Gender Swap Day: ಹುಡುಗನಾಗುವ ಹುಡುಗಿ.. ಹುಡುಗಿಯಾಗುವ ಹುಡುಗ.. ಇಲ್ಲಿ ಆಗುತ್ತೆ ಬಟ್ಟೆ ಬದಲು!

By Suvarna News  |  First Published Aug 24, 2023, 5:39 PM IST

ಬಟ್ಟೆ ಬದಲಿಸಿದ್ರೆ ಸಮಸ್ಯೆ ಕಡಿಮೆಯಾಗುತ್ತಾ ಅಂತಾ ನೀವು ಕೇಳ್ಬಹುದು. ಆದ್ರೆ ಕೆಲವರು ಹೌದು ಎನ್ನುತ್ತಾರೆ. ಲಿಂಗದ ಬಗ್ಗೆ  ಮಕ್ಕಳಿಗೆ ತಿಳುವಳಿಕೆಯನ್ನು ಜೆಂಡರ್ ಸ್ವಾಪ್ ಡೇ ಮೂಲಕವೂ ನೀಡ್ಬಹುದು ಎನ್ನುತ್ತಾರೆ. 
 


ಲಿಂಗ ತಾರತಮ್ಯ ಈಗ್ಲೂ ನಮ್ಮಲ್ಲಿ ನೆಲೆಯೂರಿದೆ. ಹೆಣ್ಣು ಮಕ್ಕಳನ್ನು ಹಾಗೂ ಗಂಡು ಮಕ್ಕಳನ್ನು ಬೇರೆಯದೇ ಸ್ಥಾನದಲ್ಲಿಟ್ಟು ನೋಡಲಾಗುತ್ತದೆ. ಲಿಂಗ ಸಮಾನತೆಗೆ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಲಿಂಗಕ್ಕೆ ಮಹತ್ವ ನೀಡ್ಬಾರದು ಎಂಬ ಕೂಗು ಕೇಳಿ ಬರುತ್ತಿದೆ. 

ಲಿಂಗ (Gender) ತಾರತಮ್ಯದ ವಿರುದ್ಧ ಒಂದು ಕಡೆ ಹೋರಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ ಶಾಲೆ (School) ಗಳಲ್ಲಿ ಮಕ್ಕಳಿಗೆ ಅದ್ರ ಬಗ್ಗೆ ಸರಿಯಾದ ಜ್ಞಾನ ನೀಡುವ ಪ್ರಯತ್ನ ನಡೆಯುತ್ತಿದೆ. ಶಾಲೆಯಲ್ಲಿ ಎಲ್ಲರನ್ನು ಸಮಾನವಾಗಿ ನೋಡಬೇಕು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ಒಂದೇ ರೀತಿಯ ಸಮವಸ್ತ್ರಬೇಕು ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಈ ಮಧ್ಯೆ ಕೆಲ ಶಾಲೆಗಳಲ್ಲಿ ಜೆಂಡರ್ ಸ್ವಾಪ್ ದಿನವನ್ನು ಆಚರಿಸುವ ಮೂಲಕ ಯಾವ ಲಿಂಗದವರು ಯಾವ ಸಮಸ್ಯೆ ಎದುರಿಸುತ್ತಾರೆ ಎಂಬುದನ್ನು ತಿಳಿಯುವ ಹಾಗೂ ಎಲ್ಲರೂ ಸಮಾನವೆಂದು ತೋರಿಸುವ ಪ್ರಯತ್ನ ನಡೆಯುತ್ತಿದೆ.

Tap to resize

Latest Videos

ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿದ ಪ್ರಖ್ಯಾತ ಏರ್‌ಲೈನ್ಸ್‌ ಸಿಇಒ!

ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಜೆಂಡರ್ ಸ್ವಾಪ್ ದಿನಾಚರಣೆಯನ್ನು ನಾವು ನೋಡ್ಬಹುದು. ಲಿಂಗ ಸ್ವಾಪ್ ದಿನವು 2018-19ರಲ್ಲಿ ಮಿಯಾಮಿ ಹೈನಲ್ಲಿ ಮೊದಲ ಬಾರಿಗೆ ನಡೆಯಿತು. ಹೈಸ್ಕೂಲ್, ಕಾಲೇಜು ಸೇರಿದಂತೆ ಅನೇಕ ಕಡೆ ಇದನ್ನು ಆಚರಣೆ ಮಾಡಲಾಗುತ್ತದೆ.  

