ಎರಡು ವರ್ಷಗಳ ವಿರಾಮದ ನಂತರ ಅಮರನಾಥ ದೇವಾಲಯ (Amarnath Temple)ವು ಜೂನ್ 30ರಂದು ಪುನರಾರಂಭಗೊಳ್ಳಲಿದೆ. ಈಗಾಗ್ಲೇ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಕೌಂಟರ್ (Kashmir Bank Counter)ಗಳ ಮೂಲಕ 20,000ಕ್ಕೂ ಹೆಚ್ಚು ಯಾತ್ರಾರ್ಥಿಗಳು (Pilgrims) ಪವಿತ್ರ ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ದಕ್ಷಿಣಕಾಶ್ಮೀರದ ಹಿಮಾಲಯದಲ್ಲಿರುವ ಪ್ರಸಿದ್ಧ ಅಮರನಾಥ (Amarnath Temple) ವಾರ್ಷಿಕ ಯಾತ್ರೆಗೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎರಡು ವರ್ಷಗಳ ವಿರಾಮದ ನಂತರ ಅಮರನಾಥ ದೇವಾಲಯವು ಜೂನ್ 30ರಂದು ಪುನರಾರಂಭಗೊಳ್ಳಲಿದೆ. ಈಗಾಗ್ಲೇ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಕೌಂಟರ್ (Bank Counter)ಗಳ ಮೂಲಕ 20,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಪವಿತ್ರ ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ (Register) ಪ್ರಾರಂಭವಾದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 20,000 ಕ್ಕೂ ಹೆಚ್ಚು ಭಕ್ತರುವಾರ್ಷಿಕ ಅಮರನಾಥ ಯಾತ್ರೆಗೆ ಹೆಸರು ದಾಖಲಿಸಿದ್ದಾರೆ. ಇದು ದಕ್ಷಿಣ ಕಾಶ್ಮೀರ ಗುಹೆ ದೇಗುಲಕ್ಕೆ ತೀರ್ಥಯಾತ್ರೆಗೆ ಜನರಿಂದ ಹೆಚ್ಚುತ್ತಿರುವ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
43 ದಿನಗಳ ಯಾತ್ರೆಯು ಜೂನ್ 30ರಂದು ಆರಂಭವಾಗಲಿದ್ದು, ಸಂಪ್ರದಾಯದಂತೆ ಆಗಸ್ಟ್ 11 ರಕ್ಷಾಬಂಧನ ದಿನದಂದು ಮುಕ್ತಾಯಗೊಳ್ಳಲಿದೆ. ಅಮರನಾಥ ಯಾತ್ರೆ ಎರಡು ವರ್ಷಗಳ ನಂತರ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನ 2019ರಲ್ಲಿ ಯಾತ್ರೆಯನ್ನು ಮಧ್ಯಂತರದಲ್ಲಿ ರದ್ದುಗೊಳಿಸಲಾಗಿತ್ತು. ನಂತರ ಕಾಣಿಸಿಕೊಂಡ ಕೋವಿಡ್ ಸೋಂಕಿನ ಭೀತಿಯಿಂದಾಗಿ ಕಳೆದ ಎರಡು ವರ್ಷದಿಂದ ಯಾತ್ರೆಯು ಕೇವಲ ಸಾಂಕೇತಿಕ ಅಚರಣೆಗೆ ಮೀಸಲಾಗಿತ್ತು.
Richest Countries: ವಿಶ್ವದ ದುಬಾರಿ ದೇಶಗಳು ಯಾವುವು ಗೊತ್ತಾ?
ಈ ಬಾರಿ ಎಪ್ರಿಲ್ 11 ರಂದು ನೋಂದಣಿ ಪ್ರಾರಂಭವಾದಾಗಿನಿಂದ ಕೇವಲ 13 ಕೆಲಸದ ದಿನಗಳಲ್ಲಿ 20,599 ಭಕ್ತರನ್ನು ನೋಂದಾಯಿಸಲಾಗಿದೆ ಎಂದು ಜೆ-ಕೆ ಬ್ಯಾಂಕ್ ಎಂಡಿ ಮತ್ತು ಸಿಇಒ ಬಲದೇವ್ ಪ್ರಕಾಶ್ ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡು ವರ್ಷಗಳ ನಂತರ ಯಾತ್ರೆ ಪುನರಾರಂಭವಾಗುತ್ತಿರುವುದರಿಂದ, ಶ್ರೀ ಅಮರನಾಥಜಿ ಗುಹೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಈ ವರ್ಷ ಉತ್ತಮ ಏರಿಕೆಯನ್ನು ನಾವು ನಿರೀಕ್ಷಿಸುತ್ತೇವೆ. ದೇಶಾದ್ಯಂತ ನಮ್ಮ ಗೊತ್ತುಪಡಿಸಿದ ವ್ಯಾಪಾರ ಘಟಕಗಳಲ್ಲಿ ಅವರ ಸಹಾಯಕ್ಕಾಗಿ ಸ್ಥಾಪಿಸಲಾದ ಮೀಸಲಾದ ಕೌಂಟರ್‌ಗಳ ಮೂಲಕ ನಾವು ಅವರ ಸುಲಭ ಮತ್ತು ಸುಗಮ ನೋಂದಣಿಯನ್ನು ಸುಗಮಗೊಳಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಪ್ರಕಾಶ್ ಹೇಳಿದರು.
ಯಾತ್ರೆಯ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಮೂಲಭೂತ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಬ್ಯಾಂಕ್ ಯಾತ್ರೆಯ ಮಾರ್ಗದಲ್ಲಿ ಎರಡು ವಿಶೇಷ ಕೌಂಟರ್‌ಗಳು, ನಾಲ್ಕು ಎಟಿಎಂಗಳು ಮತ್ತು ಎರಡು ಮೈಕ್ರೋ ಎಟಿಎಂಗಳನ್ನು ಸ್ಥಾಪಿಸಿಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಬ್ಯಾಂಕ್ ನೋಂದಣಿಗಾಗಿ 90 ಗೊತ್ತುಪಡಿಸಿದ ವ್ಯಾಪಾರ ಘಟಕಗಳನ್ನು ಹೊಂದಿದ್ದು ಅದು ಆಗಸ್ಟ್ 3 ರ ವರೆಗೆ ತೆರೆದಿರುತ್ತದೆ ಎಂದು ತಿಳಿದುಬಂದಿದೆ.
ಸಮ್ಮರ್ ಟ್ರಾವೆಲ್ ಗೆ ರೆಡಿಯಾಗಿದ್ರೆ ಈ 6 ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿರಲಿ
5000 ವರ್ಷ ಹಳೆಯ ಅಮರನಾಥ ದೇವಾಲಯ
ಅಮರನಾಥ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು 5000 ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು (stalagmite) ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. ೩,೮೮೮ ಮೀಟರ್ ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು ೧೪೧ ಕಿ.ಮಿ. ದೂರದಲ್ಲಿದೆ. ಅಮರನಾಥ ಪದದ ಅರ್ಥ ಅಮರ ಅಂದರೆ ಚಿರಂಜೀವಿ ಹಾಗು ನಾಥ ಅಂದರೆ ದೇವರು ಎಂಬ ಎರಡು ಪದಗಳಿಂದ ಈ ಸ್ಥಳವು ಅಮರನಾಥ ಎಂಬ ಹೆಸರನ್ನು ಪಡೆದಿದೆ.