ದಿನದಲ್ಲಿ ಒಮ್ಮೆಯಾದರೂ ನಗಲೇಬೇಕು! ಹೀಗೊಂದು ಕಾನೂನು ಮಾಡಿದ ದೇಶ ಯಾವುದು, ಯಾಕೆ ನೋಡಿಬಿಡಿ!

By Bhavani Bhat  |  First Published Jul 18, 2024, 1:25 PM IST

ನಗು ಅಂದರೆ ನಗೋ ವಿಷಯ ಅಲ್ಲ. ಎಲ್ಲರೂ ಮನಸ್ಸು ಬಿಚ್ಚಿ ನಗುವುದೂ ಇಲ್ಲ. ನಕ್ಕರದೇ ಆರೋಗ್ಯ ಎಂದು ವೈದ್ಯರು ಪದೇ ಪದೇ ಹೇಳುತ್ತಾರಾದರೂ ಅದನ್ನು ಪಾಲಿಸುವವರು ಕಡಿಮೆ. ಅಂದಹಾಗೆ ನಗುವ ಬಗ್ಗೆ ಕಾನೂನು ಮಾಡಿರುವ ದೇಶ ಯಾವುದು ಗೊತ್ತಾ?


ದಿನದಲ್ಲಿ ಒಂದು ಬಾರಿಯಾದರೂ ಮನಸ್ಸು ಬಿಚ್ಚಿ ನಗಬೇಕು ಎಂಬ ಕಾನೂನನ್ನು ಜಪಾನ್‌ ದೇಶ ರೂಪಿಸಿದೆ. ನಗು ಬಂತಾ? ಹೌದು. ಇದು ನಗುವ ವಿಷಯವೇ. ಆದರೆ ಸಿಲ್ಲಿ ವಿಷಯವಲ್ಲ. ಜಪಾನ್‌ನ ಆಡಳಿತ ಅಲ್ಲಿಯ ಜನರ ಮಾನಸಿಕ, ದೈಹಿಕ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಇಂಥದ್ದೊಂದು ಕಾನೂನು ತಂದಿದೆ. ನಗ್ತಾ ಇರಿ, ಆರೋಗ್ಯವಾಗಿರಿ ಎಂಬುದು ಅಲ್ಲಿನ ಸೂತ್ರ.

ಜಪಾನಿನ ತಜ್ಞರು ಹೇಳುವುದು ಹೀಗೆ: ನೀವೇ ಕೇಳಿಕೊಳ್ಳಿ, ನೀವು ದಿನದಲ್ಲಿ ಎಷ್ಟು ಬಾರಿ ಮನಸ್ಸು ಬಿಚ್ಚಿ ನಗುತ್ತೀರಿ? ದಿನದಲ್ಲಿ ನಾನು ತುಂಬಾ ಸಲ ನಗುತ್ತೇನೆ ಎಂದರೆ ನೀವು ಲಕ್ಕಿ. ಏಕೆಂದರೆ ಎಷ್ಟೋ ಜನ ನಗುವುದನ್ನೇ ಮರೆತಿದ್ದಾರೆ. ಬೆಳಗ್ಗೆ ಎದ್ದು ಗಡಿಬಿಡಿಯಿಂದ ಕೆಲಸಕ್ಕೆ ಓಡುವುದು, ಕೆಲಸದ ಜಾಗದಲ್ಲಿ ಮೀಟಿಂಗ್‌, ಟಾರ್ಗೆಟ್‌ ಅಂತ ಒತ್ತಡ, ಕೆಲಸದಿಂದ ಮರಳುವಾಗ ಅದೇ ತಲೆಯಲ್ಲಿ. ಮನೆಗೆ ಬಂದಾಗ ಅಲ್ಲಿಯೂ ಫ್ಯಾಮಿಲಿ, ಫೈನಾನ್ಸ್‌ ಸಮಸ್ಯೆಗಳು. ಹೀಗಾಗಿ ಜನ ನಗುವುದನ್ನೇ ಮರೆತಿದ್ದಾರೆ. ಇದರಿಂದ ಆಗುವ ಅನಾಹುತ ಭೀಕರ.

Latest Videos

undefined

ನಾವು ಮನಸ್ಸು ಬಿಚ್ಚಿ ದಿನದಲ್ಲಿ ಒಮ್ಮೆಯಾದರೂ ನಗಬೇಕು. ಆ ರೀತಿ ನಗುವುದರಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ? ನಗು ಇಡೀ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಖುಷಿಯಿಂದ ನಕ್ಕಾಗ ಇಡೀ ದೇಹದ ಸ್ನಾಯುಗಳು ವಿಶ್ರಾಂತಿಯನ್ನು ಪಡುತ್ತದೆ, ನಮ್ಮಲ್ಲಿನ ಒತ್ತಡ (Stress) ಹೊರದೂಡಲ್ಪಡುತ್ತದೆ. ನೀವು ಒಮ್ಮೆ ನಕ್ಕರೆ ನಿಮ್ಮ ಸ್ನಾಯುಗಳು 45 ನಿಮಿಷ ರಿಲ್ಯಾಕ್ಸ್ ಆಗುತ್ತದೆ.

