ಬೆಲೆ ಬಾಳುವಂಥದ್ದಾದರೂ ಸರಿ ಈ ದೇಶದಲ್ಲಿ ಕಳೆದು ಹೋದರೆ ಚಿಂತಿಸೋ ಅಗತ್ಯವೇ ಇರೋಲ್ಲ!

By Suvarna NewsFirst Published Mar 22, 2024, 2:32 PM IST
Highlights

ವಿದೇಶಕ್ಕೆ ಪ್ರಯಾಣ ಬೆಳೆಸುವ ವೇಳೆ ಮೈಯೆಲ್ಲ ಕಣ್ಣಾಗಿರಬೇಕು. ನಮ್ಮ ವಸ್ತುಗಳು, ಹಣ ಕಳ್ಳತನವಾದ್ರೆ ವಾಪಸ್ ಬರೋದು ಬಹಳ ಕಷ್ಟ. ನೀವು ಜಪಾನ್ ದೇಶಕ್ಕೆ ಹೋದ್ರೆ ಕಳ್ಳತನದ ಟೆನ್ಷನ್ ಮಾಡಿಕೊಳ್ಬೇಕಾಗಿಲ್ಲ.
 

ಸರಗಳ್ಳರಿದ್ದಾರೆ ಎಚ್ಚರಿಕೆ… ನಿಮ್ಮ ವಸ್ತುಗಳಿಗೆ ನೀವೇ ಹೊಣೆಗಾರರು ಎಂಬ ಬೋರ್ಡ್ ಗಳನ್ನು ನಾವು ಭಾರತದ ಪ್ರವಾಸಿ ಸ್ಥಳಗಳಲ್ಲಿ ನೋಡ್ತಿರುತ್ತೇವೆ. ಬಸ್ ಹತ್ತುವಾಗ, ಜನನಿಬಿಡ ಪ್ರದೇಶದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ರೂ ಸಾಲದು. ನಮ್ಮ ಅರಿವಿಲ್ಲದೆ ಪರ್ಸ್, ಮೊಬೈಲ್, ಬಂಗಾರ ಕದಿಯುವ ಜನರ ಸಂಖ್ಯೆ ಸಾಕಷ್ಟಿದೆ. ನಮ್ಮ ಮೊಬೈಲ್ ಅಥವಾ ಬ್ಯಾಗನ್ನು ನಾವು ಸಾರ್ವಜನಿಕ ಪ್ರದೇಶದಲ್ಲಿ ಮರೆತು ಬಿಟ್ಟು ಬಂದಿದ್ದರೆ ಅದು ಸಿಗೋದು ಕನಸಿನ ಮಾತು. ಇನ್ನು ಕಳ್ಳತನವಾದ ವಸ್ತುಗಳು ನಿಮ್ಮ ಕೈ ಸೇರಿದ್ರೆ ಪ್ರಳಯವಾದಂತೆ. ಜನರ ಕೈಗೆ ಹಣ, ಬಂಗಾರ ಸಿಕ್ಕಿದ್ರೆ ಅದನ್ನು ಹಿಂತಿರುಗಿಸುವವರ ಸಂಖ್ಯೆ  ಬಹಳ ಕಡಿಮೆ. ಹೀಗೆ ಬಂಗಾರ, ಹಣ ಹಿಂತಿರುಗಿಸಿದ್ರೆ ಅವರ ಬಗ್ಗೆ ಸುದ್ದಿ ಮಾಡ್ತೇವೆ. ಅವರಿಗೆ ಉಡುಗೊರೆ ನೀಡ್ತೇವೆ. ಅದೇನೇ ಇರಲಿ ವಿಶ್ವದಲ್ಲಿ ಕೆಲ ದೇಶಗಳಲ್ಲಿ ವಿಚಿತ್ರ ನಿಯಮಗಳಿವೆ. ಅದ್ರಲ್ಲಿ ಕಳ್ಳತನ ಕೂಡ ಹೌದು. ನಿಮಗೆ ಅಚ್ಚರಿ ಆಗ್ಬಹುದು, ಆದ್ರೆ ನಾವೀಗ ಹೇಳ್ತಿರುವ ದೇಶದಲ್ಲಿ ಕಳ್ಳತನ ಆಗೋದು ಬಹಳ ಅಪರೂಪ. ಆದ್ರೂ ಕೆಲವೇ ದಿನಗಳಲ್ಲಿ ನಿಮ್ಮ ವಸ್ತುಗಳು ವಾಪಸ್ ನಿಮ್ಮ ಕೈ ಸೇರಿರುತ್ತವೆ. 

ಭಾರತ (India) ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಕಳ್ಳತನ ಮಾಮೂಲಿ. ಆದ್ರೆ ಜಪಾನ್ (Japan) ಹಾಗಲ್ಲ. ಜಪಾನ್ ನಿಂದ ಕಲಿಯಲು ಸಾಕಷ್ಟು ವಿಷ್ಯವಿದೆ. ಜಪಾನ್ ನಲ್ಲಿ ನೀವು ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಒಂದ್ವೇಳೆ ನಿಮ್ಮ ಮುಂದೆ ಆ ವಸ್ತು ಇಲ್ಲ ಎಂದ್ರೂ ಚಿಂತಿಸಬೇಕಾಗಿಲ್ಲ. ಕೆಲವೇ ಗಂಟೆ ಅಥವಾ ದಿನದಲ್ಲಿ ಕಳೆದುಹೋದ ವಸ್ತು ನಿಮ್ಮ ಕೈ ಸೇರಿರುತ್ತದೆ.

