ಅಮೆರಿಕದಲ್ಲಿ ಮೊದಲೇ ಚಳಿ ಹೆಚ್ಚು. ಅದ್ರಲ್ಲೂ ಈ ದ್ವೀಪದಲ್ಲಿ ವಿಪರೀತ ಚಳಿ ಇರುತ್ತೆ. ಹಾಗಾಗೇ ಆ ದ್ವೀಪದಲ್ಲಿ ಅತಿ ಕಡಿಮೆ ಜನರು ವಾಸಿಸ್ತಾರೆ. ಹೆಲಿಕಾಪ್ಟರ್ ಮೂಲಕ ವಸ್ತುಗಳನ್ನು ಜನರಿಗೆ ತಲುಪಿಸಲಾಗುತ್ತೆ. ಆ ಜಾಗ ಯಾವುದು ಗೊತ್ತಾ?
ಪ್ರಪಂಚ ತುಂಬಾ ವಿಶಾಲವಾಗಿದೆ. ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ನಮಗೆ ಸರಿಯಾಗಿ ತಿಳಿದಿಲ್ಲ. ಪ್ರಪಂಚದಲ್ಲಿರುವ ಕೆಲ ಸ್ಥಳಗಳು ನಿಗೂಢ ಹಾಗೂ ಕೌತುಕದಿಂದ ಕೂಡಿವೆ. ಸರಿಯಾದ ರಸ್ತೆ ಸೌಲಭ್ಯವಿಲ್ಲ, ಗಂಟೆಗೆರಡು ಸರ್ಕಾರಿ ಬಸ್ ಸಂಚಾರ ಮಾಡೋದಿಲ್ಲ, ಬ್ಯಾಂಕ್, ಹೋಟೆಲ್, ಶಾಲೆ ಯಾವುದೂ ಸರಿಯಾಗಿಲ್ಲವೆಂದು ಭಾರತದಲ್ಲಿ ಹೋರಾಟಗಳು ನಡೆಯುತ್ತಿರುತ್ತವೆ. ಆದ್ರೆ ಪ್ರಪಂಚದಲ್ಲಿ ಈ ಯಾವ ಸೌಲಭ್ಯವೂ ಇಲ್ಲದ ಕೆಲ ಪ್ರದೇಶವಿದೆ ಅಂದ್ರೆ ನೀವು ನಂಬುತ್ತೀರಾ?. ವಾಹನ ಸೌಲಭ್ಯ ಮಾತ್ರವಲ್ಲ ಅಲ್ಲಿ ಯಾವುದೇ ರೆಸ್ಟೋರೆಂಟ್ ಆಗ್ಲಿ, ಬ್ಯಾಂಕ್ ಆಗ್ಲಿ ಸಿಗೋದಿಲ್ಲ. ಅಲ್ಲಿ ಇರೋದೇ ಬೆರಳೆಣಿಕೆಯಷ್ಟು ಜನ. ಆ ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರವನ್ನು ಸರಬರಾಜು ಮಾಡಲಾಗುತ್ತದೆ. ಆ ಪ್ರದೇಶ ಯಾವುದು? ಅದು ಇಷ್ಟೊಂದು ಹಿಂದುಳಿಯಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೆವೆ.
ಅಮೆರಿಕ (America) ದಲ್ಲಿದೆ ಈ ಪ್ರದೇಶ : ಅತ್ಯಂತ ಕಡಿಮೆ ಜನರನ್ನು ಹೊಂದಿರುವ, ಸಾರಿಗೆ (Transportation) ಸೌಲಭ್ಯ ಹೊಂದಿರದ, ಬ್ಯಾಂಕ್ (Bank), ಹೋಟೆಲ್ ಕೂಡ ಕಾಣಸಿಗದ ಆ ಊರಿನ ಹೆಸರು ಲಿಟಲ್ ಡಿಯೋ ಮೇಡ್ ಐಲ್ಯಾಂಡ್. ಅಮೆರಿಕದಲ್ಲಿರುವ ನಿರ್ಜನ ದ್ವೀಪ ಇದಾಗಿದೆ. ರಷ್ಯಾದ ಗಡಿ ಲಿಟಲ್ ಡಿಯೋ ಮೇಡ್ ಐಲ್ಯಾಂಡ್ (Little Dio Made Island) ದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿದೆ. ದ್ವೀಪದಲ್ಲಿ ಕೇವಲ 80 ಜನರು ವಾಸಿಸುತ್ತಿದ್ದಾರೆ.
