ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಒಂದು ಕಡೆ ಇದ್ದರೆ ನಿಮ್ಮ ಅಮೂಲ್ಯ ವಸ್ತುಗಳಿರುವ ಲಗೇಜ್ ಇನ್ನೊಂದು ಕಡೆ ಇರುತ್ತದೆ. ಅಲ್ಲದೇ ಕೆಲವೊಮ್ಮೆ ಅದು ಮರಳಿ ಸಿಗುವ ನಿರೀಕ್ಷೆಗಳು ಇರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಏನಾಯ್ತು ನೋಡಿ..
ಮುಂಬೈ: ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ವಿಚಿತ್ರ ಅನುಭವವಾಗಿರುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಒಂದು ಕಡೆ ಇದ್ದರೆ ನಿಮ್ಮ ಅಮೂಲ್ಯ ವಸ್ತುಗಳಿರುವ ಲಗೇಜ್ ಇನ್ನೊಂದು ಕಡೆ ಇರುತ್ತದೆ. ಅಲ್ಲದೇ ಕೆಲವೊಮ್ಮೆ ಅದು ಮರಳಿ ಸಿಗುವ ನಿರೀಕ್ಷೆಗಳು ಇರುವುದಿಲ್ಲ. ವಿಮಾನದಲ್ಲಿ ಪ್ರಯಾಣಿಸಿರುವ ಅನೇಕರು ಲಗೇಜ್ ಕಳೆದುಕೊಂಡ ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹೇಳಿಕೊಂಡಿದ್ದಾರೆ. ಅದೇ ರೀತಿ ಈಗ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ಅವರಿಗೆ ಲಗೇಜ್ ಮರಳಿ ಸಿಕ್ಕಿದೆ. ಆದರೆ ಅದು ಸಂಪೂರ್ಣವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ.
ಹೌದು ವಿಮಾನವೇರಿದ ಲಗೇಜ್ (Luggage) ಮರಳಿ ನಮ್ಮ ಕೈ ಸೇರುವಾಗ ಯಾವ ಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಲಾಗದು. ನಾವು ಹೋಗುವ ಸ್ಥಳ ತಲುಪಿದ ನಂತರ ವಿಮಾನದಿಂದ ಇಳಿದ ಮೇಲೆ ಲಗೇಜ್ ಕೌಂಟರ್ ಬಳಿ ಇರುವ ಬ್ಯಾಗೇಜ್ ಕರೋಸಲ್ ಬಳಿ ಹೋಗಿ ನಾವು ಲಗೇಜ್ ತೆಗೆದುಕೊಳ್ಳಬೇಕಾಗುವುದು. ಆದರೆ ವಿಮಾನದಿಂದ (Flight) ಅಲ್ಲಿಗೆ ಬರುವಷ್ಟರಲ್ಲಿ ಆದರ ಕತೆ ಏನಾಗುವುದೋ ಎಂದು ಹೇಳಲಾಗದು. ಹಾಗೆಯೇ ಇಲ್ಲೊಂದು ಕಡೆ ವಿಮಾನ ಪ್ರಯಾಣಿಕರೊಬ್ಬರ (Passenger) ಲಗೇಜ್ ಬ್ಯಾಗೊಂದು ಸಂಪೂರ್ಣವಾಗಿ ಡ್ಯಾಮೇಜ್ ಆಗಿದ್ದು ಅದರ ಫೋಟೋವೊಂದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ.
ಡ್ರಗ್ ಹೀರಿ ಫ್ಲೈಟ್ ಏರಿದ: ಗಗನಸಖಿಯೊಂದಿಗೆ ಗಬ್ಬು ಗಬ್ಬಾಗಿ ವರ್ತಿಸಿದ
ರೆಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ಲಗೇಜ್ ನೋಡಿ ನೆಟ್ಟಿಗರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ. ವಿಮಾನದ ಸಿಬ್ಬಂದಿ ಈ ಲಗೇಜ್‌ನ್ನು ವಿಮಾನದಿಂದ ಕೆಳಗೆ ಬಿಸಾಕಿರಬಹುದ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಒಂದು ವೇಳೆ ವಿಮಾನದಿಂದ ಎಸೆದಿದ್ದರೂ ಒಳ್ಳೆಯ ಸ್ಥಿತಿಯಲ್ಲಿ ಇರುತ್ತಿತ್ತು. ಬಹುಶ ಅವರು ವಿಮಾನ ನಿಲ್ಲುವ ವೇಳೆ ಅದರ ಮುಂದಿಟ್ಟಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇವರೇನು ಲ್ಯಾಡಿಂಗ್ ಗೇರ್ (Landing Gear) ಬದಲು ಈ ಲಗೇಜ್‌ನ್ನು ಬಳಸಿದರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಲ್ಯಾಂಡಿಂಗ್ ಗೇರ್‌ಗೆ ಹಾನಿಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಚಿಕ್ಕಪ್ಪನ ಬ್ಯಾಗ್‌ನ್ನು ಬಳಸಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಲಗೇಜ್‌ನ್ನು ವಿಮಾನದ ಸಿಬ್ಬಂದಿಗೆ ನೀಡುವ ಮೊದಲು ಫೋಟೋ ತೆಗೆದು ಇಟ್ಟುಕೊಳ್ಳಿ ಇದರಿಂದ ನಿಮಗೆ ಅವರು ನಿಮ್ಮ ಲಗೇಜ್‌ಗೆ ಎಂತಹಾ ಸ್ಥಿತಿ ತಂದರೂ ಎಂಬುದು ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಕಾಮೆಂಟ್ ಸೆಕ್ಷನ್‌ನಲ್ಲಿ ಹಲವರು ತಮಗಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ವಿಮಾನದಲ್ಲಿ ಪಯಣಿಗರಿಗೆ ಸೆಲೆಬ್ರಿಟಿಯಂತೆ ವಿಶ್ ಮಾಡಿ ಚಿಲ್ ಮಾಡಿದ ಪುಟ್ಟ ಬಾಲಕ
ಒಟ್ಟಿನಲ್ಲಿ ಈ ಫೋಟೋ ವಿಮಾನದಲ್ಲಿ ಆಗಾಗ ಪ್ರಯಾಣಿಸುವವರು ಈ ಲಗೇಜ್ ಸ್ಥಿತಿ ನೋಡಿ ದಂಗಾಗಿದ್ದಾರೆ. 97 ಸಾವಿರಕ್ಕೂ ಹೆಚ್ಚು ಜನ ಈ ಒಂದು ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹ್ಯಾಂಡ್ ಬ್ಯಾಗ್ ಹೊರತಾಗಿ ಬೇರಾವುದೇ ಲಗೇಜ್ ನಮ್ಮ ಕೈಯಲ್ಲಿ ಇರುವುದಿಲ್ಲ. ವಿಮಾನ ಪ್ರಯಾಣದ ಸುರಕ್ಷತಾ ನಿಯಮಗಳಲ್ಲದೇ ಹಲವರು ನಿಯಮಗಳನ್ನು ಹೇರುವ ವಿಮಾನ ಸಿಬ್ಬಂದಿ ವಿಮಾನ ಪ್ರಯಾಣಿಕರ ಲಗೇಜ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ.
ವಿಮಾನ ಪ್ರಯಾಣ (Plane Journey)ಒಬ್ಬೊಬ್ಬರಿಗೆ ಒಂದೊಂದು ಅನುಭವ ನೀಡುತ್ತದೆ. ವಿಮಾನದಲ್ಲಿ ಕೆಲ ಪ್ರಯಾಣಿಕರು ವಿಚಿತ್ರವಾಗಿ ಆಡುವ ಘಟನೆಗಳು ಇತ್ತೀಚೆಗೆ ಸಾಕಷ್ಟು ನಡೆದಿವೆ. ವಿಮಾನ ಪ್ರಯಾಣದ ವೇಳೆ ಗಗನಸಖಿಯರ ಜೊತೆ ಅಸಭ್ಯವಾಗಿ ವರ್ತಿಸುವುದು, ಸಹ ಪ್ರಯಾಣಿಕರೊಂದಿಗೆ ಕಿರಿಕಿರಿ ಮಾಡುವುದು ಮುಂತಾದ ಘಟನೆಗಳು ಈ ಹಿಂದೆ ನಡೆದಿದ್ದನ್ನು ಕೇಳಿದ್ದೇವೆ. ಕೆಲವು ವಿಮಾನ ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಏನನಿಸುವುದೋ ಏನೋ ಎಂದೂ ಕಾಣದ ವಿಚಿತ್ರ ವರ್ತನೆಗಳನ್ನು ಅವರು ತೋರಿಸುತ್ತಾರೆ. ಅದೇ ರೀತಿ ಕೆಲ ದಿನಗಳ ಹಿಂದೆ ಪಾಕಿಸ್ತಾನದ ವಿಮಾನ ಪ್ರಯಾಣಿಕನೋರ್ವ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿ ಜೈಲು ಕಂಬಿ ಎಣಿಸಿದ್ದ. ಈತ ತನ್ನ ಬಟ್ಟೆಯನ್ನು ಕಿತ್ತೆಸೆದು, ಹಾರುತ್ತಿದ್ದ ವಿಮಾನದ ಕಿಟಕಿಯನ್ನು ಕಾಲಿನಲ್ಲಿ ಒದ್ದು ಒಡೆಯಲು ಯತ್ನಿಸಿದ್ದಾನೆ. ಈತನ ಕಿರುಕುಳವನ್ನು ವಿಮಾನ ಲ್ಯಾಂಡ್ ಆಗುವವರೆಗೆ ಸಹಿಸಿಕೊಂಡ ವಿಮಾನದ ಸಿಬ್ಬಂದಿ ನಂತರ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪೊಲೀಸರಿಗೆ ಒಪ್ಪಿಸಿದ್ದರು.