ಫಾರಿನ್‌ ಟ್ರಿಪ್ ಹೋಗೋಕೆ ದುಡ್ಡು ಬೇಡ, ಈ ದೇಶಕ್ಕೆ ಹೋಗ್ಬಿಡಿ ಭರ್ತಿ 25 ಲಕ್ಷ ರೂ. ಸಿಗುತ್ತೆ!

By Vinutha PerlaFirst Published Nov 6, 2023, 10:28 AM IST
Highlights

ವಿದೇಶಕ್ಕೆ ಹೋಗ್ಬೇಕು ಅಂದ್ರೆ ಲಕ್ಷ ಲಕ್ಷ ಬೇಕು. ಹೀಗಾಗಿ ಫಾರಿನ್‌ ಟ್ರಿಪ್‌ ಮಾಡೋಕೆ ಹಣವಿಲ್ಲದೆ ಹಲವರು ಹಿಂಜರಿಯುತ್ತಾರೆ. ನಿಮ್ಗೂ ಫಾರಿನ್‌ ಟ್ರಿಪ್‌ ಹೋಗೋಕೆ ದುಡ್ಡಿಲ್ಲ ಅನ್ನೋ ಚಿಂತೆ ಕಾಡ್ತಿದ್ರೆ ಡೋಂಟ್‌ ವರಿ, ಈ ದೇಶಕ್ಕೆ ಹೋಗ್ಬಿಡಿ. ನೀವೇನು ಖರ್ಚು ಮಾಡ್ಬೇಕಾಗಿಲ್ಲ. ನೀವ್ ಬಂದಿದ್ದಕ್ಕಾಗಿ ಈ ದೇಶದವರೇ ಭರ್ತಿ  25 ಲಕ್ಷ ರೂ. ಕೊಡ್ತಾರ.

ಫಾರಿನ್‌ ಟ್ರಿಪ್ ಹೋಗ್ಬೇಕು ಅಂತ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಹೊಸ ದೇಶಕ್ಕೆ ಹೋಗ್ಬೇಕು, ಹಲವು ನಗರಗಳನ್ನು ಸುತ್ತಾಡ್ಬೇಕು, ಹೊಸ ಹೊಸ ಜನರನ್ನು ಭೇಟಿಯಾಗ್ಬೇಕು ಅನ್ನೋ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ವಿದೇಶಕ್ಕೆ ಹೋಗ್ಬೇಕು ಅಂದ್ರೆ ಲಕ್ಷ ಲಕ್ಷ ಬೇಕು. ಹೀಗಾಗಿ ಫಾರಿನ್‌ ಟ್ರಿಪ್‌ ಮಾಡೋಕೆ ಹಣವಿಲ್ಲದೆ ಹಲವರು ಹಿಂಜರಿಯುತ್ತಾರೆ. ನಿಮ್ಗೂ ಫಾರಿನ್‌ ಟ್ರಿಪ್‌ ಹೋಗೋಕೆ ದುಡ್ಡಿಲ್ಲ ಅನ್ನೋ ಚಿಂತೆ ಕಾಡ್ತಿದ್ರೆ ಡೋಂಟ್‌ ವರಿ, ಈ ದೇಶಕ್ಕೆ ಹೋಗ್ಬಿಡಿ. ನೀವೇನು ಖರ್ಚು ಮಾಡ್ಬೇಕಾಗಿಲ್ಲ. ನೀವ್ ಬಂದಿದ್ದಕ್ಕಾಗಿ ಈ ದೇಶದವರೇ ಭರ್ತಿ 25 ಲಕ್ಷ ರೂ. ಕೊಡ್ತಾರ.

ಇಟಲಿಯ ದಕ್ಷಿಣ ಪ್ರದೇಶ ಅದ್ಭುತವಾದ ಪ್ರಕೃತಿ ಸೌಂದರ್ಯಕ್ಕೆ (Nature Beauty) ಹೆಸರುವಾಸಿಯಾಗಿದೆ. ಇದು ಯುವ, ಉದ್ಯಮಶೀಲ ಶಕ್ತಿಗಳಿಗೆ ಆಕರ್ಷಕ ಅವಕಾಶವನ್ನು ವಿಸ್ತರಿಸುತ್ತಿದೆ. ಕ್ಯಾಲಬ್ರಿಯಾ, ಸಾಮಾನ್ಯವಾಗಿ ಇಟಲಿಯಲ್ಲಿ ಉತ್ತಮ ಪ್ರದೇಶವೆಂದು ಗುರುತಿಸಿಕೊಂಡಿದೆ. ಈ ನಗರವು ಸದ್ಯ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಇಲ್ಲಿ ಬಂದು ವಾಸಿಸುವುದಾದರೆ ಅಂದಾಜು ರೂ 26.48 ಲಕ್ಷದ ವರೆಗೆ ಹಣಕಾಸಿನ ನೆರವು (Financial Help) ನೀಡಲು ಸಿದ್ಧವಾಗಿದೆ ಎಂದು ಹೇಳಿಕೊಂಡಿದೆ. ಈ ಮೂಲಕ ಫಾರಿನ್‌ ಟ್ರಿಪ್‌ ಹೋಗಲು ಆಸಕ್ತಿಯಿರುವವರು ಸುಲಭವಾಗಿ ಇನ್ನೊಂದು ದೇಶಕ್ಕೆ ಶಿಫ್ಟ್ ಆಗಬಹುದು.

