ಈ ನಗರದಲ್ಲಿ ಜನರು ಕಾರು ಖರೀದಿಸುವುದನ್ನೇ ಬ್ಯಾನ್ ಮಾಡಿದ ಸರಕಾರ !

By Suvarna News  |  First Published Aug 10, 2023, 3:29 PM IST

ಮನೆಗೊಂದು ಕಾರ್ ಇಲ್ಲವೆಂದ್ರೆ ಕೈ ಕಟ್ಟಿದಂತಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸೋದು ಹಿಂಸೆ… ಇದು ಭಾರತೀಯರ ಮಾತು. ಆದ್ರೆ ಪರಿಸರ ರಕ್ಷಣೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು ಎನ್ನುತ್ತದೆ ಈ ದೇಶ. ಅಲ್ಲಿನ ಜನರಿಗೆ ಸ್ವಂತ ಕಾರ್ ಖರೀದಿಸಲು ಒಪ್ಪಿಗೆ ಇಲ್ಲ.
 


ಸುಂದರ ನಗರಗಳು ಪರಿಸರ ಮಾಲಿನ್ಯದಿಂದ ತಮ್ಮ ಸೌಂದರ್ಯ ಕಳೆದುಕೊಳ್ಳುತ್ತಿವೆ. ಪ್ರಕೃತಿ ಸೌಂದರ್ಯ ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ಧ ಮಾಲಿನ್ಯ ಸೇರಿದಂತೆ ನಾನಾ ಮಾಲಿನ್ಯದಿಂದ ನಾಶವಾಗ್ತಿದೆ. ವಾಹನಗಳು ಅನೇಕ ಮಾಲಿನ್ಯವುಂಟು ಮಾಡ್ತಿವೆ. ಸಾರ್ವಜನಿಕ ಸಾರಿಗೆಗಿಂತ ಸ್ವಂತ ವಾಹನಗಳಿಂದ ಅನುಕೂಲ ಹೆಚ್ಚು. ಇದೇ ಕಾರಣಕ್ಕೆ ಭಾರತ ಸೇರಿದಂತೆ ನಾನಾ ದೇಶಗಳಲ್ಲಿ ಸ್ವಂತ ವಾಹನ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕೆಲವರು ಒಂದೋ ಎರಡೋ ಅಲ್ಲ ನಾಲ್ಕೈದು ವಾಹನವನ್ನು ಮನೆಯಲ್ಲಿಟ್ಟುಕೊಂಡಿರುತ್ತಾರೆ. ಪತಿ , ಪತ್ನಿ, ಮಕ್ಕಳು ಎಲ್ಲರಿಗೂ ಒಂದೊಂದು ಕಾರ್ ಇರುತ್ತೆ. ನಮ್ಮ ಜೀವನವನ್ನು ಈ ವಾಹನಗಳ ಮತ್ತಷ್ಟು ಸರಳಗೊಳಿಸಿರಬಹುದು. ಆದ್ರೆ ಪರಿಸರ ನಾಶಕ್ಕೆ ಇವು ಕಾರಣವಾಗ್ತಿವೆ. ಇದ್ರ ಅರಿವೆ ಇದ್ರೂ ಜನರು ಪೆಟ್ರೋಲ್ – ಡಿಸೇಲ್ ನಿಂದ ಓಡುವ ವಾಹನಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ.

ಮನೆ ಮುಂದೆ ಜಾಗವಿಲ್ಲದಂತೆ ಒಂದರ ಹಿಂದ ಒಂದು ನಿಲ್ಲುವ ಈ ವಾಹನ ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾಲಿನ್ಯ (Pollution) ದಿಂದ ನಮ್ಮನ್ನು ಹಾಗೂ ಪ್ರಕೃತಿ (nature) ಯನ್ನು ರಕ್ಷಿಸಲು ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡ್ತಿದೆ. ಸಾರ್ವಜನಿಕ ವಾಹನವನ್ನು ಹೆಚ್ಚಾಗಿ ಬಳಸುವಂತೆ, ಪ್ಲಾಸ್ಟಿಕ್ ನಿಂದ ದೂರ ಇರುವಂತೆ, ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಬೋರ್ಡ್ ಗಳನ್ನು ಹಾಕಿದೆ. ಆದ್ರೆ ಜನರು ಮಾತ್ರ ಇವೆಲ್ಲವನ್ನು ನಿರ್ಲಕ್ಷ್ಯಿಸಿ ತಮ್ಮ ಅಲ್ಪ ಸಂತೋಷಕ್ಕೆ ಆದ್ಯತೆ ನೀಡ್ತಿದ್ದಾರೆ. ಆದ್ರೆ ಸ್ವಿಜರ್ಲ್ಯಾಂಡ್ (Switzerland) ಸರ್ಕಾರ, ಪರಿಸರ ರಕ್ಷಣೆಗೆ ಭಿನ್ನ ನಿರ್ಧಾರ ಕೈಗೊಂಡಿದೆ. ಆ ಕಾನೂನು ಕೇಳಿದ್ರೆ ನೀವೂ ದಂಗಾಗ್ತೀರಾ.

Latest Videos

undefined

Maha Vajiralongkorn: 38 ವಿಮಾನ, 300 ಕಾರ್, ವಿಶ್ವದ ದುಬಾರಿ ವಜ್ರ ಹೊಂದಿರುವಾತ ಯಾರು ಗೊತ್ತಾ?

