IRCTC New Rules: ರೈಲು ಪ್ರಯಾಣದಲ್ಲಿ ಇನ್ಮುಂದೆ ಲೋವರ್ ಬರ್ತ್ ಎಲ್ಲರಿಗೂ ಸಿಗಲ್ಲ

By Vinutha Perla  |  First Published Apr 16, 2023, 10:00 AM IST

ರೈಲ್ವೇ ಪ್ರಯಾಣದಲ್ಲಿ ಲೋವರ್ ಬರ್ತ್‌ ಸೀಟ್‌ ಸಿಗಬೇಕೆಂಬುದು ಸಾಮಾನ್ಯವಾಗಿ ಎಲ್ಲರಿಗೂ ಆಸೆ. ಯಾಕೆಂದರೆ ಇಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಮತ್ತು ಮಲಗಲು ಸಾಧ್ಯವಾಗುತ್ತದೆ. ಆದ್ರೆ ಇನ್ಮುಂದೆ ಎಲ್ಲರಿಗೂ ಲೋವರ್ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ.


ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ರೈಲು ಪ್ರಯಾಣ ಆರಾಮದಾಯಕವಾಗಿರುತ್ತೆ. ಹಾಯಾಗಿ ನಿದ್ದೆ ಮಾಡಿಕೊಂಡು ಹೋಗಬಹುದು ಅನ್ನೋ ಕಾರಣಕ್ಕೆ ರೈಲಿನಲ್ಲಿ ಟ್ರಾವೆಲ್ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ, ತಮ್ಮ ನೆಚ್ಚಿನ ಸೀಟ್ ಪಡೆಯಲು, ಅವರು ಒಂದು ತಿಂಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸುತ್ತಾರೆ. ಹೆಚ್ಚಿನ ಜನರ ಆದ್ಯತೆಯ ಆಸನವೆಂದರೆ ಲೋವರ್ ಬರ್ತ್ ಅಥವಾ ಸೈಡ್ ಲೋವರ್ ಬರ್ತ್. ಯಾಕೆಂದರೆ ಇಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದು, ಅಥವಾ ಮಲಗಬಹುದು. ಮಿಡಲ್‌ ಬರ್ತ್‌, ಅಪ್ಪರ್ ಬರ್ತ್‌ಗಾದರೆ ಕಷ್ಟಪಟ್ಟು ಹತ್ತಬೇಕು ಎಂಬುದಾಗಿದೆ.

ಇಲ್ಲಿಯವರೆಗೆ ಆದ್ಯತೆಯ ಮೇರೆಗೆ ಯಾರೋ ಲೋವರ್ ಬರ್ತ್ ಬುಕ್ ಮಾಡುತ್ತಾರೋ ಅವರಿಗೆ ಸುಲಭವಾಗಿ ಲೋವರ್ ಬರ್ತ್‌ ಸೀಟುಗಳು ಸಿಗುತ್ತಿತ್ತು. ಆದ್ರೆ ಇನ್ಮುಂದೆ ಹಾಗಾಗುವುದಿಲ್ಲ. ಎಲ್ಲರಿಗೂ ಲೋವರ್ ಬರ್ತ್‌ ಸೀಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.

Tap to resize

Latest Videos

Travel Tips : ತತ್ಕಾಲ್ ರೈಲ್ವೆ ಟಿಕೆಟ್ ಬುಕ್ ಮಾಡಲು ಇಲ್ಲಿವೆ ಟಿಪ್ಸ್!

ರೈಲ್ವೇ ಇಲಾಖೆಯ ಹೊಸ ನಿಯಮದಲ್ಲೇನಿದೆ?
ಹೌದು, ರೈಲ್ವೇ ಇಲಾಖೆ ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಎಲ್ಲರೂ ಈ ಆಸನವನ್ನು ಬುಕ್ ಮಾಡಲು ಸಾಧ್ಯವಾಗದೇ ಇರಬಹುದು. ಹೌದು, ಭಾರತೀಯ ರೈಲ್ವೇ (Indian Railway) ಈ ಕುರಿತು ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ರೈಲಿನ ಕೆಳ ಬರ್ತ್ ಅನ್ನು ಕೆಲವು ವರ್ಗದ ಜನರು ಮಾತ್ರ ಬುಕ್ ಮಾಡಬಹುದಾಗಿದೆ. ರೈಲ್ವೆಯು ರೈಲಿನ ಕೆಳಗಿನ ಬರ್ತ್‌ನ್ನು ವಿಶೇಷ ಚೇತನರಿಗಾಗಿ ಮೀಸಲಿಡಲಾಗಿದೆ.  ಅವರ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು, ಭಾರತೀಯ ರೈಲ್ವೇ ಈ ಮಹತ್ವದ ನಿರ್ಧಾರವನ್ನು (Decision) ತೆಗೆದುಕೊಂಡಿದೆ.

