ಜಪಾನ್ ಚೆರ್ರಿ ಬ್ಲಾಸಮ್ ಇಷ್ಟಪಡುವ ಕಾಜೋಲ್ ಗೆ ಇದು ಫೆವರೆಟ್ ಪ್ಲೇಸ್

Published : Sep 04, 2023, 05:12 PM IST
ಜಪಾನ್ ಚೆರ್ರಿ ಬ್ಲಾಸಮ್ ಇಷ್ಟಪಡುವ ಕಾಜೋಲ್ ಗೆ ಇದು ಫೆವರೆಟ್ ಪ್ಲೇಸ್

ಸಾರಾಂಶ

ಬಾಲಿವುಡ್ ನಟಿ ಕಾಜೋಲ್ ಗೆ ಏನು, ಎಲ್ಲ ಸ್ಥಳ ನೋಡಿರ್ತಾರೆ ಅಂದುಕೊಂಡ್ರೆ ತಪ್ಪು. ನಟಿ ನೋಡದ ಅನೇಕ ದೇಶಗಳಿವೆ. ಕೆಲ ಪ್ರದೇಶ ಕಾಜೋಲ್ ಫೆವರೆಟ್ ಆಗಿದ್ದು, ಅಲ್ಲಿಗೆ ಒಮ್ಮೆಯಾದ್ರೂ ಹೋಗಿ ಬರ್ಬೇಕೆಂಬ ಆಸೆ ಇದ್ಯಂತೆ.   

ಬಾಲಿವುಡ್ ನಟಿ ಕಾಲೋಜ್ ಎವರ್ ಗ್ರೀನ್ ನಟಿ. 49ನೇ ವಯಸ್ಸಿನಲ್ಲೂ ಯಂಗ್ ನಟಿಯರಂತೆ ಮಿಂಚುವ ಕಾಜೋಲ್, ಕುಟುಂಬ ನಿರ್ವಹಣೆ, ಫ್ಯಾಷನ್, ದಾಂಪತ್ಯ, ಮಕ್ಕಳು ಹೀಗೆ ನಾನಾ ವಿಷ್ಯಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡ್ತಾರೆ. ಈಗ ಮತ್ತೊಂದು ಸಂದರ್ಶನದಲ್ಲಿ ಕಾಜೋಲ್ ತಮ್ಮಿಷ್ಟದ ತಿಂಡಿ ಬಗ್ಗೆ ಹಾಗೆ ತಮ್ಮಿಷ್ಟದ ಪ್ರವಾಸಿ ಸ್ಥಳಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಯಾವ ದೇಶಕ್ಕೆ ಹೋಗುವ ಕನಸು ಕಾಣ್ತಿದ್ದಾರೆ ಕಾಜೋಲ್ (Kajol)? : ನಟಿ ಕಾಜೋಲ್ ಗೆ ಜಪಾನ್ (Japan) ಗೆ ಹೋಗುವ ಆಸೆ ತುಂಬಾ ಇದೆಯಂತೆ. ಅಲ್ಲಿ ಚೆರ್ರಿ ಹೂ ಬಿಡುವ ಸಮಯದಲ್ಲಿ ಹೋಗ್ಬೆಕು ಎನ್ನುತ್ತಾರೆ ಕಾಜೋಲ್. ಅದು ನೋಡಲು ತುಂಬಾ ಸುಂದರವಾಗಿರುತ್ತದೆ ಎನ್ನುವ ಕಾಜೋಲ್, ಜಪಾನ್ ಗೆ ಆ ಸಂದರ್ಭದಲ್ಲೇ ಪ್ಲಾನ್ ಮಾಡಿ ಹೋಗುವ ಆಸೆ ಹೊಂದಿದ್ದಾರೆ.

