ಚಿರತೆಗೇ ಹುಟ್ಟುಹಬ್ಬ ಮಾಡಿದ ಡಾ.ಬ್ರೋ: ಅಬ್ಬಬ್ಬೋ ಅಂತಿದ್ದಾರೆ ಫ್ಯಾನ್ಸ್​!

By Suvarna NewsFirst Published Aug 30, 2023, 9:26 PM IST
Highlights

ದೇಶ-ವಿದೇಶ ಸುತ್ತುತ್ತಾ, ಕುತೂಹಲದ ಪೋಸ್ಟ್​ಗಳನ್ನು ಶೇರ್​ ಮಾಡುತ್ತಿರುವ ಡಾ.ಬ್ರೋ ಇದೀಗ ಚಿರತೆಯ ಹುಟ್ಟುಹಬ್ಬ ಮಾಡಿ ಫ್ಯಾನ್ಸ್​ ಹುಬ್ಬೇರಿಸಿದ್ದಾರೆ. 
 

ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಇದನ್ನು ನೋಡಿ ಇವರ ಫ್ಯಾನ್ಸ್​ ದಂಗಾದದ್ದೂ ಇದೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದಿದ್ದೂ ಇದೆ. ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.  

ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ಯುವಕನೇ ಸಾಕ್ಷಿ. ಇದೀಗ ಉಗಾಂಡಾಕ್ಕೆ ಹೋಗಿರುವ ಗಗನ್​ ಅವರು, ಅಲ್ಲಿಯ ಜನಜೀವನದ ಕುರಿತು ಮನಮುಟ್ಟುವಂತೆ ಮಾತನಾಡಿದ್ದಾರೆ. ಹೋದ ಕಡೆಗಳಲ್ಲೆಲ್ಲಾ ಹಾಸ್ಯದ ತುಣುಕನ್ನು ಬಿತ್ತರಿಸುತ್ತಾ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಮಾತನಾಡುವುದೇ ಇವರ ಹೈಲೈಟ್​. ಅರೆಬರೆ ಹಿಂದಿ, ಇಂಗ್ಲಿಷ್​ ಮಾತನಾಡುತ್ತಲೇ ಕೋಟಿ ಕೋಟಿ ಮಂದಿಯ ಹೃದಯ ಗೆಲ್ಲುವುದು ಬಹುಶಃ ಗಗನ್​ಗೆ ಅಲ್ಲದೇ ಬೇರೆ ಯಾರಿಗೂ ಸಾಧ್ಯವೇ ಇಲ್ಲವೆನ್ನಬಹುದೇನೋ.   ಬೆಂಗಳೂರಿನಲ್ಲಿ  ಹುಟ್ಟಿ ಬೆಳೆದಿರೋ ಗಗನ್​, ಹುಟ್ಟಿದ್ದು ಅರ್ಚಕರ ಮಗನಾಗಿ. ಇವರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿ ಪದ್ಮಾ ಗೃಹಿಣಿ.  ಗಗನ್ ಅವರಿಗೆ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ ಗಗನ್​ ಅವರು,  ಖುದ್ದು  ದೇವಸ್ಥಾನದ ಪೂಜೆ ಮಾಡುವುದೂ ಉಂಟು.  ಓದಿಗಿಂತ ಹೆಚ್ಚಾಗಿ  ಹಾಡು, ನೃತ್ಯ, ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಗಗನ್​ ಕೀರ್ತಿ ಈಗ ಕರ್ನಾಟಕದಾಚೆಗೂ ಸಾಗಿ, ದೇಶದಿಂದ ವಿದೇಶಕ್ಕೂ ಹೋಗಿದೆ.

