ಮಕ್ಕಳು ಶಾಲೆಗೆ ಹೋಗದೆ ಕಳ್ಳ ಬೀಳ್ತಾರೆ. ಪಾಲಕರು ಇದಕ್ಕೆ ಹೂಂ ಅಂತಾರೆ. ಒಂದೆರಡು ದಿನ ಆದ್ರೆ ಓಕೆ. ನಾನಾ ಕಾರಣಕ್ಕೆ ಇದು ಹಿಂಗೆ ಮುಂದುವರೆದ್ರೆ ಮಕ್ಕಳ ಶಿಕ್ಷಣ ಹಾಳಾಗುತ್ತೆ. ಮಕ್ಕಳಿಗಿಂತ ಪಾಲಕರು ಇದ್ರಲ್ಲಿ ಕಟ್ಟುನಿಟ್ಟಾಗಿರಬೇಕು ಎನ್ನುವ ಕಾರಣಕ್ಕೆ ಈ ರೂಲ್ಸ್ ಜಾರಿಗೆ ಬಂದಿದೆ.
ಭಾನುವಾರ ಕಳೆದು ಸೋಮವಾರ ಬಂದ್ರೆ ದೊಡ್ಡವರು ಮಾತ್ರವಲ್ಲ ಮಕ್ಕಳೂ ಸೋಮಾರಿಗಳಾಗ್ತಾರೆ. ಶಾಲೆಗೆ ಹೋಗುವ ಮನಸ್ಸಿರೋದಿಲ್ಲ. ಕೆಲ ಮಕ್ಕಳು ಹೊಟ್ಟೆನೋವು, ಜ್ವರ ಎನ್ನುವ ಸುಳ್ಳು ಕಾರಣ ಹೇಳಿ ಶಾಲೆಗೆ ಗೈರಾಗೋದಿದೆ. ಮಕ್ಕಳ ಮನವೊಲಿಸಿ ಸುಸ್ತಾಗುವ ಕೆಲ ಪಾಲಕರು, ಮಕ್ಕಳಂತೆ ತಾವೂ ಸುಳ್ಳು ಹೇಳಿ ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ತಾರೆ.
ಅಪರೂಪಕ್ಕೆ ಹೀಗೆ ಆದ್ರೆ ಓಕೆ. ಪ್ರತಿ ದಿನ ಮಕ್ಕಳು (Children) ಇದೇ ರಾಗ ಹಾಡಿ ಗೈರಾದ್ರೆ ಅವರ ವಿದ್ಯಾಭ್ಯಾಸ (Study) ಹಿಂದಕ್ಕೆ ಬೀಳುತ್ತದೆ. ಭಾರತದಲ್ಲಿ ಪ್ರತಿ ವರ್ಷ ಮಕ್ಕಳನ್ನು ಶಾಲೆಗೆ ಕರೆತರಲು ನಾನಾ ಪ್ರಯತ್ನ ನಡೆಯುತ್ತದೆ. ಜೂನ್ – ಜುಲೈ ತಿಂಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಶಾಲೆಗೆ ಮರಳುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ರೆ ಕಷ್ಟ. ಪ್ರತಿ ದಿನ ತಪ್ಪದೆ ಶಾಲೆಗೆ ಹೋದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಇದನ್ನು ಸೌದಿ ಅರೇಬಿಯಾ (Saudi Arabia) ಗಂಭೀರವಾಗಿ ಪರಿಗಣಿಸಿದೆ. ಸೌದಿ ಅರೇಬಿಯಾದಲ್ಲಿ ಶಾಲೆ ತಪ್ಪಿಸುವ ಮಕ್ಕಳಿಗಲ್ಲ, ಪಾಲಕರಿಗೆ ಶಿಕ್ಷ ನೀಡಲು ನಿರ್ಧರಿಸಲಾಗಿದೆ.
undefined
ಸೌದಿ ಅರೇಬಿಯಾ ಜಾರಿಗೆ ತಂದ ನಿಯಮವೇನು? : ಯಾವುದೇ ಕಾರಣವಿಲ್ಲದೆ ಮಗು 20 ದಿನಗಳಿಗಿಂತ ಹೆಚ್ಚು ಕಾಲ ಶಾಲೆಗೆ ಗೈರಾಗುವಂತಿಲ್ಲ. ಒಂದು ವೇಳೆ ಮಗು ಗೈರಾದ್ರೆ ಪೋಷಕರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಮಕ್ಕಳ ಬಗ್ಗೆ ಪಾಲಕರು ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದ್ರೆ ಪಾಲಕರಿಗೆ ಸೌದಿ ಅರೇಬಿಯಾ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಯಾವುದೇ ಕಾರಣವಿಲ್ಲದೆ ಮಕ್ಕಳು 20 ದಿನಗಳಿಗಿಂತ ಹೆಚ್ಚು ಕಾಲ ಶಾಲೆಗೆ ಬರದಿದ್ದರೆ ಪೋಷಕರನ್ನು ಜೈಲಿಗೆ ಕಳುಹಿಸುವ ಅವಕಾಶ ಕಲ್ಪಿಸಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಈ ಅದ್ಭುತ ಕೋಟೆಯ ಬಗ್ಗೆ ನೀವು ತಿಳಿಯಲೇಬೇಕು!
ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಿಕ್ಷಣ ಸಚಿವಾಲಯವು ಅನೇಕ ಕಠಿಣ ನಿಯಮಗಳನ್ನು ಮಾಡಿದೆ. ಅದ್ರಲ್ಲಿ ಇದೂ ಸೇರಿದೆ. ವರದಿಯ ಪ್ರಕಾರ, ಸರಿಯಾದ ಕಾರಣವಿಲ್ಲದೆ ಮಕ್ಕಳು ಸತತ 20 ದಿನಗಳವರೆಗೆ ಶಾಲೆಗೆ ಗೈರು ಹಾಜರಾಗುವಂತಿಲ್ಲ. ಮಕ್ಕಳು ಗೈರಾಗ್ತಾರೆ ಎಂಬುದನ್ನು ಪಾಲಕರು ಮೊದಲೇ ತಿಳಿಸಬೇಕು. ಅದಕ್ಕೆ ಸೂಕ್ತ ಕಾರಣವನ್ನು ಹೇಳ್ಬೇಕು. ಇಲ್ಲವೆಂದ್ರೆ ಪೋಷಕರು ಜೈಲಿನಲ್ಲಿ ಕಂಬಿ ಎಣಿಸಲು ಸಿದ್ಧರಾಗ್ಬೇಕು. ಈ ಕ್ರಮವನ್ನು ದೇಶದ ಮಕ್ಕಳ ರಕ್ಷಣಾ ಕಾಯಿದೆಯಡಿ ಪಬ್ಲಿಕ್ ಪ್ರಾಸಿಕ್ಯೂಷನ್ ತೆಗೆದುಕೊಳ್ಳಬಹುದು. ತನಿಖೆಯ ನಂತರ ಪ್ರಕರಣವನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು. ಪೋಷಕರು ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು ಪೋಷಕರ ನಿರ್ಲಕ್ಷ್ಯ ನ್ಯಾಯಾಲಯ ಗಮನಕ್ಕೆ ಬಂದರೆ ಶಿಕ್ಷೆಯಾಗುತ್ತದೆ. ನ್ಯಾಯಾಧೀಶರು ಪೋಷಕರನ್ನು ಸಮಂಜಸವಾದ ಅವಧಿಗೆ ಜೈಲಿಗೆ ಕಳುಹಿಸುವ ಅಧಿಕಾರವನ್ನು ಹೊಂದಿದ್ದಾರೆ.
ಈ ಎಲ್ಲ ಹಂತಗಳಲ್ಲಿ ನಡೆಯಲಿದೆ ಕ್ರಮ : 20 ದಿನಗಳಿಗಿಂತಲೂ ಹೆಚ್ಚು ಕಾಲ ಯಾವುದೇ ಸೂಚನೆ ಇಲ್ಲದೆ ವಿದ್ಯಾರ್ಥಿ ಶಾಲೆಗೆ ಗೈರಾಗಿದ್ದಾನೆ ಎಂದಾದ್ರೆ ಮೊದಲಿಗೆ ಶಾಲೆಯ ಪ್ರಾಂಶುಪಾಲರು ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ವಿಷಯವನ್ನು ತಿಳಿಸಬೇಕು. ನಂತ್ರ ತನಿಖೆ ಶುರುವಾಗುತ್ತದೆ. ಶಿಕ್ಷಣ ಸಚಿವಾಲಯವು ಪ್ರಕರಣದ ವಿಚಾರಣೆಯನ್ನು ತೆಗೆದುಕೊಳ್ಳುತ್ತದೆ. ಕುಟುಂಬ ಆರೈಕೆ ವಿಭಾಗ ವಿದ್ಯಾರ್ಥಿ ಶಾಲೆಗೆ ಗೈರಾಗಲು ಕಾರಣವೇನು ಎಂಬುದನ್ನು ವಿದ್ಯಾರ್ಥಿಯನ್ನೇ ಕೇಳಿ ಸಾಕ್ಷ್ಯ ಪಡೆಯುತ್ತದೆ, ಅಗತ್ಯವಿದ್ದಲ್ಲಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ. ಇಲ್ಲವೆಂದ್ರೆ ಅಲ್ಲಿಯೇ ಅದನ್ನು ಪರಿಹರಿಸಲಾಗುವುದು.
Gender Swap Day: ಹುಡುಗನಾಗುವ ಹುಡುಗಿ.. ಹುಡುಗಿಯಾಗುವ ಹುಡುಗ.. ಇಲ್ಲಿ ಆಗುತ್ತೆ ಬಟ್ಟೆ ಬದಲು!
ಬದಲಾದ ಸೌದಿ ಅರೇಬಿಯಾ ಶಿಕ್ಷಣ ಪದ್ಧತಿ : ಸೌದಿ ಅರೇಬಿಯಾದ ಶಾಲೆಗಳಿಗೆ ಎರಡು ತಿಂಗಳು ರಜೆ ನೀಡಲಾಗಿತ್ತು. ಬೇಸಿಗೆ ರಜೆ ಮುಗಿಸಿ ಈಗ 6 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಮರಳಿದ್ದಾರೆ. ಈ ಮಧ್ಯೆ ಸೌದಿ ಅರೇಬಿಯಾ ಕೂಡ ತನ್ನ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತಂದಿದೆ. ಸೆಕೆಂಡರಿ ಶಾಲಾ ಪಠ್ಯಕ್ರಮದಲ್ಲಿ ಭೂ ವಿಜ್ಞಾನ, ಬಾಹ್ಯಾಕಾಶ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಹೊಸ ವಿಷಯಗಳನ್ನು ಸೇರಿಸಲು ಹಸಿರು ನಿಶಾನೆ ತೋರಿದೆ.