ಕ್ರಿಸ್‌ಮಸ್, ನ್ಯೂ ಇಯರ್‌ಗೆ ಜೊತೆಗೆ ಸಾಲು ಸಾಲು ರಜೆಗಳು ಬರ್ತಿರೋದ್ರಿಂದ ಎಲ್ಲರೂ ಟ್ರಿಪ್ ಪ್ಲಾನ್ ಮಾಡುತ್ತಿದ್ದಾರೆ. ಫ್ಯಾಮಿಲಿ ಜೊತೆ ಖುಷಿಯಾಗಿ ಎಲ್ಲಿ ಕಳೆಯಬಹುದು ಎಂದು ಯೋಚಿಸುತ್ತಿದ್ದಾರೆ. ನೀವು ಸಹ ಹಾಲಿಡೇಸ್ ಟ್ರಿಪ್ ಪ್ಲಾನ್ ಮಾಡುತ್ತಿದ್ದರೆ, ಈ ಕೆಲವು ಸ್ಥಳಗಳಿಗೆ ಹೋಗಿ ಬಂದು ಎಂಜಾಯ್ ಮಾಡಬಹುದು.
ಬೆಂಗಳೂರು ಸುಂದರವಾಗಿದೆ (Beautiful). ಆದರೂ, ಬಿಡುವಿಲ್ಲದ ಜೀವನ ಮತ್ತು ಟ್ರಾಫಿಕ್‌ನಿಂದ ದೂರವಿರಲು ಜನರು ಬಯಸುತ್ತಾರೆ. ಹೀಗಾಗಿ ವೀಕೆಂಡ್ ಅಥವಾ ರಜಾದಿನಗಳಲ್ಲಿ ಟ್ರಿಪ್ ಪ್ಲಾನ್ ಮಾಡುತ್ತಾರೆ. ಹಾಗೆ ಹೋಗುವಾಗ ಕಡಿಮೆ ಬಜೆಟ್‌ನ ಸುಂದರವಾದ ಪ್ರದೇಶಗಳಿಗೆ (Place) ಭೇಟಿ ನೀಡಲು ಇಷ್ಟಪಡುತ್ತಾರೆ. ಅದರಲ್ಲೂ ಕುಟುಂಬದ (Family) ಜೊತೆ ಹೋಗುವಾ ದೇವಾಲಯಗಳಿಗೆ ಹೋಗಲು ಚೆನ್ನಾಗಿರುತ್ತದೆ. ಬೆಂಗಳೂರಿಗೆ ಸಮೀಪವಿರುವ ಅಂಥಾ ಕೆಲವು ದೇವಾಲಯಗಳ (Temples) ಮಾಹಿತಿ ಇಲ್ಲಿದೆ.
ಹಂಪಿ
ತುಂಗಭದ್ರಾ ನದಿಯ ದಡದಲ್ಲಿರುವ ಪುರಾತನ ಗ್ರಾಮ, ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದು ಪ್ರಾಚೀನ ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಅವಶೇಷಗಳ ನಡುವೆ ನಿಂತಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯು 26 ಕಿಮೀ ಚದರಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಹಂಪಿಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳನ್ನು ಎರಡು ವಿಶಾಲ ಪ್ರದೇಶಗಳಾಗಿ ವಿಂಗಡಿಸಬಹುದು. ಹಂಪಿ ಬಜಾರ್ ಮತ್ತು ರಾಯಲ್ ಸೆಂಟರ್. ನೀವು ಹೇಮಕೂಟ ಬೆಟ್ಟವನ್ನು ಸಹ ಭೇಟಿ ಮಾಡಬಹುದು, ಇದು ಮುಖ್ಯ ಹಂಪಿ ದೇವಾಲಯದ ದಕ್ಷಿಣದಲ್ಲಿದೆ ಮತ್ತು ಆರಂಭಿಕ ಅವಶೇಷಗಳು, ಜೈನ ದೇವಾಲಯಗಳು ಮತ್ತು ಭಗವಾನ್ ನರಸಿಂಹನ ಏಕಶಿಲೆಯ ಶಿಲ್ಪವನ್ನು ಒಳಗೊಂಡಿದೆ. ಬಜಾರ್‌ನಿಂದ ಪೂರ್ವಕ್ಕೆ 2 ಕಿಮೀ ದೂರದಲ್ಲಿರುವ ವಿಟ್ಟಲ ದೇವಾಲಯವು ಮತ್ತೊಂದು ಜನಪ್ರಿಯ ಸ್ಥಳವಾಗಿದೆ.