Latest Videos

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

ಇಂತಿಪ್ಪ ಡಾ.ಬ್ರೋ. ಚಿರತೆಯೊಂದರ ಫೋಟೋ ಶೇರ್​ ಮಾಡಿದ್ದಾರೆ. ಅದಕ್ಕೆ ಹುಟ್ಟುಹಬ್ಬದ ಕ್ಯಾಪ್ ಧರಿಸಿ ಅದರ ಜೊತೆ ಫೋಟೋ ಪೋಸ್​ ಕೊಟ್ಟಿದ್ದಾರೆ. ಗಗನ್​ ಅವರ ಫಾಲೋವರ್ಸ್​ ಇವರ ಫೋಟೋ, ವಿಡಿಯೋಗೆ ಎಷ್ಟು ಕಾತರರಾಗಿರುತ್ತಾರೆ ಎಂದರೆ, ಫೋಟೋ ಅಪ್​ಲೋಡ್​​ ಮಾಡಿದ ಒಂದೇ ಗಂಟೆಯಲ್ಲಿ 1.60 ಲಕ್ಷ ಮಂದಿ ಲೈಕ್​ ಮಾಡಿದ್ದಾರೆ. ಇವರಿಗೆ ಮಾಮೂಲಿನಂತೆ ಕಮೆಂಟ್ಸ್​ ಸುರಿಮಳೆಯೇ ಆಗುತ್ತಿದೆ. (ಚಿರತೆ ಕಾಡಿನ ರಾಜ ಅಲ್ಲದಿದ್ದರೂ)ಕಾಡಿನ ರಾಜನ ಜೊತೆ ನಾಡಿನ ರಾಜ ಎಂದು ಬರೆಯುತ್ತಿದ್ದಾರೆ.  ಡಾಕ್ಟರ್​ ಬ್ರೋ ಕನ್ನಡದ ಕಣ್ಮಣಿ, ಅವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಹೃದಯಗಳ ಎಮೋಜಿ ಹಾಕುತ್ತಿದ್ದಾರೆ. 

ನಿರೂಪಣೆಯ ಜೊತೆಗೆ ಹಾಸ್ಯದ ಲೇಪದಿಂದ ಜನರನ್ನು ನಕ್ಕುನಗಿಸುವಲ್ಲಿ ಗಗನ್​ ಪರಿಣತರು. ಇತ್ತೀಚೆಗೆ ಉಗಾಂಡಾಕ್ಕೆ ಭೇಟಿ ನೀಡಿದ್ದ ಇವರು,  ಕಾಡಿನಲ್ಲಿ ಹೋದಾಗ ಅಜ್ಜಿಯ ನೆನಪಾಯಿತು ಎಂದಿದ್ದರು.  ನಮ್​ ಅಜ್ಜಿ ಸಿಕ್ಕಷ್ಟೇ ಖುಷಿಯಾಯ್ತು ಎಂದಿದ್ದರು.  ಅಷ್ಟಕ್ಕೂ ಅಲ್ಲಿ ಅವ್ರು ನೋಡಿದ್ದು ಬೇರೆ ಯಾರನ್ನೂ ಅಲ್ಲ, ಬದಲಿಗೆ ಭಾರಿ ಭಾರಿ ಗಾತ್ರದ ಗೋರಿಲ್ಲಾಗಳನ್ನು. ಸಾಮಾನ್ಯವಾಗಿ ಗೋರಿಲ್ಲಾ ಯಾರೇ ಬಂದರೂ ಗುರ್​ ಎಂದು ನೋಡುತ್ತದೆ.  ಆದರೆ ಉಗಾಂಡಾದಲ್ಲಿ ಗೋರಿಲ್ಲಾ ಮತ್ತು ಜನರ ವಹಿವಾಟು ಸಾಮಾನ್ಯ. ಆದ್ದರಿಂದ ಮನುಷ್ಯರನ್ನು ಕಂಡರೆ ಅವುಗಳಿಗೆ ಭಯವೇ ಇಲ್ಲ. ಸಾಕು ಪ್ರಾಣಿಗಳಂತೆ ಅವು ಯಾವುದೇ ತಲೆ ಕೆಡಿಸಿಕೊಳ್ಳದೇ ನಿರ್ಭೀತಿಯಿಂದ ಇರುತ್ತವೆ.  ಅದೇ ರೀತಿ ಡಾ.ಬ್ರೋ ಹೋದಾಗ ಗೋರಿಲ್ಲಾ ಒಂದು ಮೆಲ್ಲುತ್ತಾ ಇರುವುದನ್ನು ನೋಡಿ, ನಮ್ಮಜ್ಜಿ ಕೂಡ ಇದೇ ರೀತಿ ಎಲೆ-ಅಡಿಕೆ ಮೆಲ್ಲುತ್ತಾರೆ. ಅಜ್ಜಿಯ (Granny) ನೆನಪಾಯ್ತು ಎಂದು ಚಟಾಕಿ ಹಾರಿಸಿದ್ದರು ಗಗನ್​. 
Mama Uganda : 44 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಪರಿಚಯಿಸಿದ ಡಾ.ಬ್ರೋ

click me!