65 ವರ್ಷ ವಯಸ್ಸಿನ ಪಾಲ್ ವಿಲ್ಕಿನ್ಸನ್ ತಾನು ಹೋಗಬೇಕಿದ್ದ ಜೆಟ್2 ವಿಮಾನದಲ್ಲಿ ಕ್ಯೂ ಇರದ ಕಾರಣ ಅನುಮಾನಗೊಂಡರು. ವಿಮಾನದ ಸಮಯ ಮುಂದೂಡಲಾಗಿದೆಯೇ ಅಥವಾ ರದ್ದುಗೊಳಿಸಲಾಗಿದೆಯೇ ಎಂದು ವಿಮಾನ ನಿಲ್ದಾಣದಲ್ಲಿ ವಿಚಾರಿಸಿದರು. ಆಗಲೇ ಅವರಿಗೆ ಅಚ್ಚರಿ, ಆಘಾತ ಕಾದಿತ್ತು.
ಬೆಲ್‌ಫಾಸ್ಟ್ (ಏಪ್ರಿಲ್ 13, 2023): ಪೋರ್ಚುಗಲ್‌ನಿಂದ ತನ್ನ ಕುಟುಂಬವನ್ನು ಭೇಟಿಯಾಗಲು ಉತ್ತರ ಐರ್ಲೆಂಡ್‌ಗೆ ಪ್ರಯಾಣಿಸುತ್ತಿದ್ದ ಯುಕೆ ವ್ಯಕ್ತಿಯೊಬ್ಬರಿಗೆ ಅದೃಷ್ಟ ಕಾದಿತ್ತು. ಏನಪ್ಪಾ ಅಂತೀರಾ.. ಇಡೀ ವಿಮಾನದಲ್ಲಿ ಅವರು ಒಬ್ಬರೇ ಪ್ರಯಾಣಿಕರಾಗಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಹೌದು, 65 ವರ್ಷ ವಯಸ್ಸಿನ ಪಾಲ್ ವಿಲ್ಕಿನ್ಸನ್ ತಾನು ಹೋಗಬೇಕಿದ್ದ ಜೆಟ್2 ವಿಮಾನದಲ್ಲಿ ಕ್ಯೂ ಇರದ ಕಾರಣ ಅನುಮಾನಗೊಂಡರು. ವಿಮಾನದ ಸಮಯ ಮುಂದೂಡಲಾಗಿದೆಯೇ ಅಥವಾ ರದ್ದುಗೊಳಿಸಲಾಗಿದೆಯೇ ಎಂದು ವಿಮಾನ ನಿಲ್ದಾಣದಲ್ಲಿ ವಿಚಾರಿಸಿದರು. ಆಗಲೇ ಅವರಿಗೆ ಅಚ್ಚರಿ, ಆಘಾತ ಕಾದಿತ್ತು. ಅದೇನೆಂದರೆ, ನೀವು "ವಿಐಪಿ ಅತಿಥಿ" ಎಂದು ಉಲ್ಲೇಖಿಸಿ ವಿಮಾನದಲ್ಲಿ ಒಬ್ಬರೇ ಇರುತ್ತೀರಾ ಎಂದೂ ತಿಳಿಸಿದ್ದಾರೆ.
