ವಿದೇಶದಲ್ಲೂ ಇದೆ ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ , ಏನಿವುಗಳ ವಿಶೇಷ?

By Suvarna News  |  First Published Aug 1, 2022, 1:24 PM IST

ಶಿವನ ದೇವಸ್ಥಾನಗಳಲ್ಲಿ ಈಗ ಭಕ್ತರ ಸಾಲು. ಈಶ್ವರನ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಕಷ್ಟು ದೇವಸ್ಥಾನಗಳಿವೆ. ಈಶ್ವರನ ಪ್ರಸಿದ್ಧ ದೇವಸ್ಥಾನಗಳ ವರದಿ ಇಲ್ಲಿದೆ.
 


ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಜೋರಾಗಿ ನಡೆಯುತ್ತಿದೆ. ಶಿವನ ಭಕ್ತರು, ಶ್ರದ್ಧೆಯಿಂದ ಈಶ್ವರನ ಪೂಜೆ ಮಾಡ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ, ಅಭಿಷೇಕಗಳನ್ನು ಮಾಡಲಾಗ್ತಿದೆ. ಭಾರತ ದೇವಸ್ಥಾನಗಳ ನೆಲೆಬೀಡು. ಪ್ರತಿಯೊಂದು ಊರಿನಲ್ಲೂ, ಗಲ್ಲಿ ಗಲ್ಲಿಯಲ್ಲೂ ನೂರಾರು ದೇವಸ್ಥಾನಗಳಿವೆ. ಭಾರತದಂತೆ ನೇಪಾಳ ಕೂಡ ದೇವಸ್ಥಾನಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹಿಂದೂ ಧರ್ಮವನ್ನು ಪಾಲಿಸುವವರು ಶಿವನನ್ನು ಶಕ್ತಿ ದೇವರೆಂದು ಭಯ ಭಕ್ತಿಯಿಂದ ಪೂಜೆ ಮಾಡ್ತಾರೆ. ಭಾರತ ಮಾತ್ರವಲ್ಲ, ಭಾರತವನ್ನು ಹೊರತುಪಡಿಸಿ ಭೋಲೆನಾಥನನ್ನು ಭಕ್ತಿಯಿಂದ ಪೂಜಿಸುವ ಕೆಲವು ದೇಶಗಳಿವೆ. ಅಲ್ಲಿ ಹಲವಾರು ಜನಪ್ರಿಯ ಶಿವನ ದೇವಾಲಯಗಳಿವೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಮತ್ತು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಅನೇಕ ದೇವಾಲಯಗಳು ವಿದೇಶದಲ್ಲಿವೆ ಅಂದ್ರೆ ನೀವು ನಂಬ್ಲೇಬೇಕು. ಪ್ರತಿ ದಿನ ಆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತೆ. ಇಂದು ನಾವು ವಿದೇಶದಲ್ಲಿರುವ ಪ್ರಸಿದ್ಧ ಶಿವನ ದೇವಸ್ಥಾನದ ಬಗ್ಗೆ ಮಾಹಿತಿ ನೀಡ್ತೇವೆ.

ವಿದೇಶದಲ್ಲಿರುವ ಪ್ರಸಿದ್ಧ ಶಿವ (Shiva) ದೇವಾಲಯ (Temple) ಗಳು : 
ಶಿವ ದೇವಾಲಯ, ಆಕ್ಲೆಂಡ್, ನ್ಯೂಜಿಲೆಂಡ್ (Shiva Temple, Auckland)  :
 ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿರುವ ಶಿವನ ದೇವಾಲಯವು ನೋಡಲು ಸುಂದರವಾಗಿದೆ. ಇದನ್ನು ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಶಿವೇಂದ್ರ ಮಹಾರಾಜ್ ಮತ್ತು ಯಜ್ಞ ಬಾಬಾ ನಿರ್ಮಿಸಿದ್ದಾರೆ. ಇಲ್ಲಿ ಶಿವನು ನವದೇಶ್ವರ ಶಿವಲಿಂಗದ ರೂಪದಲ್ಲಿ ನೆಲೆಸಿದ್ದಾನೆ. 2004 ರಲ್ಲಿ ಮೊದಲ ಬಾರಿಗೆ ಈ ದೇವಾಲಯದ ಬಾಗಿಲುಗಳನ್ನು ಭಕ್ತರಿಗಾಗಿ ತೆರೆಯಲಾಯಿತು. ಪ್ರತಿ ದಿನ ಸಾವಿರಾರು ಮಂದಿ ಈ ದೇವಸ್ಥಾನಕ್ಕೆ ಬಂದು ಪರ್ಶನ ಪಡೆಯುತ್ತಾರೆ.

Tap to resize

Latest Videos

ಅವಿವಾಹಿತೆಯರು ಶೀಘ್ರ ವಿವಾಹಕ್ಕಾಗಿ ಶ್ರಾವಣ ಸೋಮವಾರ ಈ ರೀತಿ ಮಾಡಿ..

