
ವಾರ ಇಡೀ ಮನೇಲಿರ್ತೀರ. ವೀಕೆಂಡ್ ಬಂದಾಗ್ಲೂ ಕ್ಲೀನಿಂಗ್, ಹೇರ್ ಕಟ್ಟಿಂಗ್, ಬ್ಯೂಟಿ ಸಲೂನ್ ಅಂತ ಟೈಮ್ ವೇಸ್ಟ್ ಮಾಡೋ ಬದಲು ನಿಮ್ಮ ಮೂಡ್ಅನ್ನು ರಿಫ್ರೆಶ್ ಮಾಡುವಂಥಾ ತಾಣಗಳಿಗೆ ಹೋಗಿ ಬನ್ನಿ. ಮನಸ್ಸು ಖುಷಿ ಖುಷಿಯಾಗಿರುತ್ತೆ. ಲೈಫ್‌ನ ಬಗ್ಗೆ ಇಂಟರೆಸ್ಟ್ ಬರುತ್ತೆ. ಹೆಂಡ್ತಿ ಅಥವಾ ಗಂಡನ ಜೊತೆಗಿನ ಧುಸುಮುಸು ಕಮ್ಮಿ ಆಗುತ್ತೆ. ವಾರವಿಡೀ ಸ್ಕ್ರೀನ್ ನೋಡೋ ಮಕ್ಕಳಿಗೆ ರಿಫ್ರೆಶಿಂಗ್ ಆಗಿರುತ್ತೆ.
1. ಪ್ರಕೃತಿ ಇಷ್ಟಪಡೋರು ಹೆಸರಘಟ್ಟಕ್ಕೆ ಹೋಗ್ಬನ್ನಿ
ವಿಶಾಲವಾದ ಕೆರೆ, ಅದರ ಬದುವಿನ ಮೇಲೆ ನಡಿಯೋವಾಗ ಯಾವ ಕಲ್ಮಶವೂ ಇಲ್ಲದ ಗಾಳಿ ಮನಸ್ಸನ್ನ ಪ್ರಫ್ರುಲ್ಲಗೊಳಿಸುತ್ತೆ. ಇದೇ ದಾರಿಯಲ್ಲಿ ಮುಂದೆ ಹೋದ್ರೆ ನೃತ್ಯಗ್ರಾಮವಿದೆ. ಒಡಿಸ್ಸಿ ಡ್ಯಾನ್ಸ್ ನ ದಂತಕತೆ ಪ್ರೊತಿಮಾ ಬೇಡಿ ಸ್ಥಾಪಿಸಿರೋ ಈ ನೃತ್ಯಗ್ರಾಮದಲ್ಲಿ ಸದಾ ಒಡಿಸ್ಸಿ ಡ್ಯಾನ್ಸ್ ಅಭ್ಯಾಸ ನಡೀತಿರುತ್ತೆ. ಮೌನವಾಗಿ ನಿಂತು ಡ್ಯಾನ್ಸ್ ನೋಡಬಹುದು. ಮರ, ಕುಟೀರ, ಓಪನ್ ಥಿಯೇಟರ್‌ಗಳ ಈ ನೃತ್ಯಗ್ರಾಮದೊಳಗೆ ಓಡಾಡೋದೂ ಖುಷಿ. ತೋಟಗಾರಿಕಾ ಇಲಾಖೆಯ ಫಾರ್ಮ್ ಇದೆ. ಆದರೆ ಒಳಗೆ ಹೋಗೋಕೆ ಸ್ಪೆಷಲ್ ಪರ್ಮಿಶನ್ ಬೇಕು. ಹೊರಗಿನಿಂದ ನೋಡ್ಕೊಂಡು ಬರಬಹುದು. ಮಕ್ಕಳಿಗೆ ಕೃಷಿಯ ಬಗ್ಗೆ ತಿಳಿಸಿಕೊಡಬೇಕು ಅಂದ್ರೆ ಇಲ್ಲಿ ಅನೇಕ ತೋಟಗಳಿವೆ. ರೈತರ ಪರ್ಮಿಶನ್ ತಗೊಂಡು ಈ ಗದ್ದೆಯೊಳಗೆ ಹೋಗಬಹುದು.