ಮಗಳು ಮೈ ನೆರೆದರೆ ನಡೆಯುತ್ತೆ ಇಲ್ಲೆಲ್ಲ ಹಬ್ಬ.. ಭಾರತದಲ್ಲಿಯೂ ಉಂಟು ಭಿನ್ನ ಪದ್ಧತಿ

ಜಪಾನ್ ಚೆರ್ರಿ (Cherry) ಹೂವಿನ ವಿಶೇಷವೇನು? : ಜಪಾನಿನ ಪ್ರಮುಖ ಆಕರ್ಷಣೆಯಲ್ಲಿ ಈ ಚೆರ್ರಿ ಹೂ ಸೇರಿದೆ. ಟೋಕಿಯೊ ಮತ್ತು ಇತರ ಅನೇಕ ಸ್ಥಳಗಳಲ್ಲಿ ಬಿಡುವ ಚೆರ್ರಿ ಹೂವುಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಲಕ್ಷಾಂತರ ವಿದೇಶಿ ಪ್ರವಾಸಿಗರು ಅದ್ಭುತವಾದ ಚೆರ್ರಿ ಹೂವುಗಳನ್ನು ವೀಕ್ಷಿಸಲು ಇಲ್ಲಿಗೆ ಬರ್ತಾರೆ. ಚೆರ್ರಿ ಪೂರ್ಣ ಹೂಬಿಡುವ ಅವಧಿಯು ಕೆಲವೇ ದಿನಗಳವರೆಗೆ ಇರುತ್ತದೆ.  ಚೆರ್ರಿ ಬ್ಲಾಸಮ್ ಮಾರ್ಚ್ ನಲ್ಲಿ ಆರಂಭವಾಗುತ್ತದೆ. ಮಾರ್ಚ್ ಎರಡನೇ ವಾರದಿಂದ ಏಪ್ರಿಲ್ ಮೊದಲ ವಾರದಲ್ಲಿ ಭೇಟಿ ನೀಡೋದು ಸೂಕ್ತವಾಗಿದೆ. ಪ್ರತಿ ವರ್ಷ ಇದ್ರ ಅವಧಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗುವ ಕಾರಣ,  ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಮೊದಲೇ ಪ್ಲಾನ್ ಮಾಡಬೇಕು ಎನ್ನುತ್ತಾರೆ ಕಾಜೋಲ್.

ಕಾಜೋಲ್ ಗೆ ಇದು ಫೆವರೆಟ್ ಸ್ಥಳ : ಕಾಜೋಲ್ ಗೆ ಚೈನಾ ಹಾಗೂ ಜಪಾನ್, ನಾರ್ವೆ ಹಾಗೂ ಅಲಾಸ್ಕಾ ನೋಡುವ ಆಸೆ ಬಹಳಷ್ಟಿದೆ. ಅನಾಸ್ಕಾಕ್ಕೆ ಹೋಗುವ ಮುನ್ನ ನಾನು ಫಿಟ್ ಆಗಿರ್ಬೇಕು ಎನ್ನುವ ಕಾಜೋಲ್ ಗೆ ಗೋವಾ ಇಷ್ಟದ ಸ್ಥಳ. ಕುಟುಂಬಸ್ಥರ ಜೊತೆ ಗೋವಾ ಹೋಗೋದನ್ನು ಕಾಜೋಲ್ ತುಂಬಾ ಎಂಜಾಯ್ ಮಾಡ್ತಾರೆ. ಅಲ್ಲದೆ ಮುಂಬೈನಲ್ಲಿರುವ ಕರ್ಜತ್ , ಕಾಜೋಲ್ ಕುಟುಂಬ ಭೇಟಿ ನೀಡುವ ಫೆವರೆಟ್ ಸ್ಥಳಗಳಲ್ಲಿ ಒಂದು.

