ವಿದೇಶಕ್ಕೆ ಹೋಗಿ ನೆಲೆ ನಿಲ್ಲಬೇಕು, ಆದ್ರೆ ವೀಸಾ ಸಿಗ್ತಿಲ್ಲ, ಕೈನಲ್ಲಿ ಹಣವಿಲ್ಲ ಎನ್ನುವವರಿಗೆ ಇಲ್ಲೊಂದು ಒಳ್ಳೆ ಅವಕಾಶವಿದೆ. ಕೆಲ ದೇಶಗಳು, ವಿದೇಶಿಗರನ್ನು ಪ್ರೀತಿಯಿಂದ ಆಹ್ವಾನಿಸುತ್ತಿವೆ. ನಿಮಗೆ ವೀಸಾ ನೀಡುವ ಜೊತೆಗೆ ಹಣಕಾಸಿನ ವ್ಯವಸ್ಥೆಯನ್ನೂ ಮಾಡ್ತಿವೆ.
ವಿದೇಶಗಳಿಗೆ ಹೋಗುವ ಅಥವಾ ಅಲ್ಲಿ ನೆಲೆಸುವ ಕನಸು ಹಲವರದ್ದು. ಕೆಲವರು ವಿದೇಶದಲ್ಲಿ ವ್ಯಾಸಂಗ ಮಾಡಲು ಇಷ್ಟಪಡುತ್ತಾರೆ. ಅಲ್ಲಿ ವಿದ್ಯಾಭ್ಯಾಸ ಪೂರೈಸಿ ನಂತರ ಅಲ್ಲೇ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ದೇಶ ಸುತ್ತಿದ್ರೆ ಜ್ಞಾನ ಹೆಚ್ಚಾಗುತ್ತದೆ. ಅಲ್ಲಿ ನೆಲೆ ನಿಲ್ಲೋದು ಇರಲಿ ಕೆಲವರಿಗೆ ಒಮ್ಮೆ ವಿದೇಶಿ ಪ್ರವಾಸ ಮಾಡೋದು ಕಷ್ಟ. ವಿದೇಶ (Abroad) ಗಳಿಗೆ ಹೋಗುವವರಿಗೆ ವೀಸಾ (Visa) , ಪಾಸ್ ಪೋರ್ಟ್ ಎರಡೂ ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದು ದೇಶಗಳಿಗೆ ಹೋಗಲು ವೀಸಾ ಬೇಗ ಸಿಕ್ಕರೆ, ಇನ್ನು ಕೆಲವು ದೇಶಗಳಿಗೆ ವೀಸಾ ಸಿಗೋದೇ ಬಹಳ ಕಷ್ಟ. ಹಾಗೆಯೇ ಕೆಲವು ದೇಶಗಳಿಗೆ ವೀಸಾ ಇಲ್ಲದೇ ಪ್ರಯಾಣ (Travel) ಬೆಳೆಸಬಹುದು. ಜಗತ್ತಿನ ಅನೇಕ ದೇಶಗಳು ಭಾರತೀಯರಿಗೆ ತಮ್ಮ ದೇಶದಲ್ಲಿ ನೆಲೆಸಲು ಅವಕಾಶ ನೀಡಿವೆ. ಆ ದೇಶಗಳ ವೀಸಾ ಸುಲಭವಾಗಿ ಸಿಗುವುದಲ್ಲದೆ ವೀಸಾದ ಜೊತೆಗೆ ಅಲ್ಲಿನ ಸರ್ಕಾರ ಹಣವನ್ನು ಕೂಡ ನೀಡುತ್ತದೆ.
ಈ ದೇಶಗಳಲ್ಲಿ ಜನಸಂಖ್ಯೆ ತುಂಬಾ ಕಡಿಮೆಯಿದೆ. ಈ ದೇಶಗಳಲ್ಲಿ ವಾಸಿಸಲು ಜನರೇ ಇಲ್ಲದಂತಾಗಿದೆ. ಇರುವವರೂ ವಯಸ್ಸಾದವರಾಗಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಸರ್ಕಾರ ಯುವಕರಿಗೆ ಅಲ್ಲಿ ನೆಲೆಸಲು ಅವಕಾಶ ನೀಡುತ್ತಿದೆ. ನಾವಿಂದು ಯಾವ ದೇಶಗಳು, ಭಾರತೀಯರಿಗೆ ನೆಲೆ ನಿಲ್ಲುವ ಅವಕಾಶದ ಜೊತೆ ಹಣ ನೀಡ್ತಿದೆ ಎಂಬುದನ್ನು ನೋಡೋಣ.
ಆಂಟಿಕೈಥೆರಾ, ಗ್ರೀಸ್ : ಗ್ರೀಸ್ ದೇಶದಲ್ಲಿ ಆಂಟಿಕೈಥೆರಾ ಎಂಬ ದ್ವೀಪವಿದೆ. ಇಲ್ಲಿ 50ಕ್ಕಿಂತಲೂ ಕಡಿಮೆ ಮಂದಿ ವಾಸಿಸುತ್ತಾರೆ. ಹಾಗಾಗಿ ಇಲ್ಲಿನ ಜನಸಂಖ್ಯೆಯನ್ನು ಹೆಚ್ಚಿಸಲು ಬೇರೆ ದೇಶದ ನಾಗರಿಕರಿಗೆ ಇಲ್ಲಿ ನೆಲೆಸುವ ಅವಕಾಶವಿದೆ. ಅಲ್ಲಿನ ಗ್ರೀಕ್ ಆರ್ಥೋಡಾಕ್ಸ್ ಚರ್ಚ್ ನೆಲೆ ನಿಲ್ಲುವವರಿಗೆ ಸಹಾಯ ಮಾಡುತ್ತದೆ. ನೀವು ಆಂಟಿಕೈಥೆರಾ ದ್ವೀಪದಲ್ಲಿ ಮೂರು ವರ್ಷಗಳ ಕಾಲ ವಾಸಿಸಬೇಕಾಗುತ್ತದೆ. ಇದಕ್ಕಾಗಿ ತಿಂಗಳಿಗೆ ಸುಮಾರು 45,241 ರೂಪಾಯಿಗಳ ಸ್ಟೈಫಂಡ್ ನಿಮಗೆ ಸಿಗುತ್ತದೆ.
