ಪ್ರತಿ ವರ್ಷದಂತೇ ಈ ವರ್ಷವೂ ಅಮೆರಿಕಾದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 2023ರಲ್ಲಿ ಭೇಟಿ ನೀಡಲೇಬೇಕಾದ 52 ಪ್ರವಾಸಿತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಒಂದೇ ಒಂದು ರಾಜ್ಯ ಸ್ಥಾನ ಪಡೆದಿದೆ. ಅದ್ಯಾವುದು ?
ತಿರುವನಂತಪುರಂ: ದೇವರ ಸ್ವಂತ ನಾಡು ಕೇರಳ ಪ್ರವಾಸೋದ್ಯಮಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಸದ್ಯ ಇಲ್ಲಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಅಮೆರಿಕದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ಜಗತ್ತಿನ ಉತ್ತಮ ಪ್ರವಾಸಿ ತಾಣಗಳ ಪೈಕಿ ಕೇರಳವೂ ಒಂದಾಗಿದೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಲೇಬೇಕಾದ 52 ಪ್ರವಾಸಿತಾಣಗಳ (Tourist place) ಪಟ್ಟಿಯಲ್ಲಿ ಭಾರತದಿಂದ ಕೇರಳ ರಾಜ್ಯ ಸ್ಥಾನ ಪಡೆದುಕೊಂಡಿದೆ. ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳವು 13ನೇ ಸ್ಥಾನದಲ್ಲಿದೆ. ಭಾರತದಿಂದ ನ್ಯೂಯಾರ್ಕ್ ಪ್ರವಾಸಿತಾಣಗಳ ಪಟ್ಟಿಯಲ್ಲಿ ಜಾಗ ಪಡೆದ ಏಕೈಕ ಪ್ರವಾಸಿ ತಾಣವಾಗಿದೆ. ಕೇರಳವು ತನ್ನ ಕಡಲತೀರಗಳು, ಹಿನ್ನೀರಿನ ಸೊಬಗು, ಪಾಕಪದ್ಧತಿ ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ (Tradition) ಹೆಸರುವಾಸಿಯಾದ ದಕ್ಷಿಣ ಭಾರತದ ರಾಜ್ಯ ಎಂದು ವರದಿ ವಿವರಿಸಿದೆ. ಕುಮಾರಕೊಮ್ ಮತ್ತು ಮರವಂತುರುತ್ತು ಸೇರಿದಂತೆ ರಾಜ್ಯದ ಅತ್ಯುತ್ತಮ ಪ್ರವಾಸಿತಾಣಗಳ ಬಗ್ಗೆಯೂ ಪಟ್ಟಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ದೇವರ ನಾಡಿನಲ್ಲೊಂದು ಸುಂದರ ಬುಡಕಟ್ಟು ಗ್ರಾಮ, ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್
ಈ ಬಗ್ಗೆ ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ '2023ರಲ್ಲಿ ಭೇಟಿ ನೀಡುವ 52 ಸ್ಥಳಗಳಲ್ಲಿ ಕೇರಳವನ್ನು @nytimes ಆಯ್ಕೆ ಮಾಡಿದೆ. ಪ್ರವಾಸಿಗರು ಕೇರಳದ ಶ್ರೀಮಂತ ಸಂಸ್ಕೃತಿ ಮತ್ತು ಪ್ರಾಕೃತಿಕ ಸೊಬಗನ್ನು ಆನಂದಿಸಲು ಅನುವು ಮಾಡಿಕೊಡುವ ಸಮುದಾಯ ಪ್ರವಾಸೋದ್ಯಮಕ್ಕೆ ನಮ್ಮ ಅನುಕರಣೀಯ ವಿಧಾನವನ್ನು ಶ್ಲಾಘಿಸಲಾಗಿದೆ. ಇದು ಕೇರಳ ಪ್ರವಾಸೋದ್ಯಮಕ್ಕೆ ಸಂದಿರುವ ಮತ್ತೊಂದು ಗರಿ' ಎಂದಿದ್ದಾರೆ.