ಜಸ್ಟ್‌ 1 ಲಕ್ಷ ಇದ್ರೆ ಸಾಕು ನೀವು ಜಗತ್ತಿನ ಈ ದೇಶಗಳಿಗೆ ಟ್ರಿಪ್ ಹೋಗ್ಬೋದು

ಅರ್ಜಿದಾರರು ತಮ್ಮ ಅರ್ಜಿಯ ಅನುಮೋದನೆಯ 90 ದಿನಗಳಲ್ಲಿ ಸ್ಥಳಾಂತರಗೊಳ್ಳಲು ಸಿದ್ಧರಾಗಿರಬೇಕು. ಆ ಪ್ರದೇಶದಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಬದ್ಧರಾಗಿರಬೇಕು. ಕ್ಯಾಲಬ್ರಿಯಾ ತನ್ನ ಬೆರಗುಗೊಳಿಸುವ ಕರಾವಳಿ ಸೌಂದರ್ಯ ಮತ್ತು ಪರ್ವತದ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ನಗರವು (City) ಗಮನಾರ್ಹ ಜನಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಇದು ಸ್ಥಳೀಯರಲ್ಲಿ ಕಳವಳವನ್ನುಂಟು ಮಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರದೇಶದ ಸಮುದಾಯಗಳಿಗೆ ತಾಜಾ ಚೈತನ್ಯವನ್ನು ತುಂಬಲು, ಕ್ಯಾಲಬ್ರಿಯಾ ಈ ವಿನೂತನ ಯೋಜನೆಯನ್ನು ಪರಿಚಯಿಸಿದೆ.

ಕ್ಯಾಲಬ್ರಿಯಾ ನಗರದ ಈ ಯೋಜನೆಯು (Project) ತುಂಬಾ ಸರಳವಾಗಿದೆ. ಕೆಲಸ ಮಾಡಲು ಮತ್ತು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಲು ಉತ್ಸುಕರಾಗಿರುವ ಯುವ, ಪ್ರೇರಿತ ವ್ಯಕ್ತಿಗಳಿಗೆ ಹಣಕಾಸಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಪ್ರತಿಯಾಗಿ, ಅವರು ಮೂರು ವರ್ಷಗಳಲ್ಲಿ 26.48 ಲಕ್ಷ ರೂ.ನಿಂದ ಮಾಸಿಕ ಆದಾಯವನ್ನು ಸ್ವೀಕರಿಸುತ್ತಾರೆ. ಅಥವಾ ಹೊಸ ವಾಣಿಜ್ಯ ಉದ್ಯಮವನ್ನು ಆರಂಭಿಸಲು ಭಾರೀ ಮೊತ್ತವನ್ನು ನೀಡಲಾಗುತ್ತದೆ.

ಫಸ್ಟ್ ಟೈಂ ಸೋಲೋ ಟ್ರಿಪ್ ಮಾಡೋರಿಗೆ ಬೆಸ್ಟ್ ಪ್ಲೇಸ್‌ಗಳಿವು

ರೆಸ್ಟೋರೆಂಟ್‌ಗಳು, ಅಂಗಡಿಗಳು, ಹೋಟೆಲ್‌ಗಳಂತಹ ವ್ಯವಹಾರ ನಡೆಸಲು ಇಲ್ಲಿನ ಅಧಿಕಾರಿಗಳು ವಿಶೇಷವಾಗಿ ಆಸಕ್ತಿ ಹೊಂದಿದ್ದಾರೆ. ಈ ವಿಶಿಷ್ಟ ಪರಿಕಲ್ಪನೆಯ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಜಿಯಾನ್ಲುಕಾ ಗ್ಯಾಲೋ ಎಂಬವರಿದ್ದಾರೆ. ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವುದು ಮತ್ತು ಈ ಸಣ್ಣ-ಪ್ರಮಾಣದ ಸಮುದಾಯಗಳನ್ನು ಪುನರ್ಯೌವನಗೊಳಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.

'ಆಕ್ಟಿವ್‌ ರೆಸಿಡೆನ್ಸಿ ಇನ್‌ಕಮ್‌' ಎಂದು ಕರೆಯಲ್ಪಡುವ ಈ ಪ್ರಾಜೆಕ್ಟ್‌ ಮುಂಬರುವ ವಾರಗಳಲ್ಲಿಅಪ್ಲಿಕೇಶನ್‌ ತೆಗೆದುಕೊಳ್ಳಲು ಸಿದ್ಧವಾಗಿದೆ. ಈ ಯೋಜನೆಗಾಗಿ ಸುಮಾರು 6.31 ಕೋಟಿ ರೂ. ಬಜೆಟ್‌ನ್ನು ನಿಗದಿಪಡಿಸಲಾಗಿದೆ. ಕ್ಯಾಲಬ್ರಿಯಾದ 75% ಕ್ಕಿಂತ ಹೆಚ್ಚು ಪಟ್ಟಣಗಳು 5,000 ಕ್ಕಿಂತ ಕಡಿಮೆ ನಿವಾಸಿಗಳನ್ನು ಹೊಂದಿರುವುದರಿಂದ, ಪುನರುಜ್ಜೀವನದ ಅಗತ್ಯವಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯು ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿಸಲು ದಾರಿ ಮಾಡಿಕೊಡಬಹುದು ಎಂದು ಗ್ಯಾಲೋ ಉಲ್ಲೇಖಿಸಿದ್ದಾರೆ. 

click me!