Travel Tips: ಸಾಮಾಜಿಕ ಜಾಲತಾಣದಲ್ಲಿ ಬೋರ್ಡಿಂಗ್ ಪಾಸ್ ಪೋಸ್ಟ್ ಮಾಡುವ ಮುನ್ನ ಎಚ್ಚರ

By Suvarna NewsFirst Published Apr 25, 2022, 3:59 PM IST
Highlights

Tips for travel in Kannada: ಪ್ರವಾಸದ ಖುಷಿಯಲ್ಲಿ ನಾವೇನು ಮಾಡ್ತೇವೆ ಎಂಬುದೇ ಅನೇಕ ಬಾರಿ ತಿಳಿದಿರುವುದಿಲ್ಲ. ಕುಟುಂಬಸ್ಥರೆಲ್ಲ ಪ್ರವಾಸಕ್ಕೆ ಹೊರಟ ಪೋಟೋ ಹಾಕಿದ್ದೇ ತಡ, ಈ ಕಡೆ ಕಳ್ಳರು ಕೈಚಳ ತೋರಿಸ್ತಾರೆ. ಹಾಗೆ ಬೋರ್ಡಿಂಗ್ ಪಾಸ್ ಫೋಟೋ ಹಾಕಿ ಖಾತೆಯನ್ನು ಹ್ಯಾಕರ್ ಬಾಯಿಗೆ ನೀಡಿದವರು ಸಾಕಷ್ಟು ಮಂದಿ. 
 

ಪ್ರಯಾಣ (Travel) ಬಹುತೇಕರಿಗೆ ಇಷ್ಟ. ಜನರು ಪ್ರವಾಸ (Tour) ಕ್ಕೆ ಹೋಗಲು ತುಂಬಾ ಉತ್ಸುಕರಾಗಿರ್ತಾರೆ. ಪ್ರವಾಸದ ಪ್ಲಾನ್ (Plan) ಮಾಡಿದಾಗಿನಿಂದ ಪ್ರವಾಸಕ್ಕೆ ಹೋಗಿ ಬರುವವರೆಗೂ ಪ್ರತಿಯೊಂದು ವಿಷ್ಯದ ಬಗ್ಗೆ ಹೆಚ್ಚಿನ ಗಮನ ಹರಿಸ್ತಾರೆ. ಸಾಮಾಜಿಕ ಜಾಲತಾಣ (Social Media) ಈಗ ಎಲ್ಲರ ಅಚ್ಚುಮೆಚ್ಚು. ಪ್ರತಿಯೊಂದು ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಹಾಗೇ ಪ್ರವಾಸದ ಪ್ರತಿ ಕ್ಷಣವನ್ನು ಕ್ಯಾಮರಾ (Camera) ದಲ್ಲಿ ಸೆರೆ ಹಿಡಿದು ಅದನ್ನು ಹಂಚಿಕೊಳ್ತಾರೆ. ಫೋಟೋ (Photo ) ಹಂಚಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಆದ್ರೆ ನಾವು ಖುಷಿ (Enjoy) ಯಲ್ಲಿ ಎಲ್ಲವನ್ನೂ ಪೋಸ್ಟ್ ಮಾಡ್ತೇವೆ. ಕೆಲವೊಮ್ಮೆ ಪೂರ್ವಾಪರ ಆಲೋಚನೆ ಮಾಡದೆ ಬೋರ್ಡಿಂಗ್ ಪಾಸ್ (Boarding Pass), ಫೋಟೋಗಳನ್ನು ಅಂತರ್ಜಾಲದಲ್ಲಿ ಹಾಕುತ್ತೇವೆ. ಆದ್ರೆ ಈ ತಪ್ಪನ್ನು ಎಂದಿಗೂ ಮಾಡ್ಬಾರದು. ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದೆ. ಇಂದು, ಯಾಕೆ ಸಾಮಾಜಿಕ ಜಾಲತಾಣದಲ್ಲಿ ಬೋರ್ಡಿಂಗ್ ಪಾಸ್ ಪೋಸ್ಟ್ ಮಾಡ್ಬಾರದು ಎಂಬುದನ್ನು ನಾವು ಹೇಳ್ತೇವೆ.

ಸಾಮಾಜಿಕ ಜಾಲತಾಣದಲ್ಲಿ ಬೋರ್ಡಿಂಗ್ ಪಾಸ್ : ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ನಾವು ಫೋಟೋ ಜೊತೆ ಬೋರ್ಡಿಂಗ್ ಪಾಸ್ ಹಂಚಿಕೊಂಡಿರುತ್ತೇವೆ. ಆದ್ರೆ ಎಂದಿಗೂ ಈ ಕೆಲಸ ಮಾಡ್ಬಾರದು. ಬೋರ್ಡಿಂಗ್ ಪಾಸ್ ನಲ್ಲಿ ಹಲವು ವೈಯಕ್ತಿಕ ವಿವರಗಳನ್ನು ನೀಡಲಾಗಿರುತ್ತದೆ. ಅದನ್ನು ಯಾರು ಬೇಕಾದರೂ ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು. ಹ್ಯಾಕರ್‌ಗಳ ಬಾಯಿಗೆ ನಾವು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಬೋರ್ಡಿಂಗ್ ಪಾಸ್ ನಲ್ಲಿ ಬ್ಯಾಂಕ್ ವಿವರಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಇಮೇಲ್ ಪಾಸ್ವರ್ಡ್‌ಗಳಿರುತ್ತವೆ. ಇದನ್ನು ಬಳಸಿಕೊಂಡು ಹ್ಯಾಕರ್ ಗಳು  ಸುಲಭವಾಗಿ ನಮಗೆ ಮೋಸ ಮಾಡ್ಬಹುದು.