ಮಳೆಗಾಲದಲ್ಲಿ ಘಾಟಿ ರೈಡ್ ಮಾಡುವಾಗ ಎಚ್ಚರ! ಈ ನಿಯಮಗಳನ್ನು ಪಾಲಿಸಿ
2. ಕೆರೆ, ಬೆಟ್ಟಗಳ ಚಿಕ್ಕಬಳ್ಳಾಪುರ
ಅಲ್ಲಲ್ಲಿ ಹೂವಿನ ತೋಟ, ಚಿಕ್ಕ ಚಿಕ್ಕ ಊರುಗಳು, ಊರೊಳಗೆ ಹೋದರೆ ನೇರಳೆ, ಡ್ರ್ಯಾಗನ್ ಪ್ರುಟ್ ನಂಥಾ ಹೊಸ ಹೊಸ ಬೆಳೆಗಳ ಹೊಲ ಗದ್ದೆ. ಅಲ್ಲಲ್ಲಿ ಗುಡ್ಡ, ದೊಡ್ಡ ಕೆರೆ, ಹಸಿರೋ ಹಸಿರು. ಈ ಊರಲ್ಲಿ ನೀರು ಕಡಿಮೆ, ಬರ ಹೆಚ್ಚು ಅಂತಾರೆ. ಆದರೆ ಈಗ ನೀವು ಚಿಕ್ಕಬಳ್ಳಾಪುರಕ್ಕೆ ವಿಸಿಟ್ ಮಾಡಿದ್ರೆ ಈ ಮಾತನ್ನ ನಂಬಲ್ಲ. ಬರದ ನಾಡಿನ ಯಾವ ಕುರುಹೂ ಇಲ್ಲದೇ ಹಸಿರಿನಿಂದ ತುಂಬಿದೆ ಈ ಜಿಲ್ಲೆ. ಆವಲ ಬೆಟ್ಟಕ್ಕೆ ಹೋಗಿ ಬಂಡೆಗಳ ನಡಿಗೆ ಮಾಡಬಹುದು. ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಊರು ಮುದ್ದೇನಹಳ್ಳಿಗೆ ವಿಸಿಟ್ ಮಾಡಬಹುದು. ಇಲ್ಲಿ ಅವರ ಕಾರ್ಯಗಳ ಸಮಗ್ರ ವಿವರ ನೀಡುವ ಮ್ಯೂಸಿಯಂ ಇದೆ. ಜಕ್ಕಳ ಮಡಗು ಡ್ಯಾಮ್, ಗುಮ್ಮನಾಯಕ ಕೋಟೆ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಟ್ರೆಕ್ಕಿಂಗ್ ಪ್ರಿಯರಿಗೆ ಸ್ಕಂದಗಿರಿ ಇದೆ.
3. ಕೋಲಾರದ ಅಂತರಗಂಗೆಯ ಮಡಿಲು
ಕೋಲಾರದ ಅಂತರ ಗಂಗೆ ಬೆಟ್ಟ, ಅಲ್ಲಿಯ ನಿಸರ್ಗ ನಿರ್ಮಿತ ಸುರಂಗಗಳು ಪ್ರಾಕೃತಿಕ ಸೌಂದರ್ಯದ ಜೊತೆಗೆ ಅಧ್ಯಾತ್ಮ ಪ್ರಿಯರನ್ನೂ ಸ್ವಾಗತಿಸುತ್ತವೆ. ಕೋಲಾರದಿಂದ ಸುಮಾರು ೩೦ ಕಿಮೀ ದೂರ ಹೋದ್ರೆ ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ನಿರ್ಮಿಸಲ್ಪಟ್ಟ ಮಾರ್ಕಂಡೇಶ್ವರ ಡ್ಯಾಮ್ ಇದೆ. ಈ ಊರನ್ನ ಸುತ್ತುವರಿದಿರೋ ಕಲ್ಲುಬೆಟ್ಟಗಳನ್ನು ನೋಡ್ತಾ ಒಂದಿಷ್ಟು ಹೊತ್ತು ಕಳೆಯಬಹುದು. ಕೋಟಿಗಾನಹಳ್ಳಿ ರಾಮಯ್ಯ ಅವರ ಆದಿಮ ಅನ್ನೋ ಸಾಂಸ್ಕೃತಿಕ ಕೇಂದ್ರ ಇದೆ. ಕೋವಿಡ್‌ಗೂ ಮೊದಲು ಬೆಳದಿಂಗಳ ರಾತ್ರಿಯಲ್ಲಿ ಇಲ್ಲಿ ನಾಟಕ ನಡೀತಿತ್ತು. ಇನ್ನು ದೇವಸ್ಥಾನ ಇಷ್ಟ ಪಡೋರಿಗೆ ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಅಂತ ಸಾಕಷ್ಟು ದೇವಾಲಯಗಳು ಇಲ್ಲಿವೆ.