ತಾಳೆ ಮರದ ಆಕರ್ಷಣೆ, ವಾರ್ಷಿಕ ಉತ್ಸವದ ಸಮಯಲ್ಲಿ ದೇವಸ್ಥಾನಕ್ಕೆ (Temple) ಜನರ ಭೇಟಿ ಅತ್ಯುತ್ತಮ ಎಂದು ಬಣ್ಣಿಸಲಾಗಿದೆ. ಹಳ್ಳಿಯ ಜೀವನದ ಸುಂದರ ಅನುಭವವನ್ನು ಪಡೆಯಲು ಕೇರಳ ಅತ್ಯುತ್ತಮ ತಾಣ ಎಂದು ಪತ್ರಿಕೆ ಬಣ್ಣಿಸಿದೆ.
'ದಕ್ಷಿಣ ಭಾರತದ ರಾಜ್ಯವಾದ ಕೇರಳದ ಕಡಲ ತೀರಗಳು, ಹಿನ್ನೀರಿನ ನಯನ ಮನೋಹರ ದೃಶ್ಯಗಳು, ಇಲ್ಲಿನ ಆಹಾರ ಪದ್ಧತಿ, ವೈಕಥಾಷ್ಟಮಿ ಹಬ್ಬಗಳ ಸಿರಿಯು ಅದ್ಭುತವಾಗಿದೆ' ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.
ವಿಶ್ವದ ಪ್ರಸಿದ್ಧ ಪ್ರವಾಸಿ ತಾಣದ ಪಟ್ಟಿಯಲ್ಲಿ ಕೇರಳ, ಅಹಮದಾಬಾದ್‌ಗೆ ಸ್ಥಾನ
ಪಟ್ಟಿಯಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದೆ. ನಂತರ ಜಪಾನ್‌ನ ಮೊರಿಯೊಕಾ, ಅಮೆರಿಕದ ಸ್ಮಾರಕ ಕಣಿವೆ ನವಾಜೊ ಟ್ರೈಬಲ್ ಪಾರ್ಕ್, ಸ್ಕಾಟ್‌ಲ್ಯಾಂಡ್‌ನ ಕಿಲ್ಮಾರ್ಟಿನ್ ಗ್ಲೆನ್ ಮತ್ತು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗಳು ಅಗ್ರಸ್ಥಾನದಲ್ಲಿವೆ. ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್, ಆಸ್ಟ್ರೇಲಿಯಾದ ಕಾಂಗರೂ ದ್ವೀಪ, ಅಲ್ಬೇನಿಯಾದ ವ್ಝೋಜಾಸ ನದಿ, ಘಾನಾದ ಅಕ್ರಾ, ನಾರ್ವೆಯ ಟ್ರೊಮ್ಸೊ, ಬ್ರೆಜಿಲ್‌ನ ಲೆನೋಯಿನ್ ಮರನ್ ಹೆನ್ಸ್ ರಾಷ್ಟ್ರೀಯ ಉದ್ಯಾನವನ, ಭೂತಾನ್, ದಕ್ಷಿಣ ಕೆರೊಲಿನಾದ ಗ್ರೀನ್ ವೆಲ್ಲೆ ಮತ್ತು ಟಕ್ಸನ್ ಸಹ ಪಟ್ಟಿಯಲ್ಲಿ ಜಾಗ ಪಡೆದಿವೆ. ಟೈಮ್ ಮ್ಯಾಗಝಿನ್ 2022ರಲ್ಲಿ ತಯಾರಿಸಿದ ಜಗತ್ತಿನ ಅಗ್ರ 50 ತಾಣಗಳ ಪೈಕಿಯೂ ಕೇರಳ ಸ್ಥಾನ ಪಡೆದಿತ್ತು.
The has selected Kerala as one of the 52 places to visit in 2023. Our exemplary approach to community tourism that allows travellers to relish Kerala's rich culture and breathtaking landscapes has been lauded. Yet another exciting achievement for ! pic.twitter.com/slnAPNRnyt
— Pinarayi Vijayan (@pinarayivijayan)