ಸೀಟು ಹಂಚಿಕೆ ಹೇಗೆ?
ರೈಲ್ವೆ ಮಂಡಳಿಯ ಆದೇಶದ ಪ್ರಕಾರ, ಸ್ಲೀಪರ್ ಕ್ಲಾಸ್‌ನಲ್ಲಿ ನಾಲ್ಕು ಸೀಟುಗಳು, 2 ಕೆಳಭಾಗದ 2 ಮಧ್ಯದ ಸೀಟುಗಳು, ಥರ್ಡ್ ಎಸಿಯಲ್ಲಿ ಎರಡು ಸೀಟುಗಳು, ಎಸಿ 3 ಎಕಾನಮಿಯಲ್ಲಿ ಎರಡು ಸೀಟುಗಳನ್ನು  ಅಂಗವಿಕಲರಿಗೆ ಮೀಸಲಿಡಲಾಗಿದೆ. ಅವರೊಂದಿಗೆ ಪ್ರಯಾಣಿಸುವ (Travel) ಜನರು ಈ ಆಸನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ಗರೀಬ್ ರಥ ರೈಲಿನಲ್ಲಿ 2 ಕೆಳಗಿನ ಸೀಟುಗಳು ಮತ್ತು 2 ಮೇಲಿನ ಸೀಟುಗಳನ್ನು ಅಂಗವಿಕಲರಿಗಾಗಿ ಕಾಯ್ದಿರಿಸಲಾಗಿದೆ. ಈ ಆಸನಗಳಿಗೆ ಅವರು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!

ರೈಲ್ವೆ ಹಿರಿಯ ನಾಗರಿಕರಿಗೆ ಅವರು ಕೇಳದೆಯೇ ಸೀಟು ನೀಡುತ್ತದೆ. ಇವುಗಳ ಹೊರತಾಗಿ, ಭಾರತೀಯ ರೈಲ್ವೇ ಹಿರಿಯ ನಾಗರಿಕರಿಗೆ ಅಂದರೆ ಹಿರಿಯರಿಗೆ ಕೇಳದೆಯೇ ಕೆಳಗಿನ ಬರ್ತ್‌ಗಳನ್ನು ನೀಡುತ್ತದೆ. ಸ್ಲೀಪರ್ ಕ್ಲಾಸ್‌ನಲ್ಲಿ 6ರಿಂದ 7 ಲೋವರ್ ಬರ್ತ್‌ಗಳು, ಪ್ರತಿ ಮೂರನೇ ಎಸಿ ಕೋಚ್‌ನಲ್ಲಿ 4-5 ಲೋವರ್ ಬರ್ತ್‌ಗಳು, ಪ್ರತಿ ಸೆಕೆಂಡ್ ಎಸಿ ಕೋಚ್‌ನಲ್ಲಿ 3-4 ಲೋವರ್ ಬರ್ತ್‌ಗಳು ರೈಲಿನಲ್ಲಿ 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು ಗರ್ಭಿಣಿಯರಿಗೆ ಕಾಯ್ದಿರಿಸಲಾಗಿದೆ. ಸೀಟ್ ಬುಕ್ ಮಾಡುವಾಗ ಯಾವುದೇ ಪ್ರತ್ಯೇಕ ಆಯ್ಕೆಯನ್ನು ನೀಡದಿದ್ದರೂ ಅವರು ಸೀಟು ಪಡೆಯುತ್ತಾರೆ.

ಮತ್ತೊಂದೆಡೆ, ಬುಕ್ಕಿಂಗ್ ಮಾಡುವಾಗ ಮೇಲಿನ ಸೀಟಿನಲ್ಲಿ ಹಿರಿಯ ನಾಗರಿಕರು, ವಿಕಲಚೇತನರು ಅಥವಾ ಗರ್ಭಿಣಿ ಮಹಿಳೆಗೆ ಟಿಕೆಟ್ ಸಿಕ್ಕಿದರೆ, ಆನ್‌ಬೋರ್ಡ್ ಟಿಕೆಟ್ ಪರಿಶೀಲನೆಯ ಸಮಯದಲ್ಲಿ ಟಿಟಿ ಅವರಿಗೆ ಕೆಳಗಿನ ಸೀಟ್ ನೀಡಲು ಅವಕಾಶವಿದೆ.

click me!