Latest Videos

ಓಂ ಶಿವೋಂ... ಎರಡೂ ಕಾಲಿಲ್ಲ ಆದರೂ ಅಮರನಾಥಕ್ಕೆ ಇವರದ್ದು 12ನೇ ಯಾತ್ರೆ : ಇವರಿಗಿಂತ ಸ್ಪೂರ್ತಿ ಬೇಕೆ?

By Anusha KbFirst Published Jul 1, 2024, 3:26 PM IST
Highlights

ಅಮರನಾಥ ಯಾತ್ರೆ ಎಂದರೆ ಸುಮ್ಮನೇ ಏನಲ್ಲ...  ಜಮ್ಮು ಕಾಶ್ಮೀರದ ಎತ್ತರದ ಹಿಮಶಿಖರಗಳ ನಡುವೆ ಇರುವ ಹಿಮಲಿಂಗದ ದರ್ಶನ ಮಾಡುವುದಕ್ಕೆ ಕೈ ಕಾಲು ಸರಿ ಇದ್ದವರೇ ಪಡೀಪಾಟಲು ಪಡುತ್ತಾರೆ. ಆದರೆ ಇಲ್ಲೊಬ್ಬ ಅಪ್ಪಟ್ಟ ಶಿವಭಕ್ತನಿಗೆ ಎರಡೂ ಕಾಲುಗಳಿಲ್ಲ, ಆದರೂ ಇದು ಅಮರನಾಥಕ್ಕೆ ಈತನ 12ನೇ ಬಾರಿಯ ಯಾತ್ರೆ. 

ಅಮರನಾಥ ಯಾತ್ರೆ ಎಂದರೆ ಸುಮ್ಮನೇ ಏನಲ್ಲ...  ಜಮ್ಮು ಕಾಶ್ಮೀರದ ಎತ್ತರದ ಹಿಮಶಿಖರಗಳ ನಡುವೆ ಇರುವ ಹಿಮಲಿಂಗದ ದರ್ಶನ ಮಾಡುವುದಕ್ಕೆ ಕೈ ಕಾಲು ಸರಿ ಇದ್ದವರೇ ಪಡೀಪಾಟಲು ಪಡುತ್ತಾರೆ. ಆದರೆ ಇಲ್ಲೊಬ್ಬ ಅಪ್ಪಟ್ಟ ಶಿವಭಕ್ತನಿಗೆ ಎರಡೂ ಕಾಲುಗಳಿಲ್ಲ, ಆದರೂ ಇದು ಅಮರನಾಥಕ್ಕೆ ಈತನ 12ನೇ ಬಾರಿಯ ಯಾತ್ರೆ. 

2024ರ ಅಮರನಾಥ ಯಾತ್ರ ಈಗಾಗಲೇ ಜೂ 29ರ ಶನಿವಾರ ಆರಂಭವಾಗಿದ್ದು, ಈಗಾಗಲೇ ಸಾವಿರಾರು ಭಕ್ತರು ಹಿಮರೂಪಿ ಶಿವನ ದರ್ಶನ ಪಡೆದಿದ್ದಾರೆ. ಹೀಗಿರುವಾಗ ಈ ಬಾರಿಯ ಅಮರನಾಥ ಯಾತ್ರೆಯಲ್ಲಿ  ಗಮನ ಸೆಳೆದಿದ್ದು, ರಾಜಸ್ಥಾನದ ಆನಂದ್ ಸಿಂಗ್ ಎಂಬ ಅಪ್ಪಟ ಶಿವಭಕ್ತ.  ಜಮ್ಮುವಿನ ಭಗವತಿ ನಗರದಲ್ಲಿರುವ ಬೇಸ್‌ ಕ್ಯಾಂಪ್‌ನಿಂದ 6 ಸಾವಿರ ಭಕ್ತರ ಮೂರನೇ ತಂಡ ಅಮರನಾಥಕ್ಕೆ ಯಾತ್ರೆ ಹೊರಟಿದ್ದು, ಈ ಆರು ಸಾವಿರ ಭಕ್ತರಲ್ಲಿ ವಿಶೇಷ ಚೇತನ ಆನಂದ್ ಸಿಂಗ್ ಕೂಡ ಒಬ್ಬರಾಗಿದ್ದು, ಇದು ಅಮರನಾಥಕ್ಕೆ ಅವರ 12ನೇ ಬಾರಿಯ ಪ್ರಯಾಣವಾಗಿದೆ. 

ಮೊದಲ ದಿನವೇ 13000 ಭಕ್ತರಿಂದ ಅಮರನಾಥ ಹಿಮಲಿಂಗದ ದರ್ಶನ

3800 ಅಡಿ ಎತ್ತರದಲ್ಲಿರುವ ಗುಹಾಂತರ ದೇಗುಲದಲ್ಲಿರುವ ಅಮರನಾಥನ ದರ್ಶನ ಪಡೆಯುವುದಕ್ಕೆ ಇವರು ಮಾಡಿದ ಮನೋಸಂಕಲ್ಪದ ಮುಂದೆ ಇವರ ಅಂಗವೈಕಲ್ಯತೆ ಯಾವುದೇ ಅಡ್ಡಿಯಾಗಿಲ್ಲ. 2002ರಲ್ಲಿ ಅಪಘಾತದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ನಂತರ ಆನಂದ್ ಸಿಂಗ್ ಅವರು ಕೇವಲ ಮೂರು ಬಾರಿ ಮಾತ್ರ ಅಮರನಾಥ ಯಾತ್ರೆಯನ್ನು ಮಿಸ್ ಮಾಡಿಕೊಂಡಿದ್ದಾರೆ. 