75 ಕೋಟಿ ರೂ.ಗೆ ಮಾರಾಟವಾದ ಮುಖೇಶ್ ಅಂಬಾನಿಯ ಮ್ಯಾನ್‌ಹಟನ್ ಬಂಗಲೆ ಹೇಗಿದೆ?

ಕಳ್ಳತನ (Steal) ಪತ್ತೆ ಮಾಡುವುದ್ರಲ್ಲಿ ಜಪಾನ್ ವ್ಯವಸ್ಥೆ ಉತ್ತಮವಾಗಿದೆ. ಜಪಾನ್‌ನಲ್ಲಿ ಪ್ರತಿ ವರ್ಷ ಸುಮಾರು 126 ಮಿಲಿಯನ್ ಜನರು ತಮ್ಮ ವಸ್ತು (Material) ಗಳನ್ನು ಕಳೆದುಕೊಳ್ತಾರೆ. ಆದ್ರೆ ಅದ್ರಲ್ಲಿ ಬಹುತೇಕರಿಗೆ ಅವರ ವಸ್ತು ಮರಳಿ ಸಿಕ್ಕಿರುತ್ತದೆ. ಇದಕ್ಕೆ ಕಾರಣ ಇಲ್ಲಿರುವ ಪೊಲೀಸ್ ಕ್ಯಾಬಿನ್. ಜಪಾನಿನಲ್ಲಿ ಪೊಲೀಸರ ಸಣ್ಣ ಸಣ್ಣ ಕ್ಯಾಬಿನ್ ಇದೆ. ಭಾರತದಂತೆ ನೀವು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕಾಗಿಲ್ಲ. ನಗರದ ಅಲ್ಲಲ್ಲಿ ಸಣ್ಣ ಸಣ್ಣ ಪೊಲೀಸ್ ಠಾಣೆ ಇರುತ್ತದೆ. ಅಲ್ಲಿರುವ ಪೊಲೀಸರು ಕಳ್ಳರ ಪತ್ತೆಯಲ್ಲಿ ನಿರತರಾಗಿರುತ್ತಾರೆ. ಜಪಾನಿನಾದ್ಯಂತ ಸುಮಾರು 6300 ಕೋಬಾನ್ ಅಥವಾ ಸಣ್ಣ ಪೊಲೀಸ್ ಠಾಣೆಗಳಿವೆ.

2018 ರಲ್ಲಿ ಜಪಾನ್ ರಾಜಧಾನಿ ಟೋಕಿಯೋದಲ್ಲಿ 41 ಲಕ್ಷ ಕಾಣೆಯಾದ ವಸ್ತುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇಲ್ಲಿನ ಜನರು ತಮಗೆ ಸಿಕ್ಕ ವಸ್ತುಗಳನ್ನು ಪೊಲೀಸರಿಗೆ ತಂದು ನೀಡುತ್ತಾರೆ. ಪೊಲೀಸರು ವಸ್ತು ತಂದುಕೊಟ್ಟ ವ್ಯಕ್ತಿಯ ವಿವರವನ್ನು ಕೂಡ ದಾಖಲಿಸುತ್ತಾರೆ. ನಂತ್ರ ಈ ವಸ್ತುವನ್ನು ಮುಖ್ಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ವಸ್ತುಗಳ ಫೋಟೋ ಕ್ಲಿಕ್ಕಿಸಿ ಅದ್ರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತದೆ. ವಸ್ತುವನ್ನು ಕಳೆದುಕೊಂಡ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ವಸ್ತುವನ್ನು ಮರಳಿಪಡೆಯಬಹುದು. ಒಂದ್ವೇಲೆ ಮೂರು ತಿಂಗಳಾದ್ರೂ ವಸ್ತುವಿನ ಮಾಲೀಕ ಬಂದಿಲ್ಲ ಎಂದಾದ್ರೆ ಆ ವಸ್ತುಗಳನ್ನು ನಗರಸಭೆ ತನ್ನ ವಶಕ್ಕೆ ಪಡೆಯುತ್ತದೆ.

7ನೇ ವರ್ಷ ಜಗತ್ತಿನ ಅತಿ ಸಂತೋಷಭರಿತ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ ಈ ದೇಶ.. ಭಾರತಕ್ಕೆಷ್ಟನೇ ಸ್ಥಾನ?

ಜಪಾನ್ ನ ರೈಲು ಸದಾ ತುಂಬಿತುಳುಕುತ್ತಿರುತ್ತದೆ. ಈ ಸಮಯದಲ್ಲಿ ಜನರು ತಮ್ಮ ವಸ್ತುಗಳನ್ನು ಕಳೆದುಕೊಳ್ಳೋದು ಹೆಚ್ಚು. ಅವರ ಅನುಕೂಲಕ್ಕಾಗಿಯೇ ರೈಲು ನಿಲ್ದಾಣದಲ್ಲಿ ಸಾಕಷ್ಟು ಪೊಲೀಸ್ ಕೋಬಾನ್ ಗಳನ್ನು ನೀವು ನೋಡ್ಬಹುದು. ಮಕ್ಕಳಿಗೆ ಕೂಡ, ಬೇರೆಯವರ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬ ನೈತಿಕ ಶಿಕ್ಷಣವನ್ನು ಜಪಾನ್ ನಲ್ಲಿ ನೀಡಲಾಗುತ್ತದೆ.   
 

click me!