ಭಾರತ ಮಾತ್ರವಲ್ಲ ಈ ದೇಶದಲ್ಲೂ ನಡೆಯುತ್ತೆ ಬ್ಲ್ಯಾಕ್ ಮ್ಯಾಜಿಕ್
ಎಷ್ಟಿರುತ್ತೆ ಗೊತ್ತಾ ಇಲ್ಲಿನ ತಾಪಮಾನ (Temperature) ? : ಈ ದ್ವೀಪದಲ್ಲಿ ಗಂಟೆಗೆ ಸುಮಾರು 144 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ. ಚಳಿಗಾಲದಲ್ಲಿ ಇಲ್ಲಿ ಕನಿಷ್ಠ ತಾಪಮಾನವು ಸುಮಾರು -14 ಡಿಗ್ರಿ ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿ ತಾಪಮಾನವು 10 ಡಿಗ್ರಿಗಳವರೆಗೆ ಇರುತ್ತದೆ. ರಷ್ಯಾದ ಐಲ್ಯಾಂಡ್, ಲಿಟಲ್ ಡಿಯೋ ಮೇಡ್ ದ್ವೀಪದಿಂದ ಸ್ವಲ್ಪ ದೂರದಲ್ಲಿದೆ. ಈ ಎರಡೂ ದ್ವೀಪದ ಮಧ್ಯೆ ಇರುವ ನೀರು ಚಳಿಗಾಲದಲ್ಲಿ ಮಂಜುಗಡ್ಡೆಯ ಸೇತುವೆಯಾಗುತ್ತದೆ. ಈ ಸೇತುವೆ ಮೂಲಕ ಜನರು ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಪ್ರಯಾಣಿಸುತ್ತಾರೆ. ಲಿಟಲ್ ಡಿಯೋ ಮೇಡ್ ದ್ವೀಪ ಸುರಕ್ಷಿತವಾಗಿಲ್ಲ. ಅಲ್ಲಿ ಉಗ್ರ ಪ್ರಾಣಿಗಳಿವೆ ಎನ್ನಲಾಗುತ್ತದೆ.
ದ್ವೀಪದ ವಿಶೇಷವೇನು? : ಲಿಟಲ್ ಡಿಯೋ ಮೇಡ್ ದ್ವೀಪವು ತುಂಬಾ ವಿಶೇಷವಾಗಿದೆ. ದ್ವೀಪದ ಕಟ್ಟಡಗಳನ್ನು 1970 ರಿಂದ 1980 ರ ಸಮಯದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡಗಳಲ್ಲಿ ಶಾಲೆ ಮತ್ತು ಗ್ರಂಥಾಲಯ ಇದೆ. ಶಾಲೆಯಲ್ಲಿ ಒಂದೇ ಒಂದು ವೈಫೈ ಸೌಲಭ್ಯವಿದೆ.
ಹೆಲಿಕಾಪ್ಟರ್ ಮೂಲಕ ಬರುತ್ತೆ ವಸ್ತು : ಇಲ್ಲಿಗೆ ಸರಿಯಾದ ರಸ್ತೆಯಿಲ್ಲ. ವಾಹನಗಳ ಸಂಚಾರವೂ ಈ ದ್ವೀಪದಲ್ಲಿಲ್ಲ. ಹಾಗಾಗಿ ಹೆಲಿಕಾಪ್ಟರ್ ಮೂಲಕ ಇಲ್ಲಿ ವಾಸಿಸಲು ಜನರಿಗೆ ಮೂಲಭೂತ ವಸ್ತುಗಳನ್ನು ತಲುಪಿಸಲಾಗುತ್ತದೆ. ಪ್ರತಿ ವಾರ, ಅವರಿಗೆ ಬಟ್ಟೆ, ಆಹಾರ, ಇಂಧನ ಮುಂತಾದ ಅಗತ್ಯವಿರುವ ವಸ್ತುಗಳನ್ನು ಹೆಲಿಕಾಪ್ಟರ್ ಮೂಲಕ ವಿತರಣೆ ಮಾಡಲಾಗುತ್ತದೆ. ಕೆಲವು ಬಾರಿ ಹಡಗಿನ ಮೂಲಕ ಜನರಿಗೆ ಅಗತ್ಯ ವಸ್ತುವನ್ನು ತಲುಪಿಸಲಾಗುತ್ತದೆ.
ಜೋಶಿಮಠದ ಬಗ್ಗೆ ಧಾರ್ಮಿಕ ಗ್ರಂಥಗಳು ಹೇಳುವುದೇನು?
ಪಾತ್ರೆ ತೊಳೆಯುವ ಸೋಪ್ ಬೆಲೆ ಎಷ್ಟು ಗೊತ್ತಾ? : ಇಲ್ಲಿಗೆ ವಸ್ತುಗಳು ಹೆಲಿಕಾಪ್ಟರ್ ಅಥವಾ ಹಡಗಿನ ಮೂಲಕ ಬರಬೇಕು. ಇದ್ರಿಂದ ಖರ್ಚು ಹೆಚ್ಚು. ಹಾಗಾಗಿ ಇಲ್ಲಿಯವರು ಹೆಚ್ಚು ಬೆಲೆ ನೀಡಿ ವಸ್ತುಗಳನ್ನು ಖರೀದಿ ಮಾಡ್ಬೇಕು. ಭಾರತದಲ್ಲಿ ಹತ್ತರಿಂದ 20 ರೂಪಾಯಿ ಒಳಗೆ ಸಿಗುವ ಪಾತ್ರೆ ತೊಳೆಯುವ ಸಾಬೂನು ಈ ದ್ವೀಪದಲ್ಲಿ ಸುಮಾರು 3500 ರೂಪಾಯಿಗೆ ದೊರೆಯುತ್ತದೆ. ಬಟ್ಟೆ ತೊಳೆಯುವ ಪೌಂಡರ್ ಬೆಲೆ ಕೂಡ ನಾಲ್ಕು ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಸಿಗುತ್ತದೆ.