
ವರದಿ: ಆನಂದ ಜೇವೂರ್, ಆಳ್ವಾಸ್ ಕಾಲೇಜು, ಮೂಡುಬಿದಿರೆ
ದಕ್ಷಿಣ ಕನ್ನಡ (ಅ. 29): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಹಲವು ಪ್ರವಾಸಿ (Tourism) ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಪಿಲ್ಲಿಕುಳ್ಳ ನಿಸರ್ಗ ಧಾಮ, ಸಾವಿರ ಕಂಬದ ಬಸದಿ ಚಾರ್ಮಾಡಿ ಹೀಗೆ ಜಲಪಾತ, ಬೆಟ್ಟ, ಗುಡ್ಡ, ಟ್ರಕ್ಕಿಂಗ್ ಪಾಯಿಂಟ್ಸ್‌ಗಳಿವೆ. ಜೈನ ಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡಬಿದಿರೆಯಲ್ಲಿ (Mudbidri) ಒಂದು ಅಣೆಕಟ್ಟು ಇದೇ, ಇದ್ದಕ್ಕೆ "ಹನ್ನೆರಡು ಕವಲು" (Hanneradu Kavalu) ಎಂದು ಕರೆಯುತ್ತಾರೆ. ಕಾರಣ ಪುರಾಣದ ಪ್ರಕಾರ ಇಲ್ಲಿನ ಅಣೆಕಟ್ಟುಯ ನೀರು ಹನ್ನೆರಡು ಕವಲುಗಳಿಗೆ ಹೋಗುತ್ತಿತ್ತು. ಪ್ರಕೃತಿಯ ಸೌಂದರ್ಯ, ಮಳೆಗಾಲದಲ್ಲಿ ಆಣೆಕಟ್ಟಿನಿಂದ ನೀರು ಹಾಲಿನಂತೆ ಹರಿಯುತ್ತದೆ. ವಿಶೇಷವೆಂದರೆ ಮಳೆಗಾಲದಲ್ಲಿ ಮಾತ್ರ ಅಣೆಕಟ್ಟು ನೀರಿನಿಂದ ದಿನಕ್ಕೆ 2 - 3 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಇಡೀ ಮೂಡಬಿದಿರೆಗೆ ವಿದ್ಯುತ್ ಪೂರೈಕೆಯಾಗುತ್ತದೆ.
ಹೋಗುವ ಮಾರ್ಗ: ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರಿಂದ 33 ಕಿ.ಮಿ ದೂರದ ಮೂಡುಬಿದಿರೆ ತಂಗುದಾಣದಿಂದ 6.6 ಕಿ.ಮಿ ಗಂಟಲಕಟ್ಟೆ ಇಳಿಯಬೇಕು. ಅಲ್ಲಿಂದ ಆಟೋನಲ್ಲಿ ಸಂಚರಿಸಿದರೆ 3 ಕಿ.ಮಿ ದೂರದಲ್ಲಿ ತಾಕೊಡೆಯ 'ಹನ್ನೆರಡು ಕವಲು' ಸಿಗುತ್ತದೆ. ಒಟ್ಟು ಮೂಡುಬಿದರೆಯಿಂದ ಸರಿಸುಮಾರು 10 ಕಿ.ಮಿ ಮಾತ್ರ. ಮಳೆಗಾಲದಲ್ಲಿ ಇಲ್ಲಿ ಬಂದರೆ ಪ್ರಕೃತಿಯ (Nature) ಸೌಂದರ್ಯದ ಅನುಭವ ಗ್ಯಾರಂಟಿ.
ಇದನ್ನೂ ಓದಿ: ಭಾರತೀಯ ವಿಶಿಷ್ಟ ಸಂಸ್ಕೃತಿ ಪರಿಚಯಿಸುವ ದೇಶದ ಅದ್ಭುತ ತಾಣಗಳಿವು
"ಮಳೆಗಾಲದಲ್ಲಿ ಮಳೆಯ ನೀರಿನಿಂದ ವಿದ್ಯುತ್ ಶಕ್ತಿ (Electricity) ನಿರ್ಮಾಣವಾಗುತ್ತದೆ. 2009ರಲ್ಲಿ ಸ್ಥಾಪನೆಯಾದ ಹೈಡ್ರೋ ಪ್ರಾಜೆಕ್ಟ್ (Hydro Project) ಇನ್ನೂ ಮುಂದುವರೆಯುತ್ತಿದೆ. ಮಳೆ ನೀರನ್ನು ಶೇಕರಣೆ ಮಾಡಿಟ್ಟುಕೊಂಡು ಇದರ ಸಹಾಯದಿಂದ ವಿದ್ಯುತ್ ಶಕ್ತಿ ಉತ್ಪಾದಿಸಲಾಗುತ್ತದೆ. ನಂತರ ನೀರು ಹೊಳೆಗೆ ಸೇರುತ್ತದ್ದೆ. ದಿನಕ್ಕೆ ಎರಡರಿಂದ ಮೂರು ಲಕ್ಷ ಯೂನಿಟ್‌ನಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು. ಇದರಿಂದ ಮೂಡುಬಿದಿರೆಗೆ ವಿದ್ಯುತ್ ಸರಬರಾಜಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.