Traveling Tips : ಕಡಿಮೆ ಖರ್ಚಿನಲ್ಲಿ ಹೋಟೆಲ್ ರೂಮ್ ಬುಕ್ ಮಾಡಲು ಟಿಪ್ಸ್

By Suvarna News  |  First Published Dec 19, 2022, 12:40 PM IST

ಪ್ರವಾಸಕ್ಕೆ ಹೋದಾಗ ಖರ್ಚು ಬಜೆಟ್ ಗಿಂತ ಹೆಚ್ಚಾಗಿರುತ್ತದೆ. ಅಲ್ಲಿ, ಇಲ್ಲಿ ಉಳಿಸಬಹುದಿತ್ತು ಅಂತಾ ಆಮೇಲೆ ಪಶ್ಚಾತ್ತಾಪಪಡ್ತೇವೆ. ಅದಕ್ಕಿಂತ ಹೋಟಲ್ ರೂಮ್ ಕಾಯ್ದಿರಿಸುವಾಗ್ಲೇ ಬುದ್ದಿವಂತಿಕೆ ಉಪಯೋಗಿಸಿದ್ರೆ ಕಡಿಮೆ ಖರ್ಚಿನಲ್ಲಿ ಸುತ್ತಿ ಬರಬಹುದು. 
 


ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. 2022 ಮುಗಿಯುವ ಸಮಯದಲ್ಲಿ ಹಾಗೂ ಹೊಸ ವರ್ಷದ ಆರಂಭದಲ್ಲಿ ಜನರು ಸುತ್ತಾಟದ ಪ್ಲಾನ್ ಮಾಡ್ತಾರೆ. ತಮಗಿಷ್ಟವಾದ ಪ್ರದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಮತ್ತೆ ಕೆಲವರು ಹೊಸ ವರ್ಷ ಆರಂಭವಾದ್ಮೇಲೆ ಪ್ರವಾಸಕ್ಕೆ ಪ್ಲಾನ್ ಮಾಡ್ತಾರೆ. ನಾವು ಸುತ್ತಾಡಲು ಯಾವುದು ಬೆಸ್ಟ್ ಎಂಬುದನ್ನು ನೋಡುವ ಜೊತೆಗೆ ಯಾವ ಹೋಟೆಲ್ ಒಳ್ಳೆಯದು ಎಂಬುದನ್ನು ಕೂಡ ಹುಡುಕುತ್ತೇವೆ. 

ಪ್ರವಾಸ (Trip) ಕ್ಕೆ ಹೋದಾಗ ಹೋಟೆಲ್ (Hotel) ಸಿಗದೆ ಪರದಾಡಬಾರದು. ಹಾಗೆಯೇ ಕೆಟ್ಟ ವ್ಯವಸ್ಥೆಯಿರುವ ಹೋಟೆಲ್ ನಲ್ಲಿ ತಂಗಲು ಸಾಧ್ಯವಾಗುವುದಿಲ್ಲ. ನಿಮ್ಮ ಬಜೆಟ್ (Budget) ಗೆ ತಕ್ಕಂತೆ ಒಳ್ಳೆಯ ಹೋಟೆಲ್ ಸಿಗಬೇಕು ಅಂದ್ರೆ ನೀವು ಕೆಲವೊಂದು ಪ್ಲಾನ್ ಮಾಡಿ ಪ್ರವಾಸಕ್ಕೆ ಹೋಗ್ಬೇಕು. ನಾವಿಂದು ಕಡಿಮೆ ಬೆಲೆಯಲ್ಲಿ ಹೋಟೆಲ್ ಬುಕ್ ಮಾಡೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ

Tap to resize

Latest Videos

ಕಡಿಮೆ ಖರ್ಚಿ (Expense) ನಲ್ಲಿ ಹೀಗೆ ಹೋಟೆಲ್ ಬುಕ್ ಮಾಡಿ :
ತಿಂಗಳ ಮೊದಲೇ ಬುಕ್ಕಿಂಗ್ ಮಾಡೋದು ಬೆಸ್ಟ್ :
ವಿಮಾನ, ರೈಲು ಟಿಕೆಟ್ ಮಾತ್ರವಲ್ಲ ನೀವು ಹೋಟೆಲ್ ರೂಮ್ (Room) ಗಳನ್ನು ಕೂಡ ಒಂದು ತಿಂಗಳ ಮೊದಲೇ ಬುಕ್ ಮಾಡಿದ್ರೆ ಒಳ್ಳೆಯದು. ಉದಾಹರಣೆಗೆ ನೀವು ನ್ಯೂ ಇಯರನ್ನು ಗೋವಾದಲ್ಲಿ ಆಚರಿಸಿಕೊಳ್ಳುವ ಪ್ಲಾನ್ ಮಾಡಿದ್ದು, ಈಗ ಹೋಟೆಲ್ ಹುಡುಕಿದ್ರೆ ನಿಮಗೆ ಹೋಟೆಲ್ ಸಿಗೋದಿಲ್ಲ. ಇರುವ ಹೋಟೆಲ್ ದರ ಕೂಡ ಗಗನಕ್ಕೇರಿರುತ್ತದೆ. ಅದೇ ಮೊದಲೇ ನೀವು ಬುಕ್ ಮಾಡಿದ್ರೆ ಕಡಿಮೆ ಬೆಲೆಗೆ ನಿಮಗೆ ಹೋಟೆಲ್ ಲಭ್ಯವಾಗ್ತಿತ್ತು. ಅಲ್ಲದೆ ಆ ಸಂದರ್ಭದಲ್ಲಿ ನಿಮ್ಮ ಮುಂದೆ ಸಾಕಷ್ಟು ಆಯ್ಕೆಗಳಿರುತ್ತವೆ. ತರಾತುರಿಯಲ್ಲಿ ಹೋಟೆಲ್ ಬುಕ್ ಮಾಡುವಾಗ ಆಯ್ಕೆ ಕೂಡ ಕಡಿಮೆ ಇರುತ್ತದೆ.

ವಾರೆ ವ್ಹಾ ಬೆಂಗಳೂರು-ಉಡುಪಿ ರೈಲುಮಾರ್ಗ ಎಷ್ಟು ಚೆಂದ, ಡ್ರೋನ್ ಸೆರೆಹಿಡಿದ ವಿಡಿಯೋ ವೈರಲ್

ಹೋಟೆಲ್ ರೂಮ್ ಬೆಲೆಯಲ್ಲಿ ವ್ಯತ್ಯಾಸ : ಯಾವುದೇ ಹೋಟೆಲ್ ರೂಮ್ ಬೆಲೆಯನ್ನು ನಿಗದಿಮಾಡಿರುವುದಿಲ್ಲ. ನೀವು ಎಷ್ಟು ಜನರಿದ್ದೀರಿ ಹಾಗೂ ಎಷ್ಟು ದಿನ ನೀವು ಅಲ್ಲಿ ವಾಸವಾಗುತ್ತೀರಿ ಎನ್ನುವ ಆಧಾರದ ಮೇಲೆ ಹೊಟೇಲ್ ರೂಮ್ ಬೆಲೆ ಬದಲಾಗುತ್ತದೆ. ಹಾಗಾಗಿ ನೀವು ಹೋಟೆಲ್ ರೂಮಿನ ಬೆಲೆಯನ್ನು ಬದಲಿಸಲು ಸಾಕಷ್ಟು ಅವಕಾಶವಿರುತ್ತದೆ.

ಹುಡುಕಾಟ ಬಹಳ ಮುಖ್ಯ : ಯಾವುದೋ ಒಂದು ಹೋಟೆಲ್ ನಲ್ಲಿ ನೀವು ರೂಮ್ ಬುಕ್ ಮಾಡುವ ಬದಲು, ನೀವು ಹೋಗ್ತಿರುವ ಸ್ಥಳದಲ್ಲಿ ಯಾವ ಯಾವ ಹೊಟೇಲ್ ಇದೆ ಎಂಬುದನ್ನು ಮೊದಲು ಪಟ್ಟಿ ಮಾಡಿ. ನಂತ್ರ ಅದ್ರ ಬೆಲೆಯನ್ನು ಪರಿಶೀಲಿಸಿ. ಯಾವ ಹೋಟೆಲ್ ಉತ್ತಮ ವ್ಯವಸ್ಥೆ ಜೊತೆ ಕಡಿಮೆ ಖರ್ಚಿನಲ್ಲಿದೆ ಎಂಬುದನ್ನು ತುಲನೆ ಮಾಡಿ ನಂತ್ರ ಹೋಟೆಲ್ ರೂಮ್ ಬುಕ್ ಮಾಡಿ. 