ಸ್ವಿಸ್ ಸರ್ಕಾರ ಜಾರಿಗೆ ತಂದ ಕಾನೂನು ಯಾವುದು? : ಸ್ವಿಸ್ ಸರ್ಕಾರ, ಸ್ವಂತ ವಾಹನ ಖರೀದಿಗೆ ನಿಷೇಧ ಹೇರಿದೆ. ಸ್ವಿಸ್ ನಗರದ ಜರ್ಮೆಟ್ (Zermatt) ಈಗ ಇದೇ ವಿಷ್ಯಕ್ಕೆ ಚರ್ಚೆಯಲ್ಲಿದೆ. ಇಲ್ಲಿನ ಸರ್ಕಾರ, ಪರಿಸರ ರಕ್ಷಣೆಗಾಗಿ ಕಾರ್ ಬ್ಯಾನ್ ಮಾಡಿದೆ. ಇಲ್ಲಿನ ಜನರು ವಾಹನ ಖರೀದಿ ಮಾಡಿ ತಮ್ಮ ಮನೆ ಮುಂದೆ ನಿಲ್ಲಿಸುವಂತಿಲ್ಲ. ನಗರದಿಂದ ಬೇರೆ ಊರಿಗೆ ಹೋಗಿ, ಬರುವ ಜನರು ಸಾರ್ವಜನಿಕ ವಾಹನವನ್ನು ಮಾತ್ರ ಬಳಕೆ ಮಾಡ್ಬೇಕು. ನಗರದಲ್ಲಿ ಸಾರ್ವಜನಿಕ ವಾಹನ ಬಿಟ್ಟು ಮತ್ತ್ಯಾವುದೇ ವಾಹನ ಸಂಚಾರ ಮಾಡುವಂತಿಲ್ಲ. ಇಷ್ಟೇ ಅಲ್ಲದೆ ಸರ್ಕಾರ, ಪೆಟ್ರೋಲ್ – ಡಿಸೇಲ್ ವಾಹನಗಳ ಮೇಲೂ ನಿಷೇಧ ಹೇರಿದೆ. 

ವಾಹನದ ಅಗತ್ಯವಿದೆ ಎನ್ನುವವರು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಬೇಕು. ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದ ನಂತ್ರ ಕಾರನ್ನು ಖರೀದಿ ಮಾಡ್ಬಹುದು. ಆದ್ರೆ ಪೆಟ್ರೋಲ್ – ಡಿಸೇಲ್ ಕಾರ್ ಖರೀದಿಗೆ ಅವಕಾಶವಿಲ್ಲ. ಸರ್ಕಾರವೇ ಮಿನಿ ಕಾರನ್ನು ತಯಾರಿಸಿ ಜನರಿಗೆ ನೀಡುವ ವ್ಯವಸ್ಥೆ ಮಾಡುತ್ತದೆ. ಸರ್ಕಾರ ನೀಡುವ ಕಾರನ್ನು ಮಾತ್ರ ಸಾರ್ವಜನಿಕರು ಖರೀದಿ ಮಾಡ್ಬೇಕಾಗುತ್ತದೆ. ಬಿಲ್ಡರ್ ಹಾಗೂ ಬಾಡಿಗೆ ಸವಾರರಿಗೆ ಈ ನಿಮಯದಲ್ಲಿ ರಿಯಾಯಿತಿ ನೀಡಿದೆ. 

ದಕ್ಷಿಣ ಭಾರತದ ಅದ್ಭುತ ತಾಣಗಳಿವು… ಮಿಸ್ ಮಾಡದೇ ಒಂದ್ಸಲನಾದ್ರೂ ಹೋಗಿ ಬನ್ನಿ

ಜರ್ಮೆಟ್ ನಲ್ಲಿ ಸ್ವಂತ ಕಾರಿನ ಸಂಖ್ಯೆ ಕಡಿಮೆ ಇದೆ. ಇಲ್ಲಿಗೆ ಕಾರು ಪರಿಚಯವಾಗಿದ್ದು ತುಂಬಾ ತಡವಾಗಿ. ಹಾಗಾಗಿ ನಿವಾಸಿಗಳು ಕೂಡ ಕಾರನ್ನು ಇಷ್ಟಪಡೋದಿಲ್ಲ. ಅಲ್ಲಿನ ಅಂಕುಡೊಂಕಾದ ರಸ್ತೆಯಲ್ಲಿ ವಾಹನ ಚಲಾಯಿಸೋದು ಕಷ್ಟ. ಹಾಗೆಯೇ ಕೆಲವೇ ಪ್ರದೇಶಗಳಲ್ಲಿ ಮಾತ್ರ ಕಾರು ಚಲಾಯಿಸಲು ಅನುಮತಿ ಇತ್ತು. ಅದಕ್ಕೆ ಸಾಕಷ್ಟು ಶುಲ್ಕವನ್ನು ತೆರಬೇಕಾಗಿತ್ತು. ಈ ಎಲ್ಲ ಕಾರಣಕ್ಕೆ ಅಲ್ಲಿನ ನಿವಾಸಿಗಳ ಬಳಿ ಕಾರಿನ ಸಂಖ್ಯೆ ಬಹಳ ಕಡಿಮೆ ಇದೆ. ಸಾರ್ವಜನಿಕ ವಾಹನ ಹಾಗೂ ಕಾಲ್ನಡಿಗೆಯನ್ನೇ ಇಲ್ಲಿನವರು ಒಪ್ಪಿಕೊಂಡಿದ್ದಾರೆ. ನೆರೆ ಹೊರೆಯ ಪ್ರದೇಶಕ್ಕೆ ಹೋಗುವ ಸಂದರ್ಭದಲ್ಲಿ ಬಹುತೇಕ ಜನರು ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ.   
 

click me!