ವಿಶ್ವ ಬುಕ್ ಆಫ್ ರೆಕಾರ್ಡ್ ಸೇರಿದ ಕಾಶ್ಮೀರದ ಟುಲಿಪ್ ಗಾರ್ಡನ್‌ನ ಸುಂದರ ಚಿತ್ರಗಳು...
ಐರ್ಲೆಂಡ್ : ವಾಯುವ್ಯ ಯುರೋಪಿನ ಸುಂದರ ದೇಶವಾದ ಐರ್ಲೆಂಡ್ ದ್ವೀಪ ಭಾರತೀಯರಿಗೆ ನೆಲೆಸುವ ಅವಕಾಶ ನೀಡಿದೆ. ಇದಕ್ಕಾಗಿ ಐರ್ಲೆಂಡ್ ಸರಕಾರ ಐರಿಶ್ ಸ್ಟಾರ್ಟ್ ಅಪ್ ಎಂಟರ್ ಪ್ರೇನಿಯರ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರ ಮೂಲಕ ಅಲ್ಲಿ ವ್ಯವಸಾಯ ಮಾಡಲು ಬಯಸುವವರಿಗೂ ಕೂಡ ಸರಕಾರ ಹಣ ಸಹಾಯ ಮಾಡಲಿದೆ. ಇದರ ಜೊತೆಗೆ 1 ವರ್ಷದ ವೀಸಾ ಮತ್ತು 41,56,622 ಡಾಲರ್ ಹಣ ನೀಡಲಿದೆ.
ಇಟಲಿ : ಭಾರತೀಯರು ಇಟಲಿಗೆ ಕೂಡ ಸುಲಭವಾಗಿ ಹೋಗಬಹುದು. ಇಟಲಿಯ ಸರಕಾರ ಇನ್ವೆಸ್ಟ್ ಯೋರ್ ಟ್ಯಾಲೆಂಟ್ ಇನ್ ಇಟಲಿ ಎಂಬ ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರದಲ್ಲಿ ಪಾಲ್ಗೊಳ್ಳುವವರಿಗೆ ಹಣ ಮತ್ತು ಒಂದು ವರ್ಷದ ವೀಸಾ ನೀಡಲಿದೆ. ಇಟಲಿಯ ಕ್ಯಾಂಡೆಲಾ ನಗರದಲ್ಲಿ ಕೂಡ ಜನಸಂಖ್ಯೆಯನ್ನು ಹೆಚ್ಚಿಸಲು ಒಬ್ಬರಿಗೆ 65,505 ರೂಪಾಯಿ ಹಾಗೂ ಪರಿವಾರದ ಜೊತೆ ವಾಸಿಸುವವರಿಗೆ ಸುಮಾರು 1,66,264 ರೂಪಾಯಿಗಳನ್ನು ನೀಡಲಾಗುತ್ತಿದೆ.
MANDIR SHRI GOPINATHJI: ಕೈಯಲ್ಲಿ ವಾಚ್ ಧರಿಸೋ ಈ ಕೃಷ್ಣನ ವಿಗ್ರಹದಲ್ಲಿ ಜೀವ ಇದೆಯಂತೆ!
ಅಲ್ಬಿನೆನ್, ಸ್ವಿಟ್ಜರ್ಲೆಂಡ್ : ಸ್ವಿಟ್ಜರ್ಲೆಂಡಿನ ಅಲ್ಲಿಬೆನ್ ಹಳ್ಳಿಯಲ್ಲಿ 250ಕ್ಕಿಂತಲೂ ಕಡಿಮೆ ಮಂದಿ ವಾಸಿಸುತ್ತಾರೆ. ಹಾಗಾಗಿ ಅಲ್ಲಿನ ಜನಸಂಖ್ಯೆಯನ್ನು ಹೆಚ್ಚಿಸಲು ಸ್ವಿಸ್ ಸರಕಾರ ವಿದೇಶೀ ನಾಗರಿಕರಿಗೆ ನೆಲೆಸುವ ಅವಕಾಶ ಕಲ್ಪಸಿದೆ. ಇಲ್ಲಿ ನೆಲೆಸುವ ವಯಸ್ಕರಿಗೆ 23,63,098 ರೂಪಾಯಿ ಹಾಗೂ ಮಕ್ಕಳಿಗೆ 9,45,239 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು ಸ್ವಿಸ್ ನಾಗರಿಕರಾಗಿರುವುದು ಖಡ್ಡಾಯವಾಗಿದೆ.
ಪೋರ್ಚುಗಲ್ : ಪೋರ್ಚುಗಲ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಧನಸಹಾಯ ಮಾಡಲಾಗುತ್ತದೆ. ಇದಕ್ಕಾಗಿ ಒಂದು ವರ್ಷದ ವೀಸಾ ಮತ್ತು 41,56,825 ರೂಪಾಯಿ ಹಣವನ್ನು ನೀಡಲಾಗುತ್ತದೆ. ಉದ್ಯಮಿಗಳು ಇದರ ಲಾಭವನ್ನು ಪಡೆಯಬಹುದು.