ಇದನ್ನೂ ಓದಿ: ಸಾಲು ಸಾಲು ರಜೆ, ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಕಲರವ

ಬೋರ್ಡಿಂಗ್ ಪಾಸ್ ಎಂದರೇನು ? : ಬೋರ್ಡಿಂಗ್ ಪಾಸ್ ಅಂದ್ರೇನು ಎಂಬುದು ಅನೇಕರಿಗೆ ತಿಳಿದಿಲ್ಲ. ಬೋರ್ಡಿಂಗ್ ಪಾಸ್ ವಿಮಾನ ಪ್ರಯಾಣಕ್ಕೆ ಟಿಕೆಟ್ ಆಗಿ ಕಾರ್ಯನಿರ್ವಹಿಸುತ್ತದೆ. ಟಿಕೆಟ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಬುಕ್ ಮಾಡಬಹುದು.  ಟಿಕೆಟ್ ಬುಕ್ ಮಾಡಿದ ಏರ್‌ಲೈನ್‌ನ ಕೌಂಟರ್‌ನಿಂದ ಬೋರ್ಡಿಂಗ್ ಪಾಸ್ ಸ್ವೀಕರಿಸಬೇಕು.

ಬೋರ್ಡಿಂಗ್ ಪಾಸ್‌ನಲ್ಲಿ ವೈಯಕ್ತಿಕ ವಿವರಗಳು : ಬೋರ್ಡಿಂಗ್ ಪಾಸ್‌ನಲ್ಲಿ ನಿಮ್ಮ ಹೆಸರು, ವಿಮಾನ ಸಂಖ್ಯೆ, ತಲುಪಬೇಕಾದ ಸ್ಥಳ, ಬೋರ್ಡಿಂಗ್ ಗೇಟ್, ಸೀಟ್ ಸಂಖ್ಯೆ ಮತ್ತು ಬಾರ್ ಕೋಡ್‌ನಂತಹ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.  ಫೋಟೋವನ್ನು ಬ್ಲರ್ ಮಾಡದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ, ಈ ಮಾಹಿತಿಯನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳಬಹುದು. ಹಾಗಾಗಿ ಫೋಟೋ ಹಾಕುವ ಮೊದಲು ಬೋರ್ಡಿಂಗ್ ಪಾಸ್ ಬ್ಲರ್ ಮಾಡಿ.

ಇದನ್ನೂ ಓದಿ: Travel Tips : ಪಾಸ್ಪೋರ್ಟ್ ಚಿಂತೆ ಬಿಡಿ.. ಈ ಸುಂದರ ದ್ವೀಪಕ್ಕೊಮ್ಮೆ ಭೇಟಿ ನೀಡಿ

ಹ್ಯಾಕರ್ ಬಾಯಿಗೆ ಆಹಾರವಾಗ್ತಿದೆ ಬಾರ್ ಕೋಡ್ : ಬೋರ್ಡಿಂಗ್ ಪಾಸ್‌ನಲ್ಲಿರುವ ಬಾರ್‌ಕೋಡನ್ನು ಹ್ಯಾಕರ್‌ಗಳು ಸುಲಭವಾಗಿ ಸ್ಕ್ಯಾನ್ ಮಾಡಬಹುದು.  ಎಲ್ಲಾ ಪ್ರಮುಖ ಮಾಹಿತಿಯನ್ನು ಹ್ಯಾಕ್ ಮಾಡಬಹುದು. ಇದರ ಸಹಾಯದಿಂದ  ಕ್ರೆಡಿಟ್ ಕಾರ್ಡ್, ಬ್ಯಾಂಕ್ ಖಾತೆ, ಇಮೇಲ್ ಪಾಸ್ವರ್ಡ್ ಮುಂತಾದ ಎಲ್ಲಾ ಮಾಹಿತಿ ಪಡೆಯುವ ಮೂಲಕ ವಂಚನೆ ಮಾಡ್ಬಹುದು. ಫೋಟೋ ಪೋಸ್ಟ್ ಮಾಡುವ ಖುಷಿಯಲ್ಲಿ ನೀವು ಖಾತೆ ಖಾಲಿ ಮಾಡಿಕೊಳ್ಳುವ ಮೊದಲು ಎಚ್ಚರಿಕೆವಹಿಸಿ. 

ಪ್ರಯಾಣದ ನಂತರ ಬೋರ್ಡಿಂಗ್ ಪಾಸ್ ಅನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಅನೇಕ ಜನರು ಪ್ರಯಾಣ ಮುಗಿದಾಗ ಬೋರ್ಡಿಂಗ್ ಪಾಸ್ ಅನ್ನು ಅಲ್ಲಿ ಇಲ್ಲಿ ಎಸೆಯುತ್ತಾರೆ. ಒಂದ್ವೇಳೆ ಬೋರ್ಡಿಂಗ್ ಪಾಸ್ ಹ್ಯಾಕರ್‌ಗಳ ಕೈಯಲ್ಲಿ ಸಿಕ್ಕರೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪ್ರಯಾಣ ಮುಗಿದ ನಂತ್ರ ಅದನ್ನು ಕಸಕ್ಕೆ ಎಸೆಯುವ ಮುನ್ನ ಹರಿದು ಎಸೆಯಿರಿ. ಯಾವುದೇ ಮಾಹಿತಿ ಸಿಗದಂತೆ ನೋಡಿಕೊಳ್ಳಿ.

click me!