ತನ್ನ ಥೈಲ್ಯಾಂಡ್ ಟ್ರಿಪ್ ಬಗ್ಗೆ ಪತ್ನಿಗೆ ಗೊತ್ತಾಗುತ್ತೆ ಅಂತ ಪಾಸ್ಪೋರ್ಟ್ ಪೇಜ್ ಹರಿದ ವ್ಯಕ್ತಿಯ ಬಂಧನ

ನಗು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity Powoer) ಹೆಚ್ಚಿಸುತ್ತದೆ. ನಕ್ಕಾಗ ಮಾನಸಿಕ ಒತ್ತಡ ಕಡಿಮೆಯಾಗುವುದು, ಖುಷಿಯ ಹಾರ್ಮೋನ್‌ಗಳು (Happy Harmones) ಉತ್ಪತ್ತಿಯಾಗುವುದು, ಅಲ್ಲದೆ ನಮ್ಮಲ್ಲಿ ರೋಗನಿರೋಧಕ ಕಣಗಳು ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಡೆಯುತ್ತದೆ, ಹಾಗಾಗಿ ರೋಗ ತಡೆಗಟ್ಟಲು ಕೂಡ ಸಹಕಾರಿಯಾಗಿದೆ. ನಗು ಎಂಡೋಪ್ರಿನ್ಸ್ ಉತ್ಪತ್ತಿ ಹೆಚ್ಚಿಸುತ್ತದೆ. ಎಂಡೋಪ್ರಿನ್ಸ್ ಎಂಬುದು ಖುಷಿಯ ಹಾರ್ಮೋನ್‌, ಈ ಹಾರ್ಮೋನ್‌ಗಳ ಉತ್ಪತ್ತಿ ಚೆನ್ನಾಗಿ ಆದರೆ ಮನಸ್ಸು, ದೇಹದಲ್ಲಿ ನವಚೈತನ್ಯ ಮೂಡುತ್ತದೆ, ಖುಷಿಯಾಗಿರುತ್ತೀರಿ.

ನಗು ತೂಕ ನಿಯಂತ್ರಣಕ್ಕೆ ಸಹಕಾರಿ (Lauch Could Reduce Weight). ನೀವು ನಗುತ್ತಾ ಖುಷಿ ಖುಷಿಯಿಂದ ಇದ್ದರೆ ಮೈ ತೂಕ ನಿಯಂತ್ರಣದಲ್ಲಿರುತ್ತದೆ. ಯಾರು ತುಂಬಾ ಖಿನ್ನತೆಗೆ ಒಳಗಾಗಿರುತ್ತಾರೋ ಅವರ ಮೈ ತೂಕ ತುಂಬಾನೇ ಹೆಚ್ಚಾಗುವುದು. ಹಾಗಾಗಿ ನಗು ನಗುತ್ತಾ ಇರುವುದರಿಂದ ಖಿನ್ನತೆ ಕಾಡುವುದಿಲ್ಲ. ಮೈ ತೂಕ ಕೂಡ ಆರೋಗ್ಯಕರವಾಗಿರುತ್ತದೆ. ಹಾಗಾಗಿ ತೂಕ ಇಳಿಕೆಯ ಬಗ್ಗೆ ಯೋಚಿಸುತ್ತಿದ್ದರೆ ನೀವು ಖುಷಿಯಾಗಿ ಇರುವುದರ ಕಡೆಯೂ ಗಮನಹರಿಸಬೇಕು.

ನಗು ಜನರನ್ನು ನಿಮ್ಮತ್ತ ಸೆಳೆಯುತ್ತದೆ. ನೀವು ನಗು ನಗುತ್ತಾ ಇದ್ದರೆ ಜನರು ಕೂಡ ನಿಮ್ಮನ್ನು ಮಾತನಾಡಿಸಲು ಇಷ್ಟಪಡುತ್ತಾರೆ. ಆದರೆ ನೀವು ಮುಖವನ್ನು ಗಂಟುಹಾಕಿಕೊಂಡು ಕೂತರೆ ನಿಮ್ಮನ್ನು ಮಾತನಾಡಿಸಲು ಯಾರೂ ಬರುವುದಿಲ್ಲ. ಹಾಗಾಗಿ ನಗುವೇ ಮುಖದ ಆಭರಣವಾಗಿದೆ. ಹಾಗಾಗಿ ನಗು ನಗುತ್ತಾ ಯಾರು ಇರುತ್ತಾರೋ ಅವರು ತಮ್ಮ ಸುತ್ತ ಇರುವವರನ್ನು ಕೂಡ ಖುಷಿಯಾಗಿ ಇಡುತ್ತಾರೆ. ಇಂಥವರನ್ನು ಎಲ್ಲರೂ ಇಷ್ಟಪಡುತ್ತಾರೆ ಕೂಡ.

 46 ವರ್ಷಗಳ ನಂತರ ತೆರೆದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದಲ್ಲಿದೆಯಾ ಸರ್ಪಬಂಧನ?

ನಗು-ನಗುತ್ತಾ ಇದ್ದಾಗ ನಮ್ಮಲ್ಲಿ ಕೋಪ ಕಡಿಮೆಯಾಗುವುದು. ಹಾಗಂತ ಸುಮ್ಮನೆ ನಗಲು ಸಾಧ್ಯವಿಲ್ಲ. ಕುಟುಂಬದ ಜೊತೆ ಕೂತು ಮಾತನಾಡುವುದು, ಹರಟೆ ಹೊಡೆಯುವುದು ಮಾಡಿದಾಗ, ಸ್ನೇಹಿತರ ಜೊತೆ ಸಮಯ ಕಳೆದಾಗ, ಮಕ್ಕಳ ಜೊತೆ ಆಟವಾಡಿದಾಗ, ಮನೆಯಲ್ಲಿ ಸಾಕು ಪ್ರಾಣಿಗಳ ಜೊತೆ ಆಟವಾಡಿದಾಗ ನಾವು ಖುಷಿಯಾಗಿರುತ್ತೇವೆ, ನಗುತ್ತೇವೆ. ಹಾಗಾಗಿ ನಗುವಂಥ ವಾತಾವರಣ ನಾವೇ ಸೃಷ್ಟಿಸಬೇಕು.

 

click me!