ಇದನ್ನು ಓದಿ: Air India ವಿಮಾನದಲ್ಲಿ ಮುರಿದ ಸೀಟು, ಜಿರಳೆಗಳ ಹಾವಳಿ..! ಟ್ವಿಟ್ಟರ್‌ನಲ್ಲಿ ವಿಶ್ವಸಂಸ್ಥೆ ಅಧಿಕಾರಿ ಕಿಡಿ
"ನಾನು ಪಾಸ್‌ಪೋರ್ಟ್‌ಗಳನ್ನು ತೆಗೆದುಕೊಳ್ಳಲು ಕಾಯುತ್ತಿರುವ ಮೇಲ್ವಿಚಾರಕರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು 'ಓಹ್, ಮಿಸ್ಟರ್ ಪಾಲ್, ನೀವು ಇಂದು ವಿಐಪಿಯಾಗಿದ್ದೀರಿ. ನೀವು ಒಬ್ಬರೇ ವಿಮಾನದಲ್ಲಿ ಹಾರುತ್ತೀರಿ’’ ಎಂದು ಅವರು ಹೇಳಿದ ಬಗ್ಗೆ ಮಾಧ್ಯಮದಲ್ಲಿ ಉಲ್ಲೇಖಿಸಿದ್ದಾರೆ. ಬಳಿಕ, ಅವರು ತಮಾಷೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸಿದೆ. ನಾನು ಬೇಗನೆ ಅಥವಾ ತಡವಾಗಿ ಬಂದಿದ್ದೇನೆ ಎಂದೂ ಅಂದ್ಕೊಂಡೆ. ಅಲ್ಲದೆ, ನನ್ನ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳುತ್ತಾರೆ ಎಂದೂ ನಾನು ಭಾವಿಸುತ್ತಿದ್ದೆ ಎಂದೂ ಯುಕೆ ಮೂಲದ ಪಾಲ್ ವಿಲ್ಕಿನ್ಸನ್ ಹೇಳಿಕೊಂಡಿದ್ದಾರೆ.
ಬಳಿಕ, ಅವರು ವಿಮಾನ ಪ್ರವೇಶಿಸುತ್ತಿದ್ದಂತೆ, ವಿಮಾನದ ಸಿಬ್ಬಂದಿ "ಕಿಂಗ್ ಪಾಲ್" ಎಂದು ಸಂಬೋಧಿಸಿದ್ದಾರೆ. ಹಾಗೆ, ಈ ವಿಮಾನ ನಿಮ್ಮ ಸ್ವಂತ ಖಾಸಗಿ ಜೆಟ್‌ನಂತೆ" ಎಂದೂ
ಯೋಜನಾ ವ್ಯವಸ್ಥಾಪಕರು ಹೇಳಿದ್ದಾರೆ. ಇನ್ನು, ವಿಮಾನವು ಬೆಲ್‌ಫಾಸ್ಟ್‌ಗೆ (ಐರ್ಲೆಂಡ್‌ನ ನಗರ) ಹೊರಡುವ ಮೊದಲು, ಅವರು ತಮ್ಮದೇ ಆದ ಸೀಟ್ ಅನ್ನು ಆಯ್ಕೆ ಮಾಡಿಕೊಂಡರು ಮತ್ತು ಕ್ಯಾಪ್ಟನ್‌ನೊಂದಿಗೆ ಸಹ ಮಾತನಾಡುತ್ತಿದ್ದೆ ಎಂದೂ ಪಾಲ್ ವಿಲ್ಕಿನ್ಸನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯಿಂದ ಧೂಮಪಾನ: ಸಿಕ್ಕಿಬಿದ್ದ ಬಳಿಕ ಹುಚ್ಚು ಹುಚ್ಚಾಗಿ ಆಡ್ದ..!
ಇನ್ನು, ವಿಮಾನದಲ್ಲಿ ಅವರು ಒಬ್ಬರೇ ಹೋಗಿದ್ದು ಹೇಗೆ ಅವರೇನು ಲಾಟರಿ ಗೆದ್ದಿದ್ದರಾ ಅನ್ಕೋಬೇಡಿ. ಆ ವಿಮಾನ ಪೋರ್ಚುಗಲ್‌ಗೆ ಪ್ರವಾಸಿಗರನ್ನು ಕರೆದೊಯ್ದಿತ್ತು. ಆದರೆ, ಅಲ್ಲಿಂದ ಐರ್ಲೆಂಡ್‌ಗೆ ವಾಪಸ್ ಹೋಗಲು ಯಾರೂ ಇರಲಿಲ್ಲ. ಈ ಹಿನ್ನೆಲೆ ನಾನು ಬೆಲ್‌ಫಾಸ್ಟ್‌ಗೆ ಹೋಗಬೇಕಾಗಿರುವುದು ಅದೃಷ್ಟ ಎಂದು ಪಾಲ್ ವಿಲ್ಕಿನ್ಸನ್ ಮಾಹಿತಿ ನೀಡಿದ್ದಾರೆ.