ಚೌಕಾಸಿ ಮಾಡಿ : ಪ್ರತಿಯೊಂದು ಹೋಟೆಲ್ ಕೂಡ ಗ್ರಾಹಕರನ್ನು ಸೆಳೆಯಲು ಆಫರ್ ನೀಡುತ್ತವೆ. ಹಬ್ಬದ ಸಂದರ್ಭದಲ್ಲಿ ವಿಶೇಷ ಆಫರ್ ಲಭ್ಯವಿದೆ. ಡಿಸ್ಕೌಂಟ್ ನೀಡೋದಾಗಿ ಹೋಟೆಲ್ ಗಳು ನಿಮಗೆ ಹೇಳ್ತವೆ. ಆದ್ರೆ ಬರೀ ಹೋಟೆಲ್ ನವರು ನೀಡುವ ಡಿಸ್ಕೌಂಟ್ ಗೆ ನೀವು ಬದ್ಧರಾಗಬೇಕಾಗಿಲ್ಲ. ನೀವು ಕೂಡ ಹೋಟೆಲ್ ನವರ ಜೊತೆ ಚೌಕಾಸಿ ಮಾಡಬಹುದು. ನೀವು ಇಡೀ ಕುಟುಂಬದೊಂದಿಗೆ ಹೋಟಲ್ ನಲ್ಲಿರುವ ಪ್ಲಾನ್ ಮಾಡಿದ್ದರೆ, ಒಟ್ಟೂ ಬಿಲ್‌ನಲ್ಲಿ ಕೆಲವು ಶೇಕಡಾವನ್ನು ಕಡಿಮೆ ಮಾಡುವಂತೆ ನೀವು ಹೋಟೆಲ್ ನವರ ಜೊತೆ ಮಾತನಾಡಬಹುದು. ಆಗ ನೀವು ಪಾವತಿಸುವ ಬಿಲ್ ಗಿಂತ ಕಡಿಮೆ ಬಿಲ್ ಪಾವತಿಸಬಹುದು.

ಸ್ವರ್ಗಕ್ಕೆ ದಾರಿ ತೋರಿಸುವ ಈ ಮೆಟ್ಟಿಲು ಹತ್ತೋಕೆ ಧೈರ್ಯ ಬೇಕು

ಅನವಶ್ಯಕ ಖರ್ಚು ಬೇಡ : ಅನಿವಾರ್ಯ ಎಂದಾಗ ಮಾತ್ರ ದುಬಾರಿ ಬೆಲೆ ನೀಡಿ ಹೋಟೆಲ್ ನಲ್ಲಿ ಉಳಿದುಕೊಳ್ಳಿ. ತುರ್ತು ಪರಿಸ್ಥಿತಿಯಲ್ಲದ ಸಂದರ್ಭದಲ್ಲಿ ನೀವು ನಿಮ್ಮ ಪ್ರವಾಸವನ್ನು ಸ್ವಲ್ಪ ಮುಂದೂಡಿ, ಕಡಿಮೆ ಬೆಲೆಯಲ್ಲಿ ಹೋಟೆಲ್ ಬುಕ್ ಮಾಡಿಕೊಳ್ಳಿ. ಮೂವರು ಪ್ರವಾಸಕ್ಕೆ ಹೋಗ್ತಿದ್ದರೆ ಎಲ್ಲರೂ ಕುಟುಂಬಸ್ಥರಾಗಿದ್ದರೆ ಬೇರೆ ಬೇರೆ ರೂಮ್ ನಲ್ಲಿ ಇರುವ ಬದಲು ಒಂದೇ ರೂಮಿನಲ್ಲಿ ಉಳಿದುಕೊಳ್ಳಿ. 

click me!