ಬೆಂಗಳೂರಿನಿಂದ ದೂರ: 340 ಕಿಮೀ
ದೈನಂದಿನ ಬಜೆಟ್: ದಿನಕ್ಕೆ ಸರಾಸರಿ 800-1,000 ರೂ.
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಮಾರ್ಚ್
ವಾರೆ ವ್ಹಾ ಬೆಂಗಳೂರು-ಉಡುಪಿ ರೈಲುಮಾರ್ಗ ಎಷ್ಟು ಚೆಂದ, ಡ್ರೋನ್ ಸೆರೆಹಿಡಿದ ವಿಡಿಯೋ ವೈರಲ್
ಬಾದಾಮಿ
ವಾತಾಪಿ ಎಂದು ಕರೆಯಲ್ಪಡುವ ಬಾದಾಮಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಒಂದು ಐತಿಹಾಸಿಕ ಗ್ರಾಮವಾಗಿದೆ. ಬಾದಾಮಿಯು ಕ್ರಿ.ಶ 540 ರಿಂದ 757ರ ವರೆಗೆ ದಕ್ಷಿಣ ಭಾರತದ ಚಾಲುಕ್ಯರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸ್ಥಳವು ತನ್ನ ಗುಹಾ ದೇವಾಲಯಗಳು, ಉತ್ತಮವಾದ ಶಾಸನಗಳು ಮತ್ತು ಕೆತ್ತನೆಗಳು, ಅದ್ಭುತವಾದ ರಚನಾತ್ಮಕ ಕೋಟೆಗಳಿಗೆ ಹೆಸರುವಾಸಿಯಾಗಿದೆ. ಇದು ಅಗಸ್ತ್ಯ ಸರೋವರದ ಸುತ್ತಲೂ ಕೆಂಪು ಮರಳುಗಲ್ಲಿನ ರಚನೆಯ ಬುಡದಲ್ಲಿದೆ. ಬಾದಾಮಿಯಲ್ಲಿನ ಶಾಸನಗಳು 6ನೇ ಶತಮಾನಕ್ಕೆ ಹಿಂದಿನವು, ಆದರೆ ಸಂಸ್ಕೃತದಲ್ಲಿ ಮುಂಚಿನ ಶಾಸನಗಳು ಸುಮಾರು 542 CEಗೆ ಹಿಂದಿನವು ಆಗಿದೆ. ಇಲ್ಲಿ ನೀವು ಅಗಸ್ತ್ಯ ಸರೋವರ, ಮಲ್ಲಿಕಾರ್ಜುನ ದೇವಾಲಯಗಳು, ಭೂತನಾಥ ದೇವಾಲಯ, ಬಾದಾಮಿ ಕೋಟೆ ಮತ್ತು ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿ.
ಬೆಂಗಳೂರಿನಿಂದ ದೂರ: 457 ಕಿಮೀ
ದೈನಂದಿನ ಬಜೆಟ್: 800-900 ರೂ.
ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್‌ನಿಂದ ಮಾರ್ಚ್
ಪಟ್ಟದಕಲ್ಲು
ಪಟ್ಟದಕಲ್ ಬಾದಾಮಿ ಮತ್ತು ಐಹೊಳೆ ಜೊತೆಗೆ UNESCO ವಿಶ್ವ ಪರಂಪರೆಯ ತಾಣವಾಗಿದೆ. ಇದನ್ನು ಚಾಲುಕ್ಯರ ಸ್ಮಾರಕಗಳ ಗುಂಪು ಎಂದು ಕರೆಯಲಾಗುತ್ತದೆ. ಪಟ್ಟದಕಲ್ಲನ್ನು ದಕ್ಷಿಣ ಭಾರತದ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎಂದು ಪರಿಗಣಿಸಲಾಗಿದೆ, ಮುಖ್ಯ ಸಂಕೀರ್ಣವು ಸುಮಾರು 10 ದೇವಾಲಯಗಳನ್ನು ಹೊಂದಿದೆ. ಪಟ್ಟದಕಲ್ಲು, ಚಾಲುಕ್ಯ ರಾಜರ ಪಟ್ಟಾಭಿಷೇಕ ನಡೆದ ಸ್ಥಳವಾಗಿದೆ. ಇಲ್ಲಿರುವ ಸ್ಮಾರಕಗಳನ್ನು 6 ಮತ್ತು 9ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಈ ಸ್ಮಾರಕಗಳ ಗುಂಪಿನಲ್ಲಿರುವ ಇತರ ಸ್ಥಳಗಳಲ್ಲಿರುವ ದೇವಾಲಯಗಳಿಗಿಂತ ಇಲ್ಲಿನ ರಚನೆಯು ಭವ್ಯವಾಗಿದೆ ಮತ್ತು ಹೆಚ್ಚು ವಿಸ್ತಾರವಾಗಿದೆ. ಪಟ್ಟದಕಲ್ಲಿನ ಪ್ರಮುಖ ಸ್ಮಾರಕಗಳೆಂದರೆ ವಿರೂಪಾಕ್ಷ ದೇವಾಲಯ, ಸಂಗಮೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶಿವಿಶ್ವನಾಥ ದೇವಾಲಯ ಮತ್ತು ಗಳಗನಾಥ ದೇವಾಲಯವಾಗಿದೆ.