ಪಶುಪತಿನಾಥ ದೇವಾಲಯ, ನೇಪಾಳ (Pashupatinath Temple, Nepal) : ನೇಪಾಳದಲ್ಲಿರುವ ಪಶುಪತಿನಾಥ ದೇವಾಲಯವೂ ಬಹಳ ಪ್ರಸಿದ್ಧವಾಗಿದೆ.  ಪ್ರಪಂಚದಾದ್ಯಂತದ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಬರುತ್ತಾರೆ. ಈ ಅತ್ಯಂತ ಪುರಾತನವಾದ ಶಿವನ ದೇವಾಲಯವಾಗಿದೆ. ಈ ದೇವಾಲಯ ಕಠ್ಮಂಡುವಿನಲ್ಲಿ ಬಾಗಮತಿ ನದಿಯ ದಡದಲ್ಲಿದೆ.   ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮತ್ತೆ ಪ್ರಾಣಿಯಾಗಿ ಜನಿಸುವುದಿಲ್ಲ  ಎಂದು ಹೇಳಲಾಗುತ್ತದೆ.

ಮುನ್ನೇಶ್ವರಂ ದೇವಾಲಯ, ಶ್ರೀಲಂಕಾ (Munneswaram Temple, Sri Lanka) : ಶ್ರೀಲಂಕಾದ ಮುನ್ನೇಶ್ವರಂ ದೇವಾಲಯವು ಶಿವ ಭಕ್ತರಲ್ಲಿ ಬಹಳ ಜನಪ್ರಿಯವಾಗಿದೆ. ಈ ಶಿವ ದೇವಾಲಯವನ್ನು ರಾಮಾಯಣ ಕಾಲದಲ್ಲಿ ನಿರ್ಮಿಸಲಾಗಿದೆ ಮತ್ತು ಇದರ ಹಿಂದೆ ಅನೇಕ ಪೌರಾಣಿಕ ಕಥೆಗಳಿವೆ. ರಾವಣನನ್ನು ಸೋಲಿಸಿದ ನಂತರ ಶ್ರೀರಾಮನು ಇಲ್ಲಿ ಕುಳಿತು ಶಿವನನ್ನು ಆರಾಧಿಸಿದನು ಎಂದು ಹೇಳಲಾಗುತ್ತದೆ. ಈ ದೇವಾಲಯ ಸಂಕೀರ್ಣದಲ್ಲಿ 5 ದೇವಾಲಯಗಳಿವೆ. 

ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಶಿವ ದೇವಾಲಯ : ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಈ ಶಿವ ದೇವಾಲಯವು ತನ್ನ ವಾಸ್ತುಶಿಲ್ಪಕ್ಕೆ ಬಹಳ ಜನಪ್ರಿಯವಾಗಿದೆ. ಈ ದೇವಾಲಯದಲ್ಲಿ ಶಿವಲಿಂಗ, ನಟರಾಜ ವಿಗ್ರಹ ಮತ್ತು ತಾಯಿ ಪಾರ್ವತಿ ಕುಳಿತಿದ್ದಾರೆ. ಶಿವರಾತ್ರಿಯ ದಿನದಂದು ಇಲ್ಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ಶಿವನ ದರ್ಶನ ಪಡೆಯುತ್ತಾರೆ. 

ಶಕುನಶಾಸ್ತ್ರ: ಮಲಗಿರುವ ವ್ಯಕ್ತಿಯ ಕಾಲನ್ನು ಬೆಕ್ಕು ಮೂಸಿದರೆ ಕಾದಿದೆ ಅಪಾಯ!

ಅರುಲ್ಮಿಗು ಶ್ರೀ ರಾಜಕಾಳಿಯಮ್ಮನ ದೇವಸ್ಥಾನ, ಮಲೇಷ್ಯಾ  (Arulmigu Sri Rajakaliamman Temple) : ಮಲೇಷಿಯಾದ ಈ ಶಿವನ ದೇವಾಲಯವನ್ನು 1922 ರಲ್ಲಿ ನಿರ್ಮಿಸಲಾಯಿತು. ಇದರ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಭವ್ಯವಾದ ದೇವಾಲಯದ ವಾಸ್ತುಶಿಲ್ಪವು ಸಾಕಷ್ಟು ಆಕರ್ಷಕವಾಗಿದೆ ಮತ್ತು ಈ ದೇವಾಲಯವು ಜೋಹರ್ ಬಾರುವಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಗಾಜಿನಿಂದ ಮಾಡಿದ ಮೊದಲ ಶಿವ ದೇವಾಲಯ ಎಂದು ಹೇಳಲಾಗುತ್ತದೆ.  ಈ ದೇವಾಲಯದ ಗೋಡೆಯ ಮೇಲೆ 3,00,000 ರುದ್ರಾಕ್ಷ ಮಾಲೆಗಳಿವೆ. ಇದು ಭವ್ಯವಾದ ದೇವಾಲಯವಾಗಿದೆ. 
 

click me!