2010ರಲ್ಲಿ ನಾನು ಬಾಬಾನ ದರ್ಬಾರ್‌ಗೆ ಆಗಮಿಸಲು ಶುರು ಮಾಡಿದೆ. ಕೇದರನಾಥದಲ್ಲಿ ಪ್ರವಾಹದಿಂದಾಗಿ 2013ರಲ್ಲಿ ನನಗೆ ಯಾತ್ರೆ ಮಾಡಲಾಗಲಿಲ್ಲ, ಇದಾದ ನಂತರ ಕೋವಿಡ್ ರೋಗದ ಸಮಯದಲ್ಲೂಎರಡು ವರ್ಷ ಈ ಯಾತ್ರೆ ಸ್ಥಗಿತಗೊಂಡಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಟ್ರಕ್ ಟೈರ್ ಕಟೌಟ್‌ನಲ್ಲಿ ಕುಳಿತು ಬರುವ ಅವರು ಅದು ಮುಂದೆ ಸಾಗಲು ತಮ್ಮ ಕೈಗಳನ್ನು ಬಳಸುತ್ತಾರೆ. ಮೊದಲ ನಾಲ್ಕು ಹಾಗೂ ಐದು ವರ್ಷಗಳು ನಾನು ನನ್ನ ಕೈಗಳ ಮೂಲಕ ನನ್ನನ್ನು ಎಳೆದುಕೊಂಡು ಮೇಲೆ ಏರುತ್ತಿದ್ದೆ. ಆದರೆ ಈಗ ನನಗೆ ಕಷ್ಟವಾಗುತ್ತಿದೆ. ಈಗ ನಾನು ಪಲ್ಲಕ್ಕಿಯಲ್ಲಿ ಸಾಗುತ್ತಿದ್ದೇನೆ ಎಂದು ಸಿಂಗ್ ಹೇಳಿದರು. 

ಯಾತ್ರಿಗಳ ಅನುಕೂಲಕ್ಕೆ ಶೀಘ್ರವೇ ಅಮರನಾಥ ಗುಹೆಗೆ ರಸ್ತೆ ಮಾರ್ಗ!

ನಾನು ಶಿವನ ಜೊತೆ ವಿಶೇಷವಾದ ಅನುಬಂಧವನ್ನು ಹೊಂದಿದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿಯೇ ನಾನು ಇಲ್ಲಿಗೆ ಬರುತ್ತಿದ್ದೇನೆ. ವೈಕಲ್ಯತೆ ಇದ್ದರೂ ನನಗ್ಯಾವುದೂ ಭಾರ ಎನಿಸುತ್ತಿಲ್ಲ, ಕೆಲವರು ನನ್ನನ್ನು ಟೀಕಿಸುತ್ತಾರೆ. ಮತ್ತೆ ಕೆಲವರು ನನ್ನನ್ನು ಹುರಿದುಂಬಿಸುತ್ತಾರೆ. ಎಲ್ಲರೂ ಒಂದೇ ತರ ಇರುವುದಿಲ್ಲ, ಆದರೆ ಅದ್ಯಾವುದು ನನಗೆ ನಾಟುವುದಿಲ್ಲ ನಾನು ನಾನಾಗಿಯೇ ಇಲ್ಲಿಗೆ ಬರಲು ಸಾಧ್ಯವಾಗುವಷ್ಟು ಸಮಯ ನಾನು ಇಲ್ಲಿಗೆ ಬರುವೆ ಎನ್ನುತ್ತಾರೆ ಆನಂದ್ ಸಿಂಗ್.  

52 ದಿನಗಳ ಈ ತೀರ್ಥಯಾತ್ರೆ ಜೂನ್ 29ರಂದು ಆರಂಭವಾಗಿದ್ದು, ಆಗಸ್ಟ್ 19ರವರೆಗೆ ನಡೆಯಲಿದೆ. ಈ ಹಿಮಲಿಂಗವನ್ನು 150 ವರ್ಷಗಳ ಹಿಂದೆ ಕುರಿಗಾಹಿಯೋರ್ವ ಪತ್ತೆ ಮಾಡಿದ ಎಂದು ನಂಬಲಾಗಿದೆ. ಒಟ್ಟಿನಲ್ಲಿ ಆನಂದ್ ಸಿಂಗ್ ಅವರು ಮನಸ್ಸಿದ್ದರೆ  ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅಪ್ಪಟ ಉದಾಹರಣೆಯಾಗಿದ್ದಾರೆ.

click me!