ಅಡ್ವೆಂಚರ್‌ಗೆ ಮತ್ತೊಂದು ಹೆಸರೇ ಕ್ಯಾತನಮಕ್ಕಿ, ದುರ್ಗಮ ಹಾದಿಯಲ್ಲಿ ರೋಚಕ ಪಯಣ.!
4. ಕನಕಪುರದ ಆಸುಪಾಸು
ಮೇಕೆದಾಟು, ಸಂಗಮ, ಕಣ್ಣು ಹಾಯಿಸಿದಷ್ಟೂ ವಿಸ್ತಾರಕ್ಕೆ ಚಾಚಿರುವ ಹಸಿರು ಬಯಲು, ಸುತ್ತಲೂ ಹಸಿರು ಬೆಟ್ಟಗಳು.. ಕನಕಪುರ ಅಂದ್ರೆ ಇಷ್ಟೇ ಅಲ್ಲ, ಇನ್ನೂ ಏನೇನೋ ಇದೆ. ಅದೇನು ಅಂತ ತಿಳಿಯಲು ನೀವೇ ಅಲ್ಲಿಗೆ ಹೋದರೆ ಚೆಂದ. ಕಾವೇರಿ ನದಿಯಲ್ಲಿ ನೀರಾಟ ಆಡಬಹುದು. ತೆಪ್ಪದಲ್ಲಿ ತೇಲಬಹುದು. ಬೆಟ್ಟವೇರೋದು ಖುಷಿ ಅಂದರೆ ಕಬ್ಬಾಳ ದುರ್ಗ ಇದೆ. ಈ ಭಾಗದ ಆಸುಪಾಸು ಅನೇಕ ನೇಚರ್ ಅಡ್ವೆಂಚರ್ ಕ್ಯಾಂಪ್‌ಗಳಿವೆ. ಅಲ್ಲಿ ನಿಸರ್ಗದ ಜೊತೆಗೆ ಸಂವಹನ ಮಾಡಬಹುದು. ಎನ್ ಜಾಯ್ ಮಾಡಲು ರೆಸಾರ್ಟ್ ಗಳೂ ಇವೆ.
5. ರಾಮನಗರದ ತುಂಬ ಬೆಟ್ಟಗಳೇ ಬೆಟ್ಟಗಳು
ರಾಮದೇವರ ಬೆಟ್ಟ, ಜಾಲಮಂಗಲ ಬೆಟ್ಟ, ರೇವಣ ಸಿದ್ಧೇಶ್ವರ ಬೆಟ್ಟ ಹೀಗೆ ನೀವು ಟ್ರೆಕ್ಕಿಂಗ್ ಮಿಸ್ ಮಾಡ್ಕೊಳ್ತಿದ್ರೆ ಹತ್ತಿಳಿಯಬಹುದಾದ ಅನೇಕ ಬೆಟ್ಟಗಳು ರಾಮನಗರದಲ್ಲಿವೆ. ಕಲ್ಲುಬೆಟ್ಟಗಳ ಮೇಲೇರಿದರೆ ಕಾಣುವ ಸೀನಿಕ್ ಬ್ಯೂಟಿಯನ್ನು ವರ್ಣಿಸೋದು ಕಷ್ಟ. ಕಣ್ಣಾರೆ ಕಂಡರೆ ಮಾತ್ರ ಆ ಚೆಲುವನ್ನು ನೀವು ಸವಿಯಬಹುದು. ಇದರ ಜೊತೆಗೆ ಜನಪದ ಲೋಕ ಸಿಗುತ್ತೆ. ರಾಮನಗರ ಗ್ರಾಮದೊಳಗೆ ಹೋದರೆ ಅಥವಾ ರೇವಣ ಸಿದ್ಧೇಶ್ವರ ಬೆಟ್ಟದ ಕಡೆ ಹೋದರೆ ಹಸಿರು ತುಂಬಿದ ದಾರಿಯೇ ಚೆಂದ.
ಕಾಲು ಮುರಿದರೂ, ಹೃದಯಾಘಾತ ಆದರೂ ಈ ಜೋಡಿ ಜಗತ್ತು ಸುತ್ತೋದು ಬಿಡಲಿಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.