ಬೆಂಗಳೂರಿನಿಂದ ದೂರ: 439 ಕಿಮೀ
ದೈನಂದಿನ ಬಜೆಟ್: 800-900 ರೂ.
ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ ನಿಂದ ಮಾರ್ಚ್
ಹತ್ತು ವರ್ಷದ ಹಿಂದೆ ಹೀಗಿತ್ತು ಬೆಂಗಳೂರಿನ ಈ ರಸ್ತೆ, ಯಾವುದು ಗೊತ್ತಾಯ್ತಾ ?
ಬೇಲೂರು
ಕರ್ನಾಟಕದ ಹಾಸನ ಜಿಲ್ಲೆಯ ಪ್ರಸಿದ್ಧ ದೇವಾಲಯ ಬೇಲೂರು ವಿಷ್ಣುವಿನ ಅವತಾರವಾದ ಭಗವಾನ್ ಚೆನ್ನಕೇಶವನಿಗೆ ಸಮರ್ಪಿತವಾಗಿದೆ. ಭವ್ಯವಾದ ಹೊಯ್ಸಳ ದೇವಾಲಯವಾಗಿದ್ದು, ಬೇಲೂರು ಹೊಯ್ಸಳ ಸಾಮ್ರಾಜ್ಯದ ಆರಂಭಿಕ ರಾಜಧಾನಿಯಾಗಿತ್ತು. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ನಾಮನಿರ್ದೇಶನಗೊಂಡ ಮೂರು ಹೊಯ್ಸಳ ದೇವಾಲಯಗಳಲ್ಲಿ ಇಲ್ಲಿರುವ ದೇವಾಲಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ದೇವಾಲಯಗಳು ಅವುಗಳ ಸೂಕ್ಷ್ಮ ಶಾಸನಗಳು ಮತ್ತು ಸಂಕೀರ್ಣವಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಚೆನ್ನಕೇಶವ ದೇವಾಲಯವು ಹೊಯ್ಸಳ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.
ಬೆಂಗಳೂರಿನಿಂದ ದೂರ: 217 ಕಿಮೀ
ದೈನಂದಿನ ಬಜೆಟ್: 800-900 ರೂ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್‌ನಿಂದ ಮಾರ್ಚ್
ಶ್ರವಣಬೆಳಗೊಳ
ಕರ್ನಾಟಕದ ಶ್ರವಣಬೆಳಗೊಳ ಬಹುಶಃ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಜೈನ ಯಾತ್ರಾ ಸ್ಥಳವಾಗಿದೆ. ಇಲ್ಲಿನ ಗೊಮ್ಮಟೇಶ್ವರ ದೇವಾಲಯವು ವಿಂಧ್ಯಗಿರಿ ಬೆಟ್ಟದ ಮೇಲೆ 3,347 ಅಡಿ ಎತ್ತರದಲ್ಲಿ ನಿರ್ಮಿಸಲ್ಪಟ್ಟಿದೆ. ಇದು ಭಗವಾನ್ ಬಾಹುಬಲಿಯ ಪ್ರತಿಮೆಯಿಂದಾಗಿ ಪ್ರಮುಖ ಆಕರ್ಷಣೆಯಾಗಿದೆ. ಒಂದೇ ಗ್ರಾನೈಟ್‌ನಿಂದ ಕೆತ್ತಿದ ವಿಶ್ವದ ಅತಿ ಎತ್ತರದ ಪ್ರತಿಮೆ ಇದಾಗಿದೆ.ಇದು 58 ಅಡಿ ಎತ್ತರದಲ್ಲಿದೆ. ಪ್ರವೇಶವನ್ನು ಪಡೆಯಲು ಒಬ್ಬರು ಸುಮಾರು 620 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.