
ಬೆಂಗಳೂರಿನ ಸಹಕಾರ ನಗರದಲ್ಲಿ ಇರುವ ಮೈಸೂರು ಡೈನಿಂಗ್ ಹಾಲ್ ಗೆ ಹೋದಾಗ ಒಂದು ಕ್ಷಣ ನಾವು ಬಾಲ್ಯಕ್ಕೆ ಮರಳಿದ ಅನುಭವವಾಗುತ್ತದೆ. ಬಿಳಿ ಗೋಡೆ, ಮರದ ಕಿಟಕಿಗಳು ನಮ್ಮನ್ನು ಹಳೆ ಕಾಲಕ್ಕೆ ಕರೆದೊಯ್ಯುತ್ತೆ. ಮಧ್ಯಾಹ್ನದ ವೇಳೆಗೆ ಈ ಹೊಟೇಲ್ ನಲ್ಲಿ ಜನ ತುಂಬಿರ್ತಾರೆ. ಇದು ಬರೀ ಊಟ ಬಡಿಸುವ, ಹೊಟ್ಟೆ ತುಂಬಿಸುವ ಜಾಗವಲ್ಲ. ಒಂದು ಅದ್ಭುತ ಅನುಭವ. ಇದು ಕರ್ನಾಟಕದ ಸಾಂಪ್ರದಾಯಿಕ ಮಿಲಿಟರಿ ಹೋಟೆಲ್ ಶೈಲಿಯ ಊಟಕ್ಕೆ ಪ್ರಸಿದ್ಧವಾಗಿದೆ.
ಇದು ಬಾಯಗ್ ವೆಂಚರ್ಸ್ ಹಾಸ್ಪಿಟಾಲಿಟಿ ಗ್ರೂಪ್ನ ಹೊಸ ರೆಸ್ಟೋರೆಂಟ್. ಆದ್ರೆ ಯಾಕಾಯ, ಬಾಬ್ಸ್ ಬಾರ್ಗಳಂತಿಲ್ಲ. ಇಲ್ಲಿ ಸಿಂಪ್ಲಿಸಿಟಿಯೇ ಹೆಚ್ಚು ಸ್ಪೇಷಲ್. ಆರಂಭದಲ್ಲಿ ಬ್ಲ್ಯಾಕ್ಬೋರ್ಡ್ ಮೇಲೆ ಬರೆದಿರುವ ಮೆನು ಗಮನ ಸೆಳೆಯುತ್ತದೆ. ಇಲ್ಲಿ ಯಾವುದೇ ಶೋ ಆಫ್ ಇಲ್ದೆ ಸಿಂಪಲ್ ಆಗಿ ಬರೆಯಲಾಗಿದೆ. ಸಿಂಪಲ್ಲಿಸಿಟಿಗೆ ಆದ್ಯತೆ ನೀಡಿರುವ ರೆಸ್ಟೋರೆಂಟ್ ನಲ್ಲಿ ರುಚಿಯಲ್ಲಿ ರಾಜಿ ಇಲ್ಲ. ಆಹಾರದ ರುಚಿ ಸೂಪರ್.
ಇಲ್ಲಿ ಸಿಗೋ ಊಟ ನಿಜವಾದ ಕರ್ನಾಟಕದ ಸವಿಯ ಅನುಭವ ಕೊಡುತ್ತದೆ. ಇದು ಮಿಲಿಟ್ರಿ ಹೊಟೇಲ್ ಸ್ಟೈಲ್ ನಲ್ಲಿದೆ. ಬೆಳಿಗ್ಗೆ ಬ್ರೇಕ್ಫಾಸ್ಟ್ನಿಂದ, ಮಧ್ಯಾಹ್ನ ಊಟ, ಸಂಜೆ ಸ್ನ್ಯಾಕ್ಸ್, ರಾತ್ರಿ ಸ್ಪೆಷಲ್ ಡಿನ್ನರ್ ಎಲ್ಲವೂ ಇಲ್ಲಿ ಲಭ್ಯ. ಇಲ್ಲಿನ ಇನ್ನೊಂದು ಖುಷಿ ವಿಷ್ಯ ಅಂದ್ರೆ ಪಾರ್ಕಿಂಗ್ ಸಮಸ್ಯೆ ಇಲ್ದಿರೋದು. ರೆಸ್ಟೋರೆಂಟ್ ಹಿಂಭಾಗದಲ್ಲಿ ದೊಡ್ಡ ಪಾರ್ಕಿಂಗ್ ಜಾಗವಿದೆ. ಕಿಟಕಿ ಬಳಿ ಕುಳಿದ್ರೆ ಮುಂದಿರುವ ಕನ್ನಡಿ ನಮ್ಮನ್ನು ಆಕರ್ಷಿಸುತ್ತದೆ.
