ನಯಾಪೈಸೆ ಖರ್ಚಿಲ್ಲದೆ ಭಾರತದ ಈ ಪ್ರವಾಸಿ ಸ್ಥಳಗಳಲ್ಲಿ ಉಳಿಯಬಹುದು

By Suvarna News  |  First Published Jul 26, 2022, 4:48 PM IST

ಜೇಬಿನಲ್ಲಿ ಹಣವಿದ್ರೆ ಮಾತ್ರ ಊರು ಸುತ್ತುವ ಆಸೆ ಈಡೇರುತ್ತದೆ. ಹೊಟೇಲ್ ದರ ದುಬಾರಿಯಾಗಿರುವ ಕಾರಣ ಅನೇಕರು ಪ್ರವಾಸ ಕೈಬಿಡ್ತಾರೆ. ಆದ್ರೆ ಭಾರತದ ಕೆಲ ಪ್ರದೇಶಗಳಲ್ಲಿ ನಿಮಗೆ ಸೂಕ್ತ ವ್ಯವಸ್ಥೆಯಿದೆ. ನೀವು ಹಣ ಖರ್ಚು ಮಾಡದೆ ಉಚಿತವಾಗಿ ಅಲ್ಲಿ ಉಳಿಯಬಹುದು. ಆಹಾರ ಕೂಡ ನಿಮಗೆ ಉಚಿತವಾಗಿ ಸಿಗುತ್ತದೆ. 
 


ಟ್ರಿಪ್ ಪ್ಲಾನ್ ಮಾಡಿದಾಗ ಸಾಮಾನ್ಯವಾಗಿ ಎಲ್ಲರಿಗೆ ಕಾಡುವ ಸಮಸ್ಯೆ ಒಂದೆ. ಖರ್ಚು ಎಷ್ಟು ಬರಬಹುದು ಅಂತ. ಬಜೆಟ್ ಟ್ರಾವೆಲಿಂಗ್ ಮಾಡುವವರಿಗೆ ಈ ಸಮಸ್ಯೆ ಸಾಮಾನ್ಯವಾಗಿ ಕಾಣುತ್ತದೆ. ಕಡಿಮೆ ಬಜೆಟ್ ನಲ್ಲಿ ಹೆಚ್ಚು ಊರುಗಳನ್ನು ನೋಡಬೇಕು, ಸುತ್ತಾಡಬೇಕು ಅನ್ನೋದು ಅನೇಕರ ಆಸೆ. ಆಫ್ ಸೀಸನ್ ನಲ್ಲಿ ಸಾಮಾನ್ಯವಾಗಿ ಕಡಿಮೆ ಖರ್ಚಿನಲ್ಲಿ ನಾವು ಸುತ್ತಾಡ ನಡೆಸಬಹುದು. ಸೀಸನ್ ಗಳಲ್ಲಿ ಸಾಮಾನ್ಯವಾಗಿ ಹೋಟೆಲ್ ರೇಟ್ ಗಗನಕ್ಕೇರಿರುತ್ತದೆ. ಎಲ್ಲರಿಗೂ ಆಫ್ ಸೀಸನ್ ನಲ್ಲಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆಯಾ ಋತುವಿನಲ್ಲಿ ಪ್ರವಾಸಿ ತಾಣಕ್ಕೆ ಹೋಗಿ, ಅನಿವಾರ್ಯ ಕಾರಣಕ್ಕೆ ದುಬಾರಿ ಬೆಲೆ ತೆತ್ತು ಹೋಟೆಲ್ ಉಳಿದುಕೊಳ್ಳಬೇಕಾಗುತ್ತದೆ. ಕಡಿಮೆ ಖರ್ಚಿನಲ್ಲಿ ಟ್ರಾವೆಲ್ ಮಾಡುವ ಆಸೆ ಇದ್ದವರು ಈ ಸುದ್ದಿ ಓದಿ. ಒಂದು ಪೈಸೆ ಹೊಟೇಲ್ ಗೆ ಖರ್ಚು ಮಾಡದೆ ಕೆಲ ಸ್ಥಳಗಳನ್ನು ನೋಡಿಕೊಂಡು ಬರುವ ಅವಕಾಶ ಭಾರತದಲ್ಲಿದೆ.  ಭಾರತದಲ್ಲಿ ಬಹಳ ಧರ್ಮ ಶಾಲೆಗಳಿವೆ ಹಾಗೆ ಆಶ್ರಮಗಳಿವೆ. ಅಲ್ಲಿ ನಾವು ಯಾವುದೇ ಖರ್ಚಿಲ್ಲದೆ ಆರಾಮವಾಗಿ ಉಳಿದುಕೊಳ್ಳಬಹುದು. ಇಂದು ನಾವು ಇಂಥ ಕ್ಷೇತ್ರಗಳು ಯಾವುವು, ಉಚಿತವಾಗಿ ಉಳಿದುಕೊಳ್ಳಬಹುದಾದ ಧರ್ಮಶಾಲೆ, ಆಶ್ರಮಗಳು ಎಲ್ಲಿವೆ ಎಂಬುದನ್ನು ನಿಮಗೆ ಹೇಳ್ತೇವೆ. 

