ಬೆಂಗಳೂರು ಮತ್ತು ಗುಲ್ಮೊಹರ್ ಮರಗಳು. . ಇದ್ಯಾವ ರೋಡ್ ಅಂತ ಗೆಸ್ ಮಾಡ್ತೀರಾ?

By Suvarna News  |  First Published Mar 19, 2024, 2:57 PM IST

ಬೆಂಗಳೂರನ್ನು ಮತ್ತೊಮ್ಮೆ ಪಿಂಕ್ ಸಿಟಿಯಾಗಿಸಿವೆ ಗುಲ್‌ಮೊಹರ್ ಮರಗಳು.. ತೀರಾ ವೇಗದ ಬೆಳವಣಿಗೆ, ನೀರಿನ ಕೊರತೆಯ ನಡುವೆ ಈ ನೋಟ ಮುಂದಿನ ವರ್ಷವೂ ಸಿಗಬಹುದೇ?


ಪ್ರಸಿದ್ಧ ಚೆರ್ರಿ ಹೂವು ಉತ್ಸವಗಳು ವಸಂತಕಾಲದಲ್ಲಿ ಜಪಾನ್‌ನಾದ್ಯಂತ ನಡೆಯುತ್ತವೆ. ಆದರೆ, ಬೆಂಗಳೂರಿನ ಸ್ಥಳೀಯರಿಗೆ, ಈ ವಿಶೇಷ ಹೂವಿನ ಉತ್ಸವ ಮನೆ ಬಾಗಿಲಿನ ಹೊರಗೆಯೇ ಕಂಡುಬರುತ್ತದೆ. ತಬೆಬುಯಾ ರೋಸಿಯಾ ಹೂವುಗಳು ಬೆಂಗಳೂರಿನ ರಸ್ತೆಗಳಿಗೆ ಪ್ರತಿ ವರ್ಷದಂತೆ ಹೊಸ ಕಳೆ ಹೊತ್ತು ತಂದಿವೆ. 

ಮಾರ್ಚ್ ಏಪ್ರಿಲ್ ಬಂದರೆ ಬೆಂಗಳೂರಿನ ಅನೇಕ ರೋಡುಗಳ ಇಕ್ಕೆಲಗಳ ಮರಗಳು ಗುಲಾಬಿ, ಕೇಸರಿ, ನೇರಳೆ ಬಣ್ಣಗಳ ಹೂವುಗಳಿಂದ ತುಂಬಿ ನಗರದ ಸೌಂದರ್ಯವನ್ನು ಇಮ್ಮಡಿಯಾಗಿಸುತ್ತವೆ. ಇದು ಉದ್ಯಾನ ನಗರಿಗೆ ವಸಂತನ ಆಕರ್ಷಕ ಆಗಮನ. 
ಈ ಬಣ್ಣಗಳು ಎಷ್ಟು ವಿಸ್ತಾರವಾಗಿ ಎಲ್ಲೆಡೆ ಕಂಡುಬರುತ್ತವೆಂದರೆ ಅಂತರ್ಜಾಲದಲ್ಲಿ #PinkBangalore #bangalorecherryblossom ಟ್ರೆಂಡಿಂಗ್ ಆಗಿದೆ.

Tap to resize

Latest Videos

ಅದರಲ್ಲೂ ಹಳೆ ಬೆಂಗಳೂರು ನಗರದ ಜಯನಗರ, ಮಲ್ಲೇಶ್ವರಂ, ಕಬ್ಬನ್ ಪಾರ್ಕ್, ವಿಧಾನಸೌಧ, ಬಸವನಗುಡಿ, ಇಂದಿರಾನಗರ, ಕೋರಮಂಗಲ ಸುತ್ತಮುತ್ತಣ ರಸ್ತೆಗಳು ಈ ಚೆಲುವಿನಿಂದ ಸಜ್ಜಾಗಿ ಕಂಗೊಳಿಸುತ್ತವೆ. ಇದೋ ಈ ಚಿತ್ರದಲ್ಲಿ ನೋಡಿ- ಗುಲಾಬಿ ಬಣ್ಣದ ಹೂಗಳು ರೋಡಿಗೆ ಎಂಥ ಅಂದ ತಂದಿವೆ ಎಂದು? ಈ ಫೋಟೋ ಸೋಷ್ಯಲ್ ಮೀಡಿಯಾದಲ್ಲಿ ಹಲವು ರೀತಿಯ ಯೋಚನೆಗಳನ್ನು ಬರ ಮಾಡಿಕೊಂಡಿದೆ. 