ಕೆಟ್ ವಾಸನೆ ಹೂಸು ಬಿಡೋರಿಗೆ ಇಲ್ಲಿವೆ ಪರಿಹಾರ, ಸಂಬಂಧ ಹಾಳು ಮಾಡಿಕೊಳ್ಳೋ ಮುನ್ನ ಓದಿ

ಗೋವಾ, ಕಾಜೋಲ್ ಆಲ್ ಟೈಂ ಫೆವರೆಟ್ ಪ್ಲೇಸ್. ಅಲ್ಲಿ ಹೋದ್ರೆ ನೋ ಟೆನ್ಷನ್ ಫೀಲಿಂಗ್ ನಲ್ಲಿ ಇರ್ತಾರೆ ಕಾಜೋಲ್. ಗೋವಾದ ತಿಂಡಿಗಳನ್ನು ಹೆಚ್ಚು ಇಷ್ಟಪಡುವ ಕಾಜೋಲ್ ಕುಟುಂಬ, ಕರ್ಜತ್ ನಲ್ಲಿ ಫಾರ್ಮ್ ಹೌಸ್ ಹೊಂದಿದೆ. ಅದನ್ನು ಎರಡನೇ ಮನೆ ಎನ್ನುವ ಕಾಜೋಲ್, ಈ ಎರಡೂ ಸ್ಥಳದಲ್ಲಿ ಕುಟುಂಬದವರು ಆರಾಮವಾಗಿ ಎಂಜಾಯ್ ಮಾಡ್ಬಹುದು, ಒಂದಿಷ್ಟು ಸಮಯವನ್ನು ಒಟ್ಟಿಗೆ ಕಳೆಯಬಹುದು ಎನ್ನುತ್ತಾರೆ. 

ಇನ್ನು ಬಾಲ್ಯದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಕಾಜೋಲ್, ಚಿಕ್ಕವರಿರುವಾಗ ಪಾನಿಪುರಿ ಇಷ್ಟವಿರಲಿಲ್ಲ ಎನ್ನುತ್ತಾರೆ. ಬಿಂಡಿ – ರೋಟಿ ಅಂದ್ರೆ ಕಾಲೋಜ್ ಗೆ ತುಂಬಾ ಪ್ರಿಯವಾಗಿತ್ತಂತೆ. ಮೀನು, ಬೆಂಡೆಕಾಯಿ ಸಬ್ಜಿ ಹಾಗೂ ರೊಟ್ಟಿ ಮತ್ತೆ ಅನ್ನವನ್ನು ಅವರು ಹೆಚ್ಚು ಇಷ್ಟಪಡುತ್ತಿದ್ದರಂತೆ. ರೈಸ್ ಜೊತೆ ಮಲೈ ( ಹಾಲಿನ ಕೆನೆ), ಸ್ವಲ್ಪ ಹಾಲು ಮತ್ತೆ ಉಪ್ಪು ಹಾಕಿ ಸೇವನೆ ಮಾಡ್ತಿದ್ದರಂತೆ ಕಾಜೋಲ್. ಇದು ತುಂಬಾ ರುಚಿಯಾಗಿರ್ತಾ ಇತ್ತು ಎನ್ನುತ್ತಾರೆ ನಟಿ. ಬೆಂಗಾಲಿಯಲ್ಲಿ ಅದನ್ನು ದೂದ್ ಬಾತ್ ಅಂತಾ ಕರೀತಾರೆ.  ಇದ್ನು ಕೆಲವರು ಸಕ್ಕರೆ ಹಾಕಿ ಸೇವನೆ ಮಾಡಿದ್ರೆ ಮತ್ತೆ ಕೆಲವರು ಉಪ್ಪು ಹಾಕಿ ತಿನ್ನುತಾರೆ. ಇದು ತುಂಬಾ ಟೇಸ್ಟಿಯಾಗಿರುತ್ತೆ ಅನ್ನೋದು ಕಾಜೋಲ್ ಅಭಿಪ್ರಾಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!
ನಾನು ಬದುಕಿದ್ದೇನೆ, ಎರಡು ದಿನ ಬಟನ್ ಒತ್ತಿಲ್ಲ ಅಂದ್ರೆ ... ಚೀನಾದಲ್ಲಿ ಫೇಮಸ್ ಆಗ್ತಿದೆ Are you dead ಆಪ್