ಇಶಾ ಫೌಂಡೇಶನ್ (Isha Foundation) : ಇದು ಕೊಯಮತ್ತೂರಿನಿಂದ ಸುಮಾರು 40 ಕಿಮೀ ದೂರದಲ್ಲಿದೆ. ಇದು ಸದ್ಗುರುಗಳ ಧಾರ್ಮಿಕ ಕೇಂದ್ರವಾಗಿದೆ, ಇಲ್ಲಿ ಆದಿಯೋಗಿ ಶಿವನ ಅತ್ಯಂತ ಸುಂದರವಾದ ಮತ್ತು ದೊಡ್ಡ ಪ್ರತಿಮೆಯೂ ಇದೆ. ಯೋಗ, ಅಲ್ಲಿನ ಪರಿಸರ ಮತ್ತು ಸಾಮಾಜಿಕ ಕಾರ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ನೀವು ಬಯಸಿದರೆ, ನೀವು ಸಹ ಇಲ್ಲಿ ಉಚಿತವಾಗಿ ಉಳಿದುಕೊಳ್ಳಬಹುದು. 

Tap to resize

Latest Videos

ಮಣಿಕರಣ್ ಸಾಹಿಬ್ ಗುರುದ್ವಾರ (Manikaran Sahib Gurdwara) (ಹಿಮಾಚಲ ಪ್ರದೇಶ) : ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶ. ಅಲ್ಲಿಗೆ ಒಮ್ಮೆಯಾದ್ರೂ ಭೇಟಿ ನೀಡಬೇಕೆಂದು ಅನೇಕರು ಆಸೆ ಹೊಂದಿರುತ್ತಾರೆ. ಆದ್ರೆ ಬಜೆಟ್ (Budget) ವಿಷ್ಯಕ್ಕೆ ಪ್ರವಾಸ (Tourist) ಮುಂದೂಡಿರುತ್ತಾರೆ. ಪ್ರಯಾಣಕ್ಕೆ ಹಣವಿದೆ, ಹೊಟೇಲ್ ಖರ್ಚು ನಿಭಾಯಿಸುವುದು ಕಷ್ಟ ಎನ್ನುವವರು ಮಣಿಕರಣ್ ಸಾಹಿಬ್ ಗುರುದ್ವಾರದಲ್ಲಿ ಉಚಿತವಾಗಿ ಉಳಿಯಬಹುದು. ಇಲ್ಲಿ ನೀವು ಉಚಿತ ಪಾರ್ಕಿಂಗ್ ಮತ್ತು ಆಹಾರವನ್ನು ಸಹ ಪಡೆಯಬಹುದು. ಬಜೆಟ್ ಪ್ರವಾಸದ ಪ್ಲಾನ್ ಮಾಡಿದ್ದರೆ ಮಣಿಕರಣ್ ಸಾಹಿಬ್ ಗುರುದ್ವಾರ ನಿಮಗೆ ಹೇಳಿ ಮಾಡಿಸಿದಂತಹ ಸ್ಥಳ.

ಕುಟುಂಬದಜೊತೆ Tour ಹೋಗಲು ಈ ಪ್ಲೇಸ್ ಬೆಸ್ಟ್!

ಆನಂದ ಆಶ್ರಮ ( ಕೇರಳ ) : ತನ್ನ ಪ್ರಕೃತಿ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರನ್ನು ಕೇರಳ ಸೆಳೆಯುತ್ತದೆ. ಪ್ರತಿ ದಿನ ನೂರಾರು ಮಂದಿ ಕೇರಳಕ್ಕೆ ಬರ್ತಾರೆ. ನೀವೂ ಕೇರಳಕ್ಕೆ ಪ್ಲಾನ್ ಮಾಡಿದ್ದರೆ ಉಳಿದುಕೊಳ್ಳುವ ಸ್ಥಳದ ಬಗ್ಗೆ ಚಿಂತೆ ಬೇಡ. ಸುಂದರವಾದ ಬೆಟ್ಟಗಳು ಮತ್ತು ಹಸಿರಿನ ನಡುವೆ ಇರುವ ಆನಂದ ಆಶ್ರಮದಲ್ಲಿ ಉಳಿಯಬಹುದು. ಅಲ್ಲಿ ವಿಭಿನ್ನ ಅನುಭವವನ್ನು ನೀವು ಪಡೆಯುತ್ತೀರಿ.  ಇಲ್ಲಿ ದಿನಕ್ಕೆ ಮೂರು ಬಾರಿ ನಿಮಗೆ ಆಹಾರ ಕೂಡ ನೀಡಲಾಗುತ್ತದೆ. ಕಡಿಮೆ ಮಸಾಲೆ ಉಪಯೋಗಿಸಿ ಆಹಾರ ತಯಾರಿಸಲಾಗುತ್ತದೆ.

ಗೀತಾ ಭವನ (ಋಷಿಕೇಶ) : ಪವಿತ್ರ ಗಂಗಾ ನದಿಯ ದಡದಲ್ಲಿರುವ ಗೀತಾ ಭವನದಲ್ಲಿ ಪ್ರವಾಸಿಗರು ಉಚಿತವಾಗಿ ತಂಗಬಹುದು. ಇಲ್ಲಿ ಉಚಿತ ಆಹಾರ ಲಭ್ಯವಿದೆ. ಈ ಆಶ್ರಮದಲ್ಲಿ ಸುಮಾರು 1000 ಕೊಠಡಿಗಳಿದ್ದು, ದೇಶ – ವಿದೇಶದಿಂದ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಆಶ್ರಮದಿಂದ ಸತ್ಸಂಗ ಮತ್ತು ಯೋಗದ ಅನುಭವ ಪಡೆಯಬಹುದು.    

ವಿಶ್ವದ ಅತ್ಯಂತ ರಮಣೀಯ ರೈಲು ಪ್ರಯಾಣಗಳು

ಗೋವಿಂದ್ ಘಾಟ್ ಗುರುದ್ವಾರ (ಉತ್ತರಾಖಂಡ) : ಈ ಗುರುದ್ವಾರವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ಸಮೀಪದಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಭಕ್ತರು ಇಲ್ಲಿ ಉಚಿತವಾಗಿ ತಂಗಬಹುದು.
 

click me!