಳ ಹಿಂದೆ ಇದೇ ರೀತಿಯದ್ದನ್ನು ಮಾಡಿದ್ದು ನನಗೆ ನೆನಪಿದೆ' ಎಂದು ಹೇಳಿದ್ದಾರೆ.

click me!