ಅಲ್ಲದೆ, "ಒಂದು ಖಾಸಗಿ ಜೆಟ್ 28,000 ಯೂರೋಗಳಷ್ಟು (ರೂ. 25 ಲಕ್ಷ) ಆಗುತ್ತದೆ ಎಂದು ಯಾರೋ ನನಗೆ ಹೇಳಿದರು ಮತ್ತು ಇದು ಬಹುಶಃ ಎಂದಿಗೂ ಸಂಭವಿಸುವುದಿಲ್ಲ" ಎಂದು ಮೂರು ಮಕ್ಕಳ ತಂದೆ ಖಾಸಗಿಯಾಗಿ ವಿಮಾನದಲ್ಲಿ ಪ್ರಯಾಣಿಸಿದ ಅನುಭವವನ್ನು ವಿವರಿಸಿದ್ದಾರೆ. ಪ್ರತಿ ಸೆಕೆಂಡ್ ಪ್ರಯಾಣವನ್ನೂ ಆನಂದಿಸಿದೆ ಮತ್ತು ವಿಮಾನದ ಅಟೆಂಡೆಂಟ್‌ಗಳು ಅತ್ಯುತ್ತಮ ಸೇವೆ ನೀಡಿದರು. ನಾನು ವಿಮಾನದ ಸುತ್ತಲೂ ನಡೆದಾಡಿದೆ ಮತ್ತು ಶೌಚಾಲಯಗಳನ್ನು ಆಯ್ಕೆ ಮಾಡಿಕೊಂಡೆ" ಎಂದೂ ಅವರು ಹೇಳಿದರು.
ಇದನ್ನೂ ಓದಿ: ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಭಾರತೀಯ ವಿದ್ಯಾರ್ಥಿಗೆ ಅಮೆರಿಕನ್ ಏರ್‌ಲೈನ್ಸ್ ನಿಷೇಧ
ಹಾಗೆ, ವಿಮಾನದ ನಂತರ ಅವರು ಪಾಸ್‌ಪೋರ್ಟ್ ನಿಯಂತ್ರಣ ಮತ್ತು ಬ್ಯಾಗೇಜ್ ಕ್ಲೈಮ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರಲಿಲ್ಲ. ಬೆಲ್‌ಫಾಸ್ಟ್‌ನಲ್ಲಿ ಪಾಸ್‌ಪೋರ್ಟ್ ನಿಯಂತ್ರಣ ಅಧಿಕಾರಿಗಳು ತಾನು ವಿಮಾನದಲ್ಲಿ ಏಕೈಕ ಪ್ರಯಾಣಿಕ ಎಂದು ಒಪ್ಪಿಕೊಳ್ಳಲು ಕಷ್ಟ ಎಂದು ಹೇಳಿದರು. ಹಾಗೆ, ಸಂಪೂರ್ಣ ಪ್ರಯಾಣಕ್ಕೆ ಕೇವಲ 162 ಡಾಲರ್ ವೆಚ್ಚದಲ್ಲಿ ಅಂದರೆ ಅಂದಾಜು ₹ 13,000 ಎಂದು ನ್ಯೂಯಾರ್ಕ್ ಪೋಸ್ಟ್‌ಗೆ ಪಾಲ್ ವಿಲ್ಕಿನ್ಸನ್ ಹೇಳಿದ್ದಾರೆ. ಇನ್ನು, ಮುಮದಿನ ಸಲ ವಿಮಾನದಲ್ಲಿ ಹೋಗುವಾಗ ಎಷ್ಟು ಜನ ಇದ್ದಾರೆ ಎಂದು ಪ್ರಶ್ನಿಸುತ್ತೇನೆಂದೂ ಅವರು ತಮಾಷೆಯಾಗಿ ಹೇಳಿದ್ದಾರೆ.