Forbidden Places: ಭಾರತದಲ್ಲಿವೆ 5 ನಿಗೂಢ ಸ್ಥಳಗಳು.. ಕೋಟಿ ಕೊಟ್ಟರೂ ಇಲ್ಲಿಗೆ ಹೋಗೋಕೆ ಆಗಲ್ಲ.. ಯಾಕೆ?
ನೀವು ಕ್ಯೂ ಆರ್ ಕೋಡ್ ಸಹಾಯದಿಂದ ಮೆನು ಸರ್ಚ್ ಮಾಡ್ಬೇಕು. ಅಲ್ಲಿನ ಸಿಬ್ಬಂದಿ ಮೆನು ಪತ್ತೆಗೆ ಸಹಾಯ ಮಾಡ್ತಾರೆ. ಒಂದು ಪ್ಲೇಟ್ ನಲ್ಲಿ ಹತ್ತಾರು ಐಟಂ ನೀವು ತಿನ್ಬಹುದು. ರಾಗಿ ಮುದ್ದೆ,ಅನ್ನ, ಬೆಬಿ ಕಾರ್ನ್ ಪೆಪ್ಪರ್ ಫ್ರೈ, ಮಟನ್ ಕರೀ, ಪಲಾವ್, ದಹಿ, ಪಾಪಡ್, ಗುಲಾಬ್ ಜಾಮೂನ್ ಸೇರಿದಂತೆ ಎಲ್ಲವೂ ಒಂದೇ ಪ್ಲೇಟ್ ನಲ್ಲಿ ಸಿಗುತ್ತದೆ. ಊಟ ಮುಗಿದ್ಮೇಲೆ ನೀವು ಸಿಹಿ ತಿಂದು ಹೊರಗೆ ಬರ್ಬಹುದು. ಫೇಣಿ ಇಲ್ಲಿನ ವಿಶೇಷ. ಈ ಫೇಣಿಯನ್ನು ಒಮ್ಮೆ ತಿಂದ್ರೆ ಪದೇ ಪದೇ ತಿನ್ಬೇಕು ಅನ್ನಿಸುತ್ತೆ.
ಡೈನಿಂಗ್ ಹಾಲ್ ಕಾಂಬೊಗಳಲ್ಲಿ ತಟ್ಟೆ ಇಡ್ಲಿ, ದೋಸೆ, ಶಾವಿಗೆ, ನೂಲ್ ಪರೋಟಾ, ನಾಟಿ ಕೋಳಿ ಸಾರು, ಮಟನ್ ಕೈಮಾ ಗೊಜ್ಜು, ಅವರೆ ಕಾಳು ಗೊಜ್ಜು ಮತ್ತು ಚಿಕನ್ ಕೈಮಾ ಉಂಡೆ ಕರಿ ಸೇರಿದಂತೆ ಅನೇಕ ಖಾದ್ಯ ಇಲ್ಲಿ ಲಭ್ಯವಿದೆ. ಒಂದು ತಾಲಿ ಬೆಲೆ ಇಬ್ಬರಿಗೆ 400 ರೂಪಾಯಿ.
ನೀವು ಈ ಐಸ್‌ಕ್ರೀಂ ತಿಂತೀರಾ?, ಹಾಗಾದ್ರೆ ಪಕ್ಕಾ ಪ್ಲಾನ್ ಮಾಡೋದು ಇವ್ರ ಕ್ಯಾರೆಕ್ಟರ್ ಅಂತೆ
ಫಾಸ್ಟ್ ಜೀವನದಲ್ಲಿ ಸಮಯ ಕಳೆದಿದ್ದೇ ತಿಳಿಯೋದಿಲ್ಲ. ಹಾಗಿರುವಾಗ ಇಂಥ ಜಾಗಗಳು ಬರೀ ಹೊಟ್ಟೆ ತುಂಬಿಸೋದಲ್ಲದೆ ಓಡ್ತಿರುವ ನಮ್ಮ ದೇಹ, ಮನಸ್ಸನ್ನು ಶಾಂತಗೊಳಿಸುತ್ತದೆ. ನಮ್ಮ ಮನಸ್ಸಿಗೆ ಬ್ರೇಕ್ ನೀಡುತ್ತದೆ. ಹಳೆ ಕಾಲದ ಶೈಲಿ ನಿಮಗೆ ಇಷ್ಟವಾಗುತ್ತೆ, ಹೊಸ ರುಚಿಗಳನ್ನು ನೀವು ಟೇಸ್ಟ್ ಮಾಡ ಬಯಸ್ತೀರಿ ಅಂದ್ರೆ ಇಲ್ಲಿಗೆ ಭೇಟಿ ನೀಡ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.