ಮಕ್ಕಳು ಆ ದಿನ ತಮ್ಮ ಬಟ್ಟೆಯನ್ನು ಅದಲು – ಬದಲು ಮಾಡಿಕೊಳ್ತಾರೆ. ಹೆಣ್ಣು ಮಕ್ಕಳು ಗಂಡು ಮಕ್ಕಳ ಬಟ್ಟೆ ಅಥವಾ ಯುನಿಫಾರ್ಮ್ ಧರಿಸುತ್ತಾರೆ. ಅದೇ ರೀತಿ ಗಂಡು ಮಕ್ಕಳು ಹೆಣ್ಮಕ್ಕಲ ಡ್ರೆಸ್ ಅಥವಾ ಯುನಿಫಾರ್ಮ್ ಧರಿಸಿ ಶಾಲೆಗೆ ಬರುತ್ತಾರೆ. ಕೆಲ ದಿನಗಳ ಹಿಂದೆ Mzansi ಹೈ ಸ್ಕೂಲಿನಲ್ಲಿ ಜೆಂಡರ್ ಸ್ವಾಪ್ ಡೇಯನ್ನು ಆಚರಿಸಲಾಗಿತ್ತು. ಮಕ್ಕಳು ಇದಕ್ಕೆ ಉತ್ತಮ ರೆಸ್ಪಾನ್ಸ್ ನೀಡಿದ್ದರು. ಮಕ್ಕಳು ಅದಲಿ – ಬದಲಿ ಬಟ್ಟೆಯನ್ನು ಧರಿಸಿ ಶಾಲೆಯಲ್ಲಿ ಓಡಾಡ್ತಿದ್ದುದ್ದನ್ನು ವಿಡಿಯೋದಲ್ಲಿ ಕಾಣ್ಬಹುದು.  

ಅಮೆರಿಕದ ಕನಸಿಗಿಂತ ಭಾರತ, ಕುಟುಂಬಕ್ಕೆ ಆದ್ಯತೆ ನೀಡಿದ ಬೆಂಗಳೂರು ಟೆಕ್ಕಿ: ಎಂಜಿನಿಯರ್ ಕೊಟ್ಟ ಕಾರಣಗಳು ಹೀಗಿವೆ..

@jenna_perestrelo_ ಹೆಸರಿನ ಟಿಕ್ ಟಾಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. 1.6 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಈ ವಿಡಿಯೋ ಪಡೆದಿತ್ತು. ಈಗ ಜೆಂಡರ್ ಸ್ವಾಪ್ ನ ಮತ್ತೊಂದು ವಿಡಿಯೋ ವೈರಲ್ ಆಗಿದೆ. amazing_facts_259 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಗಂಡು ಮಕ್ಕಳು, ಮಿನಿ ಸ್ಕರ್ಟ್, ಒನ್ ಪೀಸ್, ಟೂ ಪೀಸ್ ನಲ್ಲಿ ಮಿಂಚಿದ್ರೆ, ವಿದ್ಯಾರ್ಥಿನಿಯರು ಹುಡುಗ್ರ ಡ್ರೆಸ್ ನಲ್ಲಿ ವಾಕ್ ಮಾಡ್ತಿದ್ದಾರೆ. 

ಈ ವಿಡಿಯೋಕ್ಕೂ ಅನೇಕರು ಕಮೆಂಟ್ ಮಾಡಿದ್ದಾರೆ. ಜೆಂಡರ್ ಸ್ವಾಪ್ ಡೇಯನ್ನು ಕೆಲವರು ಒಪ್ಪಿಕೊಂಡ್ರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ಇಂಥ ಡೇಗಳು ಮಕ್ಕಳನ್ನು ದಾರಿ ತಪ್ಪಿಸುತ್ತವೆ ಎಂದು ಕೆಲವರು ಹೇಳಿದ್ದಾರೆ. ಇದು ಕೇವಲ ಮನರಂಜನೆ ನೀಡುತ್ತದೆಯೇ ವಿನಃ, ಲಿಂಗದ ಬಗ್ಗೆ ಯಾವುದೇ ತಿಳುವಳಿಕೆ ಮೂಡಿಸೋದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ಅಥವಾ 6 ತಿಂಗಳಿಗೆ ಒಮ್ಮೆ ಈ ಜೆಂಡರ್ ಸ್ವಾಪ್ ಡೇ ಇಟ್ಟರೆ ಒಳ್ಳೆಯದು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಟ್ರಾನ್ಸ್ ಸಮುದಾಯದಲ್ಲಿಯೂ ಸಹ ಲಿಂಗ ಸ್ವಾಪ್ ದಿನದ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ.  

ಯಾವಾಗ ಜೆಂಡರ್ ಸ್ವಾಪ್ ಡೇ ಆಚರಣೆ ಮಾಡಲಾಗುತ್ತದೆ? : ನವೆಂಬರ್ 25 ರಂದು ಜೆಂಡರ್ ಸ್ವಾಪ್ ಡೇ ಆಚರಣೆ ಮಾಡಲಾಗುತ್ತದೆ. ಅಂದು  ಹುಡುಗಿಯರು ಹುಡುಗರಂತೆ ವರ್ತಿಸಬಹುದು, ಹುಡುಗರು ಹುಡುಗಿಯರಂತೆ ವರ್ತಿಸಬಹುದು. ಅವರಿಷ್ಟದ ಬಟ್ಟೆಯಲ್ಲಿ ಮಿಂಚಬಹುದು. ವಿದೇಶದ ಕೆಲ ಶಾಲೆಗಳಲ್ಲಿ ಇದನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. 
 

click me!