 

ಚಿತ್ರಕ್ಕೆ ಹಲವರು ಬ್ಯೂಟಿಫುಲ್ ಎಂದಿದ್ದರೂ, ಮತ್ತೆ ಕೆಲವರಲ್ಲಿ ಈ ನೋಟ ಮುಂದಿನ ವರ್ಷವೂ ಇರುತ್ತದೆಯೇ ಎಂಬ ಆತಂಕ ಆವರಿಸಿದೆ. ಬೆಂಗಳೂರಿನಲ್ಲಿ ಕಂಡು ಬರುತ್ತಿರುವ ಜಲ ಕ್ಷಾಮ, ಮಿತಿಮೀರಿದ ನಗರೀಕರಣ, ಮರಗಳನ್ನು ಕಡಿದು ಕಾಂಕ್ರೀಟ್ ಕಾಡು ಮಾಡುತ್ತಿರುವ ವೇಗ ನೋಡಿದರೆ ನಗರದ ಸೌಂದರ್ಯ ಮುಂದಿನ ತಲೆಮಾರಿಗೆ ಇರುವುದಿಲ್ಲ ಎಂಬುದು ಬಹಳಷ್ಟು ಜನರಲ್ಲಿ ಉಂಟಾಗಿರುವ ದಿಗಿಲು. 

ಇಂಡಿಯಾ ಭಾರತ್ ಎಂಬ ಪೇಜ್‌ನಲ್ಲಿ ಹಂಚಿಕೊಂಡಿರುವ ಸುಗನೋಗ್ರಫಿಯ ಈ ಚಿತ್ರಕ್ಕೆ ಒಬ್ಬರು ಕಾಮೆಂಟ್ ಮಾಡಿ, 'ನಮ್ಮ ಭೂಮಿಯನ್ನು ಉಳಿಸಲು ನಮಗೆ ಇನ್ನೂ ಸಮಯವಿದೆ. ದಯವಿಟ್ಟು ಮರ ಕಡಿಯಲು ಬಿಡಬೇಡಿ' ಎಂದಿದ್ದಾರೆ.

 

ಇನ್ನೊಬ್ಬರು, 'ನನ್ನ ಬಾಲ್ಯದಲ್ಲಿ ಬೆಂಗಳೂರಿನ ತುಂಬಾ ಮರಗಳಿದ್ದವು. ಈಗ ಇದೊಂದು ಕಾಂಕ್ರೀಟ್ ಕಾಡಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಮೆಟ್ರೋ ಮತ್ತು ಅಪಾರ್ಟ್‌ಮೆಂಟ್ ಕಟ್ಟಲು ಮರಗಳನ್ನು ನಿರಂತರ ಕಡಿಯಲಾಗುತ್ತಿದ್ದು, ಬೆಂಗಳೂರಿನಲ್ಲಿ ಮಳೆಯ ಕೊರತೆಗೆ ಕಾರಣವಾಗಿದೆ. ಈ ಸುಂದರ ನೋಟ ಹೆಚ್ಚು ಕಾಲ ಬೆಂಗಳೂರಿನಲ್ಲಿ ಸಿಗಲಾರದು. ಜಲಕ್ಷಾಮಕ್ಕೂ ಇದೇ ಕಾರಣ' ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

ಈ ಐಎಎಸ್ ಅಧಿಕಾರಿಯ ಪುತ್ರಿ ವಿವಾಹವಾಗಿದ್ದು 450 ಕೋಟಿ ಸಂಬಳ ಪಡೆವ ಭಾರತದ ಜೀನಿಯಸ್ ವ್ಯಕ್ತಿಯನ್ನು, ಯಾರಿವರು?
 

ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚು ಹುಣಸೆ ಮರಗಳು, ನೇರಳೆ ಮರಗಳು, ಮಾವಿನ ಮರಗಳು ಇದ್ದವು. ಅವು ಪಕ್ಷಿಗಳಿಗೆ ಆಶ್ರಯ ಮತ್ತು ಆಹಾರ ನೀಡುತ್ತಿದ್ದವು. ಮತ್ತು ಭಾರೀ ಮಳೆಯನ್ನು ತಡೆದುಕೊಳ್ಳುವ ಮತ್ತು ಸ್ಥಳೀಯ ಮರಗಳಾಗಿದ್ದವು. ಎಲ್ಲಾ ಕತ್ತರಿಸಿದ  ನಂತರ ಈಗ ಮಳೆಯಿಲ್ಲ, bbmp ಕೇವಲ ಅವರ ಆದಾಯಕ್ಕಾಗಿ ಬೃಹತ್ ಮರಗಳನ್ನು ಕಡಿಯಲು ಯೋಚಿಸುತ್ತಿದೆ. ಆದರೆ ಹೊಸ ಗಿಡಗಳನ್ನು ನೆಟ್ಟು ಅವುಗಳನ್ನು ರಕ್ಷಿಸುತ್ತಿಲ್ಲ ಮತ್ತು ನಾಗರಿಕರಾದ ನಾವು ನಮ್ಮ ನಗರದಲ್ಲಿ ಹಸಿರನ್ನು ಹೆಚ್ಚಿಸಲು ನಮ್ಮ ಕಡೆಯಿಂದ ಏನನ್ನೂ ಮಾಡುತ್ತಿಲ್ಲ ಎಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ಬಗ್ಗೆ ತಮ್ಮ ಯೋಚನೆಗಳನ್ನು ಹರಿಬಿಟ್ಟಿದ್ದಾರೆ.  

click me!